ಪ್ರಮುಖ ಘಟನಾವಳಿಗಳು:

 • 930 AD: ವಿಶ್ವದ ಅತ್ಯಂತ ಪುರಾತನ ಸಂಸತ್ತಾದ ಐಸ್ಲಾಂಡಿಕ್ ಸಂಸತ್ತನ್ನು ಸ್ಥಾಪಿಸಲಾಯಿತು.
 • 1661: ಇಂಗ್ಲೆಂಡಿನ ಚಾರ್ಲ್ಸ್ II ಮತ್ತು ಪೋರ್ಚುಗಲ್ಲಿನ ಕ್ಯಾಥರೀನ್ ಅವರ ಮದುವೆಯ ಒಪ್ಪಂದವನ್ನು ಮಾಡಲಾಯಿತು.
 • 1775: ಮೊದಲ ವಿಹಾರ ನೌಕಾ ಪಂದ್ಯವನ್ನು ಥೇಮ್ಸ್ ನದಿಯ ಮೇಲೆ ನಡೆಸಲಾಯಿತು.
 • 1784: ಮೊದಲ ಬಲ್ಲೂನ್ ಯಾನವನ್ನು 13 ವರ್ಷದ ಎಡ್ವರ್ಡ್ ವಾರೆನ್ ಅವರು ಆರಂಭ ಮಾಡಿದರು.
 • 1860: ಅಮೇರಿಕಾದ ಕಾಂಗ್ರೆಸ್ ಸರ್ಕಾರಿ ಮುದ್ರಣಾಲಯ ಕಛೇರಿಯನ್ನು ಸ್ಥಾಪಿಸಿತು.
 • 1868: “ಟೈಪ್ ರೈಟರ್” ಅನ್ನು ಕ್ರಿಸ್ಟೋಫರ್ ಲಥಮ್ ಶೋಲ್ಸ್ ಪೇಟೆಂಟ್ ಪಡೆದರು.
 • 1894: ಅಂತರರಾಷ್ಟ್ರೀಯ ಒಪಂಪಿಕ್ ಸಮಿತಿಯನ್ನು ಪ್ಯಾರೀಸಿನಲ್ಲಿ ಸ್ಥಾಪಿಸಲಾಯಿತು.
 • 1917: ಬೊಹೆಮಿಯಾದಲ್ಲಿ ಸಿಡಿಮದ್ದು ತಯಾರಿಸುವ ಕಾರಖಾನೆಯು ಸಿಡಿದು ಸುಮಾರು 1000 ಜನರು ಮೃತಪಟ್ಟರು.
 • 1938: ಸಿವಿಲ್ ಏರೊನಾಟಿಕ್ಸ್ ಅಥಾರಿಟಿ ಸ್ಥಾಪಿಸಲಾಯಿತು.
 • 1949: ಮೊದಲ 12 ಮಹಿಳೆಯರು ಹಾರ್ವರ್ಡಿನ ವೈದ್ಯ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದರು.
 • 1950: ಸ್ವಿಸ್ ಸಂಸತ್ತು ಮಹಿಳೆಯರ ಮತದಾನದ ಹಕ್ಕನ್ನು ತಿರಸ್ಕರಿಸಿತು.
 • 1972: ಚಂಡಮಾರುತ ಆಗ್ನೇಸ್ ಅಮೇರಿಕಾದ ಭಾರಿ ದುಬಾರಿ ನೈಸರ್ಗಿಕ ವಿಕೋಪವಾಗಿದ್ದು 119 ರಾಜ್ಯಗಳು, 3 ಶತಕೋಟಿ ಡಾಲರುಗಳ ನಷ್ಟದೊಂದಿಗೆ 15 ರಾಜ್ಯಗಳ ರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು.
 • 1976: ಟೊರೊಂಟೋದಲ್ಲಿನ ಅತ್ಯಂತ ಎತ್ತರದ ಮಾನವ ನಿರ್ಮಿತ ಕಟ್ಟಡವಾದ CNN ಟವರನ್ನು ಉದ್ಘಾಟಿಸಲಾಯಿತು.
 • 1980: ಮೊದಲ ಸೌರಶಕ್ತಿ ಚಾಲಿತ ಕಡಲ ದ್ವಿಮುಖ ರೇಡಿಯೋ ಸಂಭಾಷಣೆಯನ್ನು ಮಾಡಲಾಯಿತು.
 • 1982: ದಕ್ಷಿಣ ಧ್ರುವದಲ್ಲಿ ಸಾರ್ವಕಾಲಿಕವಾಗಿ ಕನಿಷ್ಟ ಉಷ್ಣಾಂಶ -117o F ದಾಖಲಾಗಿತ್ತು.
 • 1985: ಏರ್ ಇಂಡಿಯಾದ ವಿಮಾನ ಬೋಯಿಂಗ್ 747 “ಕನಿಷ್ಕ” ಅಟ್ಲಾಂಟಿಕ್ ಸಮುದ್ರದಲ್ಲಿ ಮುಳುಗಿತು.
 • 2013: ಹಗ್ಗದ ಮೇಲೆ ನಡೆದುಕೊಂಡು ಗ್ರಾಂಡ್ ಕಣಿವೆಯನ್ನು ಯಶಸ್ವಿಯಾಗಿ ದಾಟಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ನಿಕ್ ವೆಲೆಂಡಾ ಪಾತ್ರರಾದರು.

ಪ್ರಮುಖ ಜನನ/ಮರಣ:

 • 1912: ಕಂಪ್ಯೂಟರ್ ವಿಜ್ಞಾನದ ಪ್ರಮುಖನಾಗಿದ್ದ ಆಲೆನ್ ಟೂರಿಂಗ್ ಜನಿಸಿದರು.
 • 1964: ಅಮೇರಿಕಾದ ಪ್ರಖ್ಯಾತ ಲೇಖಕ ಡಾನ್ ಬ್ರೌನ್ ಜನಿಸಿದರು.
 • 1980: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸುಪುತ್ರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ನಿಧನರಾದರು.
 • 1995: ವಿಜ್ಞಾನಿ ಡಾ,ಜಾನಸ್ ಸಾಲ್ಕ್ ನಿಧನರಾದರು.