ಅಲ್ಲಿ ಶಿವಮೊಗ್ಗೆಯಲಿ
ಮನೆ ಮುಂದೆ ರಸ್ತೆಯಲಿ
ನೀನು ದೂಳಾಡುತಿರೆ
ಬಹುವೇಗಿಯಾಗಿ ಬರೆ
ಮಾರಿ ಬಸ್ಸು,
ಕಂಡು ಮೇಲೇಳುತಿರೆ…
ಶಿವ ಶಿವಾ!…
ಗುರು ರಕ್ಷೆ! ಗುರು ರಕ್ಷೆ!
ಸಾಕು ನನಗೀ ಶಿಕ್ಷೆ!
ಬೆಂಕಿಯಿಕ್ಕಲಿ! ಹಾಳು
ಕವಿ ಕಲ್ಪನೆಯ ಬಾಳು
ಗರಗಸದ ಗೋಳು:
ಸುಖದುಃಖದೆಳತಕ್ಕೆ
ಸೀಳು ಸೀಳು!