Categories
e-ದಿನ

ಜುಲೈ-29

 

ಪ್ರಮುಖ ಘಟನಾವಳಿಗಳು:

1585: ನೆದರ್ ಲ್ಯಾಂಡಿನಲ್ಲಿ ಫ್ರೈಸ್ಲ್ಯಾಂಡಿನ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.

1655: ವಿಶ್ವದ ಅತ್ಯಂತ ದೊಡ್ಡ ಟೌನ್ ಹಾಲ್ ಆಮ್ಸ್ಟರ್ ಡ್ಯಾಮಿನಲ್ಲಿ ತೆರೆಯಲಾಯಿತು.

1783: ಐಸ್ಲ್ಯಾಂಡಿನ ಸ್ಕಾಪ್ಟರ್ ಜ್ವಾಲಾಮುಖಿ ಉಕ್ಕಿ ಸುಮಾರು 9000 ಜನರನ್ನು ಬಲಿ ತೆಗೆದುಕೊಂಡಿತು.

1802: ಬರೋಡದ ಗಾಯ್ಕೆವಾಡ ಮತ್ತು ಬ್ರಿಟಿಷರ ನಡುವೆ ಸೇನೆಯ ಕುರಿತು ಒಪ್ಪಂದ ಮಾಡಲಾಯಿತು.

1835: ಹವಾಯಿಯಲ್ಲಿ ಮೊದಲ ಕಬ್ಬಿನ ಬೆಳೆ ಬೆಳೆಯಲು ಆರಂಭಿಸಲಾಯಿತು.

1847: ಕಂಬರ್ಲ್ಯಾಂಡ್ ಸ್ಕೂಲ್ ಆಫ್ ಲಾ ಅನ್ನು ಲೆಬನಾನ್ನಿನಲ್ಲಿ ಸ್ಥಾಪಿಸಲಾಯಿತು.

1874: ಸಾಗಿಸಲು ಸಾಧ್ಯವಾಗುವ ಟೆನ್ನಿಸ್ ಕೋರ್ಟ್ ಅನ್ನು ಮೇಜರ್ ವಾಲ್ಟರ್ ಕಾಪ್ಟನ್ ವಿಂಗ್ ಫೀಲ್ಡ್ ಪೇಟೆಂಟ್ ಪಡೆದರು.

1907: ಮೊದಲ ಹೆಲಿಕಾಪ್ಟರ್ ಫ್ರಾನ್ಸಿನಲ್ಲಿ ಹಾರಾಟ ನಡೆಸಿತು.

1914: ಮೊದಲ ವಿದೇಶಿ ದೂರವಾನಿ ಕರೆಯನ್ನು ನ್ಯೂಯಾರ್ಕಿನಿಂದ ಸಾನ್ ಫ್ರಾನ್ಸಿಸ್ಕೋಗೆ ಮಾಡಲಾಯಿತು.

1927: ಮೊದಲ ಉಕ್ಕಿನ ಶ್ವಾಸಕೋಶವನ್ನು ದೇಹದಲ್ಲಿ ಪ್ರತಿಷ್ಠಾಪಿಸಲಾಯಿತು.

1938: “ಡೆನಿಸ್ ದಿ ಮೆನಿಸ್” ವ್ಯಂಗ್ಯ ಚಿತ್ರ ಮೊದಲ ಬಾರಿಗೆ ಕಂಡಿತು.

1949: ಬಿಬಿಸಿ ರೇಡಿಯೋ ಪ್ರಸಾರವನ್ನು ಆರಂಭಿಸಿತು.

1957: ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1958: ಅಮೇರಿಕಾದಲ್ಲಿನಾಸಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1980: ಮಾಸ್ಕೋ ಒಲಂಪಿಕ್ಸಿನಲ್ಲಿ ಸ್ಫೇನ್ ತಂಡವನ್ನು 4-3ರ ಅಂತರದಿಂದ ಸೋಲಿಸಿ ಭಾರತೀಯ ಹಾಕಿ ತಂಡವು ಚಿನ್ನದ ಪದಕ ಪಡೆಯಿತು.

1983: ಕೋಲಾರ ಸಮೀಪದ ಏರೋನಾಟಿಕಲ್ ಡೆವೆಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಇಂದ ಭಾರತವು ಮೊದಲ ಪೈಲೆಟ್ ರಹಿತ ವಿಮಾನಯಾನವನ್ನು ಯಶಸ್ವಿಯಾಗಿ ಪ್ರಯೋಗಿಸಿತು.

