Categories
e-ದಿನ

ಜುಲೈ-4

 

ಪ್ರಮುಖ ಘಟನಾವಳಿಗಳು:

1776: ಎರಡನೇ ಕಾಂಟಿನೆಂಟಲ್ ಕಾಂಗ್ರೆಸ್ಸಿಗಾಗಿ ಜನಪ್ರಿಯ ದಂತಕಥೆಯ ಪ್ರಕಾರ ಲಿಬರ್ಟಿಯ ಗಂಟೆಯನ್ನು ಬಾರಿಸಲಾಯಿತು.

1785: ಜೇಮ್ಸ್ ಹಟ್ಟನ್, ಭೂವಿಜ್ಞಾನಿ ಸಾರ್ವಜನಿಕವಾಗಿ ಎಡಿನ್ಬರ್ಗ್ ರಾಯಲ್ ಸೊಸೈಟಿಯ ಸಭೆಯಲ್ಲಿ ಮೊದಲ ಬಾರಿಗೆ ಏಕರೂಪತಾವಾದದ ಸಿದ್ಧಾಂತವನ್ನು ಓದಿದರು.

1789: ಮೊದಲ ಅಮೇರಿಕಾದ ಸುಂಕದ ಕಾಯ್ದೆ ಜಾರಿಗೆ ತರಲಾಯಿತು.

1802: ಅಮೇರಿಕಾದ ಸೇನೆಯ ಅಕಾಡೆಮಿ ಅಧಿಕೃತವಾಗಿ ತೆರೆಯಿತು.

1817: ಮುಖ್ಯ ಇಂಜಿನಿಯರ್ ಆಗಿದ್ದ ಜೇಮ್ಸ್ ಗೆಡ್ಡೆಸ್ ಎರಿ ಕಾಲುವೆಯ ಮೇಲೆ ನಿರ್ಮಾಣವನ್ನು ಆರಂಭಿಸಿದರು, ಇದು ಉತ್ತರ ಅಮೇರಿಕಾದ ಮೊದಲ ಶ್ರೇಷ್ಠ ಇಂಜನಿನಿಯರಿಂಗ್ ಕೃತಿಗಳಲ್ಲಿ ಒಂದಾಗಿದೆ.

1876: ಸ್ಯಾನ್ ಫ್ರಾನ್ಸಿಸ್ಕೋದ ವಿದ್ಯುತ್ ಬೆಳಕನ್ನು ಮೊದಲ ಬಾರಿಗೆ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಯಿತು.

1884: ಅಮೇರಿಕಾದ ಮೊದಲ ಗೂಳಿಕಾಳಗ (ಬುಲ್ ಫೈಟ್) ಪಂದ್ಯಾವಳಿ ನಡೆಯಿತು.

1911: ನ್ಯೂಯಾರ್ಕ್, ಫಿಲಡೆಲ್ಫಿಯಾ ಮತ್ತು ಇತರ ಹಲವು ನಗರಗಳೂ ಸೇರಿದಂತೆ ಈಶಾನ್ಯ ಅಮೇರಿಕಾದಲ್ಲಿ ಮಾರಣಾಂತಿಕ ಶಾಖ ತರಂಗದಿಂದ 380ಜನರು ನಿಧನರಾದರು.

1914: ಅಮೇರಿಕಾದಲ್ಲಿ ಮೊದಲ ಮೋಟಾರ್ ಸೈಕಲ್ ರೇಸ್ ನಡೆಯಿತು.

1946: ಫಿಲಿಪೀನ್ಸ್ ಅಮೇರಿಕಾದ ಸಾರ್ವಭೌಮತ್ವದ 48 ವರುಷಗಳ ನಂತರ ಸ್ವಯಂ ಆಡಳಿತ ರಾಷ್ಟ್ರವಾಯಿತು.

1959: ಅಲಸ್ಕಾದ ಹೊಸ ರಾಜ್ಯವನ್ನು ಪ್ರತಿನಿಧಿಸಲು 49ನೇ ನಕ್ಷತ್ರವನ್ನು ಅಮೇರಿಕಾದ ಧ್ವಜದಲ್ಲಿ ಅಳವಡಿಸಲಾಯಿತು.

