ಹೂವಿನೆಸಳಿನ ಮೇಲೆ ಜಿಂಜೇನ ಹನಿಯಂತೆ
ಸಜ್ಜೆಯಲಿ ಪವಡಿಸಹಳೆನ್ನಿನಿಯ ಕಾಂತೆ;
ಕವಿಯ ಕಣ್ಣಿನ ಹಕ್ಕಿ ನಾಲಗೆಯ ನಡು ಚಾಚಿ
ನೆಕ್ಕಿ ನೊಣೆಯುತಿದೆ ನಿರ್ವಾಣಗೈವಂತೆ!