ದಿವಾರಾತ್ರಿಗಳ ನವಾನುರಾಗದಾ
ಸಂಧ್ಯಾಭೋಗಿಯ ಭೋಗದಲಿ,
ನೋಡದೊ, ಮೋಡದ ತೆಳ್‌ದೆರೆ ಸೆರಗಿಂ
ನಾಚುತೆ ಮುಖಮುಚ್ಚುವ ಬಾನ್‌ಕನ್ನೆಯ
ಕೆನ್ನೆಯೊಳೆಸೆವನ್‌ ನಖಕ್ಷತೇಂದು
ಸಜ್ಜೆಯ ಲಜ್ಜಾಯೋಗದಲಿ!