ಪ್ರಮುಖ ಘಟನೆಗಳು:
1621: ಡಚ್ ವೆಸ್ಟ್ ಇಂಡಿಯಾ ಸಂಸ್ಥೆಯು ವೆಸ್ಟ್ ಇಂಡೀಸ್ ನಲ್ಲಿ ಕಾರ್ಯನಿರ್ವಹಿಸಲು ಸನ್ನದು ಪಡೆಯಿತು.
1748: ಆಂಸ್ಟರ್ ಡ್ಯಾಮಿನಲ್ಲಿ ಮುನಿಸಿಪಲ್ ಅಂಚೆ ಸೇವೆಗಳಿಗೆ ಚಾಲನೆ ನೀಡಲಾಯಿತು.
1851: ನ್ಯೂಯಾರ್ಕಿನ ಬೇಸ್ ಬಾಲ್ ತಂಡವು ಮೊದಲಬಾರಿಗೆ ಸಮವಸ್ತ್ರ ಧರಿಸಿ ಕ್ರೀಡಾಸ್ಪರ್ಧೆಯಲ್ಲಿ ಪಾಲುಗೊಂಡಿತು.
1856: ಕುಲ್ಲೆನ್ ವಿಫಲ್ ಅವರು ಸ್ಕ್ರೂಗಳನ್ನು ತಯಾರಿಸುವ ಯಂತ್ರಗಳ ಪೇಟೆಂಟ್ ಪಡೆದರು
1860: ಕೋಮಾಂಚೆ ಮತ್ತು ಲೋವಾ ಪ್ರದೇಶಗಳು ಚಂಡಮಾರುತಗಳ ಹೊಡೆತಕ್ಕೆ ಸಿಲುಕಿ ನಾಶವಾದವು.
1929: ಮೊತ್ತ ಮೊದಲ ಉದ್ಯಮಗಳ ಪ್ರದರ್ಶನ ಸಮಾವೇಶ ಅಟ್ಲಾಂಟಿಕ್ ಸಿಟಿ ಕನ್ವೆಂಷನ್ ಸೆಂಟರಿನಲ್ಲಿ ನಡೆಯಿತು.
1929: ಚಿಲಿ ಮತ್ತು ಪೆರು ದೇಶಗಳು ತಮ್ಮ ಗಡಿ ವಿವಾದವನ್ನು ಲೀಮಾ ಒಪ್ಪಂದದಂತೆ ಪರಿಹರಿಸಿಕೊಂಡವು.
1941: ಜರ್ಮನಿಯ ಅತಿಕ್ರಮಣಕಾರರು ಯಹೂದಿಗಳ ಪಾಸ್ ಪೋರ್ಟನ ಮೇಲೆ “ಜೆ” ಎಂಬ ಟಸ್ಸೆಯನ್ನು ನಮೂದು ಮಾಡಲಾರಂಭಿಸಿದರು.
1943: ಯುನೈಟೆಡ್ ನೇಷನ್ಸ್ ರಿಲೀಫ್ & ರಿಹ್ಯಾಬಿಲಿಟೇಷನ್ ಅಡ್ಮಿನಿಸ್ಟ್ರೇಷನ್ ಆರಂಭವಾಯಿತು.
1946: ಮೊದಲ ಒಳ ಉಡುಪುಗಳ ಪ್ರದರ್ಶನ ಮೇಳವನ್ನು ಪ್ಯಾರಿಸ್ ನಲ್ಲಿ ಮಾಡಲಾಯಿತು.
1946: ಅಂತರ ರಾಷ್ಟ್ರೀಯ ಸೇನೆಯ ನ್ಯಾಯಾಧಿಕರಣ ಜಪಾನಿನ ಟೋಕಿಯೋದಲ್ಲಿ ತೆರೆಯಲಾಯಿತು.
1947: ಭಾರತದ ವೈಸೆರಾಯ್ ಲಾರ್ಡ್ ಮೌಂಟ್ ಬ್ಯಾಟೆನ್ ಪಾಕಿಸ್ತಾನಕ್ಕೆ ಭೇಟಿ ನೀಡಿದರು.
