ಪ್ರಮುಖ ಘಟನಾವಳಿಗಳು:

  • 1550: ಯೂರೋಪಿನಲ್ಲಿ ಚಾಕೋಲೇಟ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

  • 1753: ಬ್ರಿಟಿಶ್ ವಸ್ತುಸಂಗ್ರಹಾಲಯವನ್ನು ಪಾರ್ಲಿಯಮೆಂಟ್ ಆಕ್ಟ್ ಮೂಲಕ ಸ್ಥಾಪಿಸಲಾಯಿತು.

  • 1753: ಬ್ರಿಟಿಶ್ ಸಂಸತ್ತು ಯಹೂದಿಗಳಿಗೆ ನಾಗರೀಕತ್ವ ನೀಡಿತು.

  • 1754: ನ್ಯೂಯಾರ್ಕಿನಲ್ಲಿ ಕಿಂಗ್ಸ್ ಕಾಲೇಜು ಆರಂಭವಾಯಿತು. ನಂತರ ಇದನ್ನು ಕೊಲಂಬಿಯ ಕಾಲೇಜೆಂದು 30 ವರ್ಷಗಳ ನಂತರ ಮತ್ತೆ ನಾಮಕರಣ ಮಾಡಲಾಯಿತು.

  • 1802: ಮೊದಲ ಹಾಸ್ಯ ಪುಸ್ತಕವನ್ನು ನ್ಯೂಯಾರ್ಕಿನ ಹಡ್ಸನ್ನಿನಲ್ಲಿ ಪ್ರಕಟಿಸಲಾಯಿತು.

  • 1896: ಲೂಮಿಯರ್ ಬ್ರದರ್ಸ್ ಮುಂಬಯಿಯಲ್ಲಿ (ಅಂದಿನ ಬಾಂಬೆ) ವ್ಯಾಟ್ಸನ್ ಹೋಟೆಲ್ಲಿನಲ್ಲಿ ಆರು ಚಲನಚಿತ್ರವನ್ನು ಪ್ರದರ್ಶಿಸಿದರು. ಇದೇ ಭಾರತೀಯ ಸಿನಿ ಚಿತ್ರರಂಗದ ಹುಟ್ಟು ಎಂದು ಪರಿಗಣಿಸಲಾಗಿದೆ.

  • 1905: ವಿಶ್ವದ ಅಂತರರಾಷ್ಟ್ರೀಯ ಕಾರ್ಮಿಕರು ತಮ್ಮ ಕಾರ್ಮಿಕ ಸಂಘಟನೆಯನ್ನು ಚಿಕಾಗೋದಲ್ಲಿ ಸ್ಥಾಪಿಸಿದರು.

  • 1916: ನ್ಯೂಜಿಲ್ಯಾಂಡ್ ಕಾರ್ಮಿಕ ಪಕ್ಷ ರೂಪಿತವಾಯಿತು.

  • 1920: ರೇಡಿಯೋ ದಿಕ್ಸೂಚಿ ಎಂದು ಕರೆಯಲ್ಪಡುವ ಒಂದು ಸಾಧನವನ್ನು ಮೊದಲ ಬಾರಿಗೆ ಅಮೇರಿಕಾದ ನೌಕಾಪಡೆಯ ವಿಮಾನದಲ್ಲಿ ಬಳಸಲಾಯಿತು.

  • 1930: ಕೊಲೊರೆಡಿಯ ನದಿಯ ಕಪ್ಪು ಕಣಿವೆಯಲ್ಲಿನ ಹೂವರ್ ಅಣೆಕಟ್ಟಿನ ನಿರ್ಮಾಣವು ಆರಂಭವಾಯಿತು. ಈ ಯೋಜನೆಯ ಮೂಲ ಹೆಸರು ಬೌಲ್ಡರ್ ಅಣೆಕಟ್ಟು ನಂತರ ಅಧ್ಯಕ್ಷ ಹೂವರವರಿಗೆ ಗೌರವಾರ್ಪಣೆಯಾಗಿ ಇದನ್ನು ಹೂವರ್ ಅಣೆಕಟ್ಟು ಎಂದು ನಾಮಕರಣ ಮಾಡಲಾಯಿತು.

  • 1950: ದಕ್ಷಿಣ ಆಫ್ರಿಕಾದ ಜನಸಂಖ್ಯೆ ನೋಂದಣಿ ಕಾಯಿದೆ ಪ್ರಾರಂಭವಾಯಿತು. ವರ್ಣಭೇದ ನೀತಿಯ ಭಾಗವಾಗಿ ಪ್ರತಿ ನಿವಾಸಿಯೂ ತಮ್ಮ ಜನಾಂಗೀಯ ಗುಣಲಕ್ಷಣಗಳಿಗೆ ಅನುಗುಣವಾಗಿ ವರ್ಗೀಕರಿಸಲ್ಪಟ್ಟು ನೋಂದಾಯಿಸಲ್ಪಡಬೇಕೆಂಬುದು ಅಗತ್ಯವಾಯಿತು.

