ಪ್ರಮುಖ ಘಟನಾವಳಿಗಳು:

 • 1497: ವಾಸ್ಕೊಡಗಾಮ ಭಾರತಕ್ಕೆ ನೌಕೆಯಲ್ಲಿ ಮೊದಲ ನೇರ ಯೂರೋಪಿಯನ್ ಪ್ರಯಾಣ ಮಾಡಿದರು.

 • 1693: ಅಮೇರಿಕಾದ ನ್ಯೂಯಾರ್ಕ್ ನಗರವು ಮೊದಲ ಪೋಲೀಸ್ ಸಮವಸ್ತ್ರವನ್ನು ಅನುಮೋದಿಸಿತು.

 • 1777: ಮೊದಲ ಅಮೇರಿಕಾದ ವಸಾಹತು ವರ್ಮಾಂಟ್ ಗುಲಾಮಗಿರಿಯನ್ನು ನಿಷೇಧಿಸಿತು.

 • 1796: ಅಮೇರಿಕಾ ನಗರ ಇಲಾಖೆ ಮೊದಲ ಅಮೇರಿಕಾದ ಪಾಸ್ಪೋರ್ಟ್ ವಿತರಿಸಿತು.

 • 1800: ಡಾ. ಬೆಂಜಮಿನ್ ವಾಟರ್ ಹೌಸ್ ಸಿಡುಬು ತಡೆಗಟ್ಟಲು ತನ್ನ ಮಗನಿಗೆ ಮೊದಲ ಕೌ ಪಾಕ್ಸ್ ಲಸಿಕೆ ನೀಡಿದರು.

 • 1835: ಲಿಬರ್ಟಿ ಗಂಟೆ ಬಾರಿಸುವಾಗ ಬಿರುಕು ಬಿಟ್ಟು ಮತ್ತೆಂದು ಸದ್ದು ಮಾಡಲಿಲ್ಲ.

 • 1862: ಒಡೋರ್ ಆರ್ ಟಿಂಬಿ ತಿರುಗುವ ಗೋಪುರದ ಗನ್ನಿಗೆ ಪೇಟೆಂಟ್ ಪಡೆದರು.

 • 1865: ಲೋವೆಲ್ಲಿನ ಸಿ.ಇ.ಬಾರ್ನ್ಸ್ ಮಶೀನ್ ಗನ್ನಿಗೆ ಪೇಟೆಂಟ್ ಪಡೆದರು.

 • 1870: ಅಮೇರಿಕಾದ ಕಾಂಗ್ರೆಸ್ “ಟ್ರೇಡ್ ಮಾರ್ಕ್”ಗಳನ್ನು ನೊಂದಾಯಿಸಲು ಅಧಿಕಾರ ನೀಡಿತು.

 • 1879: ವಿದ್ಯುತ್ ಶಕ್ತಿಯ ಬೆಳಕನ್ನು ಉಪಯೋಗಿಸಿದ ಮೊದಲ ಹಡಗು ಕ್ಯಾಲಿಫೋರ್ನಿಯಾದಿಂದ ಪ್ರಯಾಣ ಆರಂಭಿಸಿತು.

 • 1881: ಎಡ್ವರ್ಡ್ ಬರ್ನರ್ “ಸನ್ಡೇ” ಐಸ್ಕ್ರೀಂ ಸೃಷ್ಟಿಸಿದರು.

 • 1889: ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಣೆ ಆರಂಭವಾಯಿತು.

 • 1911: ನಾನ್ ಅಸ್ಪಿನ್ ವಾಲ್ ಮೊದಲ ಖಂಡಾಂತರ ಕುದುರೆ ಸವಾರಿ ಮಾಡಿದ ಮೊದಲ ಮಹಿಳೆ.

