ಪ್ರಮುಖ ಘಟನಾವಳಿಗಳು:
1792: ನ್ಯೂಯಾರ್ಕಿನ ಕೊಲಂಬಿಯಾ ಕಾಲೇಜಿನಲ್ಲಿ ಮೊದಲ ಕೃಷಿ ಪ್ರಾಧ್ಯಾಪಕರಾಗಿದ್ದವರು ಎಸ್.ಎಲ್.ಮಿಟ್ಚೆಲ್.
1808: ಚರ್ಮವನ್ನು ವಿಭಜಿಸುವ ಯಂತ್ರಕ್ಕೆ ಸ್ಯಾಮುಯೆಲ್ ಪಾರ್ಕರ್ ಪೇಟೆಂಟ್ ಪಡೆದರು.
1815: ಮೊದಲ ನೈಸರ್ಗಿಕ ಅನಿಲದ ಗುಂಡಿಯನ್ನು ಅಮೇರಿಕಾದಲ್ಲಿ ಪತ್ತೆಹಚ್ಚಲಾಯಿತು.
1842: ನೋಟರಿ ಸ್ಟಾಂಪ್ ಕಾನೂನನ್ನು ಅಂಗೀಕರಿಸಲಾಯಿತು.
1872: ಜಾನ್ ಎಫ್.ಬ್ಲಾಂಡೆಲ್ ಡೋನಟ್ ಕಟ್ಟರಿಗೆ ಪೇಟೆಂಟ್ ಪಡೆದರು.
1875: ಬಾಂಬೆ ಸ್ಟಾಕ್ ಎಕ್ಸೇಂಜ್ ಸ್ಥಾಪಿಸಲಾಯಿತು.
1878: ಹೆನ್ರೀ ಟಿಬ್ “ಕಾರ್ನ್ ಕಾಬ್ ಪೈಪಿಗೆ” ಪೇಟೆಂಟ್ ಪಡೆದರು.
1893: ಅನಸ್ಥೇಶಿಯಾ ಇಲ್ಲದೆ ಮೊದಲ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಡಾ.ಡೇನಿಯಲ್ ವಿಲ್ಲಿಯಮ್ಸ್ ಮಾಡಿದರು.
1900: ಒಕ್ಕೂಟ ಸರ್ಕಾರದಲ್ಲಿ ಪ್ರತ್ಯೇಕ ವಸಾಹತುಗಳನ್ನು ಒಗ್ಗೂಡಿಸುವ “ಕಾಮನ್ ವೆಲ್ತ್ ಆಫ್ ಆಸ್ಟ್ರೇಲಿಯಾವನ್ನು ಬ್ರಿಟಿಶ್ ಸಂಸತ್ತಿನ ಒಂದು ಕಾನೂನಿನಿಂದ ಸ್ಥಾಪಿಸಲಾಯಿತು.
1916: ಅಟ್ಲಾಂಟಿಕ್ ಸಮುದ್ರದ ಮೂಲಕ ಅಮೇರಿಕಾದಿಂದ ಜರ್ಮನಿಯನ್ನು ತಲುಪಿದ ಮೊದಲ ಸರಕು ಜಲಾಂತರ್ಗಾಮಿ.
1922: ಜಾನಿ ವೆಸ್ಮುಲ್ಲರ್ 1 ನಿಮಿಷದೊಳಗೆ 100 ಮೀಟರ್ ಈಜಿದರು.
1941: ಬ್ರಿಟಿಷ್ ಗುಪ್ತಲಿಪಿ ಶಾಸ್ತ್ರಜ್ಞರು ಈಸ್ಟರ್ನ್ ಫ್ರಂಟಿನ ನೆಲದಿಂದ ವಾಯು ಕಾರ್ಯಾಚರಣೆಗಳನ್ನು ನಿರ್ದೇಶಿಸಲು ಜರ್ಮನ್ ಸೈನ್ಯ ಬಳಸುತ್ತಿದ್ದ ರಹಸ್ಯ ಸಂಕೇತವನ್ನು (ಎನಿಗ್ಮಾ) ಬಿಡಿಸಿ ತಿಳಿದುಕೊಂಡರು.
