ಆಘಾತಿಕರ್ಮ – – ಜೈನಸಿದ್ದಾಂತದ ಪ್ರಕಾರ ಕರ್ಮ್ಮಗಳು ಎಂಟು ವಿಧ. ಘಾತಿಕರ್ಮ್ಮಗಳು ನಾಲ್ಕು, ಅಘಾತಿಕರ್ಮಗಳು ನಾಲ್ಕು, ಅಘಾತಿಕರ್ಮಗಳಿವು : ೧. ಆರ್ಯಃಕರ್ಮ (ಜೀವಿಯ ಆಯುಸ್ಸನ್ನು ನಿರ್ಧರಿಸುವಂಥದು), ೨. ನಾಮಕರ್ಮ (ದೇಹ, ಎತ್ತರ, ಆಕಾರ, ಬಣ್ಣ ಮುಂತಾಗಿ ವ್ಯಕ್ತಿತ್ವವನ್ನು ಗೊತ್ತುಮಾಡುವಚಿಥದು), ೩. ಗೋತ್ರಕರ್ಮ (ಕಉಲ, ಜಾತಿ, ದೇಶಾದಿಗಳನ್ನು ನಿರ್ಣಯಿಸುವಂಥದು), ೪. ವೇದನೀಯ (ಜೀವದಲ್ಲಿ ಸುಖದುಃಖಗಳಿಗೆ ಕಾರಣವಾದುದು.)

ಅಣುವ್ರತ – ಅಹುಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, – ಈ ಐದು. ಇವನ್ನು ಪಂಚಾಣುವ್ರತವೆಂದೂ ಮಹಾವತ್ರವಾಂದೂ ಹೇಳುತ್ತಾರೆ.

ಅನಂತ ಚತುಷ್ಟಯ೧. ಅನಂತಜ್ಞಾನ, ೨. ಅನಂತ ದರ್ಶನ, ೩. ಅನಂತ ವೀರ್ಯ, ೪. ಅನಂತ ಸುಖ ಈ ನಾಲ್ಕು.

ಅನಾಯತನ ಸೇವೆ – ಕುದೇವ, ಕುಗುರು, ಕುಧರ್ಮ, ಕುದೇನಪೂಜಕ, ಕುಗುರುಪೂಜಕ, ಕುಧರ್ಮಪೂವಕ – ಇವರ ಸಹವಾಸ.

ಅಭಕ್ಷಗಳು – ತಿನ್ನಬಾರದು ; ಜೀನು, ಅತ್ತಿ, ಅರಳಿ, ಆಲ, ಹಲಸು, ಬಸರಿ ಮರ ಇವುಗಳ ಹಣ್ಣಗಳು. ಹೀಗೆ ಅಭಕ್ಷಗಳು ಆರು ಬಗೆ.

ಅವ ಜ್ಞಾನ – ಕಾಲ, ದೇಶ ಯಾವುದಿದ್ದರೂ ತಿಳಿಯಬಲ್ಲ ಜ್ಞಾನ.

ಅವಳೋಕಿನೀ ವಿದ್ಯೆ – ಪರೋಕ್ಷದಿಂದಲೇ ಸಂಗತಿಗಳನ್ನು ತಿಳಿವ ವಿದಯೆ.

ಅಷ್ಟಕರ್ಮ – – ಘಾತಿಕರ್ಮ ನಾಲ್ಕು, ಅಘಾತಿಕರ್ಮ ನಾಲ್ಕು – ಹೀಗೆ ಎಂಟು.

ಅಷ್ಟಮದ – ಕುಲ, ರೂಪ, ವಯಸ್ಸು, ತೋಳು, ತಪಸ್ಸು, ಕಲೆ, ದೈವಬಲ, ರಾಜ್ಯ, – ಈ ಎಂಟರಿಂದ ಉಂಟಾಗುವ ಸೊಕ್ಕು.

ಅಷ್ಟಮಲ – ಶಂಕೆ, ಆಕಾಂಕ್ಷೆ, ವಿಚಿಕಿತ್ಸೆ, ಅನ್ಯದೃಷ್ಟಿ, ಪ್ರಶಂಸ, ಸಂಸ್ತವ, ಸಮ್ಯಗ್ದೃಷ್ಟಿ, ಅತಿಚಾರ – ಈ ಎಂಟು. ಅಷ್ಠಾಂಗ ನಿಮಿತ್ತ – ಲಕ್ಷಣ, ಅಂಗ, ಸ್ವರ, ವ್ಯಂಜನ, ಬೌಮ, ಆಂತರಿಕ್ಷ, ಸ್ವಪ್ನ, ಛಿನ್ನ – ಈ ಎಂಟು ಅಂಗಗಳುಳ್ಳ ಶಕುನಶಾಸ್ತ್ರ.

ಅಷ್ಠಾಂಗ ಭೋಗ – ಅನ್ನ, ನೀರು, ತಾಂಬೂಲ, ಪುಷ್ಪ, ಚಂದನ, ವಸ್ತ್ರ, ಶಯ್ಯೆ, ಅಲಂಕಾರ – ಈ ಎಂಟು ಬಗೆಯ ಸುಖಗಳು.

ಅಷ್ಟಶೋಭೆ – ಕಲಶ, ಕನ್ನಡಿ, ಬಾವುಟ, ತೋರಣ, ಧೂಪ, ದೋಪ, ಭೇರಿ, ಬೀಸಣೆಗೆ – ಎಂಬೀ ಎಂಟು ಅಲಂಕಾರಗಳು.

ಅಚಾಮ್ಲವರ್ಧನ – ಒಂದು ಬಗೆಯ ವ್ರತ.

ಆಮೋಪ ಋದ್ಧಿ – ತಪಸ್ಸಿನಲ್ಲಿ ಸಿದ್ದಿ ಪಡೆದವರಿಗೆ ಉಂಟಾಗುವ ಮಹುಮೆಗಳಲ್ಲಿ ಎದು ಒಂದು. ಈ ಋದ್ದಿಯನ್ನು ಪಡೆದು ಮುನಿಯ ಪಾದಸ್ಪರ್ಶದಿಂದ ಪ್ರಚಂಡ ರೊಗಗಳು ವಾಸಿಯಾಗುವುವು.

ಆರ್ತಧ್ಯಾನ – ನಾಲ್ಕು ಬಗೆಯಲ್ಲಿ ಧ್ಯಾನಗಳಲ್ಲಿ ಒಂದು. ಇಷ್ಟಾಕಾಂಕ್ಷಿಯಾಗಿ ಕೊರಗುವುದು ಆರ್ತಧ್ಯಾನ.

ಆಸನ್ನಭವ್ಯ – ಬೇಗನೆ ಮೋಕ್ಷವನ್ನೈದಲಿರುವ ಜೀವ.

ಇಂಗಿಣೀ ಮರಣ – ಅನ್ನ, ಪಾನ, ಖಾದ್ಯ, ಲೇಹ್ಯ ಎಂಬ ನಾಲ್ಕು ವಿಧದ ಆಹಾವನ್ನು ಬಿಟ್ಟು, ಉಪಸರ್ಗಗಳನ್ನು ಸಹಿಸಿ, ಸಾಯುವುದು.

ಇಪ್ಪತ್ತೆರಡು ಪರೀಷಹಗಳು – ಹಸಿವು, ಬಾಚಿiiರಿಕೆ, ಚಳಿ, ಬಿಸಿ, ಕ್ರಿಮಿ ಕೀಟಗಳ ಕಡಿತ, ಯತ್ತಲೆಯಿಚಿದಾದ ತೊಂದರೆ, ಆರತಿಯ ಭಾಧೆ, ಸ್ತ್ರೀಯರಿಂದ ತೊಂದರೆ, ಓಡುಡುವಾಗ ಆಗುವ ತೊಂದರೆ. ಮಲಗುವಾಗ ಆಗುವ ಬಾಧೆ, ಕುಳಿತಿರುವಾಗ ಆಗುವ ಬಾಧೆ, ಬೈಗುಳು, ಪೆಟ್ಟು, ಭಿಕ್ಷೆ ಬೇಡುವಾಗ ಬರುವ ಕಷ್ಟನಿಷ್ಠುರ, ಭಿಕ್ಷೆ ದೊರೆಯುವ ದುಃಖ, ತಪಫಮಹಿಮೆಗಳು ಕಾಣದಿರುವ್ಯದರಿಂದ ಆದ ವ್ಯಥೆ, ರೋಗ, ಕಲ್ಲುಮುಳ್ಳಿನ ಬಾಧೆ, ತನ್ನ ಪ್ರಜ್ಞೆಗಾಗಿ ಅಹಂಕಾರ ಪಡುವಿಕೆ, ಉತ್ತಮ ಜ್ಞಾನವನ್ನಪೇಕ್ಷಿಸಿ ಅಜ್ಞಾನಕ್ಕಾಗಿ ಕೊರಗುವುದು, ಸ್ವಾನ ಮಾಡದಿರುವ್ಯದರಿಂದ ಆಗುವ ಬಾಧೆ, ಜನರು ಗೌರವಿಸಲಿಲ್ಲವೆಂಬ ಕೊರಗು – ಹೀಗೆ ಇವು ಇಪ್ಪತ್ತೆರಡು ಬಗೆಯ ತೊಂದರೆಗಳು.

ಎಪ್ಪತೈದು ದೋಷಗಳು – ಎಂಟು ಮಲಗಳು, ಎಂಟು ಮದಗಳು, ಮೂರು ಮೂಢಗಳು, ಆರು ಅನಾಚಿiತನ ಸೇವೆಗಳು.

ಈರ್ಯಾಪತ್ತಿ – ನಿರ್ಮಲವಾದ ಮಾರ್ಗದಲ್ಲಿ ಸೂಕ್ಷ್ಮಪ್ರಾಣಿಗಳಿಗೆ ಕೂಡ, ಬಾಧೆಯಾಗದಂತೆ ಅವನ್ನು ಪರಿಹರಿಸಿಕೊಂಡು ನಡೆಯುವುದು.

ಏಳು ಗುಣಗಳು – ಶ್ರದ್ದೆ, ಭಕ್ತಿ, ಪ್ರೇಮ, ದಯೆ, ಉದಾತ್ತಶೀಲ, ಕ್ಷಮೆ, ಶೌಚ.

ಐವರು ದಾದಿಗಳು – ರಧಾತ್ರಿ, ಮಂಡನಧಾತ್ರಿ, ಮಜ್ಜನಧಾತ್ರಿ, ಕಿಳವನ (ಕ್ರೀಡೆಯ)ಧಾತ್ರಿ, ಅಂದಧಾತ್ರಿ – ಈ ಐದು ಬಗೆ.

ಒಂಬತ್ತು ಸತ್ಕಾರಗಳು – – ಎದುರುಗೊಳ್ಳುವುದು, ಏರಲಿಕ್ಕುವುದು, ಪಾದ ಪ್ರಕ್ಷಾಳನ, ಅರ್ಚನೆ, ಭಕ್ತಿ ನಮಸ್ಸಾರ, ಮನಶ್ಯುದ್ದಿ, ಮೃದುವಾದ ಮಾತು, ಶುದ್ದವಾದ ಮಾತು, ಇವುಗಳಿಂದ ಕೂಡಿದ ಶುದ್ಧವಾದ ಆಹಾರವನ್ನು ಕೊಡುವುದು ಹೀಗೆ ಒಂಬತ್ತು.

ಕಲ್ಪಗಳು – (ಸ್ವರ್ಗಗಳು) ಸೌಧರ್ಮ, ಈಶಾನ, ಸನತ್ಕುಮಾರ, ಮಾಹೇಂದ್ರ, ಬ್ರಹ್ಮ, ಲಾಂತವ, ಮಹಾಶುಕ್ರ, ಸಹಸ್ರಾರ, ಆನತ, ಪ್ರಾಣತ, ಅರಣ, ಅಚ್ಯುತ – ಹೀಗೆ ಹನ್ನೆರಡು ಬಗೆಯವು.

ಕರಣಗ್ರಂಥಗಳು – ಶ್ರುತ ಸ್ಕಂದವೆಂಬ ದಿಗಂಬರ ಗ್ರಂಥ ಸಮುದಾಯದಲ್ಲಿ ಎರಡನೆಯ ವರ್ಗವಾದ ಕರಣಾನುಯೋಗಕ್ಕೆ ಸೇರಿದ ಗ್ರಮಥಗಳು. ಇವು ಲೋಕಾಕಾರ, ಜ್ಯೋತಿಷ ಮುಂತಾದ ವಿಷಯಗಳನ್ನು ತಿಳಿಸುತ್ತವೆ.

ಕಷಾಯಗಳು – ಕ್ರೋಧ, ಮಾನ, ಮಾಯಾ, ಲೋಭ – ಎಂಬೀನಾಲ್ಕುಬಗೆಯ ಕಲಷತೆಗಳು.

