Categories
e-ದಿನ

ಜೂನ್-17

 

ಪ್ರಮುಖ ಘಟನಾವಳಿಗಳು:

1756: ನವಾಬ ಸಿರಾಜುದ್ದೌಲ ತನ್ನ 50000 ಸೈನಿಕರೊಂದಿಗೆ ಕಲ್ಕತ್ತ ನಗರಕ್ಕೆ ಮುತ್ತಿಗೆ ಹಾಕಿ ಅದನ್ನು ವಶಮಾಡಿಕೊಂಡನು.

1837: ಚಾರ್ಲ್ಸ್ ಗುಡ್ಇಯರ್ ರಬ್ಬರಿನ ಪೇಟೆಂಟ್ ಅನ್ನು ಪಡೆದರು.

1863: ಮೊದಲ ಅಪಘಾತ ವಿಮೇದಾರ ಸಂಸ್ಥೆಯಾದ ಹಾರ್ವರ್ಡಿನ ಟ್ರಾವೆಲ್ಲರ್ಸ್ ಇನ್ಶುರೆನ್ಸ್ ಕಂಪನಿ ಆರಂಭವಾಯಿತು.

1864: ವರ್ಜಿನಿಯಾದ ಜೇಮ್ಸ್ ನದಿಯ ಮೇಲೆ 640ಮೀಟರ್ ಉದ್ದದ ಸೇತುವೆಯ ಕಾಮಗಾರಿ ಪೂರ್ಣಗೊಂಡಿತು.

1885: ಫ್ರಾನ್ಸ್ ಹಡಗಾದ “ಇಸೇರಿ”ಯಲ್ಲಿ ತಂದ “ಲಿಬರ್ಟಿಯ ಪ್ರತಿಮೆ” ನ್ಯೂಯಾರ್ಕ್ ನಗರ ತಲುಪಿತು.

1894: ಅಮೇರಿಕಾದ ಮೊದಲ ಪಾರ್ಶ್ವರೋಗ ಸಾಂಕ್ರಾಮಿಕವಾಗಿ ರುತ್ ಲ್ಯಾಂಡಿನಲ್ಲಿ ಹರಡಿತು.

1898: ಅಮೇರಿಕಾದ ನೌಕಾ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು.

1901: ಕಾಲೇಜ್ ಬೋರ್ಡ್ ತನ್ನ ಮೊದಲ ಪ್ರಮಾಣೀಕರಿಸಿದ ಪರೀಕ್ಷೆಯನ್ನು SATಯ ಮುಂಚೂಣಿಯಲ್ಲಿ ಪರಿಚಯಿಸಿತು.

1917: ಮಹಾತ್ಮಗಾಂಧಿ ಮತ್ತು ಅವರ ಪತ್ನಿ ಕಸ್ತೂರಬಾ ಅವರು ಅಹಮದಾಬಾದಿನ ಸಬರ್ಮತಿ ಆಶ್ರಮದಲ್ಲಿ ತಮ್ಮ ವಾಸ್ತವ್ಯ ಹೂಡಿದರು.

1933: ಅಸಹಕಾರ ಚಳುವಳಿಯನ್ನು ಸ್ಥಗಿತಗೊಳಿಸಲಾಯಿತು.

1946: ಎಸ್.ಡಬ್ಲ್ಯೂ.ಬೆಲ್ ಮೊಬೈಲ್ ದೂರವಾಣಿಯ ವಾಣಿಜ್ಯ ಸೇವೆಯನ್ನು ಸೇಂಟ್ ಲೂಯೀಸಿನಲ್ಲಿ ಉದ್ಘಾಟಿಸಿದರು.

1947: ಸಂವಿಧಾನ ಸಭೆಯ ಮೂಲಕ ಬರ್ಮಾವನ್ನು ಗಣರಾಜ್ಯವಾಗಿ ಘೋಷಿಸಿ ದೇಶಕ್ಕೆ ಸಂವಿಧಾನವನ್ನು ಅಳವಡಿಸಲಾಯಿತು.

