Categories
e-ದಿನ

ಜೂನ್-6

 

ಪ್ರಮುಖ ಘಟನೆಗಳು:

1674: ಶಿವಾಜಿ ಮಹಾರಾಷ್ಟ್ರದಲ್ಲಿ ಛತ್ರಪತಿಯಾಗಿ ಆಭಿಷಿಕ್ತರಾಗುತ್ತಾರೆ. .

1844: “ದಿ ಯಂಗ್ ಮೆನ್ಸ್ ಕ್ರಿಷ್ಚಿಯನ್ ಅಸೋಸಿಯೇಷನ್” ಲಂಡನ್ನಿನಲ್ಲಿ ಸ್ಥಾಪಿತವಾಯಿತು.

1882: ಮೊದಲ ವಿದ್ಯುತ್ ಚಾಲಿತ ಇಸ್ತ್ರಿ ಪೆಟ್ಟಿಗೆಯ ಪೇಟೆಂಟ್ ಅನ್ನು ಹೆಚ್.ಡಬ್ಲ್ಯುಲ್ಯು.ಸೀಲೆ ಪಡೆದರು.

1903: ಹಿರಾಲಾಲ್ ಸೇನ್ ಕೂದಲಿನ  ಔಷಧಕ್ಕೆ ಮೊದಲ ಜಾಹಿರಾತನ್ನು ಚಿತ್ರೀಕರಿಸಿದರು.

1904: ರಾಷ್ಟ್ರೀಯ ಕ್ಷಯರೋಗ ಸಂಘವು ಅಟ್ಲಾಂಟಿಕ್ ಸಿಟಿಯ ನ್ಯೂಜರ್ಸಿಯಲ್ಲಿ ರೂಪಿತಗೊಂಡಿತು.

1914: ಮೊದಲ ಬಾರಿಗೆ ವಿಮಾನವೊಂದು ಕಾಣೆಯಾಗಿ ಸಂಪರ್ಕಕ್ಕೆ ಸಿಗದಂತೆ ಕಣ್ತಪ್ಪಿ ಹೋಯಿತು.

1925: ವಾಲ್ಟರ್ ಕ್ರಿಸ್ಲರ್ ಮೋಟಾರು ವಾಹನ ತಯಾರಿಸುವ ಸಂಸ್ಥೆಯಾದ ಕ್ರಿಸ್ಲರ್ ಕಾರ್ಪೋರೇಷನನ್ನು ಸ್ಥಾಪಿಸಿದರು.

1932: ಅಮೇರಿಕಾದಲ್ಲಿ ಗ್ಯಾಸೋಲೀನಿಗೆ ಮೊದಲ ಫೆಡರಲ್ ತೆರಿಗೆ ಜಾರಿಗೆ ಬಂದಿತು.

1933: ಮೊದಲ “ಡ್ರೈವ್-ಇನ್” ಚಿತ್ರಮಂದಿರ ನ್ಯೂಜರ್ಸಿಯ ಕ್ಯಾಂಡೆನ್ ನಲ್ಲಿ ತೆರೆಯಿತು.

1933: ಅಮೇರಿಕಾದ ಉದ್ಯೋಗ ಸೇವೆಯನ್ನು ರಚಿಸಲಾಯಿತು.

1936: ಜರ್ಮನಿಯ ಬೆರ್ಲಿನ್ನಿನ ಒಂದು ಕಟ್ಟಡದಲ್ಲಿ ಮೊದಲ ಹೆಲಿಕಾಪ್ಟರನ್ನು ಪರೀಕ್ಷಿಸಲಾಯಿತು.

1936: ವಿಮಾನಗಳಿಗೆ ಉಪಯೋಗಿಸುವ ಇಂಧನವನ್ನು ಮೊದಲ ಬಾರಿಗೆ ವಾಣಿಜ್ಯವಾಗಿ ಉತ್ಪಾದಿಸಲಾಯಿತು.

1942: ಮೊದಲ ನೈಲಾನ್ ಪ್ಯಾರಚೂಟ್ ಜಿಗಿತವನ್ನು ಅಡಿಲೈನ್ ಗ್ರೇ ಹಾರ್ಟ್ಫೋರ್ಟ್ ನಲ್ಲಿ ಮಾಡಿದರು.

1944: ಅಲಾಸ್ಕ ವಿಮಾನ ಸಂಸ್ಥೆಯು ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು.