ಗುಣಸ್ಥಾನಗಳು – ಮಿಥ್ಯೆಯಲ್ಲಿ ಮುಳುಗಿರುವವನು ಕರ್ವ್ಮಕ್ಷಯ ಮಾಡಿ, ಮೇಲಕ್ಕೇರುವ ಹದಿನಾಲ್ಕು ಮೆಟ್ಟಿಲುಗಳು.

ಗೋಚಾರನಿಯಮ – ಹಸುವು ವನದ ಚೆಲುವಿನ ದಡೆಗೆ ಲಕ್ಷವಿಡದೆ ಆಹಾರಕ್ಕಾಗಿ ಚರಿಸುವಂತೆ ಸಂನ್ನಯಾಸಿಯು ದಾತಾರಿನ ಕುರಿತು ಏನನ್ನೂ ಲಕ್ಷಿಸದೆ ಭಿಕ್ಷಕ್ಕೆ ಮಾತ್ರ ನಕ್ಷವಿಡುವಿಕೆ.

ಘಾತಿಕರ್ಮ – – ಜೀವನ ಅನಂತ ಚತುಷ್ಟಯದ ಸಾಧನೆಗೆ ಘಾತಿಯನ್ನು ಮಾಡುವ ನಾಲ್ಕು ಬಗೆಯ ಕರ್ಮಗಳು : ೧. ಜ್ಞಾನಾವರಣೀಯ, ೨. ದರ್ಶನಾವರಣೀಯ, ೩. ಅಂತರಾಯ, ೪. ಮೋಹನೀಯ.

ಚತುರ್ನಿಕಾಯಾಮರರು – ಭವನಪತಿ, ವ್ಯಂತರಿಕ, ಜ್ಯೋತಿಷ್ಯ, ವಿಮಾನವಾಸಿ – ಈ ನಾಲ್ಕು ಬಗೆಯ ದೇವತೆಗಳು.

ಚತುರ್ದಶ ಪೂರ್ವಗಳೂ – – ಉತ್ಪಾದ, ಅಗ್ರಾಯಣಿ, ವೀಚಿiiನುವಾದ, ಆಸ್ತಿ ನಾಸ್ತಿ ಪ್ರವಾದ, ಜ್ಞಾನಪ್ರವಾದ, ಸತ್ಯಪ್ರವಾದ, ಆತ್ಮಪ್ರವಾದ, ಕರ್ಮಪ್ರವಾದ, ಪ್ರತ್ಯಾಖ್ಯಾನುವಾದ, ವಿದ್ಯಾನುವಾದ, ಕಲ್ಯಾಣವಾದ, ಪ್ರಾಣವಾದ, ಕ್ರಿಯಾ ವಿಶಾಲ ತ್ರಿಲೋಕಬಿಂದುಸಾರ – ಈ ಹದಿನಾಲ್ಕು ಆಗಮ ವಿಚಾರಗಳು.

ಚರಣ ಗ್ರಂಥಗಳು – ಜೈನ ಯತಿಗಳ ಮತ್ತು ಶ್ರಾವಕರ ಆಚಾರಗಳನ್ನು ನಿರೂಪಿಸುವ ಗ್ರಂಥಗಳು.

ತ್ರಿಷಷ್ಠಿ ಶಲಾಕಾಪುರುಷರು – ೨೪ ತೀರ್ಥಂಕರು, ೧೨ ಚಕ್ರವರ್ತಿಗಳು, ೯ ವಾಸುದೇವರು, ೯ ಪ್ರತಿವಾಸುದೇವರು, ೯ ಬಲಭದ್ರರು – ಹೀಗೆ ೬೩ ಮಂದಿ.

ದ್ರವ್ಯಾನುಯೋಗ – ಶ್ರುತಸ್ಕಂದದಲ್ಲಿ ಮೂರನೆಯ ಭಾಗ. ಇರಿರಲ್ಲಿ ಸಪ್ತ ತತ್ವಗಳು, ನವಪದಾರ್ಥಗಳು, ಷಡ್ರ್ದವ್ಯಗಳು ಮುಂತಾದ ತಾತ್ವಿಕ ವಿಚಾರಗಳಿವೆ.