1947: ಪ್ಯಾನ್ ಆಮ್ ಏರ್ ವೇಸ್ ವಿಶ್ವದಾದ್ಯಂತ ಪ್ರಯಾಣಿಕರ ಮೊದಲ ವಿಮಾನ ಸಂಸ್ಥೆಯಾಗಿತು.

1950: ಶಸ್ತ್ರವೈದ್ಯ ರಿಚರ್ಡ್ ಲಾಲರ್ ಶಿಕಾಗೋದಲ್ಲಿ ತನ್ನ ಮೊದಲ ಮೂತ್ರಪಿಂಡದ ಕಸಿ ಶಸ್ತ್ರಚಿಕಿತ್ಸೆ ಮಾಡಿದರು.

1963: ಸಾರ್ವಜನಿಕ ಶಾಲೆಗಳಲ್ಲಿ ಬೈಬಲ್ ಓದುವಿಕೆ/ಪ್ರಾರ್ಥನೆಯ ವಿರುದ್ದ ಸುಪ್ರೀಂ ಪೋರ್ಟ್ ನಿಯಮಗಳನ್ನು ಮಾಡಿತು.

1970: ಎಡ್ವಿನ್ ಲ್ಯಾಂಡ್ ಪೋರಾಯಿಡ್ ಕಾಮೆರಾದ ಪೇಟೆಂಟ್ ಪಡೆದರು.

1987: ಕೊನೆ ಸಾವಿನಿಂದ ಡಸ್ಕಿ ಕಡಲತಲಿಯ ಗುಬ್ಬಿಗಳ ಸಂತತಿ ಅಳಿದುಹೋಗಿವೆ.

1991: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನವನ್ನು (ಮರಣೋತ್ತರ) ರಾಜೀವ್ ಗಾಂಧಿಯವರಿಗೆ ನೀಡಲಾಯಿತು.

1991: ದಕ್ಷಿಣ ಆಫ್ರಿಕಾ ತನ್ನ ವರ್ಣಬೇಧದ ನೀತಿಯನ್ನು ಅಮಾನ್ಯ ಮಾಡಿತು.

2008: ಕ್ಯಾಲಿಫೋರ್ನಿಯಾದಲ್ಲಿ ಕಾನೂನು ಬದ್ದವಾಗಿ ಸಲಿಂಗ ಮದುವೆಯನ್ನು ಅಂಗೀಕರಿಸಲಾಯಿತು.

ಪ್ರಮುಖ ಜನನ/ಮರಣ:

1631: ಶಹಜಹಾನನ ಮಡದಿ ಮುಮ್ತಾಜ್ ಮಹಲ್ ತನ್ನ 14ನೇ ಮಗುವಿನ ಜನನದ ಸಮಯದಲ್ಲಿ ನಿಧನರಾದರು.

1839: ಭಾರತದ ಗವರ್ನರ್ ಜೆನೆರಲ್ ಆಗಿದ್ದ ಲಾರ್ಡ್ ವಿಲ್ಲಿಯಂ ಬೆನ್ಟಿಂಕ್ ನಿಧನರಾದರು.

1858: ಝಾನ್ಸಿಯ ಮಹಾರಾಣಿ ಲಕ್ಷ್ಮಿಬಾಯಿ ಸಾವನಪ್ಪಿದರು.

1862: ಭಾರತದ ವೈಸೆರಾಯ್ ಆಗಿದ್ದ ಲಾರ್ಡ್ ಚಾರ್ಲ್ಸ್ ಜಾನ್ ಕಾನಿಂಗ್ ನಿಧನರಾದರು.

1950: ಭಾರತಕ್ಕೆ 7 ಟೆಸ್ಟ್ ಪಂದ್ಯಗಳನ್ನು ಆಡಿದ ಕ್ರಿಕೆಟ್ ಆಟಗಾರ ಸೈಯದ್ ವಾಜೀರ್ ಅಲಿ ನಿಧನರಾದರು.

1973:  ಭಾರತದ ಟೆನ್ನಿಸ್ ಆಟಗಾರರಾದ ಲಿಯಾಂಡರ್ ಪೇಸ್ ಜನಿಸಿದರು.