“ಟುವ್ವಿ ಟುವ್ವಿ ಟುವ್ವಿ ಟುವಿ
ಟುವ್ವಿ ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ ಟುವ್ವಿ…”
ಸುಮ್ಮನೆಯೆ ಕೂಗುತಿದೆ!
ಕೂಗುತಿಹೆದೇತಕಾ
ಟುವ್ವಿಹಕ್ಕಿ?
ತೇಜಸ್ವಿಯಗಲಿಕೆಯ
ಉರಿಗೆ ಸಿಕ್ಕಿ?
ಅಂತಲ್ಲದಿನ್ನೇನು?
ಪಂತಕಟ್ಟುವೆ ನಾನು!
ಎಂದಿನಂದದಿ ನೀನು
ಕಣ್ಗೆ ಕಾಣದೆ ತಾನು
ವಿರಹ ದುಃಖಿ!

“ತೇಜಸ್ವಿ ತೇಜಸ್ವಿ
ತೇಜಸ್ವಿ ತೇಜಸ್ವಿ
ತೇಜಸ್ವಿ ತೇಜಸ್ವಿ…”
ಎಂದು ನಿನ್ನನೆ ಕರೆದು
ಮೊಟ್ಟೆಗೂಡನು ತೊರೆದು
ಹಾತೊರೆದು ಕೊರಗುತಿದೆ;
ನೆನೆ ನೆನೆದು ಮರುಗುತಿದೆ
ಪುಟ್ಟಹಕ್ಕಿ!
“ನನ ಗೂಡಿಹ ಗಿಡದ
ಧೂಳಿಡಿದ ಬುಡದ

ಮಣ್ಣಾಟವನು ಬಿಡದ
ಅವ ಎತ್ತ ನಡೆದ?”
ಎಂದು ಕರೆದೊರಲುತಿದೆ
ನಿನ್ನ ಟುವ್ವಿಯ ಹಕ್ಕಿ
ವಿರಹದುಃಖಿ!