1949: ಅಮೇರಿಕದ ನೌಕಾ ತರಬೇತಿ ಸಂಸ್ಥೆಯಿಂದ ಪ್ರಥಮ ಬಾರಿಗೆ ನೀಗ್ರೋ ಒಬ್ಬ ತೇರ್ಗಡೆಯಾದರು.
1949:ಜಿ ಎನ್ ಕ್ಲಾರ್ಕ್ ಅಮೇರಿಕಾದ ಮೊದಲ ಮಹಿಳ ಖಜಾಂಚಿಯಾದರು.
1953: ಅಲೆಕ್ಸಾಂಡರ್ ಕಾರ್ಟರೈಟ್ ಬೇಸ್ ಬಾಲ್ ಕ್ರೀಡೆಯ ಪಿತಾಮಹ ಎಂದು ಅಮೇರಿಕಾದ ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿತು.
1959: ಸಿಂಗಾಪೂರ್ ದೇಶವು ತನ್ನ ಸಂವಿಧಾನವನ್ನು ಅಂಗೀಕರಿಸಿತು.
1985: ಕೇಂದ್ರ ಸರ್ಕಾರವು ತಮ್ಮ ಸಿಬ್ಬಂದಿಗಾಗಿ ಸರ್ಕಾರಿ ಕಛೇರಿಗಳಲ್ಲಿ ಒಂದು ವಾರಕ್ಕೆ ಐದು ಕೆಲಸದ ದಿನಗಳ ಅವಧಿಯನ್ನು ನಿಗಧಿಪಡಿಸಿತು.
1992: ವಿಶ್ವದ ಅತ್ಯಂತ ದೊಡ್ಡ ಪರಿಸರ ಸಭೆ ಬ್ರಜಿಲ್ ನ ರಿಯೊ ಡೆ ಜನೇರಿಯೋ ದಲ್ಲಿ ನಡೆಯಿತು.
2013: ಇರಾನ್ ದೇಶದ ಮೇಲೆ ಅಮೇರಿಕ ಆರ್ಥಿಕ ನಿರ್ಭಂದಗಳನ್ನು ಹೇರಿತು.
2015: ಡಾ.ಜೆಸ್ಸಿ ಸೆಲ್ಬರ್ ಹೌಸ್ಟನ್ ಮೆಥಾಡಿಸ್ಟ್ ಆಸ್ಪತ್ರೆಯಲ್ಲಿ ವಿಶ್ವದ ಮೊದಲ ಭಾಗಶಃ ತಲೆಬುರುಡೆ ಮತ್ತು ನೆತ್ತಿಯ ಶಸ್ತ್ರ ಚಿಕಿತ್ಸೆ ಮಾಡಿದರು.
ಪ್ರಮುಖ ಜನನ/ಮರಣ:
1924: ಭಾರತದ ಪ್ರಮುಖ ರಾಜಕಾರಣಿ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಜನಿಸಿದರು.
1930: ಕೇಂದ್ರ ರಕ್ಷಣಾ ಸಚಿವರಾದ ಜಾರ್ಜ್ ಫರ್ನಾಂಡಿಸ್ ಜನಿಸಿದರು.
2011: ಭಾರತದ ಹರಿಯಾಣದ ಮುಖ್ಯಮಂತ್ರಿ ಭಜನ್ ಲಾಲ್ ನಿಧನರಾದರು.
2013: ಅಮೇರಿಕಾ ಮತ್ತು ಭಾರತ ಖ್ಯಾತಿಯ ನಟಿ, ಹಿನ್ನಲೆ ಗಾಯಕಿ ಜಿಯಾ ಖಾನ್ ಅಸುನೀಗಿದರು.
2014: ಭಾರತೀಯ ರಾಜಕಾರಣಿ ಹಾಗೂ ಮಹಾರಾಷ್ಟ್ರದ ಮೂರನೆ ಉಪ-ಮುಖ್ಯಮಂತ್ರಿ ಗೋಪಿನಾಥ್ ಮುಂಡೆ ನಿಧನರಾದರು.