1946: “ದಿ ಬಾಸ್ಕೆಟ್ ಬಾಲ್ ಅಸ್ಸೋಸಿಯೇಷನ್ ಆಫ್ ಅಮೇರಿಕ” ನ್ಯೂಯಾರ್ಕಿನಲ್ಲಿ ರೂಪುಗೊಂಡಿತು.

1962: ಭಾರತದ ಮೂರನೆ ಸಾಮಾನ್ಯ ಚುನಾವಣೆ ಪ್ರಕ್ರಿಯೆ ಕೊನೆಗೊಂಡಿತು.

1981:  ಬಿಹಾರದಲ್ಲಿ ರೈಲೊಂದು ಸಮಷ್ಟಿಪುರ ನದಿಯಲ್ಲಿ ಬಿದ್ದು ಸುಮಾರು 1000ಕ್ಕೂ ಹೆಚ್ಚು ಜನ ನಿಧನರಾದರು.

1990: ಭಾರತ ಸರ್ಕಾರವು ಪಾಸ್ಪೋರ್ಟುಗಳ ಸಿಂಧುತ್ವವನ್ನು 10 ವರ್ಷಗಳಿಗೆ ವಿಸ್ತರಿಸಲು ತೀರ್ಮಾನಿಸಿತು.

1993: ಮಂಗೋಲಿಯಾ ತನ್ನ ಮೊದಲ ನೇರ ರಾಷ್ಟ್ರಪತಿ ಚುನಾವಣೆ ನಡೆಸಿತು.

1996: ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಭಾರತದೊಂದಿಗೆ ವ್ಯಾಪಾರ ಆರಂಭಿಸಲು ಹಸಿರು ನಿಷಾನೆ ನೀಡಿದರು.

1997: ಅಮೇರಿಕಾದ ಕಾಂಗ್ರೆಸ್ ಸರ್ಕಾರವು ಮದರ್ ತೆರೆಸಾ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿತು.

1997: ನೂತನ ಆರ್ಥಿಕ ಗುಂಪು BIST-EC (ಬಾಂಗ್ಲಾದೇಶ-ಭಾರತ-ಶ್ರೀಲಂಕ-ಥೈಲಾಂಡ್) ಆರ್ಥಿಕ ಸಹಕಾರ ವೇದಿಕೆ ಸ್ಥಾಪಿತವಾಯಿತು.

1991: ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರು ಟೆನ್ನಿಸ್ ಗ್ರಾಂಡ್ ಸ್ಲಾಂ ಡಬಲ್ಸ್ ಪಂದ್ಯಾವಳಿಯಲ್ಲಿ ಮೊದಲ ಗೆಲುವು ಪಡೆದರು.

2004: “ತಮಿಳು” ಭಾಷೆಯನ್ನು “ಶಾಸ್ತ್ರೀಯ ಭಾಷೆ” ಎಂದು ಭಾರತದ ರಾಷ್ರಪತಿಯಾಗಿದ್ದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಮಾನ್ಯ ಮಾಡಿ ಘೋಷಿಸಿದರು.

ಪ್ರಮುಖ ಜನನ/ಮರಣ:

1596: ಸಿಖ್ಖರ ಗುರುಗಳಾದ ಗುರು ಹರ್ ಗೋವಿಂದ್ ಸಿಂಗ್ ಅವರು  ಜನಿಸಿದರು.

1867: ಸ್ವಾತಂತ್ರ ಹೋರಾಟಗಾರರಾದ ಬಾಬಾ ಕರಕ್ ಸಿಂಗ್ ಸಾಯಿಲ್ ಕೋಟಿನಲ್ಲಿ ಜನಿಸಿದರು.

1929: ಪ್ರಖ್ಯಾತ ನಟರಾದ ಸುನಿಲ್ ದತ್ ಜನಿಸಿದರು.

1970: ಭಾರತೀಯ ಕ್ರಿಕೆಟ್ ಆಟಗಾರರಾದ ಸುನಿಲ್ ಜೋಶಿ ಜನಿಸಿದರು.

1984: ಉಗ್ರಗಾಮಿ ಸಿಖ್ ಧಾರ್ಮಿಕ ಬೋದಕರಾಗಿದ್ದ ಜರ್ನಾಯಿಲ್ ಸಿಂಗ್ ನಿಧನರಾದರು.