ನೀನಂದು ಹೋದಂದು
ತವರುಮನೆಗೆ
ಒಂದು ನೋವನು ಸಹಿಸಿ
ಸಾಕಾಯ್ತು ನನಗೆ. –
ಕಂದನೊಡಗೂಡಿ
ಮೂರು ವರುಷದ ಮೇಲೆ,
ಕಂದನೊಡನಾಡಿ
ಬಾಳು ಸಾಗಿದಮೇಲೆ,
ಇಂದು ತೆರಳಿದೆ ಕೊನೆಗೆ
ಮತ್ತೆ ತಾಯ್ಮನೆಗೆ
ನಿನ್ನೊಡನೆ ಕಂದನನು
ನೆನೆಯಲಾನಂದನನು,
ಆ ಒಂದು ನೋವಿಂದು
ಎರಡಾಗಿ ದಹಿಸೆ
ಸಾಕು ಸಾಕಾಗುತಿದೆ
ನನಗದನು ಸಹಿಸೆ!