Categories
e-ದಿನ

ಜೂನ್-22

 

ಪ್ರಮುಖ ಘಟನಾವಳಿಗಳು:

1555: ಹುಮಾಯುನ್ ರಾಜ ಅಕ್ಬರನನ್ನು ಮುಂದಿನ ರಾಜನೆಂದು ಘೋಷಿಸಿದನು.

1633: ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂಬ ವಾದವನ್ನು ಗೆಲಿಲಿಯೋ ಮಂಡಿಸಿದಾಗ ತನ್ನ ದೃಷ್ಟಿಕೋನವನ್ನು ಪುನಃ ಪರಿಶೀಲಿಸಲು ಬಲವಂತವಾಗಿ ಪೋಪ್ ಆದೇಶಿಸಿದರು.

1675: ಗ್ರೀನ್ ವಿಚ್ ಅಬ್ಸರ್ವೇಟರಿಯನ್ನು ಇಂಗ್ಲಾಂಡಿನಲ್ಲಿ ಸ್ಥಾಪಿಸಲಾಯಿತು.

1775: ಮೊದಲ ಕಾಂಟಿನೆಂಟಲ್ ಕರೆನ್ಸಿಯನ್ನು ಚಲಾವಣೆ ಮಾಡಲಾಯಿತು.

]1812: ಬ್ರಿಟಿಷರ ಮೇಲೆ ಆಶ್ಚರ್ಯಕರ ದಾಳಿಯನ್ನು ನಡೆಸಲು ಯೋಜನೆ ಹಾಕುತ್ತಿದ್ದ ಅಮೇರಿಕನ್ನರ ಯೋಜನೆ ತಿಳಿದ ಲಾರಾ ಸೆಕಾರ್ಡ್ 32 ಕಿ.ಮೀ. ನಡೆದುಕೊಂಡು ಬ್ರಿಟೀಷರಿಗೆ ವಿಷಯ ತಿಳಿಸಿದರಿಂದ ಬೀವರ್ ಡಾಮ್ಸ್ ನ ಕದನದಲ್ಲಿ ಬ್ರಿಟೀಷರು ಜಯ ಸಾಧಿಸಿದರು.

1832: ಪಿನ್ ಅನ್ನು ತಯಾರು ಮಾಡುವ ಯಂತ್ರಕ್ಕೆ ಜಾನ್ ಹೋವ್ ಪೇಟೆಂಟ್ ಪಡೆದರು.

1847: ಮೊದಲ ವೃತ್ತಾಕಾರದ ಡೋನಟ್ಟನ್ನು ಹಾನ್ಸನ್ ಗ್ರೆಗೊರಿ ತಯಾರಿಸಿದರು.

1874: ಡಾ.ಆಂಡ್ರ್ಯೂ ಟಿ ಸ್ಟಿಲ್ ಮೂಳೆ ವೈದ್ಯ ಪದ್ದತಿಯನ್ನು ಕಂಡುಹಿಡಿದರು.

1874: ಲಾನ್ ಟೆನ್ನಿಸ್ ಆಟವನ್ನು ಪರಿಚಯಿಸಲಾಯಿತು.

1897: ಚೇಪ್ಕರ್ ಸಹೋದರರು ಮತ್ತು ಮಹಾದೇವ್ ವಿನಾಯಕ ರಾನಡೆ ಬ್ರಿಟಿಶ್ ವಸಾಹತು ಅಧಿಕಾರಿಗಳಾದ ಚಾರ್ಲ್ಸ್ ವಾಲ್ಟರ್ ರಾಂಡ್ ಮತ್ತು ಲೆಫ್ಟನೆಂಟ್ ಚಾರ್ಲ್ಸ್ ಎಗೆರ್ಟನ್ ಅಯರ್ಸ್ಟ್ ಅನ್ನು ಹತ್ಯೆ ಮಾಡಿದರು.

1904: ತೀವ್ರ ಕಾರ್ಮಿಕರ ಕೊರತೆಯಿಂದಾಗಿ ಚೀನಿ ಕಾರ್ಮಿಕರು ದಕ್ಷಿಣ ಆಫ್ರಿಕಾಗೆ ಆಗಮಿಸಿದರು.

1915: BMT ಅಂದಿನ ಬ್ರೂಕ್ಲಿನ್ ರಾಪಿಡ್ ಟ್ರಾನ್ಸಿಟ್ ಸಬ್ ವೇ ಸೇವೆಯನ್ನು ಆರಂಭಿಸಿತು.

