Categories
e-ದಿನ

ಜೂನ್-19

 

ಪ್ರಮುಖ ಘಟನಾವಳಿಗಳು:

1770: ನ್ಯೂ ಜೆರೂಸಲೇಂ ಜೆನರಲ್ ಚರ್ಚ್ ಸ್ಥಾಪನೆಯಾಯಿತು.

1829: ರಾಬರ್ಟ್ ಪೀಲ್ ಲಂಡನ್ ಮೆಟ್ರೊಪಾಲಿಟನ್ ಪೋಲೀಸ್ ಸ್ಥಾಪಿಸಿದರು.

1835: ನ್ಯೂ ಓರ್ಲಿಯಾನ್ಸ್ ಅಮೇರಿಕ ಸರ್ಕಾರಕ್ಕೆ ಹಣ ಮುದ್ರಿಸಲು ಜ್ಯಾಕ್ಸನ್ ಸ್ಕ್ವೇರ್ ನೀಡಿತು.

1846: ಮೊದಲ ಅಧಿಕೃತವಾಗಿ ಗುರುತಿಸಲ್ಪಟ್ಟ   ಆಡಲಾಯಿತು.

1861: ಅನಾಹಿಮ್ ಅಂಚೆ ಕಛೇರಿ ಸ್ಥಾಪನೆಯಾಯಿತು.

1865: ಟೆಕ್ಸಾಸಿನ ಗುಲಾಮರನ್ನು ಬಂಧಮುಕ್ತ ಮಾಡಿ ಸ್ವತಂತ್ರರು ಎಂದು ಘೋಷಿಸಲಾಯಿತು.

1875: ಪ್ರೆಸಿಡಿಯೋದಲ್ಲಿ ಅಮೇರಿಕಾದ ನೌಕಾ ಆಸ್ಪತ್ರೆ ಅಧಿಕೃತವಾಗಿ ಆರಂಭವಾಯಿತು.

1910: ತಂದೆಯರ ದಿನಾಚರಣೆಯನ್ನು ಸ್ಪೊಕೇನ್ ವಾಷಿಂಗ್ಟನ್ನಿನಲ್ಲಿ ಆಚರಿಸಲಾಯಿತು.

1921: ಬ್ರಿಟನ್ನಿನಲ್ಲಿ ಸೆನ್ಸಸ್ (ಜನಗಣತಿ) ಅನ್ನು ಮಾಡಲಾಯಿತು.

1931: ಮೊದಲ ಫೋಟೋ ಎಲೆಕ್ಟ್ರಿಕ್ ಸೆಲ್ ಅನ್ನು ವಾಣಿಜ್ಯವಾಗಿ ವೆಸ್ಟ್ ಹೆವೆನಿನಲ್ಲಿ ಸ್ಥಾಪಿಸಲಾಯಿತು.

1932: ಚೀನಾದಲ್ಲಿ ಆಲಿಕಲ್ಲಿನ ಮಳೆಯಿಂದಾಗಿ 200 ಜನ ಮೃತಪಟ್ಟರು.

1933: ಆಸ್ಟ್ರಿಯದ ಸರ್ಕಾರವು ನಾಜಿ ಸಂಸ್ಥೆಗಳನ್ನು ನಿಷೇಧಿಸಿತು.

1934: ಫೆಡರಲ್ ಕಮ್ಯುನಿಕೇಷನ್ಸ್ ಕಮ್ಮಿಷನ್ ಆರಂಭವಾಯಿತು.

1940: ನಾಜಿಯರ ರಾಜಕಾರಣಿ ಹರ್ಮನ್ ಗೊರಿಂಗ್ ಡಚ್ ದೇಶದ ಕುದುರೆಗಳು, ಕಾರು, ಬಸ್ ಮತ್ತು ಹಡಗುಗಳ ಮೇಲೆ ಮುಟ್ಟುಗೋಲು ಹಾಕಿದರು.

1941: ಚೀರಿಯೋಸ್ ಸೀರಿಯಲ್ ವೃತ್ತಾಕಾರದ ಧಾನ್ಯವನ್ನು ಕಂಡುಹಿಡಿದರು.

1947: ಒಂದು ಗಂಟೆಗೆ 1004 ಕಿಲೋಮೋಟರ್ ಅಷ್ಟು ವೇಗವನ್ನು ತಲುಪಿದ ಮೊದಲ ವಿಮಾನ ಎಫ್-80.

1961: ಯುನೈಟೆಡ್ ಕಿಂಗ್ ಡಂ ಆಳ್ವಿಕೆಯಿಂದ ಕುವೇಟ್ ದೇಶವು ಸ್ವಾತಂತ್ರ ಪಡೆಯಿತು.

1963: ಎರಡು ರಷ್ಯಾದ ಬಾಹ್ಯಾಕಾಶ ಯಾತ್ರೆಗಳು ಯಶಸ್ವಿಯಾಗಿ ಪೂರೈಸಿ ಭೂಮಿಗೆ ಮರಳಿತು.

1963: ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಮಹಿಳೆ ವ್ಯಾಲೆಂಟೀನ ತೆರೆಷ್ಕೋವಾ ಮರಳಿ ಭೂಮಿಗೆ ಹಿಂದಿರುಗಿದರು.

1966: ರಾಜಕೀಯ ಪಕ್ಷ ಶಿವಸೇನೆ ಮುಂಬೈಯಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರ ಬಾಳಾಠಾಕರೆ ಅವರಿಂದ ಸ್ಥಾಪಿತವಾಯಿತು.

1970: ಪೇಟೆಂಟ್ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.

1974: ಯೆಮೆನ್ ಅರಾಬ್ ರಿಪಬ್ಲಿಕ್ (ಉತ್ತರ ಯೆಮೆನ್) ಸಂವಿಧಾನವನ್ನು ಸ್ಥಗಿತಗೊಳಿಸಿತು.

1978: ವ್ಯಂಗ್ಯ ಚಿತ್ರ ಗಾರ್ಫೀಲ್ಡ್ ಅಮೇರಿಕಾದ ಎಲ್ಲಾ ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡಿತು.

1981: ಆಪಲ್ (ಏರ್ಲೈನ್ ಪ್ಯಾಸೆಂಜರ್ ಪೇಲೋಡ್ ಎಕ್ಸ್ಪಿರಿಮೆಂಟ್) ಭಾರತದ ಮೊದಲ ಮೂರು-ಅಕ್ಷದ ಸ್ಥಿರವಾದ ಪ್ರಾಯೋಗಿಕ ಸಂವಹನ ಉಪಗ್ರಹವನ್ನು ಹಾರಿಸಲಾಯಿತು.

1981: ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ತೂಕದ ಕಿತ್ತಳೆ (2.5ಕೆಜಿ)ಯನ್ನು ಪ್ರದರ್ಶಿಸಲಾಯಿತು.

ಪ್ರಮುಖ ಜನನ/ಮರಣ:

1947: ಬರಹಗಾರ ಸಲ್ಮಾನ್ ರಶ್ದಿ ಅವರು ಜನಿಸಿದರು.

1949: 20ನೇ ಶತಮಾನದ ಖ್ಯಾತ ತತ್ವಜ್ಞಾನಿ ಸೈಯದ್ ಜವಾರುಲ್ ಹಾಸನ್ ನಿಧನರಾದರು.

1970: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿರುವ ರಾಹುಲಗಾಂಧಿ ಅವರು ಜನಿಸಿದರು.