  • 1981: ಆರಿಜೋನಾದ ನ್ಯಾಯಾಧೀಶರಾಗಿದ್ದ ಸಾಂಡ್ರಾ ಡೇ ಓಕೂನರ್ ಅವರನ್ನು ಅಮೇರಿಕಾದ ಸರ್ವೋಚ್ಛ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು.

  • 1981: ಡುಪಾಂಟ್ ಮತ್ತು ಪಾಲ್ ಮಾಕ್ಕರೆಡಿ ಸೇರಿ ಆವಿಶ್ಕರಿಸಿದ ಮೊದಲ ಸೌರ ಶಕ್ತಿ ಚಾಲಿತ ವಿಮಾನವವು ಪ್ಯಾರಿಸಿನಿಂದ ಕ್ಯಾಂಟರ್ಬೆರಿಗೆ ಹಾರಾಡಿತು.

  • 2003: ಆಪರ್ಚುನಿಟಿ ಹೆಸರಿನ ನಾಸಾದ 2ನೇ ಮಾರ್ಸ್ ಲ್ಯಾಂಡರನ್ನು ಹಾರಿಸಲಾಯಿತು.

  • 2007: ನೂತನ 7 ಜಗತ್ತಿನ ಅದ್ಬುತಗಳ ಪ್ರತಿಷ್ಠಾನವು ಆಯೋಜಿಸಿದ್ದ ವಿಶ್ವವಯಾಪಿ ಸಮೀಕ್ಷೆಯಿಂದ ಮಾರ್ಡನ್ ವರ್ಲ್ಡಿನ ಹೊಸ ಏಳು ಅದ್ಬುತಗಳ ಅಧಿಕೃತ ಘೋಷಣೆಯನ್ನು ನಿರ್ಧರಿಸಲಾಯಿತು.

  • 2011: ಸ್ವೀಡೆನ್ನಿನ ಶಸ್ತ್ರವೈದ್ಯರು ವಿಶ್ವದ ಮೊದಲ ಸಿನ್ಥೆಟಿಕ್ ಅಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದರು.

  • 2014: ಇತಿಹಾಸ ಪೂರ್ವ ಪಕ್ಷಿ ಪ್ರಬೇಧಗಳಾದ ಪೆಲಾಗೋರ್ನಿಸ್ ಸ್ಯಾಂಡೆರಿಗಳ ಪಳೆಯುಳಿಕೆಯನ್ನು ಚಾರ್ಲ್ಸ್ಟನ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾಯಿತು. ಇಲ್ಲಿಯವರೆಗೆ ಕಂಡ ಅತಿ ದೊಡ್ಡ ಪಕ್ಷಿಯಾಗಿದ್ದು ಅದರ ರೆಕ್ಕೆ 24 ಅಡಿಯಷ್ಟಿದ್ದವೆಂದು ಪತ್ತೆಯಾಯಿತು.

  • 2015: ರಾಷ್ಟ್ರೀಯ ಹೈನು ಅಭೀವೃದ್ಧಿ ಮಂಡಳಿ “ಪಶು ಪೋಷಣೆ” ಎಂಬ ವೆಬ್ ಅಪ್ಲಿಕೇಶನ್ ಮತ್ತು ಆಂಡ್ರಾಯ್ಡ್ ಪ್ಲಾಟ್ಫಾರ್ಮ್ ಅಪ್ಲಿಕೇಶನ್ನನ್ನು ಆರಂಭಿಸಿತು.

ಪ್ರಮುಖ ಜನನ/ಮರಣ:

  • 1752: ನೇಯ್ಗೆ ಮಾದರಿಯನ್ನು ಮಾಡಬಲ್ಲ ಮಗ್ಗವನ್ನು ಕಂಡುಹಿಡಿದ ಸಂಶೋಧಕ ಜೋಸೆಫ್ ಮೇರಿ ಜಾಕ್ವರ್ಡ್ ಜನಿಸಿದರು.

  • 1973: ಭಾರತೀಯ ಖ್ಯಾತ ಗಾಯಕ ಕೈಲಾಶ್ ಖೇರ್ ಜನಿಸಿದರು.

  • 1981: ಭಾರತೀಯ ಪ್ರಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಜನಿಸಿದರು.