Categories
ವಿಶ್ಲೇಷಣೆ ಮತ್ತು ಸಂಶೋಧನೆ ಸಮುದಾಯ ಸಾಹಿತ್ಯ ಸಾಹಿತ್ಯ

ಜೈನ ಟೀಕಾಸಾಹಿತ್ಯ

ಜೈನ ಸಾಹಿತ್ಯ – ಸಂಸ್ಕೃತಿಯು ಅಧ್ಯಯನ ದೃಷ್ಟಿಯಿಂದ ಮಹತ್ವವಾದದ್ದು ಮತ್ತು ವಿವಿಧ ಪ್ರಕಾರಗಳಲ್ಲಿ ದೊರೆಯುವಂತದ್ದು. ಆರಂಭಿಕ ಕನ್ನಡ ಜೈನ ಕವಿಗಳ ಕಾವ್ಯಗಳು, ಪ್ರಾಚೀನ ಧಾರ್ಮಿಕ ಜೈನ ಕ್ಷೇತ್ರಗಳು, ಬಸದಿಗಳು ಮುಂತಾದ ಬಹು ನೆಲೆಯಲ್ಲಿ ಜೈನ ಸಂಸ್ಕೃತಿಯನ್ನು ಗ್ರಹಿಸಬಹುದಾಗಿದೆ. ಅಂಥ ಗ್ರಹಿಕೆಯ ಮೊದಲ ಪ್ರಯತ್ನವೆಂಬಂತೆ ಅವರ ಶಾಸ್ತ್ರ ಸಾಹಿತ್ಯ ಪ್ರಕಾರವಾದ ಟೀಕೆಗಳನ್ನು ಈ ಕೃತಿ ಪರಿಚಯಿಸುತ್ತದೆ. ಜೈನ ಟೀಕಾ ಸಾಹಿತ್ಯದ ವಿಸ್ತೃತ್ ಅಧ್ಯಯನ ಇಲ್ಲಿ ಸಾಧ್ಯವಾಗಿಲ್ಲ. ಒಂದು ಅಂದಾಜಿನ ಪ್ರಕಾರ ಅವರ ಟೀಕಾ ಸಾಹಿತ್ಯ ವ್ಯಾಪ್ತಿಯ ಸ್ಥೂಲ ಪರಿಚಯ ಮಾಡಿಕೊಡಲಾಗಿದೆ. ವಿಸ್ತೃತ ಅಧ್ಯಯನಕ್ಕೆ ಟೀಕಾ ಸಾಹಿತ್ಯ ಕುರಿತಾದ ಹಸ್ತಪ್ರತಿಗಳು, ಪ್ರಕಟಿತ ಕೃತಿಗಳ ಸರ್ವೇಕ್ಷಣೆ, ಸಂಗ್ರಹವನ್ನು ಮಾಡುವ ಕೆಲಸ ಆಗಬೇಕಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಯರಾಜ್ ಬಲ್ದೋಟ ‘ಜೈನ ಅಧ್ಯಯನ ಪೀಠ’ದ ಸಂಚಾಲಕಬಾಗಿ ಕಾರ್ಯ ಮಾಡುವ ಅವಕಾಶ ದೊರೆಯಿತು. ಜೈನ ಧರ್ಮೀಯರ ಸಾಂಸ್ಕೃತಿಕ ಚರಿತ್ರೆಯ ಹಲವು ಆಯಾಮಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಪೀಠದ ಶೈಕ್ಷಣಿಕ ಯೋಜನೆಗಳನ್ನು ರೂಪಿಸಲು ಸಾಧ್ಯವಾಯಿತು. ಈ ಅವಕಾಶವನ್ನು ಮಾಡಿಕೊಟ್ಟ ಮಾನ್ಯ ಕುಲಪತಿಗಳಾದ ಡಾ. ಎ.ಮುರಿಗೆಪ್ಪ ಅವರಿಗೂ ಮತ್ತು ಮಾನ್ಯ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಈ ಕೃತಿ ಪ್ರಕಟವಾಗಲು ಅನುಮೋದಿಸಿದ ಪೀಠದ ಸಲಹಾ ಸಮಿತಿ ಸದಸ್ಯರೂ, ನಾಡಿನ ಹಿರಿಯ ವಿದ್ವಾಂಸರೂ ಆದ ಡಾ. ಹಂಪನಾಗರಾಜಯ್ಯ ಮತ್ತು ಪರಿಶೀಲನಾ ವರದಿ ನೀಡಿದ ಪೂಜ್ಯ ಗುರುಗಳಾದ ಡಾ. ಶಾಂತಿನಾಥ ದಿಬ್ಬದ ಅವರುಗಳ ಸೌಜನ್ಯವನ್ನು ಪ್ರೀತಿಯಿಂದ ಸ್ಮರಿಸುತ್ತೇನೆ. ಅಚ್ಚುಕಟ್ಟಾಗಿ ಪುಸ್ತಕವನ್ನು ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಮತ್ತು ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ.ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸ ಮಾಡಿದ ಶ್ರೀ. ಕೆ.ಕೆ.ಮಕಾಳಿ ಅವರಿಗೆ. ಅಕ್ಷರ ಸಂಯೋಜನೆ ಮಾಡಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್ ನ ಶ್ರೀಮತಿ ರಶ್ಮಿ ಕೃಪಾಶಂಕರ್ ಅವರಿಗೆ ಕೃತಜ್ಞತೆಗಳು.

ಡಾ. ಕೆ. ರವೀಂದ್ರನಾಥ
೨೧.೧೨.೨೦೧೦