Categories
e-ದಿನ

ಜೂನ್-4

 

ಪ್ರಮುಖ ಘಟನೆಗಳು:

ಕ್ರಿ.ಪೂ 781: ಚೀನಿಯರು ಸೂರ್ಯ ಗ್ರಹಣವನ್ನು ದಾಖಲಿಸಿದ್ದರು.

1769: ಶುಕ್ರ ಗ್ರಹದ ಪ್ರಯಾಣದ 5 ಗಂಟೆಗಳಲ್ಲಿ ಸಂಪೂರ್ಣ ಸೂರ್ಯ ಗ್ರಹಣ ಉಂಟಾಗಿತ್ತು. ಇದು ಇತಿಹಾಸದಲ್ಲೆ ಅತ್ಯಂತ ಕಡಿಮೆ ಅಂತರದ ಸೂರ್ಯಗ್ರಹಣವಾಗಿ ದಾಖಲಾಗಿದೆ.

1783: ಜೋಸೆಫ್ ಮತ್ತು ಜಾಕ್ವಿಸ್ ಮಾಂಟ್ ಗಾಲ್ಫಿಯರ್ ಮೊದಲ ಬಾರಿ ಸಾರ್ವಜನಿಕವಾಗಿ ಹಾಟ್ ಏರ್ ಬಲೂನಿನಲ್ಲಿ ಸುಮಾರು 1600-2000 ಅಡಿ ಎತ್ತರದಲ್ಲಿ 2 ಕಿಲೋಮೀಟರ್ ಅಷ್ಟು ದೂರವನ್ನು 10 ನಿಮಿಷಗಳಲ್ಲಿ ತಲುಪಿದರು.

1784: ಮ್ಯಾಡಂ ಎಲಿಜಿಬತ್ ಥಿಬಲ್ ಮೊದಲ ಮಹಿಳಾ ಬಲೂನಿಸ್ಟ್ ಆಗಿದರು.

1850: ಸ್ವಯಂ ಸುವಾಸನೆ ತರುವ ಗೊಬ್ಬರದ ಪೇಟೆಂಟ್ ಇಂಗ್ಲೆಂಡಿನಲ್ಲಿ ಪಡೆಯಲಾಯಿತು.

1875: ಪೆಸಿಫಿಕ್ ಸ್ಟಾಕ್ ಎಕ್ಸ್ ಚೇಂಜ್ ತೆರೆಯಲಾಯಿತು.

1896: ಫೋರ್ಡ್ ಸಂಸ್ಥೆಯ ಹೆನರಿ ಫೋರ್ಡ್ ತಮ್ಮ ಮೊದಲ ಫೋರ್ಡ್ ವಾಹನವನ್ನು ಡಿಟ್ರಾಯಿಟ್ ರಸ್ತೆಗಳ ಮೇಲೆ ಚಲಿಸಿದರು.

1911: ಅಲಾಸ್ಕಾದ ಇಂಡಿಯನ್ ಕ್ರೀಕ್ ನಲ್ಲಿ ಮೊದಲ ಬಾರಿಗೆ ಚಿನ್ನವನ್ನು ಕಂಡುಹಿಡಿಯಲಾಯಿತು.

1912: ಅಲಾಸ್ಕಾದ ಮೌಂಟ್ ಕಟ್ಮೈದ ತುದಿ ಕುಸಿಯಿತು.

1912: ಮಸ್ಸಾಚುಸೆಟ್ಸ್ ತನ್ನ ಮೊದಲ ಕನಿಷ್ಟ ವೇತನ ಕಾನೂನನ್ನು ಜಾರಿಗೆ ತಂದಿತು.

1919: ಅಮೇರಿಕಾದ ಸಂವಿಧಾನಕ್ಕೆ 19ನೇ ತಿದ್ದುಪಡಿ ಮಾಡಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ನೀಡಲಾಯಿತು.

1929: ಜಾರ್ಜ್ ಈಸ್ಟ್ ಮಾನ್ ಮೊದಲ ಟೆಕ್ನಿಕಲರ್ ಚಲನಚಿತ್ರವನ್ನು ನ್ಯೂಯಾರ್ಕ್ ನಲ್ಲಿ ಪ್ರದರ್ಶಿಸಿದರು.

