ಜೇಡಗಳನ್ನು ಕೀಟಗಳೆಂದು  ವರ್ಗೀಕರಿಸಿದ್ದಾರೆ. ಹೀಗಾಗಿ ಪ್ರಾಣಿ ಲೋಕದಲ್ಲಿ ಇವುಗಳಿಗೆ ೮ ಕಾಲುಗಳು, ಜೇಡಗಳಲ್ಲಿ ಸರಿಸುಮಾರು ೩೫ ಸಹಸ್ರ  ಪ್ರಭೇದಗಳಿವೆ. ಮಣ್ಣಿನ ಮೇಲೆ,  ಗವಿಗಳಲಿ,  ಕಲ್ಲು ನದಿಗಳಲಿ, ಹುಲ್ಲಿನ ಮೇ, ಮರದ ಟೋಂಗೆಗಳ ಸುತ್ತ, ಕೊನೆಗೆ ನೀರಿನ ಮೇಲೂ  ವಾಸಿಸಬಲ್ಲ ಸಾಮರ್ಥ್ಯ ಈ ಜೇಡಗಳದ್ದು  ಎಲ್ಲಾ ಜೇಡಗಳು ಬಲೆ  ನೇಯುದಿಲ್ಲ.

ಆಯಾ ಜಾಗಕ್ಕೆ ತಕ್ಕಂತೆ ನೆಟ್‌ವರ್ಕ್ ದೊಡ್ಡಮಿಕ ಹಿಡಿಯಲು ದೊಡ್ಡ ಗಾತ್ರದ ಬಲೆ, ಸೂಕ್ಷ್ಮ ಬಲೆ, ಅಂತೂ ಎಲ್ಲರಿಗಾಗಿ ಎಲ್ಲ್ಲಾರೀತಿಯ ನೆಟ್ ವರ್ಕ್, ಅವುಗಳದ್ದು ಕಲಾತ್ಮಕವಾಗಿ ರೂಪುಗೊಳ್ಳುತ್ತದೆ. ಪ್ರಚಾರದ ಬ್ಯಾನರ್‌ಗಳಂತೆ. ಜೇಡಗಳಿಗೆ ಎರಡು ಬಗೆಯ  ನೆಂಟರಿದ್ದಾರೆ. ಅತ್ತ ಅಲರ್ಜಿ ತರುವ ಸೂಕ್ಷ್ಮ ಜೀವಿ ಮೈಟ್‌ಗಳೊಂದಿಗೆ ಹತ್ತಿರ ನಂಟಸ್ತಿಕೆ. ಇತ್ತಬಾಲದಿಂದ ಹಿಡಿದು  ವಿಷವುಣಿಸುವ ಚೇಳಿನ ಸಂಬಂಧಿ. ಕೆಲವೊಂದು ಪ್ರಭೇದಗಳು ಸ್ರವಿಸುವ  ವಿಷ (ಈ ಮೇಲಿನ ಚಿತ್ರದ ಮಡೆಚ್ಚಾಲಿ) ಮನುಷ್ಯನನ್ನೆ ಕೊಲ್ಲ ಬಲ್ಲವು.

ತಮ್ಮ ಗಾತ್ರಕ್ಕೆ ತಕ್ಕಂತೆ ಪುಟ್ಟ ಕ್ರಿಮಿ ಕೀಟ, ಜೇಡಗಳಿಂದ ಹಿಡಿದು ಕಪ್ಪೆ, ಪಕ್ಷಿ ಹಲ್ಲಿಗಳನ್ನು ಭಕ್ಷಿಸುವ ಸಾಮರ್ಥ್ಯ ಜೀಡಗಳದ್ದು. ಇಲ್ಲೊಂದು ಸೂಜಿಗದ ಸಂಗತಿಯಿದೆ.  ಜೇಡಗಳ ದೇಹದಲ್ಲಿ ಅಗಿದು ತಿನ್ನುವ ವ್ಯವಸ್ಥೆಯೇ ಇಲ್ಲ ಮಿಕವನ್ನು ಕಚ್ಚಿ ವಿಷ ಉಣಿಸಿ ಸಾಯಿಸುವ ಕಲೆ ಇವುಗಳಿಗೆ ಸಿದ್ದಿಸಿದೆ.  ದೇಹದಿಂದ ಜೀವ ದ್ರವ್ಯವನ್ನು ಇಡಿಯಾಗಿ ಸೆಳೆದು ಕೊಳ್ಳುವ ಸಾಮರ್ಥ್ಯ ಇದೆ. ಆಗ ಮನುಷ್ಯನ ದೇಹ  ಕೈ ಕಾಲುಗಳು ಮರಟಿ ಹೋಗುತ್ತದೆ ಎಂದು ಹಿರಿಯರ ಅಂಬೋಣ. ಇಂತಹ ಕೀಟಗಳು ಚುಚ್ಚುವುದು ಬಹಳ ವಿರಳ. ಶನಿ ಶನಿ ಎಂದು ವಕ್ಕರಿಸಿ  ಬಂದಾಗ ಮರದ ಸಂದು ಗೊಂದುಗಳಲ್ಲಿ ಇದ್ದದ್ದು  ನಮಗೆ ಕಾಣದೇ ಅದರ ಜಾಡಿಗೆ ಕೈ  ಹಾಕಿದಾಗ ಅಚಾನಕ್ ಆಗಲು ಸಾಧ್ಯ  ಪ್ರಕೃತಿಯ ಸೃಷ್ಟಿಯಲ್ಲಿ  ನೋಡಲು ವರ್ಣ ವೈವಿಧ್ಯ  ಹಾಗೆ ಅವುಗಳ  ಕಾಲುಗಳಲ್ಲಿರುವ ಸೂಕ್ಷ್ಮ ವರ್ಣ ತಂತುಗಳನ್ನು ನೋಡಿದಾಗಲೇ ಮೈ ಜುಂ ಎನ್ನುವಂತಿದೆ. ಇದನ್ನು ಹುಲಿ ಸಾಲಿಂಗ ಎಂದು ಕರೆಯುತ್ತಾರೆ.  ಇದು ಕಂಡು ಬಂದಿದ್ದು ಬರಹಗಾರ ಕುಮಾರ್ ಪೆರ್ನಾಜೆ ಅವರ  ತೋಟದಲ್ಲಿ ಕಾಡು ಸ್ಫೂರ್ತಿಯ ಸೆಲೆಗಳು.