1987: ಭಾರತದ ಪ್ರಧಾನ ಮಂತ್ರಿಯಾಗಿದ್ದ ರಾಜಿವ್ ಗಾಂಧಿ ಮತ್ತು ಶ್ರೀಲಂಕಾದ ಅಧ್ಯಕ್ಷರಾಗಿದ್ದ ಜೆ,ಆರ್.ಜಯವರ್ದನೆ ಜನಾಂಗೀಯ ವಿಷಯಗಳ ಕುರಿತು ಇಂಡೋ-ಶ್ರೀಲಂಕಾ ಒಪ್ಪಂದಕ್ಕೆ ಸಹಿ ಹಾಕಿದರು.

1999: ಬಾಳಾ ಠಾಕರೆ ಅವರಿಗೆ ಡಿಸೆಂಬರ್ 2001ರ ವರೆಗು ಯಾವುದೇ ಚುನಾವಣೆಯಲ್ಲಿ ಮತ ಹಾಕುವ ಅಥವ ಚುನಾವಣೆಗೆ ನಿಲ್ಲುವ ಹಕ್ಕನ್ನು ನಿರ್ಬಂಧಿಸಿದ ತೀರ್ಪಿನ ವಿರುದ್ದ ಮುಂಬೈನಲ್ಲಿ ಪ್ರತಿಭಟನಾರ್ಥ ಬಂದ್ ಆಚರಿಸಲಾಯಿತು.

2005: ಖಗೋಳಶಾಸ್ತ್ರಜ್ಞರು “ಎರಿಸ್” ಅನ್ನು ಕಂಡುಹಿಡಿದಿರುವುದಾಗಿ ಘೋಷಿಸಿದರು.

2015: ವಿಮಾನಯಾನ MH370 ಕಾಣೆಯಾದ ಭಾಗವು ರಿಯೂನಿಯನ್ ದ್ವೀಪದಲ್ಲಿ ಪತ್ತೆಯಾಯಿತು.

2015: ಮೈಕ್ರೋಸಾಫ್ಟ್ ಸಂಸ್ಥೆಯು “ವಿಂಡೋಸ್ 10” ಲೋಕಾರ್ಪಣೆ ಮಾಡಿತು.

ಪ್ರಮುಖ ಜನನ/ಮರಣ:

1884: ಕನ್ನಡದ ಪ್ರಸಿದ್ದ ನಾಟಕಕಾರ ಟಿ.ಪಿ.ಕೈಲಾಸಂ ಜನಿಸಿದರು.

1891: ಸಾಮಾಜಿಕ ಸುಧಾರಣಾವಾದಿ ಈಶ್ವರ ಚಂದ್ರ ವಿದ್ಯಾಸಾಗರ್ ಅವರು ನಿಧನರಾದರು.

1904: ಟಾಟಾ ಮೋಟರ್ಸ್ ಸಂಸ್ಥೆಯ ಸಂಸ್ಥಾಪಕರಾದ ಜೆ.ಆರ್.ಡಿ ಟಾಟಾ ಜನಿಸಿದರು.

1927: ಗುಜರಾತಿನ ನಾಯಕಿ ಮಾಧವಿ ಸಿಂಗ್ ಸೋಲಂಕಿ ಜನಿಸಿದರು.

1959: ಭಾರತೀಯ ಚಿತ್ರರಂಗದ ನಟ, ಗಾಯಕ, ನಿರ್ಮಾಪಕ ಸಂಜಯ್ ದತ್ ಜನಿಸಿದರು.

1995: ಗಜಲ್ ಹಾಡುಗಾರರಾದ ಅನುಪ್ ಜಲೋಟ ಜನಿಸಿದರು.

2009: ಭಾರತದ ಕಡೆಯ ರಾಣಿಯರಲ್ಲೊಬ್ಬರಾದ ಗಾಯತ್ರಿ ದೇವಿ ನಿಧನರಾದರು.

2013: ಭಾರತೀಯ ಕ್ರಿಕೆಟಿಗರಾಗಿದ್ದ ಮುನಿರ್ ಹುಸೇನ್ ನಿಧನರಾದರು.