ದ್ವಾದಶ ತಪಸ್ಸುಗಳು – – ಇವುಗಳಲ್ಲಿ ಯಾಹ್ಯತಪಗಳು ಆರು, ಅಭ್ಯಂತರ ತಪಗಳು ಆರು.

ಬಾಹ್ಯತಪಗಳಿವು : ಅನಶನ, ಅವಮೋದರ್ಯ (ಹೊಟ್ಟೆ ತುಂಬಲು ಬೇಕಾದುದಕ್ಕಿಂತ ಕಡಮೆ ತೆಗೆದುಕೊಳ್ಳವುದು), ವೃತ್ತಿಸಂಖ್ಯಾನ (ಭಿಕ್ಷೆಗೆ ರೀತಿ ಮತ್ತು ಮಿತಿ ಹಾಕಿಕೊಳ್ಳವುದು), ರಸತ್ಯಾಗ, ಕಾಯಕ್ಲೇಶ, ವಿವಿಕ್ತ ಶಯನಾಸನ.

ಅಭ್ಯಂತರ ತಪಸ್ಸುಗಳಿವು : ಪ್ರಾಯಶ್ಚಿತ್ತ, ವಿನಯ, ವೈಯ್ಯಾಪೃತ್ಯ (ವೃದ್ದ – ಆಶಕ್ತ – ರೊಗಿ ಯತಿಗಳ ಸೇವೆ), ಸ್ವಾಧಾಯ, ವ್ಯುತ್ಸರ್ಗ (ಶರೀರದ ಆಸೆಉನ್ನು ಬಿಟ್ಟ, ಸವ್ಮಚಿತ್ತತೆ), ಧ್ಯಾನ.

ದ್ವಾದಶಾಂಗಗಳು * ಆಚಾರಾಂಗ, ಸೂತ್ರಕೃತಾಂಗ, ಸ್ಥಾನಾಂಗ, ಸಮವಾಯಾಂಗ, ವ್ಯಾಖ್ಯಾಪ್ರಜ್ಞಪ್ತಿ, ಜ್ಞಾತೃಧರ್ಮಕೃತಾಂಗ, ಉಪಾಸಕಾಧ್ಯಾಯಾಂಗ, ಆಂತಕೃದ್ದಶಾಂಗ, ಅನುತ್ತರೋಪಪಾದಕದಶಾಂಗ, ಪ್ರಶ್ನವ್ಯಾಕರಣಾಂಗ, ವಿಪಾಕಸೂತ್ರಾಂಗ, ದೃಷ್ಟಿಪ್ರವಾದಾಂಗ – ಈ ಹನ್ನೆರಡು.

ಧ್ಯಾನಗಳು – ಇವು ನಾಲ್ಕು ವಿಧ : ೧. ಆರ್ತಧ್ಯಾನ (ಪ್ರಿಯ – ಅಪ್ರಿಯ ವಸ್ತುಗಳ ಪ್ರಾಪ್ತಿ ವಿಯೋಗಗಳಿಂದಾಗುವ ಚಿಂತೆ), ೨. ರೌದ್ರ ಧ್ಯಾನ (ಹಿಂಸೆ, ಅಸತ್ಯ, ಕಳವು ಕಾಮಭೋಗಗಳನ್ನು ಉಳಿಸಿಕೊಳ್ಳುವ ಚಿಂತೆಯಿಂದ ಕೂಡಿದ್ದು),

೩. ಧರ್ಮಧ್ಯಾನ (ಇದು ಅಜ್ಞಾವಿಚಯ, ಅಪಾಯ ವಿಚಯ, ವಿಪಾಕವಿಚಯ, ಸಂಸ್ಥಾನ ವಿಚಯ ಎಂದು ನಾಲ್ಕು ವಿಧ. ಜಿನೋಪದಿಷ್ಟವಾದ ಶಾಸ್ತಗಳ ಚಿಂತನೆ – ಇವೆಲ್ಲ ಧರ್ಮಧ್ಯಾನಗಳು. ೪. ಶುಕ್ಲಧ್ಯಾನ – ಇದು ಪೃಥಕ್ತ್ವ ವಿತರ್ಕವಿಚಾರ, ಏಕತ್ವ, ವಿತರ್ಕ, ಸೂಕ್ಷ್ಮಕ್ರಿಯಾ ಪ್ರತಿಪಾತಿ, ವ್ಯುಪರತ ಕ್ರಿಯಾನಿವೃತ್ತಿ – ಎಂದು ನಾಲ್ಕು ಬಗೆ. ಇದು ಅತ್ಯಂತ ಶ್ರೇಷ್ಠವಾದ ಧ್ಯಾನ.

