Categories
e-ದಿನ

ಜೂನ್-7

ಪ್ರಮುಖ ಘಟನೆಗಳು:

1860: ಕಾರ್ಮಿಕರು ಸ್ಯಾನ್ ಫ್ರಾನ್ಸಿಸಿನ ಮಾರ್ಕೆಟ್ ಸ್ಟ್ರೀಟ್ ರೈಲ್ ರೋಡಿಗೆ ಹಳಿಗಳನ್ನು ಹಾಕಲು ಆರಂಭಿಸಿದರು.

1875: ಕ್ಯಾಲಿಫೋರ್ನಿಯ ರೈಫಲ್ ಹಾಗೂ ಪಿಸ್ತೋಲ್ ಅಸೋಸಿಯೇಷನ್ ಸ್ಥಾಪಿಸಲಾಯಿತು.

1887: ಮೋನೊಟೈಪ್ ಮಾದರಿ ಹೊದಿಸುವಿಕೆಯ ಯಂತ್ರದ ಪೇಟೆಂಟನ್ನು ಟಾಲ್ಬರ್ಟ್ ಲಾನ್ಸ್ಟನ್ ಪಡೆದರು.

1893: ಮಹಾತ್ಮ ಗಾಂಧಿಜಿಯವರು ಭಾರತದಲ್ಲಿ ಮೊದಲ ಬಾರಿಗೆ ನಾಗರಿಕ ಅಸಹಕಾರ ಚಳುವಳಿ ನಡೆಸಿದರು.

1929: ವ್ಯಾಟಿಕನ್ ನಗರವು ಸಾರ್ವಭೌಮ ರಾಷ್ಟ್ರವಾಯಿತು.

1929: ಮಾರ್ಗರೆಟ್ ಬಾನ್ ಫೀಲ್ಡ್ ಬ್ರಿಟನ್ ದೇಶದ ಮೊದಲ ಮಹಿಳಾ ಮಂತ್ರಿಯಾದರು (ಕಾರ್ಮಿಕ ಇಲಾಖೆ).

1938: ಮೊದಲ ಹಾರುವ ದೋಣಿ ಬೋಇಂಗ್ 314 ಅನ್ನು ಎಡ್ಡಿ ಆಲೆನ್ ಇಂದ ಹಾರಿಸಲಾಯಿತು.

1941: ರಸಾಯನಶಾಸ್ತ್ರಜ್ಞರಾದ ಆರ್ಚರ್ ಜಾನ್ ಪೋರ್ಟರ್ ಮಾರ್ಟಿನ ಹಾಗೂ ರಿಚರ್ಡ್ ಎಲ್ ಎಂ ಸಿನ್ಜ್ ವಿಭಜನಾ ವರ್ಣರೇಖನದ (ಮಿಶ್ರಣಗಳ ಪ್ರತ್ಯೇಕಿಸುವಿಕೆ) ಮೊದಲ ಪ್ರದರ್ಶನವನ್ನು ನೀಡಿದರು.

1954: ಮೊದಲ ಸೂಕ್ಷ್ಮ ಜೀವ ವಿಜ್ಞಾನದ ಪ್ರಯೋಗಾಲಯವನ್ನು ಸಮರ್ಪಿಸಲಾಯಿತು.

1955: ಭಾರತದ ಪ್ರಧಾನ ಮಂತ್ರಿ ಜವಹರ ಲಾಲ್ ನೆಹರು ಅವರು ರಶ್ಯಾ ದೇಶಕ್ಕೆ ಪ್ರವಾಸ ಮಾಡಿದರು.

1955: ಐನ್ಸೆನ್ ಹೊವರ್ ದೂರದರ್ಶನದಲ್ಲಿ (ಕಲರ್ ಟಿವಿ) ಕಾಣಿಸಿಕೊಂಡ ಮೊದಲ ರಾಷ್ಟ್ರಾಧ್ಯಕ್ಷ.

1965: ಸೋನಿ ಸಂಸ್ಥೆಯು ಮೊದಲ ದೃಶ್ಯಚಿತ್ರವನ್ನು ದಾಖಲಿಸುವ ಮತ್ತು ತೋರಿಸುವ ಉಪಕರಣ (ವೀಡಿಯೋ ಟೇಪ್ ರೆಕಾರ್ಡರ್) ಅನ್ನು ಪರಿಚಯಿಸಿತು.

