(ಕ್ರಿ. ಶ. ೧೭೩೬-೧೮೧೯) (ಆಧುನಿಕ ಉಗಿಯಂತ್ರ)

ಸುಧಾರಿತ ಉಗಿಯಂತ್ರ, ಡಬಲ್ ಆಕ್ಟಿಂಗ್ ಎಂಜಿನುಗಳಂಥ ಯಂತ್ರಗಳನ್ನು ತಯಾರಿಸಿ ಔದ್ಯಮಿಕ ಕ್ರಾಂತಿಗೆ ಬಹುದೊಡ್ಡ ಕೊಡುಗೆ ನೀಡಿದ ಯಂತ್ರ ಶಿಲ್ಪಿ, ಜೇಮ್ಸ್ ವಾಟ್‌. ಜೇಮ್ಸ ವಾಟ್ ೧೭೩೬ರಲ್ಲಿ ಜನಿಸಿದರು. ಈತ ಗ್ಲಾಸ್ ಗೋ ವಿಶ್ವವಿದ್ಯಾಲಯಲದಲ್ಲಿ ಕೆಲಸ ಮಾಡುತ್ತಿದ್ದರು. ಭೌತಶಾಸ್ತ್ರದ ಉಪಕರಣಗಳನ್ನು ನೋಡಿಕೊಳ್ಳುವುದು ಈತನ ಮುಖ್ಯ ಕಾರ್ಯವಾಗಿತ್ತು. ಇದು ಆತನ ಸಂಶೋಧನಾ ಪ್ರವೃತ್ತಿಗೆ ತುಂಬ ಸಹಾಯಕವಾಯಿತು.

ಒಮ್ಮೆ ಜೇಮ್ಸ್ ವಾಟ್ ಆಗ ಬಳಕೆಯಲ್ಲಿದ್ದ ನ್ಯೂಕಾಮನ್ ನ ಉಗಿ ಎಂಜಿನ್ ವೊಂದನ್ನು ದುರಸ್ತಿ ಮಾಡುತ್ತಿದ್ದಾಗ ಅದರಲ್ಲಿನ ದೋಷಗಳನ್ನು ಕಂಡುಹಿಡಿದರು. ಅದರಲ್ಲಿನ ದೋಷಗಳು ಇಲ್ಲದಂಥ ಹೊಸ ಉಗಿ ಯಂತ್ರವೊಂದನ್ನು ತಯಾರು ಮಾಡಿದರು. ಒಡನೆಯೆ ಈತ ತಯಾರಿಸಿದ ಸುಧಾರಿತ ಉಗಿಯಂತ್ರಗಳು ನ್ಯೂಕಾಮನ್ ತಯಾರಿಸಿದ್ದವುಗಳಿಗಿಂತ ಹೆಚ್ಚು ಜನಪ್ರಿಯವಾದುವು. ಉಗಿಯಂತ್ರದ ಮೂಲ ಸಂಶೋಧಕ ಥಾಮಸ್ ನ್ಯೂಕಾಮನ್ ಆಗಿದ್ದರೂಜ ಜೇಮ್ಸ್ ವಾಟ್ ಆಧುನಿಕ ಉಗಿಯಂತ್ರದ ರಚಕನಾಗಿ ಹೆಚ್ಚು ಜನಪ್ರಿಯರಾದರು.

ಈತ ೧೭೬೫ರಲ್ಲಿ ಕಂಡೆನ್ಸರ್ ಅನ್ನು ಕಂಡು ಹಿಡಿದರು. ಅಲ್ಲದೆ “ಡಬಲ್-ಆಕ್ಟಿಂಗ್ ಎಂಜಿನ್” ಅನ್ನು ಕೂಡ ತಯಾರಿಸಿದರು. ಉದ್ಯಮ ಕ್ಷೇತ್ರದಲ್ಲಿ ತೊಡಗಿದ ಈತನಿಗೆ ಉದ್ಯಮದ ಎಲ್ಲ ಕ್ಷೇತ್ರಗಳಲ್ಲೂ ಸಫಲತೆ ದೊರಕಿತು.

ಜೇಮ್ಸ್ ವಾಟ್ ೧೮೧೯ರಲ್ಲಿ ನಿಧನ ಹೊಂದಿದರು.