ಪ್ರಮುಖ ಘಟನಾವಳಿಗಳು:

 • 1608: ಸಾಮ್ಯುಯೆಲ್ ಡಿ ಚಾಂಪ್ಲೇನ್ ಕ್ಯೂಬೆಕ್ ನಗರವನ್ನು ಕಂಡುಹಿಡಿದರು.
 • 1630: ಮಹಾರಾಜ ಫರ್ಡಿನಂಡ್ II ಜರ್ಮನಿಯ ಸಂಸತ್ತನ್ನು ಆರಂಭಿಸಿದರು.
 • 1767: ನಾರ್ವೇಯ ಮೊದಲ ಪತ್ರಿಕೆಯಾದ ಅಡ್ರೆಸಿವಿಸೆನ್ನಿನ ಮೊದಲ ಮುದ್ರಣ ಮಾಡಲಾಯಿತು.

 • 1775: ಅಮೇರಿಕಾ ಜೆನೆರಲ್ ಜಾರ್ಜ್ ವಾಷಿಂಗ್ಟನ್ ಕೇಂಬ್ರಿಡ್ಜಿನಲ್ಲಿ ಕಾಂಟಿನೆಂಟಲ್ ಸೈನ್ಯದ ಮೇಲೆ ಆಜ್ಞೆಯನ್ನು ವಹಿಸಿಕೊಂಡರು

 • 1790: ಪ್ಯಾರೀಸಿನಲ್ಲಿ ಕಾಂಡೋರ್ಸೆಟ್ಟಿನ ಮಾರ್ಕ್ವಿಸ್ ಮಹಿಳೆಯರಿಗೆ ನಾಗರೀಕ ಹಕ್ಕುಗಳನ್ನು ನೀಡುವಂತೆ ಪ್ರಸ್ಥಾಪಿಸಿದರು.

 • 1806: ಮೈಕಲ್ ಕೀನ್ಸ್ ಮೊದಲ ಬೆಳೆಸಿದ ಸ್ಟ್ರಾಬೆರಿಯನ್ನು ಪ್ರದರ್ಶಿಸಿದರು.
 • 1819: ಅಮೇರಿಕಾದ ಮೊದಲ ಉಳಿತಾಯ ಬ್ಯಾಂಕ್ ತೆರೆಯಲಾಯಿತು.
 • 1871: ದಿ ಡೆನ್ವರ್ ಮತ್ತು ರಿಯೋ ಗ್ರಾಂಡ್ ವೆಸ್ಟರ್ನ್ ರೈಲ್ ರೋಡ್ ಸಂಸ್ಥೆಯು ಮೊದಲ ನ್ಯಾರೋ-ಗೇಜ್ ಲೋಕೋಮೋಟಿವ್ ಅನ್ನು ಪರಿಚಯಿಸಿದರು. ಅದನ್ನು “ಮಾಂಟೆಝೂಮ” ಎಂದು ಕರೆಯಲಾಯಿತು.
 • 1880: ಥಾಮಸ್ ಎಡಿಸನ್ ಅವರ ಧನಸಹಾಯದಿಂದ “ಸೈನ್ಸ್” ಪುಸ್ತಕದ ಮುದ್ರಣ ಆರಂಭವಾಯಿತು.

 • 1903: ಪೆಸಿಫಿಕ್ ಸಾಗರಾದ್ಯಂತದ ಮೊದಲ ಕೇಬಲ್ ಹೊನೊಲುಲು, ಮಿಡ್ವೆ, ಗುವಾಂ ಮತ್ತು ಮನಿಲಾದ ನಡುವೆ ವಿಭಜನೆಯಾಯಿತು.

