ನನ್ನ ಮನೆಯನು ಸೇರಿ
ಇದೆ ಮೊದಲನೆಯ ಸಾರಿ
ಹೋಗುತಿಹೆ ತವರೂರಿ
ಗೆನ್ನ ರಮಣಿ:
ಗುಣ್ಪಿರಲಿ ನಡೆಯಲಿ,
ನುಣ್ಪಿರಲಿ ನುಡಿಯಲ್ಲಿ,
ಸೊಂಪಿರಲಿ ಶೀಲದಲಿ,
ಚೆಲ್ವಿನ ಕಣಿ!

ನಿನ್ನ ನಡೆಯನು ನೋಡಿ
ನನ್ನ ತೂಕವ ಮಾಡಿ
ನುಡಿವರೆಲ್ಲರು ಕೂಡಿ,
ನನ್ನ ಚೆನ್ನೆ;
ಕವಿಹೃದಯ ಮಂದಿರದೆ
ದೇವಿ ನೀನೆಂದಿರದೆ
ಮಂದಿ ಮಣಿಯುವ ತೆರದೆ
ಬಾಳು, ರನ್ನೆ!