Categories
e-ದಿನ

ಜುಲೈ-24

 

ಪ್ರಮುಖ ಘಟನಾವಳಿಗಳು:

1206: ಲಾಹೋರಿನಲ್ಲಿ ಮಹೊಮದ್ ಆಫ್ ಘುರ್ ಮರಣದ ನಂತರ ಕುತ್ಬುದಿನ್-ಐಬಕ್ ಅವರನ್ನು ಮುಂದಿನ ರಾಜನೆಂದು ಘೋಷಿಸಲಾಯಿತು.

1793: ಫ್ರಾನ್ಸ್ ಮೊದಲ ಹಕ್ಕುಸ್ವಾಮ್ಯ ಕಾನೂನನ್ನು ಅಂಗೀಕರಿಸಿತು.

1823: ಚಿಲಿನಲ್ಲಿ ಗುಲಾಮಗಿರಿಯನ್ನು ರದ್ದುಮಾಡಲಾಯಿತು.

1847: ರೋಟರಿ ತರಹದ ಮುದ್ರಣವನ್ನು ರಿಚರ್ಡ್ ಮಾರ್ಚ್ ಹೋ ನ್ಯೂಯಾರ್ಕಿನಲ್ಲಿ ಪೇಟೆಂಟ್ ಪಡೆದರು.

1851: ಬ್ರಿಟನ್ನಿನಲ್ಲಿ ವಿಂಡೋ ತೆರಿಗೆಯನ್ನು ರದ್ದುಗೊಳಿಸಲಾಯಿತು.

1911: ಹಿರಾಂ ಬಿಂಗ್ಯಾಮ್ ಅವರು ಲಾಸ್ಟ್ ಸಿಟಿ ಆಫ್ ಇನ್ಕಾಸ್ ಅನ್ನು ಕಂಡುಹಿಡಿದರು.

1927: ಮೆನಿನ್ ಗೇಟ್ ಯುದ್ಧದ ಸ್ಮಾರಕವನ್ನು ಅನಾವರಣಗೊಳಿಸಲಾಯಿತು.

1932: ಅನಾರೋಗ್ಯ ಮತ್ತು ಮಾನವೀಯ ಚಟುವಟಿಕೆಗಳ ಸೇವೆಗಾಗಿ ರಾಮಕೃಷ್ಣ ವಿಷನ್ ಸೇವಾ ಪ್ರತಿಷ್ಟಾನವನ್ನು ಸ್ಥಾಪಿಸಲಾಯಿತು.

1935: ಪ್ರಥಮ ಶುಭಾಷಯದ ಟೆಲಿಗ್ರಾಂ ಅನ್ನು ಬ್ರಿಟನ್ನಿನಲ್ಲಿ ಕಳುಹಿಸಲಾಯಿತು.

1935: ವಿಶ್ವದ ಮೊದಲ ಮಕ್ಕಳ ರೈಲು ರಷ್ಯಾದಲ್ಲಿ ಕಾರ್ಯಾರಂಭ ಮಾಡಿತು.

1938: ಇನ್ಸ್ಟಾಂಟ್ ಕಾಫಿಯನ್ನು ಕಂಡುಹಿಡಿಯಲಾಯಿತು.

1970: ಇಂಟರ್ನ್ಯಾಷನಲ್ ಲಾ ಟೆನ್ನಿಸ್ ಅಸೋಸಿಯೇಶನ್ ಸಂಸ್ಥೆಯು 9 ಅಂಕಗಳ ಟೈ ಬ್ರೇಕರ್ ನಿಯಮವನ್ನು ಪರಿಚಯಿಸಲಾಯಿತು.

1985: ಭಾರತೀಯ ಪ್ರಧಾನಿ ರಾಜೀವ್ ಗಾಂಧಿ ಮತ್ತು ಅಖಾಲಿ ದಳದ ಸಿಖ್ ಮುಖಂಡರಾದ ಸಾಂಟ್ ಹರಚಂದ್ ಸಿಂಗ್ ಲೋಂಗೋವಾಲ್ ಅವರು ಪಂಜಾಬಿನಲ್ಲಿ ನಡೆದ ನಾಲ್ಕು ವರ್ಷಗಳ ಆಂದೋಲನವನ್ನು ಅಂತ್ಯಗೊಳಿಸುವ ಮೂಲಕ “ಪಂಜಾಬ್ ಒಪ್ಪಂದ” ಎಂಬ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

1991: ಮನಮೋಹನ್ ಸಿಂಗ್ ಅವರು ಪಿ.ವಿ.ನರಸಿಂಹರಾವ್ ಸರ್ಕಾರದ ಹಣಕಾಸು ಸಚಿವರಾಗಿ ಆರ್ಥಿಕ ಉದಾರೀಕರಣದ ಬಜೆಟ್ ಭಾಷಣವನ್ನು ಮಂಡಿಸಿದರು.

1991: ಸೌರವ್ಯೂಹದ ಹೊರಗೆ ಒಂದು ಗ್ರಹವನ್ನು ಕಂಡುಹಿಡಿದಿರುವಾಗಿ ಮ್ಯಾಂಚೆಸ್ಟರ್ ವಿಶ್ಚವಿದ್ಯಾಲಯದ ವಿಜ್ಞಾನಿ ಘೋಷಿಸಿದರು.

1992: ಯೂನಿವರ್ಸಲ್ ಪೊಯೆಟ್ರಿ ಫೌಂಡೇಶನ್ ಅನ್ನು ಪುಣೆಯಲ್ಲಿ ಸ್ಥಾಪಿಸಲಾಯಿತು.

1996: ಭಾರತ ಸರ್ಕಾರವು ಗರಿಷ್ಟ ಹಣದ ನಿವೃತ್ತಿ/ಮರಣದ ಪರಿಹಾರ ಮೊತ್ತವನ್ನು 1 ಲಕ್ಷ ರೂ ಇಂದ 2.50 ಲಕ್ಷಕ್ಕೆ ಏರಿಸಲಾಯಿತು.

1998: ವಿಮಾನ ಹೊತ್ತೊಯ್ಯುವ ಸಾಗಾಳು ಖರೀದಿಸಲು ಭಾರತವು ರಷ್ಯಾ ದೇಶದ ಜೊತೆಗೆ ಒಪ್ಪಂದ ಮಾಡಿಕೊಂಡಿತು.

ಪ್ರಮುಖ ಜನನ/ಮರಣ:

1911: ಪ್ರಖ್ಯಾತ ಫ್ಲೂಟ್ ವಾದಕರಾದ ಪನ್ನಾಲಾಲ್ ಘೋಷ್ ಜನಿಸಿದರು.

1930: ಗುಜರಾತಿನ 10ನೇ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಜನಿಸಿದರು.

1937: ಭಾರತೀಯ ನಟ, ನಿರ್ದೇಶಕ, ನಿರ್ಮಾಪಕ ಮನೋಜ್ ಕುಮಾರ್ ಜನಿಸಿದರು.

1945: ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜಿಮ್ ಪ್ರೇಮ್ ಜಿ ಜನಿಸಿದರು.

1999: ವಿಮಲ ರನಾಡೇವ್ ಹಿರಿಯ CPI(M) ನಾಯಕ ಮುಂಬಯಿಯಲ್ಲಿ ನಿಧನರಾದರು.