ನಂದೀಶ್ವರ – ಕಾರ್ತಿಕ, ಫಾಲ್ಗುಣ, ಅಷಾಢಗಳ ಅಚಿತ್ಯದ ವಾರಗಳಲ್ಲಿ ಸೌಧರ್ಮಾದಿ ಇಚಿದ್ರ ಸಾನ್ನಿಧ್ಯದಲ್ಲಿ ಮಾಡುವ ಪ್ರಜೆ.

ನರಕಗಳು – (ಸಪ್ತನರಕಗಳು) ರತ್ನಪ್ರಭೆ, ಶರ್ಕರಾಪ್ರಭೆ, ವಾಳುಕಾಪ್ರಭೆ, ಪಂಕಪ್ರಭೆ, ಧೂಮಪ್ರಭೆ, ತಮಃಪ್ರಭೆ, ಮಹಾತಮಃಪ್ರಭೆ – ಎಂಬೀ ಏಳು.

ನವಪದಾರ್ಥಗಳು – – ಅರ್ಹಂತ, ಸಿದ್ದ, ಆಚಾರ್ಯ, ಉಪಾಧ್ಯಾಯ, ಸಾಧು – ಈ ಐವರಿಗೆ ಸಲ್ಲಿಸುವ ನಮಸ್ಕಾರಗಳು.

ಪಂಚನಮಸ್ಕಾರ – ಅರ್ಹಂತ, ಸಿದ್ದ, ಆಚಾರ್ಯ, ಉಪಾಧ್ಯಾಯ, ಸಾಧು – ಈ ಐವರಿಗೆ ಸಲ್ಲಿಸುವ ನಮಸ್ಕಾರಗಳು.

ಪಂಚಮಹಾಪಾತಕ – ಬಾಲ, ಸ್ತ್ರೀ, ಗೋವು, ಬ್ರಾಹ್ಮಣ, ಋಷಿ – ಇವರನ್ನು ಕೊಲ್ಲುವುದು, ಇನ್ರ್ನೆಂದು ಬಗೆಯಾಗಿ ಬ್ರಹ್ಮಹತ್ಯೆ, ಸುರಾಪನ, ಸ್ವರ್ಣಸ್ತೇಯ, ಗುರುತಲ್ಪ ಗಮನ, ತತ್ಸಂಯೋಗಿ – ಹೀಗೆ ಐದು ಮಹಾಪಾಪಗಳು.

ಪಂಚಮಹಾಶಬ್ದ – ಶೃಂಗ (ಕೊಂಬು), ತಂಬಟೆ, ಶಂಖ, ಭೇರಿ, ಜಯಘಂಟೆ (ಪಾಗಟೆ) – ಎಂಬೀ ಐದು ವಾದ್ಯಗಳ ಶಬ್ದ.

ಪಂಚರತ್ನ – ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ – ಈ ಐದು ಬಗೆಯ ರತ್ನಗಳು.

ಪಂಥಾತಿಚಾರನಿಯಮ – ಭಿಕ್ಷೆಯಿಂದ ಹಿಂದಿರುಗಿ ಬರುವಾಗ ದಾರಿಯಲ್ಲಿ ಆದ ಅತಿಚಾರಗಳ ಶುದ್ದಿಗೆ ಮಾಡುವ ನಿಯಮ.

ಪಡಿಕಮಣ – ಮಾಡಿದ ದೋಷಗಳಿಗಾಗಿ ಪಶ್ಚಾತ್ತಾಪ, ಇದು ಏಳು ಬಗೆ : ೧. ದೈವಸಿಕ (ಹಗಲು ಮಾಡಿದ ದೊಷಕ್ಕೆ), ೨. ರಾತ್ರಿಕ (ರಾತ್ರಿ ಮಾಡಿದ ದೊಷಕ್ಕೆ) ಐರ್ಯಾಪಥಿಕ (ಚರಿಗೆಗೆ ಹೋಗುವಾಗ ಆದ ದೋಷಕ್ಕೆ), ೪. ಪಾಕ್ಷಿಕ (ಹದಿನೈದು ದಿವಸಗಳಲ್ಲಿ ನಡೆದ ದೋಷಕ್ಕೆ), ೫. ಚಾತುರ್ಮಾಸಿಕ (ನಾಲ್ಕು ತಿಂಗಳಲ್ಲಿ ನಡೆದ ದೋಷಕ್ಕೆ, ೬. ಸಾವಚಿತ್ಸರಿಕ ೭. ಊತ್ತಮಾರ್ಥ (ಸಮಾ ಮರಣ ಸಮಯದಿಂದ ಜೀವನ ಪರ್ಯಂತ ನಡೆದ ದೋಷಕ್ಕೆ).