1965: ಅಮೇರಿಕಾದ ಸರ್ವೋಚ್ಛ ನ್ಯಾಯಾಲಯವು ವೈವಾಹಿಕ ದಂಪತಿಗಳ ಗರ್ಭನಿರೋಧಕಗಳ ಬಳಕೆಯನ್ನು ಕಾನೂನು ಬದ್ಧ ಎಂದು ನಿರ್ಧರಿಸಿತು.

1975: ಸೋನಿ ಸಂಸ್ಥೆಯು ಸಾರ್ವಜನಿಕರಿಗೆ ಮಾರಾಟ ಮಾಡಲು ಬೆಟಾಮ್ಯಾಕ್ಸ್ ವೀಡಿಯೋ ಕ್ಯಾಸೆಟ್ ರೆಕಾರ್ಡರ್ ಅನ್ನು ಪರಿಚಯಿಸಿತು.

1975: ಮೊದಲ ವಿಶ್ವ ಕಪ್ ಪಂದ್ಯಾವಳಿ ಭಾರತ ಮತ್ತು ಇಂಗ್ಲಾಂಡಿನ ನಡುವೆ ಲಾರ್ಡ್ಸ್ ಸ್ಟೇಡಿಯಂನಲ್ಲಿ ಆಡಲಾಯಿತು.

1979: ಭಾಸ್ಕರ-1 ಉಪಗ್ರಹವನ್ನು ಉಡಾಯಿಸಲಾಯಿತು. ಈ ಉಪಗ್ರಹದಲ್ಲಿ ಟಿವಿ ಮತ್ತು ಮೈಕ್ರೋವೇವ್ ಕ್ಯಾಮೆರಾಗಳು ಇದ್ದವು.

1989: ಶೀತಲ್ ಪಾಂಡ್ಯ 5 ವರ್ಷದ ವಯಸ್ಸಿನಲ್ಲೆ ವಿಶ್ವದಾಖಲೆ ಮಾಡಿದರು.

1989: ಒಂದು ಗಳಿಗೆ ಮುಂಜಾನೆ ಸಮಯವು 01:23:45 (1 ಗಂಟೆ 23 ನಿಮಿಷ 45 ಸೆಕೆಂಡಿಗೆ), 6-7-89 (ದಿನಾಂಕ) ಆಗಿತ್ತು.

1990: ಮೈಕೆಲ್ ಜಾಕ್ಸನ್ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದರು.

1996: ಐ.ಏ.ಎಫ್ ನ ಸಂಜಯ್ ಥಾಪರ್ ಪ್ಯಾರಚೂಟಿನಿಂದ ಹಾರಿ ಭಾರತದ ಧ್ವಜವನ್ನು ಉತ್ತರ ಧ್ರುವದಲ್ಲಿ ಹಾರಿಸಿದ ಮೊದಲಿಗ.

1997: ಮಹೇಶ್ ಭೂಪತಿ ಗ್ರಾಂಡ್ ಸ್ಲಾಂ ಟೈಟಲ್ ಪಡೆದ ಮೊದಲ ಭಾರತೀಯ.

ಪ್ರಮುಖ ಜನನ/ಮರಣ:

1606: ಸಿಖ್ಕರ 5ನೇ ಗುರು ಆಗಿದ್ದ ಗುರು ಅರ್ಜುನ್ ದೇವ್ ನಿಧನರಾದರು.

1631: ಮಹಾರಾಜ ಶಹಜಹಾನ್ ಅವರ ಪತ್ನಿ ಮುಮ್ತಾಜ್ ಬೇಗಂ ನಿಧನರಾದರು.

1965: ಮಹಾನ್ ಕ್ರಾಂತಿಕಾರಿ ಆಶುತೋಶ್ ಕಲಿ ನಿಧನರಾದರು.

1974: ಟೆನ್ನಿಸ್ ತಾರೆ ಆದ ಮಹೇಶ್ ಭೂಪತಿ ಜನಿಸಿದರು.