Categories
e-ದಿನ

ಜೂನ್-2

ಪ್ರಮುಖ ಘಟನೆಗಳು:

1797: ಮೊದಲ ಬಾರಿ ಅಡಿರೊಂಡಾಕ್ ನಲ್ಲಿ ಇರುವ “ಗ್ರೇಟ್ ಮೌಂಟೆನ್” ಅನ್ನು ಏರಲಾಗಿತ್ತು.

1835: ಪಿ ಟಿ ಬಾರ್ನಮ್ ಮತ್ತು ತಂಡ ತನ್ನ ಸರ್ಕಸ್ ನ ಪ್ರಯಾಣವನ್ನು ಅಮೇರಿಕಾದಲ್ಲಿ ಆರಂಭಿಸಿದರು.

1851: ಮೊದಲ ಮಧ್ಯಪಾನ ನಿಷೇಧ ಕಾನೂನನ್ನು ಜಾರಿಗೆ ತರಲಾಯಿತು.

1857: ವರ್ಜೀನಿಯಾದ ಜೇಮ್ಸ್ ಗಿಬ್ಸ್ ಏಕ ದಾರದಿಂದ ಸರಪಳಿ ಹೊಲಿಗೆ ಯಂತ್ರವನ್ನು ಕಂಡುಹಿಡಿದು ಅದರ ಪೇಟೆಂಟ್ ಪಡೆದರು.

1873: ವಿಶ್ವದ ಮೊದಲ ಕೇಬಲ್ ರೈಲು ರಸ್ತೆಯ ನಿರ್ಮಾಣ ಆರಂಭವಾಯಿತು.

1875: ಅಲೆಕ್ಸಾಂಡರ್ ಗ್ರಹಮ್ ಬೆಲ್ ಮೊದಲ ಧ್ವನಿ ಪ್ರಸರಣ ಮಾಡಿದರು.

1886: ಗ್ರೂವರ್ ಕ್ಲೀವ್ಲಾಂಡ್ ಅಮೇರಿಕಾದ ಅಧ್ಯಕ್ಷರಾಗಿರುವಾಗಲೇ ವಿವಾಹವಾದ ಮೊದಲ ಅಧ್ಯಕ್ಷರಾಗಿದ್ದರು.

1896: ಗುಲಿಯೆಲ್ಮೋ ಮಾರ್ಕೊನಿ ರೇಡಿಯೋ ಗೆ ಪೇಟೆಂಟ್ ಅರ್ಜಿ ಹಾಕಿದರು.

1904: ದ್ಯುತಿಸಂಶ್ಲೇಷಣೆ ಉಂಟುಮಾಡುವ ಸೂಕ್ಷ್ಮಜೀವಿಯನ್ನು ಪ್ರೊಫೆಸರ್ ಸ್ಕ್ರಾನ್ ಕಂಡುಹಿಡಿದರು.

1910: ಚಾರ್ಲ್ಸ್ ಸ್ಟೀವರ್ಟ್ ರೋಲ್ಸ್ ರೋಲ್ಸ್ ರಾಯೇಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದು ತಡೆರಹಿತ ವಿಮಾನದಲ್ಲಿ ಇಂಗ್ಲೀಷ್ ಚಾನಲ್ ದಾಟಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1933: ವೈಟ್ ಹೌಸ್ ನಲ್ಲಿ  ಈಜುಕೊಳವನ್ನು ನಿರ್ಮಾಣ ಮಾಡಲು ಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಅನುಮತಿಸಿದರು.

1975: ವಿಜಯವಾಡದಲ್ಲಿ ಭಾರತದ ಮೊದಲ ಸುರುಳಿ ಕಬ್ಬಿಣದ ಸರಳು ತಯಾರಿಕಾ ಯೋಜನೆಯನ್ನು ಉದ್ಘಾಟಿಸಲಾಯಿತು.

1977: ನ್ಯೂಜರ್ಸಿಯ ಅಟ್ಲ್ಯಾಂಟಿಕ್ ಸಿಟಿ ನಲ್ಲಿ ಕ್ಯಾಸಿನೋ ಜೂಜಾಟವನ್ನು ಅನುಮತಿಸಲಾಯಿತು.

1998: ಸಿ.ಐ.ಹೆಚ್ ಗಣಕಯಂತ್ರದ ವೈರಸ್ ಅನ್ನು ತೈವಾನಿನಲ್ಲಿ ಕಂಡುಹಿಡಿಯಲಾಯಿತು.

2014: ತೆಲಂಗಾಣ ಅಧಿಕೃತವಾಗಿ ಭಾರತದ 29ನೇ ರಾಜ್ಯವಾಯಿತು.

2015: ಭೂತಾನಿನಲ್ಲಿ 100 ಜನ ಸ್ವಯಂ ಸೇವಕರು ಸೇರಿ 1 ಗಂಟೆಯಲ್ಲಿ 49672 ಮರಗಳನ್ನು ನೆಟ್ಟು ವಿಶ್ವದಾಖಲೆ ಮಾಡಿದರು.

ಪ್ರಮುಖ ಜನನ/ಮರಣ:

1731: ಯುನೈಟೆಡ್ ಸ್ಟೇಟ್ಸ್ ನ ಮೊದಲ ಪ್ರಥಮ ಮಹಿಳೆ ಮಾರ್ಥಾ ಡ್ಯಾಂಡ್ರಿಡ್ಜ್ ಜನಿಸಿದರು. ಇವರು ಜಾರ್ಜ್ ವಾಷಿಂಗ್ಟನ್ ಅವರನ್ನು 1759ರಲ್ಲಿ ವಿವಾಹವಾದರು.

1903: ನಾಡಿ ಮಿಡಿತ ತಿಳಿಸುವ ಉಪಕರಣವನ್ನು ಕಂಡು ಹಿಡಿದ ರಾಬರ್ಟ್ ಮಾರಿಸ್ ಪೇಜ್ ಜನಿಸಿದರು.

1929: ಪ್ರಖ್ಯಾತ ಹಾಸ್ಯ ಸಾಹಿತಿ, ಕಾದಂಬರಿಕಾರ್ತಿ ಪಂಕಜ ಅವರು ಜನಿಸಿದರು.

1943: ಭಾರತೀಯ ಪ್ರಖ್ಯಾತ ಹಾಡುಗಾರ, ಬರಹಗಾರ, ಸಂಗೀತಗಾರ ಮತ್ತು ನಿರ್ಮಾಪಕರಾದ ಇಳಯರಾಜ ಜನಿಸಿದರು.

1955: ಭಾರತದ ವಾಣಿಜ್ಯೋದ್ಯಮಿ ಹಾಗೂ ರಾಜಕಾರಣಿ ನಂದನ್ ನೀಲೇಕಣಿ ಜನಿಸಿದರು.

1956: ಪ್ರಖ್ಯಾತ ಭಾರತೀಯ ಚಲನಚಿತ್ರ ನಿರ್ದೇಶಕರಾದ ಮಣಿರತ್ನಂ ಜನಿಸಿದರು.

1988: ದಾದಾ ಸಾಹೆಬ್ ಫಾಲ್ಕೆ ಪುರಸ್ಕೃತ ನಟ ನಿರ್ದೇಶಕ ರಾಜ್ ಕಪೂರ್ ನಿಧನರಾದರು.