1918: ಅತ್ಯಂತ ಹಾನಿಕಾರಕ ಅಪಘಾತಗಳಲೊಂದಾದ ಹ್ಯಾಮಂಡ್ ಸರ್ಕಸ್ ರೈಲು ಧ್ವಂಸ ಸಂಭವಿಸಿತು. ರೈಲಿನ ಲೋಕೋಮೋಟಿವ್ ಇಂಜಿನಿಯರ್ ನಿದ್ದೆಗೆ ಜಾರಿದಾಗ ಅವನು ಓಡಿಸುತ್ತಿದ್ದ ರೈಲು ಮತ್ತೊಂದು ರೈಲಿಗೆ ಗುದ್ದಿ 80 ಜನ ಮೃತ ಪಟ್ಟರು.

1970: ಫೆಡರಲ್, ರಾಜ್ಯ ಮತ್ತು ಸ್ಥಳೀಯ ಚುನಾವಣೆಗಳಿಗೆ ಮತದಾನದ ವಯಸ್ಸನ್ನು 18ಕ್ಕೆ ಇಳಿಸಲು ಅಧ್ಯಕ್ಷ ನಿಕ್ಸನ್ ಮಸೂದೆಗೆ ಸಹಿ ಹಾಕಿದರು.

1976: ಕೆನೆಡಾನಲ್ಲಿ ಮರಣದಂಡೆಯನ್ನು ನಿಷೇಧಿಸಲು ಕೆನೆಡಾದ ಸಂಸತ್ತು ಮತ ಚಲಾಯಿಸಿತು.

1978: ಪ್ಲೂಟೋನ ಚಂದ್ರನಾದ ಚಾರನ್ ಅನ್ನು ಜೇಮ್ಸ್ ಕ್ರಿಸ್ಟಿ ಪತ್ತೆಮಾಡಿರುವ ಬಗ್ಗೆ ಘೋಷಿಸಲಾಯಿತು.

1982: ಮ್ಯಾನ್ ಹ್ಯಾಟನ್ ಕೇವಲ ಬಸ್ಸುಗಳು ಓಡಾಡುವ ಮಾರ್ಗವನ್ನು ಸ್ಥಾಪಿಸಿತು.

2013: ಜಪಾನಿನ ಸಾಂಸ್ಕೃತಿಕ ಮೌಲ್ಯದ ಕಾರಣ ಯುನೆಸ್ಕೋ ಸಂಸ್ಥೆಯು ಜಪಾನಿನ ಮೌಂಟ್ ಫ್ಯೂಜಿಯನ್ನು ವಿಶ್ವ ಪರಂಪರೆಯ ತಾಣವಾಗಿ ಪಟ್ಟಿ ಮಾಡಿದೆ.

2013:ನ್ಯೂಜಿಲೆಂಡಿನ ಕ್ಯಾಂಟರ್ಬರಿ ಪ್ರದೇಶವು ಕಳೆದ 20 ವರ್ಷಗಳಲ್ಲಿ ಕಾಣದ ಕೆಟ್ಟ ಪ್ರವಾಹವನ್ನು ಅನುಭವಿಸಿತು.

2014: ಮಾಯನ್ಮಾರಿನಲ್ಲಿರುವ ಪಿಯು ಪುರಾತನ ನಗರಗಳು ಮತ್ತು ಇರಾನಿನ ಶಾಹರ್-ಇ-ಸೋಖ್ತಾ (ಬರ್ನ್ಟ್ ಸಿಟಿ)ಯನ್ನು ವಿಶ್ವ ಪರಂಪರೆ ತಾಣಗಳೆಂದು ಹೆಸರಿಸಲಾಗಿದೆ.

ಪ್ರಮುಖ ಜನನ/ಮರಣ:

1910: 1953ರ ಮೌಂಟ್ ಎವೆರೆಸ್ಟ್ ಎಕ್ಸ್ಪೆಡಿಷನ್ ನೇತೃತ್ವ ವಹಿಸಿದ ಬ್ರಿಗೆಡಿಯರ್ ಹೆನ್ರಿ ಸೆಸಿಲ್ ಜಾನ್ ಹಂಟ್ ಜನಿಸಿದರು.

1932: ಭಾರತ ಚಲನಚಿತ್ರದ ಖ್ಯಾತ ಖಳನಾಯಕ ಅಮರೀಶಪುರಿ ಜನಿಸಿದರು.

1974: ತಮಿಳು ಚಲನಚಿತ್ರ ನಟರಾದ ವಿಜಯ್ ಜನಿಸಿದರು.