ಓ ನನ್ನ ಕಂದಯ್ಯ,
ನೀ ಕೂಗಾಡಿದರೆ
ಸದ್ದು ಮಾಡದಿರೆಂದು
(ಮುದ್ದಾಗಿಯಾದರೂ)
ಗದರಿಸುತ್ತಿದ್ದೆ.
ನೀನಮ್ಮನೊಡಗೂಡಿ
ಹೋದೆ ಅಜ್ಜಿಯ ಮನೆಗೆ;
ಈಗ ಸದ್ದಿನಿತಿಲ್ಲ!
ಹಾಳು ನಿಶ್ಯಬ್ಧತೆಯೆ,
ಗಾಳೆನ್ನುವಾ ವೆತೆಯೆ,
ಎದೆಯ ಮೇಲೇರಿ
ಮಾಡುತಿಹುದಯ್ಯೊ ಹಾ
ದೆವ್ವದ ಸವಾರ್ತ್ಯಿ