ಬಾಳನು ತುಂಬಿವೆ ಹೆಜ್ಜೆಯ ಸಾಕ್ಷಿ;
ಸಾವಿರ ಸಾವಿರ ಸಾವಿರ ಸಾಕ್ಷಿ.
ಸತ್ತಿಲ್ಲಿನ್ನೂ ಸಂಶಯ ಪಕ್ಷಿ;
ಅರಳಿಲ್ಲಿನ್ನೂ ಶ್ರದ್ಧೆಯ ಅಕ್ಷಿ:
ಇದು ನಾಸಿಕಗೀಸ್ತಿಕತನವಲ್ಲ;
ಬರೀ ಕೃತಘ್ನತೆ, ಸಭ್ಯತೆಯಿಲ್ಲ!