Categories
e-ದಿನ

ಜುಲೈ-6

 

ಪ್ರಮುಖ ಘಟನಾವಳಿಗಳು:

1573: ಕೊರ್ಡೋಬಾ, ಅರ್ಜೆಂಟೀನಾವನ್ನು ಜೆರೋನಿಮೊ ಲೂಯಿಸ್ ಡಿ ಕ್ಯಾಬ್ರೆರಾ ಕಂಡುಹಿಡಿದರು.

1858: ಶೂ ತಯಾರು ಮಾಡುವ ಯಂತ್ರದ ಪೇಟೆಂಟನ್ನು ಲೇಮಾನ್ ಬ್ಲೇಕ್ ಪಡೆದರು.

1885: ಲೂಯಿಸ್ ಪಾಶ್ಚರ್ ರೇಬೀಸ್-ವಿರೋಧಿ ಲಸಿಕೆಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದರು.

1886: ವಿಸ್ಕನ್ಸಿನ್ನಿನ ಹಾರ್ಲಿಕ್ಸ್ ಸಾರ್ವಜನಿಕರಿಗೆ ಮೊದಲ ಮಾಲ್ಟೆಡ್ ಹಾಲನ್ನು ನೀಡಿತು.

1892: ಬ್ರಿಟಿಶ್ ಸರ್ಕಾರದ ಭಾರತದ ಮೊದಲ ಸಂಸತ್ತಿನ ಸದಸ್ಯರಾಗಿ ದಾದಾಬಾಯಿ ನವರೋಜಿ ಆಯ್ಕೆಯಾದರು.

1922: ಡಚ್ ದೇಶದ ವಿಮಾನ ತಯಾರಕಾದ ಥ್ರಾಂಪೆನ್ ಬರ್ಗ್ ದಿವಾಳಿತನವನ್ನು ಘೋಷಿಸಿದರು.

1924: ಪ್ರಯೋಗಾತ್ಮಕವಾಗಿ ಮೊದಲ ಪೋಟೋವನ್ನು ಅಟ್ಲಾಂಟಿಕ್ಕಿನ ಮೂಲಕ ರೇಡಿಯೋದಲ್ಲಿ ಕಳುಹಿಸಲಾಯಿತು.

1928: ನ್ಯೂಯಾರ್ಕಿನಲ್ಲಿ ಮೊದಲ ಸಂಭಾಷಣೆಯುಳ್ಳ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.

1947: ಸೋವಿಯೆಟ್ ಯೂನಿಯನ್ ಒಕ್ಕೂಟದಲ್ಲಿ AK-47 ಉತ್ಪಾದನೆಗೆ ಹಸಿರು ನಿಶಾನೆ ನೀಡಲಾಯಿತು.

1955: ಸಾಂಧರ್ಬಿಕ ವಿಶ್ಲೇಷಣೆ ಮತ್ತು ಕಾರ್-ಎಮಿಶನ್ ಮಾಲಿನ್ಯ ನಿಯಂತ್ರಣದ ಸಂಶೋಧನಕ್ಕೆ ಫೆಡರಲ್ ಏರ್ ಪೊಲ್ಯೂಷನ್ ಕಂಟ್ರೋಲ್ ಆಕ್ಟ್ ಅನ್ನು ಅಳವಡಿಸಲಾಯಿತು.

1972: ಮೇರಿಲ್ಯಾಂಡಿನ ಆನಾಪೋಲಿಸಿನಲ್ಲಿ ಅಮೇರಿಕಾದ ನೇವೆಲ್ ಅಕಾಡೆಮಿ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳನ್ನು ನೇಮಿಸಿದರು

1983: ಸುಪ್ರೀಂ ಕೋರ್ಟ್ ನೌಕರರ ಸೇವಾನಿವೃತ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಕಡಿಮೆ ಪಾವತಿಸುವಂತಿಲ್ಲವೆಂದು ಕಾನೂನು ಜಾರಿ ಮಾಡಿತು.

2006: ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ಮೊಹರು ಮಾಡಿದ ಭಾರತ ಮತ್ತು ಚೀನಾ ನಡುವಿನ ನಥು ಲಾ ಪಾಸ್ 44 ವರ್ಷಗಳ ನಂತರ ವ್ಯಾಪಾರಕ್ಕಾಗಿ ಮತ್ತೆ ತೆರೆಯಿತು.

2006: ಸೋಡಾ ಕಂಪನಿಯ ಕೋಕಾ ಕೋಲಾದಿಂದ ಮೂರು ಉದ್ಯೋಗಿಗಳು ಕಂಪನಿಯಿಂದ ರಹಸ್ಯಗಳನ್ನು ಕದ್ದಿರುವ ಆರೋಪ ಮಾಡಲಾಗಿತ್ತು.

2012: ಯಾಹೂ ಮತ್ತು ಫೇಸ್ ಬುಕ್ ಒಂದು ಪೇಟೆಂಟ್ ವಿವಾದವನ್ನು ಬಗೆಹರಿಸಲು ಒಪ್ಪಿಕೊಳ್ಳುತ್ತದೆ ಹಾಗೂ ಎರಡೂ ಸಂಸ್ಥೆಯ ನಡುವೆ ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ವಿಸ್ತರಿಸುವ ಜಾಹಿರಾತು ಮತ್ತು ವಿಷಯ ಹಂಚಿಕೆ ಮೈತ್ರಿಯನ್ನು ರೂಪಿಸಿತು.

ಪ್ರಮುಖ ಜನನ/ಮರಣ:

1837: ಭಾರತೀಯ ಓರಿಯೆಂಟಲಿಸ್ಟ್ ಮತ್ತು ವಿದ್ವಾಂಸರಾದ ಆರ್.ಜಿ.ಬಂಡಾರ್ಕರ್ ಜನಿಸಿದರು.

1901: ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶಾಮಾಪ್ರಸಾದ್ ಮುಖರ್ಜಿ ಕಲ್ಕತ್ತಾದಲ್ಲಿ ಜನಿಸಿದರು.

1986: ಭಾರತದ ನಾಲ್ಕನೇ ಉಪ ಪ್ರಧಾನಿಯಾಗಿದ್ದ ಜಗಜೀವನ್ ರಾಮ್ ನಿಧನರಾದರು.

1997: ಭಾರತೀಯ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಕಾರರಾದ ಚೇತನ್ ಆನಂದ್ ನಿಧನರಾದರು.

2002: ರಿಲಯನ್ಸ್ ಸಂಸ್ಥೆಯ ಸಂಸ್ಥಾಪಕರಾದ ಧೀರುಬಾಯಿ ಅಂಬಾನಿ ನಿಧನರಾದರು.