1947: ಬ್ರಿಟನ್ನಿನ ಯುವರಾಣಿ ಎಲಿಜಿಬತ್ ಹಾಗೂ ಲೆಫ್ಟಿನೆಂಟ್ ಫಿಲಿಪ್ ಮೌಂಟ್ ಬ್ಯಾಟೆನ್ನಿನ ನಿಶ್ವಿತಾರ್ಥವನ್ನು ಘೋಷಿಸಲಾಯಿತು.
1953: ಏರ್ವೇಸ್ ಹೆಲಿಕಾಪ್ಟರ್ಗಳಿಂದ ಮೊದಲ ಪ್ರಯಾಣಿಕರ ಪ್ರಯಾಣ ಸೇವೆಯನ್ನು ಆರಂಭಿಸಿತು.
1955: ವಾರಕ್ಕೆ 5 ದಿನ ಕೆಲಸದ ದಿನಗಳಿರಲು ಕೋರಿ ಬೆಲ್ಜಿಯಂನಲ್ಲಿ ಮುಷ್ಕರ ಮಾಡಲಾಯಿತು.
1957: 102ನೇ ಅಂಶವಾದ ನೊಬೆಲ್ಲಿಯಂನ ಪತ್ತೆಯನ್ನು ಘೋಷಿಸಲಾಯಿತು.
1969: ಇಂಡಿಯನ್ ವೈಲ್ಡ್ ಲೈಫ್ ಬೋರ್ಡ್ ಶಿಫಾರಸ್ಸು ಮಾಡಿದಂತೆ “ರಾಯಲ್ ಬೆಂಗಾಲ್ ಟೈಗರ್” ಅನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಒಪ್ಪಿಕೊಂಡಿತು.
1975: ಸೆನೆಗಲ್ಲಿನ ರಾಷ್ಟ್ರೀಯ ಅಸ್ಸೆಂಬ್ಲಿಯು ಒಂದು ಬಹು-ಪಕ್ಷ ವ್ಯವಸ್ಥೆಗೆ ದಾರಿಮಾಡಿಕೊಡುವ ಕಾನೂನನ್ನು ಅಂಗೀಕರಿಸಿತು.
2005: ಸ್ಕೇಟ್ ಬೋರ್ಡರ್ ಡ್ಯಾನಿವೇ ಗ್ರೇಟ್ ವಾಲ್ ಆಫ್ ಚೈನಾದ ಮಹಾ ಗೋಡೆಯನ್ನು ಜಿಗಿದು ದಾಟಿ ಯಾವುದೇ ಮೋಟಾರಿನ ಸಹಾಯವಿಲ್ಲದೆ ಮಹಾ ಗೋಡೆಯನ್ನು ದಾಟಿದ ಮೊದಲ ವ್ಯಕ್ತಿ ಆದರು.
ಪ್ರಮುಖ ಜನನ/ಮರಣ:
1925: ಭಾರತೀಯ ಚಿತ್ರನಟ, ನಿರ್ಮಾಪಕ, ನಿರ್ದೇಶಕ ಗುರುದತ್ ಜನಿಸಿದರು.
1930: ಭಾರತೀಯ ಚಿತ್ರನಟ, ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರಕಥೆಕಾರ ಕೆ.ಬಾಲಚಂದರ್ ಜನಿಸಿದರು.
1938: ಖ್ಯಾತ ಹಿಂದಿ ಚಿತ್ರ ನಟ ಸಂಜೀವ್ ಕುಮಾರ್ ಜನಿಸಿದರು.
1969: ಭಾರತೀಯ ಕ್ರಿಕೆಟಿಗ ಲಕ್ಷ್ಮಿ ವೆಂಕಟಪತಿ ರಾಜು ಹೈದರಾಬಾದಿನಲ್ಲಿ ಜನಿಸಿದರು.
1994: ಪಂಜಾಬಿನ ಗವರ್ನರ್ ಆಗಿದ್ದ ಸುರೇಂದ್ರನಾಥ್ ನಿಧನರಾದರು.