ಪ್ರಮುಖ ಘಟನಾವಳಿಗಳು:

 • 1586: ಸರ್ ವಾಲ್ಟರ್ ರಾಲೀಘ್ ಮೊದಲ ತಂಬಾಕನ್ನು ವರ್ಜೀನಿಯಾದಿಂದ ಇಂಗ್ಲೆಂಡಿಗೆ ತಂದರು.

 • 1665: ಆಂಸ್ಟರ್ ಡ್ಯಾಮಿನ ಯಹೂದಿಗಳು, ಯಹೂದಿ ಸ್ಮಶಾನಕ್ಕಾಗಿ ಜಾಗ ಕೋರಿ ಅರ್ಜಿ ನೀಡಿದರು.

 • 1694: ಬ್ಯಾಂಕ್ ಆಫ್ ಇಂಗ್ಲೆಂಡ್ ಒಂದು ವಾಣಿಜ್ಯ ಸಂಸ್ಥೆಯಾಗಿ ರಾಯಲ್ ಚಾರ್ಟರ್ ಪಡೆದುಕೊಂಡಿದೆ.

 • 1789: ವಿದೇಶಾಂಗ ಇಲಾಖೆಯನ್ನು ಅಮೇರಿಕಾ ಕಾಂಗ್ರೆಸ್ ಸ್ಥಾಪಿಸಿತು.

 • 1866: ಅಟ್ಲಾಂಟಿಕ್ ಟೆಲಿಗ್ರಾಫ್ ಕೇಬಲನ್ನು ಯಶಸ್ವಿಯಾಗಿ ಹಾಕಲಾಯಿತು.

 • 1880: ತೆಂಗಿನ ಎಣ್ಣೆಯನ್ನು ಪರಿಷ್ಕರಿಸುವ ಪ್ರಕ್ರಿಯೆಗೆ ಎ.ಪಿ.ಅಬೋರ್ನೆ ಪೇಟೆಂಟ್ ಪಡೆದರು.

 • 1884: ಈಸ್ಟ್ ಕ್ಲೀವ್ಲ್ಯಾಂಡ್ ಸ್ಟ್ರೀಟ್ ರೈಲ್ವೆ ಕಂಪನಿ ಮೊದಲ ಅಮೇರಿಕದ ವಾಣಿಜ್ಯ ವಿದ್ಯುತ್ ಸ್ಟ್ರೀಟ್ ಕಾರ್ ಮಾರ್ಗವನ್ನು ಪ್ರಾರಂಭಿಸಿತು.

 • 1888: ಫಿಲಿಪ್ ಪ್ರಾಟ್ ಅಮೇರಿಕಾದ ಮೊದಲ ವಿದ್ಯುತ್ ಟ್ರೈಸೈಕಲನ್ನು ಅನಾವರಣಗೊಳಿಸಿದರು.

 • 1920: ವಿಮಾನದ ಸಂಚರಣೆಗಾಗಿ ರೇಡಿಯೋ ದಿಕ್ಸೂಚಿಯನ್ನು ಮೊದಲ ಬಾರಿಗೆ ಬಳಸಲಾಯಿತು.

 • 1921: ಕೆನೆಡಾದ ಜೀವ ರಸಾಯನ ಶಾಸ್ತ್ರಜ್ಞ ಫ್ರೆಡರಿಕ್ ಬಾಂಟಿಂಗ್ ಮತ್ತು ಸಹವರ್ತಿಗಳು ಹಾರ್ಮೋನ್ ಇನ್ಸುಲಿನ್ ಪತ್ತೆಹಚ್ಚಿರುವುದಾಗಿ ಪ್ರಕಟಿಸಿದರು.

 • 1922: ಅಂತರರಾಷ್ಟ್ರೀಯ ಭೌಗೋಳಿಕ ಒಕ್ಕೂಟ ರೂಪಗೊಂಡಿತು.

 • 1940: ಖ್ಯಾತ ಕಾರ್ಟೂನ್ “ಬಗ್ಸ್ ಬನ್ನಿ” ಮೊದಲ ಬಾರಿಗೆ ಪ್ರಸಾರವಾಯಿತು.