ಪದಿನೆಂಟು ದೋಷಗಳುಹಸಿವು, ಬಾಯಾರಿಕೆ, ಭಯ, ದ್ವೇಷ, ರಾಗ, ಮೋಹ, ಚಿಂತೆ, ಜರೆ, ರೋಗ, ಮರಣ, ಬೆವರು, ಖೇದ, ಮದ, ರತಿ, ಆಶ್ಚರ್ಯ, ಜನ್ಮ, ನಿದ್ರಾ, ವಿಷಾದ – ಈ ಹದಿನೆಂಟು ದೋಷಗಳಿಲ್ಲದವನು ಅರ್ಹಂತನು.

ಪದಿನೆಂಟು ಧರ್ಮಶಾಸ್ತ್ರಗಳು – ಮನು, ಯಮ, ಗೌತಮ, ವಸಿಷ್ಠಿ, ಅತ್ರಿ, ದಕ್ಷ, ವಿಷ್ಙು, ಅಂಗಿರಸದ, ಉಶನಾ, ವಾಕ್ಪತಿ, ವ್ಯಾಸ, ಅಪಸ್ತಂಬ, ಗೌತಮ, ಕಾತ್ಯಾಯನ, ನಾರದ, ಯಾಜ್ಞವಲ್ಕ, ಪರಾಶರ, ಸಂವರ್ತ, ಶಂಖ, ಹಾರೀತ, ಲಖಿತ – ಇವುಗಳಿಂದ ಧರ್ಮಶಾಸ್ತ್ರಗಳು ರಚಿತವಾಗಿವೆ. ಅವುಗಳಲ್ಲಿ ಹದಿನೆಂಟು.

ಪರಿಗ್ರಹಗಳು – ಇವು ಇಪ್ಪತ್ತನಾಲ್ಕು. ಅವುಗಳಲ್ಲಿ ಕ್ಷೇತ್ರ, ವಸ್ತು, ಹಿರಣ್ಯ, ಸುವರ್ಣ, ಧನ, ಧ್ಯಾನ, ದಾಸ, ದಾಸಿ, ಕುಪ್ಯ, ಭಾಂಡ, – ಎಂಬೀ ಉತ್ತು ಬಾಹ್ಯ ಪರಿಗ್ರಹಗಳು. ಮಿಥ್ಯಾತ್ವ, ಮೋದ (ಸ್ತ್ರೀಪುರುಷನಪುಂಸಕರೊಡನೆ ಕಾಮಕ್ರೀಡೆಯ ಅಭಿಲಾಷೆ), ರಾಗ, ದ್ವಶಷ, ಹಾಸ್ಯ, ರತಿ, ಆರತಿ, ಶೋಕ, ಭಯ, ಜಿಗುಪ್ಸೆ, ಕ್ರೋಧ, ಮಾನ, ಮಾಯಾ,ಲೋಭ – ಎಂಬೀ ಹದಿನಾಲ್ಕು ಅಂತರಂಗ ಪರಿಗ್ರುಗಳು. ಈ ೨೪ ಒರಿಗ್ರುಗಳನ್ನು ತೊರೆದ ನರ್ಗ್ರಥ ಮುನಿಗಳೇ ಗುರುಗಳು.

ಭುಕ್ತಪ್ರಖ್ಯಾನ ವಿ – ಕ್ರಮವಾಗಿ ಆಹಾರ ಪಾನೀಯಗಳನ್ನು ಬಿಟ್ಟುಬಿಡುವುದು.

ಮಿಥ್ಯಾತ್ವ – ತತ್ತ್ವದಲ್ಲಿ ನಂಬಿಕೆಯಾಗಲೀ ಶ್ರದ್ಧೆಯಾಗಲೀ ಇಲ್ಲದೆ ಮೋಕ್ಷಮಾರ್ಗದಿಂದ ಪರಾಙ್ಮುಖವಾಗುವಿಕೆ.