 • 1908: ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್ ಅವರನ್ನು ದೇಶದ್ರೋಹ ಅಪಾದನೆಯ ಮೇರೆಗೆ ಬ್ರಿಟೀಷರು ಬಂಧಿಸಿದರು.
 • 1924: ಕ್ಲಾರೆನ್ಸ್ ಬರ್ಡ್ಸ್ಐ ಜೆನೆರಲ್ ಸೀಫುಡ್ ಸಂಸ್ಥೆಯನ್ನು ಸ್ಥಾಪಿಸಿದರು.
 • 1928: ಜಾನ್ ಲೋಗಿ ಬೈರ್ಡ್ ಲಂಡನ್ನಿನಲ್ಲಿ ಮೊದಲ ಬಣ್ಣದ ಟೆಲಿವಿಷನ್ ಪ್ರಸರಣವನ್ನು ಪ್ರದರ್ಶಿಸಿದರು.
 • 1929: ಡನ್ಲಾಪ್ ಲೇಟೆಕ್ಸ್ ಡೆವೆಲಪ್ಮೆಂಟ್ ಲಾಬರೇಟರಿಸ್ ಫೋಮ್ ರಬ್ಬರನ್ನು ತಯಾರಿಸಿದರು.
 • 1934: ಯು.ಎಸ್. ಫೆಡರಲ್ ಡೆಪಾಸಿಟ್ ಇನ್ಶುರೆನ್ಸ್ ಕಾರ್ಪರೇಷನ್ (FDIC) ತನ್ನ ಮೊದಲ ಪಾವತಿಯನ್ನು ಲಿಡಿಯಾ ಲೋಸಿಗರ್ ಅವರಿಗೆ ಮಾಡಿತು.
 • 1952: ವೇಯ್ನ್ ಸ್ಟೇಟ್ ಯೂನಿವರ್ಸಿಟಿಯ ವೈದ್ಯರಾದ ಡಾ.ಫಾರೆಸ್ಟ್ ಡೆವೆ ಡೊಡ್ರಿಲ್ ಡೆಟ್ರಾಯಿಟ್ಸ್ ಹಾರ್ಪರ್ ಆಸ್ಪತ್ರೆಯಲ್ಲಿ ರೋಗಿಯ ಮೇಲೆ ಕಾರ್ಯನಿರ್ವಹಿಸಲು ಯಾಂತ್ರಿಕ ಹೃದಯ ಪಂಪನ್ನು ಬಳಸಿದರು. ತೆರೆದ ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಯಾಂತ್ರಿಕ ಪಂಪ್ ಅನ್ನು ವಿಶ್ವದ ಮೊದಲ ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗಿದೆ.
 • 1977: ರೇಮಂಡ್ ಡ್ಯಾಮಾಡಿಯನ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಎಂ ಆರ್ ಐ) ಬಳಸಿ ಮಾನವ ಎದೆಯ ಮೊದಲ ಚಿತ್ರವನ್ನು ನಿರ್ಮಿಸಿದರು
 • 1993: ಜರ್ಮನಿಯ ಸ್ಟೆಫಿ ಗ್ರಾಫ್ ಸತತ ಮೂರನೇ ವಿಂಬಲ್ಟನ್ ಪ್ರಶಸ್ತಿ ಪಡೆದರು
 • 2014: ಜರ್ಮನಿ ಮೊದಲ ಕನಿಷ್ಟ ವೇತನ ಕಾನೂನನ್ನು ರಾಜ್ಯಾದಂತ ಜಾರಿಗೆ ತಂದಿತು.

ಪ್ರಮುಖ ಜನನ/ಮರಣ:

 • 1912: ಕಾದಂಬರಿಕಾರ್ತಿ, ಮತ್ತು ಸಣ್ಣ ಕತೆಗಾರ್ತಿ ಎಲಿಜಿಬತ್ ಟೈಲರ್ ಜನಿಸಿದರು.
 • 1930: ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಕರ್ನಾಟಕದ ಮಾಜಿ ಲೋಕಾಯುಕ್ತ ಎನ್ ವೆಂಕಟಾಚಲ ಜನಿಸಿದರು.

 • 1980: ಭಾರತೀಯ ಕ್ರಿಕೆಟ್ ಆಟಗಾರರಾದ ಹರಭಜನ್ ಸಿಂಗ್ ಜನಿಸಿದರು