1941: ನಾಜಿಗಳು ಯಾಹೂದಿಗಳನ್ನು ಸಮುದ್ರ ತೀರ ಹಾಗೂ ಈಜು ಕೊಳಗಳನ್ನು ಉಪಯೋಗಿಸದಂತೆ  ನಿಷೇದಿಸಿದರು.

1957: ಮೊದಲ ಕಲ್ಲಿದ್ದಲು ಕೊಳವೆ (ಪೈಪ್ಲೈನ್) ಕಾರ್ಯಾಚರಣೆಯನ್ನು ಆರಂಭಿಸಲಾಯಿತು.

1964: ಮಾಲ್ಡೀವ್ಸ್ ಸಂವಿಧಾನವನ್ನು ಅಳವಡಿಸಿಕೊಂಡಿತು.

1969: ಹವಾನದಲ್ಲಿ ನಿಲುಗಡೆಯಾಗಿದ್ದ ಜೆಟ್ ವಿಮಾನ ಒಂದರ ಚಕ್ರದ ಕೆಳಗಿದ್ದ ಪಾಡ್ ಒಳಗೆ ನುಸುಳಿದ 22 ವರ್ಷದ ವ್ಯಕ್ತಿ ಆಮ್ಲಜನಕದ ಕೊರತೆ ನಡುವೆ 29000 ಅಡಿಗಳಲ್ಲಿಯೂ ಸಹ ಸತತ 9 ಗಂಟೆಗಳ ಪ್ರಯಾಣದ ನಂತರವೂ ಜೀವಂತವಾಗಿ ಉಳಿದಿದ್ದರು.

1973: ಡಾನ್ ವೆಟ್ಜೆಲ್, ಟಾಮ್ ಬಾರ್ನಸ್ ಮತ್ತು ಜಾರ್ಜ್ ಚಾಸ್ಟೇನ್ ಗೆ ಎಟಿಎಂ ವಿಷಯವಾಗಿ ಈ ಮೂವರಿಗೂ ಪೇಟೆಂಟ್ ನೀಡಲಾಯಿತು.

1975: ಅತ್ಯಂತ ಹಳೆಯ ಪ್ರಾಣಿಯ ಪಳೆಯುಳಿಕೆಗಳು ಅಮೇರಿಕಾದಲ್ಲಿ ಪತ್ತೆಯಾದವು.

1979: ಕೆನೆಡಾದ ಇತಿಹಾಸದಲ್ಲೇ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯೆಂದು ಹೆಗ್ಗಳಿಕೆ ಪಡೆದವರು ಜೋ ಕ್ಲಾರ್ಕ್.

1984: ಅಳಿದು ಹೋಗಿರುವ ಪ್ರಾಣಿಯಿಂದ ಡಿ.ಎನ್.ಎ ಅನ್ನು ಯಶಸ್ವಿಯಾಗಿ ಅಬೀಜ ಸಂತಾನ ಮಾಡಲಾಯಿತು.

2016: 115ನೇ ಫ್ರೆಂಚ್ ಓಪನ್ ಮಹಿಳೆಯರ ಆಟದ ಪಂದ್ಯದಲ್ಲಿ ಗಾರ್ಬೀನ್ ಮುಗುರುಜ ಸೆರೀನ ವಿಲ್ಲಿಯಂ ಅವರನ್ನು 7-5, 6-4 ಅಂತರದಲ್ಲಿ ಸೋಲಿಸಿ ತನ್ನ ಮೊದಲ ಗ್ರಾಂಡ್ ಸ್ಲಾಂ ಟೈಟಲ್ ಪ್ರಶಸ್ತಿ ಪಡೆದರು.

ಪ್ರಮುಖ ಜನನ/ಮರಣ:

1884: ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಜನಿಸಿದರು.

1936: ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಹೆಸರುವಾಸಿಯಾದ ನೂತನ್ ಜನಿಸಿದರು.

1946: ಬಹು ಭಾಷಾ ಗಯಕ ಎಸ್ ಪಿ ಬಾಲಸುಬ್ರಮಣ್ಯಂ ಜನಿಸಿದರು.

1959: ಭಾರತದ ಪ್ರಖ್ಯಾತ ಉದ್ಯಮಿ ಅನಿಲ್ ಅಂಬಾನಿ ಜನಿಸಿದರು.