ಪ್ರಮುಖ ಘಟನೆಗಳು:

 • 1774: ಹರೋಟ್ಸ್ ಬರ್ಗ್ ನಗರವನ್ನು ಕೆಂಟುಕಿಯಲ್ಲಿ ಕಂಡುಹಿಡಿಯಲಾಯಿತು.

 • 1836: ಲಂಡನ್ನಿನ ಕೆಲಸಕ್ಕೆ ಹೋಗುವ ಪುರುಷರ ಸಂಘವನ್ನು ಸ್ಥಾಪಿಸಲಾಯಿತು.

 • 1858: ಇಲಿನಾಯಿಸ್ ಸ್ಪ್ರಿಂಗ್ಫೀಲ್ಡಿನಲ್ಲಿ ಅಬ್ರಹಾಂ ಲಿಂಕನ್ “ಹೌಸ್ ಡಿವೈಡೆಡ್” ಭಾಷಣವನ್ನು ಮಾಡಿದರು,

 • 1884: ಅಮೇರಿಕಾದ ಮೊದಲ ರೋಲರ್ ಕೋಸ್ಟರ್ ಕೂನಿ ದ್ವೀಪದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು.

 • 1890: ಎರಡನೇ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ತೆರೆಯಲಾಯಿತು.

 • 1903: ಫೋರ್ಡ್ ಮೋಟಾರ್ ಸಂಸ್ಥೆ ಸಂಘಟಿತವಾಯಿತು.

 • 1903: ಪೆಪ್ಸಿ ಕೋಲಾ ಸಂಸ್ಥೆಯು ಆರಂಭವಾಯಿತು.

 • 1909: ಗ್ಲೆನ್ ಹ್ಯಾಮಂಡ್ ಕರ್ಟಿಸ್ ತನ್ನ ಮೊದಲ ವಿಮಾನವಾದ “ಗೋಲ್ಡ್ ಬಗ್”ಅನ್ನು 5000 ಡಾಲರಿಗೆ ನ್ಯೂಯಾರ್ಕ್ ಏರೋನಾಟಿಕಲ್ ಸೊಸೈಟಿಗೆ ಮಾರಿದರು.

 • 1915: ಬ್ರಿಟಿಷ್ ಮಹಿಳಾ ಸಂಸ್ಥೆಯ ಸ್ಥಾಪನೆಯಾಯಿತು.

 • 1922: ಹೆನ್ರಿ ಬರ್ಲೈನರ್ ತನ್ನ ಹೆಲಿಕಾಪ್ಟರನ್ನು ಯೂರೋ ಬ್ಯೂರೋ ಆಫ್ ಏರೋನಾಟಿಕ್ಸ್ ಮುಂದೆ ಪ್ರದರ್ಶಿಸಿದರು.

 • 1933: ರಾಷ್ಟ್ರೀಯ ಕೈಗಾರಿಕಾ ಪುನಶ್ಚೇತನ ಕಾಯಿದೆ ಕಾನೂನಾಗಿ ಮಾರ್ಪಾಟಾಯಿತು. ನಂತರ ಅದನ್ನು ಹಿಂಪಡೆಯಲಾಯಿತು.

 • 1941: ಅಮೇರಿಕಾದ ಮೊದಲ ವಿಮಾನ ನಿಲ್ದಾಣವನ್ನು ವಾಷಿಂಗ್ಟನ್ ಡಿ ಸಿ ನಲ್ಲಿ ತೆರೆಯಲಾಯಿತು.

 • 1943: ಹಾಸ್ಯ ನಟ ಚಾರ್ಲಿ ಚಾಪ್ಲಿನ್ ತನ್ನ ನಾಲ್ಕನೇ ಹೆಂಡತಿಯೊಡನೆ ವಿವಾಹವಾದರು.

 • 1972: ಕೆನೆಡಾದ ಅತಿ ದೊಡ್ಡ ಸಿಂಗಲ್ ಸೈಟ್ ಜಲವಿದ್ಯುತ್ ಯೋಜನೆಯನ್ನು ಚರ್ಚಿಲ್ ಫಾಲ್ಸ್ ನಲ್ಲಿ ಆರಂಭಿಸಲಾಯಿತು,

 • 1977: ಒರಾಕಲ್ ಸಂಸ್ಥಯನ್ನು ಲ್ಯಾರಿ ಎಲ್ಲಿಸನ್, ಬಾಬ್ ಮೈನರ್ ಮತ್ತು ಎಡ್ ಓಏಟ್ಸ್ ಕ್ಯಾಲಿಫೋರ್ರ್ನಿಯಾದಲ್ಲಿ ಸ್ಥಾಪಿಸಿದರು.

 • 1977: ರಷ್ಯಾದ ಮೊದಲ ಸಾವಿಯೆಟ್ ಅಧ್ಯಕ್ಷನಾಗಿ ಲಿಯೋನಿಡ್ ಬ್ರೆಸ್ನೆವ್ ಅವರ ಹೆಸರನ್ನು ಸೂಚಿಸಲಾಯಿತು.

 • 2008: ಸಲಿಂಗ ದಂಪತಿಗಳಿಗೆ ಕ್ಯಾಲಿಫೋರ್ನಿಯ ಮದುವೆ ಅನುಮತಿ ಪತ್ರವನ್ನು ನೀಡಲಾರಂಭಿಸಿತು.

 • 2010: ತಂಬಾಕನ್ನು ಸಂಪೂರ್ಣ ನಿಷೇದಿಸಿದ ಮೊದಲ ದೇಶ ಭೂತಾನ್.

 • 2012: ಚೈನಾ ದೇಶವು ತನ್ನ ಮೊದಲ ಮಹಿಳೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು.

ಪ್ರಮುಖ ಜನನ/ಮರಣ:

 • 1858: ಸಾಂಕ್ರಾಮಿಕಶಾಸ್ತ್ರಜ್ಞ ಎಂದೇ ಪ್ರಖ್ಯಾತಿ ಪಡೆದ ಡಾ.ಜಾನ್ ಸ್ನೋ ನಿಧನರಾದರು.

 • 1888: ರಷ್ಯಾದ ಭೌತಶಾಸ್ತ್ರಜ್ಞ ಮತ್ತು ಗಣಿತಜ್ಞ ಅಲೆಕ್ಸಾಂಡರ್ ಫ್ರೈಡ್ಮಾನ್ ಜನಿಸಿದರು.

 • 1896: ಫ್ರೆಂಚ್ ವಾಹನ ತಯಾರಕರಾದ ಜೀನ್ ಪೀಗಟ್ ಜನಿಸಿದರು.

 • 1950: ಭಾರತದ ಪ್ರಖ್ಯಾತ ನಟ ಮಿಥುನ್ ಚಕ್ರವರ್ತಿ ಜನಿಸಿದರು.