Categories
e-ದಿನ

ಜೂನ್-1

 

ಪ್ರಮುಖ ಘಟನೆಗಳು:

1836: ಚಾರ್ಲ್ಸ್ ಡಾರ್ವಿನ್ ಕೇಪ್ ಟೌನ್ ಗೆ ಮರಳಿದರು.

1862: ಅಮೇರಿಕಾದ ಹಿಡಿತದಲ್ಲಿರುವ ಎಲ್ಲಾ ಜಾಗದಲ್ಲೂ ಗುಲಾಮಗಿರಿಯನ್ನು ನಿಷೇಧಿಸಲಾಯಿತು.

1869: ಥಾಮಸ್ ಎಡಿಸನ್ ವಿದ್ಯುತ್ ಮತ ಯಂತ್ರಕ್ಕೆ ಪೇಟೆಂಟ್ ಪಡೆದರು.

1877: ಅಮೇರಿಕಾದ ಕಲಾವಿದರ ಸಮಾಜ/ಒಕ್ಕೂಟವನ್ನು ರೂಪಿಸಲಾಯಿತು.

1880: ಮೊದಲ ಹಣ ಪಾವತಿಸಿ ಉಪಯೋಗಿಸುವ ದೂರವಾಣಿ ಸ್ಥಾಪಿತವಾಯಿತು.

1881: ಬೆಲ್ ಫೂನ್ ಅವರು ಮೊದಲ ದೂರವಾಣಿ ಎಕ್ಸ್ಚೇಂಜ್ ತೆರೆದರು.

1888: ಕ್ಯಾಲಿಫೋರ್ನಿಯಾಗೆ ಭೂಕಂಪದ ತೀವ್ರತೆಯನ್ನು ಅಳೆಯುವ ಮೊದಲ ಯಂತ್ರ (ಸೆಸ್ಮೊಗ್ರಾಫ್) ದೊರೆಯಿತು.

1907: ಅರ್ಜೆಂಟೀನಾದಲ್ಲಿ ಉಷ್ಣಾಂಶ -27OF (-33oC) ಆಗಿ ಇದು ದಕ್ಷಿಣ ಅಮೇರಿಕಾದ ಅತಿ ಕಡಿಮೆ ಉಷ್ಣಾಂಶ ಎಂದು ದಾಖಲಾಯಿತು.

1908: ಜಾನ್ ಕ್ರೋಹ್ನ್ ಅಮೇರಿಕಾದ ಪರಿಧಿಯ ಸುತ್ತಲೂ ನಡೆದುಕೊಂಡು ಹೋಗುತ್ತಾನೆ. ಈ ಸಂಚಾರವು ಒಟ್ಟು 357 ದಿನಗಳಿಗೆ ಮುಗಿದಿತ್ತು.

1911: ಅಮೇರಿಕಾದ ನ್ಯೂಜರ್ಸಿಯಲ್ಲಿ ಮೊದಲ ಗುಂಪು ವಿಮೆ ಪಾಲಿಸಿಯ ಯೋಜನೆಯ್ನನು ಜಾರ ಮಾಡಲಾಯಿತು

1935: ಇಂಗ್ಲೆಂಡಿನಲ್ಲಿ ಚಾಲಕರಿಗೆ ಪರೀಕ್ಷೆ ಮತ್ತು ಗಾಡಿ ಓಡಿಸಲು ಲೈಸೆನ್ಸ್  ವ್ಯವಸ್ಥೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು.

1938: ಬೇಸ್ ಬಾಲ್ ಆಟದಲ್ಲಿ ಬ್ಯಾಟ್ ಮಾಡುವವರು ತಲೆಯ ರಕ್ಷಣೆಗೆಂದು ಮೊದಲ ಬಾರಿಗೆ ಹೆಲ್ಮೆಟ್ ಧರಿಸಿದ್ದರು.

1940: ಹಾಲೆಂಡಿನಲ್ಲಿ ಕಾಫಿ ಮತ್ತು ಟೀ ಅನ್ನು ದಿನಭತ್ಯೆಯ ಬದಲಿಗೆ ನೀಡಲಾಗುತ್ತಿತ್ತು.

