Categories
e-ದಿನ

ಜೂನ್-21

 

ಪ್ರಮುಖ ಘಟನಾವಳಿಗಳು:

1749: ನೋವಾ ಸ್ಕೋಟಿಯಾದಲ್ಲಿ ಹ್ಯಾಲಿಫಾಕ್ಸ್ ಕಂಡುಹಿಡಿಯಾಲಯಿತು.

1768: ಮೊದಲ ಅಮೇರಿಕಾದ “ಬ್ಯಾಚೆಲರ್ ಆಫ್ ಮೆಡಿಸಿನ್ ಡಿಗ್ರಿ” ಅನ್ನು ಡಾ.ಜಾನ್ ಆರ್ಚರ್ ಅವರಿಗೆ ನೀಡಲಾಯಿತು.

1834: ಅಮೇರಿಕಾದ ಸಂಶೋಧಕ ಮತ್ತು ವ್ಯಾಪಾರಿ ಸೈರಸ್ ಹಾಲ್ ಮೆಕಾರ್ಮಿಕ್ ಕೊಯ್ಲು ಮಾಡುವ ಯಂತ್ರವನ್ನು ಕಂಡುಹಿಡಿದರು.

1887: ಬ್ರಿಟನ್ ರಾಣಿ ವಿಕ್ಟೋರಿಯಾಳ ಸುವರ್ಣ ಮಹೋತ್ಸವವನ್ನು ಆಚರಿಸಿತು.

1893: ಮೊದಲ ಫೆರ್ರಿಸ್ ವೀಲ್ ಚಲನಚಿತ್ರದ ಪ್ರಥಮ ಪ್ರದರ್ಶನ ಚಿಕಾಗೋದ ಕೊಲಂಬಿಯನ್ ಎಕ್ಸ್ಪೊಸಿಷನಲ್ಲಿ ಆಯಿತು.

1907: ಇ.ಡಬ್ಲ್ಯು.ಸ್ಕ್ರಿಪಸ್ ಯುನೈಟೆಡ್ ಪ್ರೆಸ್ಸನ್ನು ಸ್ಥಾಪಿಸಿದರು.

1913: ವಿಮಾನದಿಂದ ಪ್ಯಾರಚೂಟಿನಲ್ಲಿ ಹಾರಿದ ಮೊದಲ ಮಹಿಳೆ ಟೈನಿ ಬ್ರಾಡ್ವಿಕ್.

1917: ಹವಾಯಿಯ ರೆಡ್ ಕ್ರಾಸ್ ಸಂಸ್ಥೆ ಸ್ಥಾಪಿತವಾಯಿತು.

1948: ಮೊದಲ ಸಂಗ್ರಹಿಸಲಾದ ಕಂಪ್ಯೂಟರ್ ಪ್ರೋಗ್ರಾಂ ಅನ್ನು ಮ್ಯಾಂಚೆಸ್ಟರ್ ನಲ್ಲಿ ಚಲಾಯಿಸಲಾಯಿತು.

1948: ಲಾರ್ಡ್ ಮೌಂಟ್ ಬ್ಯಾಟೆನ್ ಭಾರತದ ಗವರ್ನರ್ ಜೆನರಲ್ ಸ್ಥಾನಕ್ಕೆ ರಾಜಿನಾಮೆ ನೀಡಿದರು.

1952: ಫಿಲಿಪೈನ್ ಸ್ಕೂಲ್ ಆಫ್ ಕಾಮರ್ಸ್, ರಿಪಬ್ಲಿಕ್ ಆಕ್ಟ್ ಮೂಲಕ ಫಿಲಿಪೈನ್ಸ್ ಕಾಲೇಜ್ ಆಫ್ ಕಾಮರ್ಸ್ ಆಗಿ ಪರಿವರ್ತಿತಗೊಂಡು ನಂತರ ಫಿಲಿಪೈನ್ಸಿನ ಪಾಲಿಟೆಕ್ನಿಕ್ ಯುನಿವರ್ಸಿಟಿಯಾಯಿತು.

1966: ಮಹಾರಾಣಿ ಜುಲಿಯಾನ ಅವರು ಆಂಸ್ಟರ್ಡ್ಯಾಮಿನಲ್ಲಿರುವ ಕೊಯೆನ್ ಸುರಂಗವನ್ನು ಉದ್ಘಾಟಿಸಿದರು.

1983: ಅಲಬಾಮದ 18 ವಯಸ್ಸಿನ ಸ್ಟೆಫ್ನಿ ಕೆ ಆಶ್ಮೋರ್ ಅಮೇರಿಕಾದ ಜುನಿಯರ್ ಮಿಸ್ ಅಮೇರಿಕಾ ಕಿರೀಟ ಪಡೆದರು.

1983: ಟೆನ್ನಿಸ್ ಏಸ್ ಆಟಗಾರ ಆರ್ಥರ್ ಆಶೆ ಎರಡು ಬೈಪಾಸ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರು.

1991: ಭಾರತದ 9ನೇ ಪ್ರಧಾನ ಮಂತ್ರಿಯಾಗಿ ಪಿ.ವಿ.ನರಸಿಂಹ ರಾವ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

2003: ಜೆ.ಕೆ ರೌಲಿಂಗ್ ಅವರ 5ನೇ ಹ್ಯಾರಿ ಪಾಟರ್ ಪುಸ್ತಕ ಶ್ರೇಣಿಯ “ಹ್ಯಾರಿ ಪಾಟರ್ ಆಂಡ್ ದಿ ಆರ್ಡರ್ ಆಫ್ ದಿ ಫೀನಿಕ್ಸ್” ಪ್ರಕಟಿಸಲಾಯಿತು.

2006: ಹೊಸದಾಗಿ ಕಂಡ ಪ್ಲೂಟೋದ ಚಂದ್ರಗಳನ್ನು ನಿಕ್ಸ್ ಮತ್ತು ಹೈಡ್ರಾ ಎಂದು ನಾಮಕರಣ ಮಾಡಲಾಯಿತು.

2009: ಭಾರತದ ಬ್ಯಾಟ್ಮಿಂಟನ್ ಆಟಗಾತಿ ಸೈನಾ ನೆಹ್ವಾಲ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪ್ರಶಸ್ತಿ ಪಡೆದರು. ಅವರು ಈ ಪ್ರಶಸ್ತಿಯನ್ನು ಪಡೆದ ಭಾರತದ ಮೊದಲ ಮಹಿಳೆ.

2013: ತೈವಾನಿನಲ್ಲಿ H6N1 ವೈರಸ್ ಅನ್ನು ಮೊದಲ ಮಾನವ ಪ್ರಕರಣವನ್ನು ಕಂಡುಹಿಡಿಯಲಾಯಿತು.

ಪ್ರಮುಖ ಜನನ/ಮರಣ:

1953: ಮುಸ್ಲಿಮ್ ದೇಶದ ಮೊದಲ ಪ್ರಜಾಪ್ರಭುತ್ವದ ಚುನಾಯಿತ ಮಹಿಳಾ ಮುಖಂಡರಾದ ಬೆನೆಜಿರ್ ಭುಟ್ಟೊ ಜನಿಸಿದರು.

1982: ವೇಲ್ಸ್ ದೇಶದ ರಾಜಕುಮಾರ ಮತ್ತು ರಾಜಕುಮಾರಿ ಡಯಾನ ದಂಪತಿಗಳ ಎರಡನೇ ಮಗನಾದ ಪ್ರಿನ್ಸ್ ವಿಲ್ಲಿಯಂ ಜನಿಸಿದರು.