1960: ಹವಾಯಿಯ ಹೊಸ ರಾಜ್ಯವನ್ನು ಪ್ರತಿನಿಧಿಸಲು 50ನೇ ನಕ್ಷತ್ರವನ್ನು ಅಮೇರಿಕಾದ ಧ್ವಜದಲ್ಲಿ ಅಳವಡಿಸಲಾಯಿತು.

1976: ಬ್ರಿಟೀಶರ ಆಳ್ವಿಕೆಯಿಂದ ಅಮೇರಿಕಾ ಸ್ವತಂತ್ರವಾಗಿ 200ನೇ ಜನ್ಮದಿನವನ್ನು ಆಚರಿಸಲಾಯಿತು.

1996: ಉಚಿತ ಇಂಟರ್ ನೆಟ್ ಇ-ಮೇಲ್ ಸೇವೆಯಾದ “ಹಾಟ್ಮೇಲ್” ಆರಂಭವಾಯಿತು.

2008: ಆರು ದಶಕಗಳ ನಂತರ ಚೀನಾ ಮತ್ತು ತೈವಾನ್ ನಡುವೆ ನಿಯಮಿತವಾಗಿ ಸಂಭವಿಸುವ ಮೊದಲ ನೇರ ವಿಮಾನದ ಹಾರಾಟವಾಯಿತು.

2012: ಸರ್ನ್ ಲ್ಯಾಬೊರೇಟರಿಯ ವಿಜ್ಞಾನಿಗಳು ಹಿಗ್ಸ್ ಬೋಸನ್ ಅನ್ನು ಹೋಲುವಂತ ನೂತನ ಬೋಸಾನ್ (ದ್ರವ್ಯರಾಶಿಯನ್ನು ಹೇಗೆ ಪಡೆಯುತ್ತದೆ ಎಂದು ವಿವರಿಸಲು ಸಹಾಯ ಮಾಡುವ ಒಂದು ಕಣ) ಕಂಡುಹಿಡಿದಿದ್ದಾರೆ ಎಂದು ಘೊಷಿಸಿದರು.

2013: ಬ್ರೆಜಿಲ್ಲಿನಲ್ಲಿ ವಿಜ್ಞಾನಿಗಳು ಒಂದು ನಾಣ್ಯದ ಗಾತ್ರದ ಮತ್ತು ತೂಕದಲ್ಲಿ ಒಂದು ಗ್ರಾಂಗಿಂತ ಕಡಿಮೆ ಇರುವ ಹೊಸ ಹಲ್ಲಿಗಳ ಜಾತಿಯನ್ನು ಕಂಡರು.

ಪ್ರಮುಖ ಜನನ/ಮರಣ:

ಇಟಾಲಿಯನ್ ಜೆನೆರಲ್ ಮತ್ತು ರಾಷ್ಟ್ರೀಯತಾವಾದಿ, ಇಟಲಿಯನ್ನು ಏಕೀಕರಿಸುವಲ್ಲಿ ಸಹಾಯ ಮಾಡಿದ ಜಿಯುಸೆಪ್ಪಿ ಗಾರಿಬಾಲ್ಡಿ ಜನಿಸಿದರು.

1898: ಭಾರತದ ಮಾಜಿ ಪ್ರಧಾನ ಮಂತ್ರಿ ಆಗಿದ್ದ ಗುಲ‌ಜಾರಿಲಾಲ್ ನಂದಾ ಪಂಜಾಬಿನಲ್ಲಿ ಜನಿಸಿದರು.

1921: ಪೂರೈಕೆ ಮತ್ತು ಬೇಡಿಕೆಯಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಅರ್ಥಶಾಸ್ತ್ರಜ್ಞ ಗೆರಾಡ್ ದೆಬ್ರು ಜನಿಸಿದರು.

1924: ನೇಪಾಳದ ಮಾಜಿ ಪ್ರಧಾನಿ ಗಿರಿಜಪ್ರಸಾದ್ ಕೊಯಿರಾಲಾ ಭಾರತದ ಬಿಹಾರಿನಲ್ಲಿ ಜನಿಸಿದರು.