ಪ್ರಮುಖ ಘಟನೆಗಳು:

 • 1525: ಹರ್ಟೋಜೆನ್ ಬಾಸ್ಚ್ ನಲ್ಲಿ ತೆರಿಗೆ ದಂಗೆ ಆರಂಭವಾಯಿತು.

 • 1650: ಹಾರ್ವರ್ಡಿನ ಎರಡು ಆಡಳಿತಾತ್ಮಕ ಮಂಡಳಿಗಳಲ್ಲಿ ಅತಿ ಶಕ್ತಿಯುಳ್ಳ ಹಾರ್ವರ್ಡ್ ಕಾರ್ಪೊರೇಷನ್ ಸ್ಥಾಪಿತವಾಯಿತು. ಅಮೇರಿಕಾದ ಮೊದಲ ಕಾನೂನಾತ್ಮಕ ನಿಗಮವಾಯಿತು.

 • 1790: ಸಂವಿಧಾನದ ಅಡಿಯಲ್ಲಿ ಹಕ್ಕುಸ್ವಾಮ್ಯ ಪಡೆದ ಮೊದಲ ಪುಸ್ತಕ “ಫಿಲಡೆಲ್ಫಿಯಾ ಕಾಗುಣಿತ ಪುಸ್ತಕ”.

 • 1822: ಚಾರ್ಲ್ಸ್ ಗ್ರಹಂ ನಕಲಿ ಹಲ್ಲುಗಳ ಪೇಟೆಂಟ್ ಪಡೆದರು.

 • 1869: ಚಾರ್ಲ್ಸ್ ಎಲ್ಮರ್ ಹೈರ್ಸ್ ತನ್ನ ಮೊದಲ ರೂಟ್ ಬೀಯರನ್ನು ಮಾರಲು ಆರಂಭಿಸಿದರು.

 • 1873: ಆಲೆಕ್ಸಾಂಡ್ರ ಅರಮನೆ ತೆರೆದ 16 ದಿನಗಳಿಗೆ ಬೆಂಕಿ ಅನಾಹುತದಿಂದ ಸುಡಲ್ಪಟ್ಟಿತ್ತು.

 • 1902: ಸ್ವಯಂಚಾಲಿತ ಉಪಹಾರ ಗೃಹ ಫಿಲಡೆಲ್ಫಿಯಾದಲ್ಲಿ ತೆರೆಯಲಾಯಿತು.

 • 1919: ಫ್ರಾನ್ಸ್ ನಲ್ಲಿ ಜೆನೆರಲ್ ಸ್ಟೀಲ್ ಮುಷ್ಕರ ನಡೆಯಿತು.

 • 1922: ಯೇಲ್ ವಿಶ್ವವಿದ್ಯಾಲದಲ್ಲಿ ಹಾರ್ಕ್ನೆಸ್ ಸ್ಮಾರಕ ಚೈಮಿನ ರಿಂಗಣ ಮೊದಲ ಬಾರಿ ಕೇಳಿತು.

 • 1923: ಬ್ರಿಂಕ್ಸ್ ಶಸ್ತ್ರ ಸಜ್ಜಿತ ಭದ್ರತಾ ವಾಹನಗಳನ್ನು ಅನಾವರಗೊಳಿಸಲಾಯಿತು.

 • 1931: ಮೊದಲ ರಾಕೆಟ್-ಚಾಲಿತ ವಿಮಾನದ ವಿನ್ಯಾಸದ ಪೇಟೆಂಟ್ ರಾಬರ್ಟ್ ಗಾಡ್ದರ್ಡ್ ಪಡೆದರು.

 • 1931: ಡೊನಾಲ್ಡ್ ಡಕ್ ಕಾರ್ಟೂನಿನ ಮೊದಲ ಪ್ರಸಾರ ಆಗಿತು.

 • 1941: ಫೋರ್ಟ್ ಸ್ಮೆಡೆರೊವೊದಲ್ಲಿ ಮದ್ದುಗುಂಡಿನ ಘಟಕ ಸ್ಫಟಿಸಿ 1500 ಜನ ಸಾವನ್ನಪಿದರು.