 • 1947: ಯುನೈಟೆಡ್ ನೇಷನ್ಸಿನ ಹೊಸ ಶಾಶ್ವತ ಪ್ರಧಾನ ಕಛೇರಿಗೆ ದಾರಿ ಮಾಡಲು ನ್ಯೂಯಾರ್ಕ್ ನಗರದಲ್ಲಿ ಅಗತ್ಯ ನಿರ್ಮಾಣ ಕಾರ್ಯಗಳು ಆರಂಭವಾಯಿತು.

 • 1947: ನ್ಯೂ ಮೆಕ್ಸಿಕೋದ ರೋಸ್ವೆಲ್ಲಿನಲ್ಲಿ ಒಂದು UFOಕುಸಿದು ಬದ್ದಿರುವ ಸುದ್ದಿ ಪ್ರಸಾರವಾಗಿತ್ತು.

 • 1963: ಕ್ಯೂಬಾದೊಂದಿಗೆ ಎಲ್ಲಾ ವಿತ್ತೀಯ ವಹಿವಾಟುಗಳನ್ನು ಅಮೇರಿಕಾ ನಿಷೇಧಿಸಿತು.

 • 1981: ಪ್ರಧಾನಿ ಮರೋಯಿಸ್ ಫ್ರಾನ್ಸಿನಲ್ಲಿ ಬ್ಯಾಂಕು/ವಿಮಾನ/ ಉಕ್ಕು ಉದ್ಯಮಗಳನ್ನು ರಾಷ್ಟ್ರೀಕರಿಸಿದರು.

 • 1999: ಫ್ಲೋರಿಡಾದ ರಾಜ್ಯದಲ್ಲಿ ವಿದ್ಯುತ್ ಕುರುಚಿ ಬಳಸಿ ಆಲೆನ್ ಲೀ ಡೇವಿಸ್ಸಿಗೆ ಮರಣದಂಡನೆ ನೀಡಲಾಯಿತು. ಇದೇ ವಿದ್ಯುತ್ ಕುರುಚಿಯ ಕೊನೆಯ ಬಳಕೆ ಆಗಿತ್ತು.

 • 2003: ಸುಡಾನ್ ವಿಮಾನ ಸಂಸ್ಥೆಯ ವಿಮಾನವು ಕುಸಿದದು 116 ಜನ ಪ್ರಯಾಣಿಕರು ನಿಧನರಾದರು.

 • 2015: ತಾಂತ್ರಿಕ ದೋಷದಿಂದಾಗಿ ನ್ಯೂಯಾರ್ಕ್ ಸ್ಟಾಕ್ ಎಕ್ಸಚೇಂಜ್ ಸುಮಾರು 4 ಗಂಟೆಗಳ ಕಾಲ ವ್ಯಾಪಾರವನ್ನು ಸ್ಥಗಿತಗೊಳಿಸಿತ್ತು.

ಪ್ರಮುಖ ಜನನ/ಮರಣ:

 • 1914: ಭಾರತದ ರಾಜಕರಣಿ ಮತ್ತು ಪಶ್ವಿಮ ಬಂಗಾಳದ 6ನೇ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಜನಿಸಿದರು.

 • 1949: ಭಾರತದ ರಾಜಕರಣಿ ಮತ್ತು ಆಂದ್ರಪ್ರದೇಶದ 14ನೇ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ಜನಿಸಿದರು.

 • 1957: ಚಾಕಲೇಟ್ ತಯಾರಕರಾಗಿದ್ದ ವಿಲ್ಲಿಯಂ ಕಾಡ್ಬರಿ ನಿಧನರಾದರು.

 • 1972: ಭಾರತೀಯ ಪ್ರಖ್ಯಾತ ಕ್ರಿಕೆಟ್ ಆಟಗಾರರಾದ ಸೌರವ್ ಗಂಗೂಲಿ ಭಾರತದ ಕಲ್ಕತ್ತಾದಲ್ಲಿ ಜನಿಸಿದರು.

 • 2007: ಭಾರತದ 9ನೇ ಪ್ರಧಾನ ಮಂತ್ರಿಯಾಗಿದ್ದ ಚಂದ್ರಶೇಖರ್ ನಿಧನರಾದರು.