ನೀನಿಲ್ಲ….
…. ಮನೆಯಲ್ಲಿ
ಎಲ್ಲಿ ಕಣ್ಣಿಡಲಲ್ಲಿ
ಕಸವಿಲ್ಲ….
…..ರಸವಿಲ್ಲ! –
ಬಗೆಗೆ ಸುತವಾತ್ಸಲ್ಯ
ಒಗೆಯಲೀ ನೈರ್ಮಲ್ಯ
ಬರಿ ಅಸಹ್ಯ:
ನೀ ಚೆಲ್ಲುವಾ ಧೂಳಿ
ಆಗಿತ್ತು ರಂಗೋಲಿ;
ನೀ ಹರಡುತಿದ್ದ ಕಸ
ಆಗಿತ್ತು ಜೀವರಸ;
ನೀನಿಲ್ಲದೀ ಮನೆಯ
ನೈರ್ಮಲ್ಯವೇ, ತನಯ,
ನನಗಾಯ್ತಸಹ್ಯ