 • 1945: ಅಮೇರಿಕಾದ ಕಮ್ಯುನಿಸ್ಟ್ ಪಾರ್ಟಿ ರೂಪುಗೊಂಡಿತು.

 • 1947: ಸ್ವಿಜರ್ಲ್ಯಾಂಡಿನ ಜೆನಿವಾದಲ್ಲಿ ವಿಶ್ವ ವಾಟರ್ ಸ್ಕೀ ಸಂಸ್ಥೆಯನ್ನು ಸ್ಥಾಪಿಸಲಾಯಿತು.

 • 1965: ಅಮೇರಿಕಾದಲ್ಲಿ ಫೆಡರಲ್ ಸಿಗರೇಟ್ ಲೇಬಲಿಂಗ್ ಮತ್ತು ಜಾಹಿರಾತು ಕಾಯಿದೆ ಕಾನೂನಿಗೆ ಸಹಿ ಹಾಕಲಾಯಿತು. ಎಲ್ಲಾ ಸಿಗರೇಟ್ ಪ್ಯಾಕ್ ಮೇಲೆ ಆರೋಗ್ಯ ಎಚ್ಚರಿಕೆಗಳು ಬೇಕೆಂದು ಮಾಡಲಾಯಿತು.

 • 1994: ಮಗುವಿನ ಲಿಂಗಪರೀಕ್ಷೆಯನ್ನು ನಿಷೇಧಿಸಿ ಸಂಸತ್ತು ನಿರ್ಣಯ ಮಾಡಿತು.

 • 2012: ರಾಣಿ ಎಲಿಜಿಬತ್ II ಲಂಡನ್ನಿನಲ್ಲಿ 2012 ರ ಬೇಸಿಗೆ ಒಲಂಪಿಕ್ಸ್ ಅನ್ನು ಅಧಿಕೃತವಾಗಿ ಚಾಲನೆ ನೀಡಿದರು.

 • 2014: ಎಬೋಲಾ ಸಾಂಕ್ರಾಮಿಕ ಹರಡುವಿಕೆಯ ಭಯದಿಂದ ಲಿಬೇರಿಯಾ ತನ್ನ ಎಲ್ಲಾ ಗಡಿಗಳನ್ನು ಮುಚ್ಚಿತು.

ಪ್ರಮುಖ ಜನನ/ಮರಣ:

 • 1887: ವಕೀಲರು ಮತ್ತು ಸಮಾಜ ಸೇವಕರಾಗಿದ್ದ ಸರ್ದಾರ್ ದಾವರ್ ತೇಮುರಸ್ ಕವಸ್ಜಿ ಜನಿಸಿದರು.

 • 1928: ಖ್ಯಾತ ಲೇಖಕ ವಕೀಲರು ಮತ್ತು ಪತ್ರಕರ್ತರು ಆಗಿದ್ದ ರಾಮೇಶ್ವರ್ ಸಹಾಯ್ ಸಕ್ಸೇನಾ ಭಾರತದ ಲಲಿತ್ಪುರದಲ್ಲಿ ಜನಿಸಿದರು.

 • 1954: ಭಾರತದ ಸಾರಿಗೆ ಸಚಿವರಾಗಿದ್ದ ಜಿ.ಎಸ್. ಬಾಲಿ ಜನಿಸಿದರು.

 • 1962: ಭಾರತೀಯ ಪತ್ರಕರ್ತ, ನಟ, ನಿರ್ದೇಶಕ ರಾಹುಲ್ ಬೋಸ್ ಜನಿಸಿದರು.

 • 1983: ಭಾರತೀಯ ಫುಟ್ ಬಾಲರ್ ಸಾಕರ್ ವೆಲ್ಹೋ ಜನಿಸಿದರು.

 • 1992: ಬಾಲಿವುಡಿನ ಪ್ರಖ್ಯಾತ ನಟ ಅಮ್ಜದ್ ಖಾನ್ ನಿಧನರಾದರು.

 • 2015: ಭಾರತದ 11 ನೇ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ನಿಧನರಾದರು.