 • 1943: ಅಮೇರಿಕಾದ ಆದಾಯ ತೆರಿಗೆ ಕಡಿತಗೊಳಿಸುವುದರ ಬಗ್ಗೆ ನಿರ್ಧರಿಸಲಾಯಿತು.

 • 1949: ಕನ್ಸಾಸಿನ ಶ್ರೀಮತಿ ಜಾರ್ಜಿಯ ನೀಸ್ ಕ್ಲಾರ್ಕ್ ಅಮೇರಿಕಾದ ಮೊದಲ ಮಹಿಳಾ ಕಝಾಂಶಿಯಾಗಿದ್ದರು.

 • 1958: ಯುನೈಟೆಡ್ ಕಿಂಗ್ಡಮಿನ “ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣ”ಕ್ಕೆ ಮಹಾರಾಣಿ ಎಲಿಜಿಬತ್ II ಅಧಿಕೃತವಾಗಿ ಚಾಲನೆ ನೀಡಿದರು,

 • 1970: ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಬಾಬ್ ಡ್ಯಾಲನ್ ಅವರಿಗೆ ಗೌರವಾನ್ವಿತ ಡಾಕ್ಟರೇಟ್ ಆಫ್ ಮೂಸಿಕ್ ನೀಡಿ ಗೌರವಿಸಿತು.

 • 1986: ಏಡ್ಸ್ ರೋಗದಿಂದ ಉಂಟಾದ ಮೊದಲ ಸಾವಿನ ಸುದ್ದಿ ವರದಿಯಾಯಿತು.

 • 1997: ಸಿಕ್ಕಿಮ್ಮಿನ ಗ್ಯಾಂಗ್ಟಾಕಿನಲ್ಲಿ ಭೂಕುಸಿತ ಉಂಟಾಗಿ ಸುಮಾರು 50 ಜನ ನಿಧನರಾಗಿ 50000 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದರು.

 • 1998: ಗುಜರಾತಿನಲ್ಲಿ ಚಂಡಮಾರುತದಿಂದ ಆರು ದಿನದಲ್ಲಿ 1000 ಜನ ಸಾವನ್ನಪ್ಪಿದರು.

 • 1998: ಡಾಲರ್ ವಿರುದ್ದ ಭಾರತೀಯ ರುಪಾಯಿ ಮೌಲ್ಯ ರೂ. 42.23/25 ಕ್ಕೆ ಕುಸಿಯಿತು.

 • 2014: ಲ್ಯಾವರ್ನೆ ಕಾಕ್ಸ್ “ಟೈಮ್” ಮ್ಯಾಗಜೀನ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಟ್ರಾನ್ಸ್ ಜೆಂಡರ್.

ಪ್ರಮುಖ ಜನನ/ಮರಣ:

 • 1900: ಸ್ವಾತಂತ್ರ ಹೋರಾಟಗಾರ ಬಿರ್ಸ ಮುಂಡ ರಾಂಚಿ ಜೈಲಿನಲ್ಲಿ ನಿಧನರಾದರು.

 • 1909: ಖ್ಯಾತ ಪತ್ತೇದಾರಿ ಹಾಗೂ ಬರಹಗಾರ ಬಾಬುರಾವ್ ಆರ್ನಾಲ್ಕರ್ ಜನಿಸಿದರು.

 • 1949: ಭಾರತದ ಮೊದಲ ಮಹಿಳಾ ಪೋಲಿಸ್ ಆಫಿಸರ್ ಕಿರಣ್ ಬೇಡಿ ಪಂಜಾಬಿನ ಅಮೃತ್ಸರ್ ನಲ್ಲಿ ಜನಿಸಿದರು.

 • 1964: ಭಾರತದ ಎರಡನೇ ಪ್ರಧಾನಮಂತ್ರಿ ಲಾಲಬಹಾದುರ್ ಶಾಸ್ತ್ರಿ ನಿಧನರಾದರು.

 • 2011: ಭಾರತದ ಖ್ಯಾತ ಚಿತ್ರಕಲಾವಿದರಾದ ಎಂ.ಎಫ್.ಹುಸ್ಸೇನ್ ನಿಧನರಾದರು.