1947: ಫೋಟೋ ಸೆನ್ಸಿಟಿವ್ ಗ್ಲಾಸ್ ಅನ್ನು ಅಭಿವೃದ್ದಿ ಮಾಡಲಾಗಿತ್ತು.

1969: ತಂಬಾಕು ಜಾಹಿರಾತುಗಳನ್ನು ಕೆನೆಡಾದ ದೂರದರ್ಶನ ಮತ್ತು ರೇಡಿಯೋದಿಂದ ನಿಷೇಧಿಸಲಾಯಿತು.

1975: ನೆದರ್ಲ್ಯಾಡ್ ನಲ್ಲಿ ಕಾರುಗಳಿಗೆ ಸೀಟ್ ಬೆಲ್ಟುಗಳು ಕಡ್ಡಾಯಗೊಳಿಸಿ ಆದೇಶಿಸಲಾಯಿತು.

1979: ಭಾರತದ ಆಂದ್ರಪ್ರದೇಶದಲ್ಲಿ ವಿಜಯನಗರ ಜಿಲ್ಲೆಯನ್ನು ಸ್ಥಾಪಿಸಲಾಯಿತು.

1979: ಲಾಸ್ ಏಂಜೆಲಿಸ್ ತನ್ನ ಮೊದಲ ಸಲಿಂಗಕಾಮಿ ಹಕ್ಕುಗಳ ಮಸೂದೆಯನ್ನು ತರಲಾಯಿತು.

1980: ಸಿ.ಎನ್.ಎನ್ ಚಾನೆಲ್ (ಕೆಬಲ್ ನ್ಯೂಸ್ ನೆಟ್ವರ್ಕ್) ಅನ್ನು ಮೊದಲ ಬಾರಿ ಪ್ರಸಾರ ಮಾಡಲಾಯಿತು.

2007: ಯುನೈಟೆಡ್ ಕಿಂಗ್ಡಮ್ ನ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇದಿಸಲಾಗಿತ್ತು

2016: ಸ್ವಿಜರ್ಲ್ಯಾಂಡಿನಲ್ಲಿ ವಿಶ್ವದ ಅತ್ಯಂತ ಉದ್ದದ (57ಕಿಲೋಮೀಟರ್) ಮತ್ತು ಅತ್ಯಂತ ದುಬಾರಿ (11 ಬಿಲಿಯನ್) ಸುರಂಗದ ಕಾಮಗಾರಿ ಪೂರ್ಣಗೊಂಡಿತು.

ಪ್ರಮುಖ ಜನನ/ಮರಣ:

1843: ಸ್ಕಾಟಿಶ್ ವೈದ್ಯ ಮತ್ತು ವಿಜ್ಞಾನಿ ಬೆರಳುಗುರುತುಗಳ ಬೆಳವಣಿಗೆಗೆ ಅಡಿಪಾಯ ಹಾಕಿದ ಹೆನ್ರೀ ಫ್ಲಾಉಡ್ಸ್ ಜನಿಸಿದರು.

1872: ನ್ಯುಯಾರ್ಕ್ ಹೆರಾಲ್ಡ್ ಪತ್ರಿಕೆ ಸಂಸ್ಥಾಪಕರಾದ ಜೇಮ್ಸ್ ಗಾರ್ಡನ್ ಬೆನೆಟ್ ನಿಧನರಾದರು.

1907: ಟರ್ಬೊ ಜೆಟ್ ಇಂಜಿನ್ ಕಂಡು ಹಿಡಿದ ವಿಜ್ಞಾನಿ ಫ್ರಾನ್ಕ್ ವಿಟ್ಟಲ್ ಜನಿಸಿದರು.

1926: ಅಮೇರಿಕಾದ ಖ್ಯಾತ ನಟಿ  ಮರ‍್ಲಿನ್ ಮನ್ರೋ ಜನಿಸಿದರು.

1968: ಕುರುಡ ಮತ್ತು ಕಿವುಡರಾಗಿದ್ದ ಜನಪ್ರಿಯ ಲೇಖಕಿ ಹೆಲೆನ್ ಕೆಲ್ಲರ್ ನಿಧನರಾದರು.