Categories
e-ದಿನ

ಜುಲೈ-23

 

ಪ್ರಮುಖ ಘಟನಾವಳಿಗಳು:

1827: ಅಮೇರಿಕಾದ ಮೊದಲ ಈಜು ಶಾಲೆ ಬಾಸ್ಟನ್ನಿನಲ್ಲಿ ತೆರೆಯಲಾಯಿತು.

1829: ಅಮೇರಿಕಾದ ವಿಲ್ಲಿಯಂ ಆಸ್ಟಿನ್ ಬರ್ಟ್ ಟೈಪ್ರೈಟರಿಗೆ ಪೇಟೆಂಟ್ ಪಡೆದರು.

1974: ಗ್ರೀಸಿನಲ್ಲಿ ಮಿಲಿಟರಿ ಆಡಳಿತ ಕೊನೆಗೊಂಡು ಮಾಜಿ ಅಧ್ಯಕ್ಷ ಕಾನ್ಸ್ಟಾಟಿನ್ ಕಾರ್ಡಿನಲಿಸ್ ಅವರನ್ನು ಮತ್ತೆ ಅಧ್ಯಕ್ಷರಾಗಲು ಕರೆಯಲಾಯಿತು.

1877: ಮೊದಲ ಟೆಲಿಫೋನ್ ಮತ್ತು ಟೆಲಿಗ್ರಾಫ್ ಲೈನಿನ ಕಾಮಗಾರಿ ಪೂರ್ಣಗೊಂಡಿತು.

1877: ಅಮೇರಿಕಾದ ಮೊದಲ ಪುರಸಭೆಯ ರೈಲುರಸ್ತೆಯ ಕಾರ್ಯಾಚರಣೆ ಆರಂಭವಾಯಿತು.

1880: ಮೊದಲ ವಾಣಿಜ್ಯ ಜಲವಿದ್ಯುತ್ ಶಕ್ತಿ ಗ್ರಹವು ಆರಂಭವಾಯಿತು.

1888: ಜಾನ್ ಬಾಯ್ಡ್ ಡನ್ಲಪ್ ಗಾಳಿಯಿಂದ ತುಂಬಿ ನಡೆಯುವ ಟೈರಿಗೆ ಪೇಟೆಂಟ್ ಪಡೆದರು.

1900: ಕೆನೆಡಾಗೆ ಬರುವ ಅಪರಾಧಿಗಳನ್ನು ನಿಷೇದಿಸಲು ಕೆನೆಡಿಯನ್ ಸರ್ಕಾರವು ವಲಸೆ ನೀತಿಯನ್ನು ವಿಮರ್ಶಿಸಿತು.

1904: ಸೈಂಟ್ ಲೂಯಿಸ್ ವಿಶ್ವಜಾತ್ರೆಯಲ್ಲಿ ಮೊದಲ ಬಾರಿಗೆ ಐಸ್ಕ್ರೀಂ ಕೋನ್ ಸೃಷ್ಟಿಸಲಾಯಿತು.

1920: ಬ್ರಿಟಿಷ್ ಈಸ್ಟ್ ಆಫ್ರಿಕಾವನ್ನು ಕೀನ್ಯಾ ಎಂದು ಮರುನಾಮಕರಣ ಮಾಡಲಾಯಿತು.

1921: ಚೀನಾದ ಕಮ್ಯುನಿಸ್ಟ್ ಪಾರ್ಟಿ ಸ್ಥಾಪನೆಯಾಯಿತು.

1927: ಭಾರತೀಯ ಪ್ರಸಾರ ಸಂಸ್ಥೆಯ ಮೊದಲ ಕಾರ್ಯಕ್ರಮ ಮುಂಬಯಿಯಲ್ಲಿ ಪ್ರಸಾರವಾಗಿತ್ತು.

1929: ಇಟಲಿಯಲ್ಲಿ ಪ್ಯಾಸಿಸ್ಟ್ ಸರ್ಕಾರ ವಿದೇಶಿ ಪದಗಳ ಬಳಕೆಯನ್ನು ನಿಷೇಧಿಸಿತು.

1937: ಯೇಲ್ ವಿಶ್ವವಿದ್ಯಾಲಯದಲ್ಲಿ ಪಿಟ್ಯೂಟರಿ ಹಾರ್ಮೋನಿನ ಪ್ರತ್ಯೇಕತೆಯನ್ನು ಘೋಷಿಸಲಾಯಿತು.

1967: 19 ತಿಂಗಳ ಮಗುವಿಗೆ ಮೊದಲ ಯಶಸ್ವಿ ಯಕೃತ್ತಿನ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

1997: ಭಾರತವು ಚಿತ್ರಹಿಂಸೆ ಮತ್ತು ಇತರ ಕ್ರೂರ, ಅಮಾನವೀಯ ಶಿಕ್ಷೆಯ ವಿರುದ್ದ ಯು.ಎನ್.ಕನ್ವೆನ್ಷನಿಗೆ ಸಹಿ ಹಾಕಲು ನಿರ್ಧರಿಸಿತು

2005: ಈಜಿಪ್ಟಿನ ಶರ್ಮ್-ಎಲ್-ಶೇಖ್ ರೆಸಾರ್ಟಿನಲ್ಲಿ ಬಾಂಬ್ ಸ್ಫೋಟವಾಗಿ 88 ಮಂದಿ ಮೃತಪಟ್ಟರು.

ಪ್ರಮುಖ ಜನನ/ಮರಣ:

1856: ಭಾರತ ಸ್ವಾತಂತ್ರ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್ ಅವರು ಜನಿಸಿದರು.

1906: ಪ್ರಸಿದ್ದ ಭಾರತೀಯ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಭಾರತದ ಮಧ್ಯಪ್ರದೇಶದಲ್ಲಿ ಜನಿಸಿದರು.

1933: ಬಂಗಾಳ ಸ್ವರಾಜ್ಯ ಪಾರ್ಟಿಯ ಅಧ್ಯಕ್ಷರಾಗಿದ್ದ ಜತಿಂದ್ರ ಮೋಹನ್ ಸೇನ್ ಗುಪ್ತ ನಿಧನರಾದರು.

1964: ಭಾರತದ ಪ್ರಖ್ಯಾತ ಸಂಖ್ಯಶಾಸ್ತ್ರಜ್ಞ ಸಮೇಂದ್ರನಾಥ್ ರಾಯ್ ನಿಧನರಾದರು.

1973: ಗಾಯಕ, ಗೀತ ರಚನೆಕಾರ, ನಿರ್ಮಾಪಕ, ನಟ ಮತ್ತು ನಿರ್ದೇಶಕ ಹಿಮೇಶ್ ರೇಷ್ಮಿಯ ಜನಿಸಿದರು.

1988: ಭಾರತದ ಕ್ರಿಕೆಟಿಗಾರದ ಜಹಂಗೀರ್ ಖಾನ್ ನಿಧನರಾದರು.

1991: ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕಿನ ಅಧ್ಯಕ್ಷ ಪ್ರೇಮ್ ದತ್ ಪಲಿವಲ್ ನಿಧನರಾದರು.

2004: ಹಾಸ್ಯ ಚಕ್ರವರ್ತಿ ಎಂದೇ ಪರಿಣಿತರಾಗಿದ್ದ ಮೆಹಮೂದ್ ಅಲಿ ನಿಧನರಾದರು.