ಮುಂಡಕೇವಲಿ – ಮುಂಡನ ಎಂದರೆ ವಶಪಡಿಸುವುದು. ಇದು ಹತ್ತು ವಿಧ : ಐದು ವಿಧದ ಸ್ಪರ್ಶನಮುಂಡ, ವಚನಮುಂಡ (ಮಾತಾಡದಿರುವುದು), ಹಸ್ತಮುಂಡ (ಕುಚೇಷ್ಷೆಯಿಂದ ಕೈಯಾಡಿಸುದು), ಪಾದಮುಂಡ (ಆಸನದಲ್ಲಿ ಸೇರಿಸದಿರುವುದು), ಮನೋಮುಂಡ (ಕೆಟ್ಟದನ್ನು ಯೋಚಿಸದಿರುವುದು), ಶರೀರಮುಂಡ (ದೇಹವನ್ನು ಹತೋಟಿಯಲ್ಲಿಡುವುದು) – ಈ ಹತ್ತು ಮುಂಡಗಳನ್ನು ಆಚರಿಸಿದ ಜಿನಮುನಿ.

ಮೂರು ಮೂಢಗಳು – ದೇವತಾ ಮೂಢ (ಮಿಥ್ಯಾದೇವತೆಗಳ ಪ್ರಜೆ), ಲೋಕ ಮೂಢ (ಮಿಥ್ಯಾಕ್ಷೇತ್ರಗಳಲ್ಲಿ ನಂಬಿಕೆ) ಪಾಷಂಡಿಮೂಢ (ಮಿಥ್ಯಾಗುರುಗಳನ್ನು ನಂಬುವುದು).

ರತ್ನತ್ರಯ – ಮೋಕ್ಷಸಾಧನಗಳಾದ ಮೂರು ಶ್ರೇಷ್ಠ ಗುಣಗಳು – ೧. ಸಮ್ಯಗ್ದರ್ಶನ (ಜೈನ ತೀರ್ಥಂಕರು ಉಪದೇಶಿಸಿರುವ ತತ್ವದಲ್ಲಿ ನಂಬಿಕೆ), ೨. ಸಮ್ಯಗ್ ಜ್ಞಾನ (ನಂಬಿದುದನ್ನು ಚೆನ್ನಾಗಿ ಗ್ರಹಣ ಮಾಡಿರುವುದು), ೩. ಸಮ್ಯಕ್ ಚಾರಿತ್ರ (ನಂಬಿ ತಿಳಿದುದನ್ನು ಸರಿಯಾಗಿ ಆಚರಿಸುವುದು).

ವ್ಯಂತರ ದೇವತೆ – ಬೇರೆ ಬೇರೆ ದೇಶಗಳಲ್ಲಿರುವ ಸ್ಥಳಿಕ ದೇವತೆಗಳು. ಇವು ಎಂಟು ಬಗೆ : ಕಿನ್ನರ, ಕಿಂಪುರುಷ, ಮಹೋರಗ, ಗಂಧರ್ವ, ಯಕ್ಷ, ರಾಕ್ಷಸ, ಭೂತ, ಪಿಶಾಚ.

ಶಲ್ಯಗಳು – ಇವು ವ್ರತಕ್ಕೆ ಭಂಗ ತರುವಂಥವು – ಮಾಯಾ ಶಲ್ಯ, ಮಿಥ್ಯಾಶಲ್ಯ, ನಿದಾನ ಶಲ್ಯ, ಎಂದು ಮೂರು ವಿಧ. ಮಾಯಾಶಲ್ಯ – ಕಪಟ ವಂಚನೆಗಳ ಆಚರಣೆ. ಮಿಥ್ಯಾಶಲ್ಯ ತಾನು ಆಚರಿಸುವ ವ್ರದಲ್ಲಿ ಮತ್ತು ಜಿನೋಪದಿಷ್ಟ ಧರ್ಮತತ್ವಲ್ಲಿ ಶ್ರದ್ದೆಯಿಲ್ಲದುದು. ನಿದಾನಶಲ್ಯ – ಮುಂದೆ ವಿಷಯ ಭೋಗಗಳನ್ನು ಅನುಭವಿಸುವ ಅಪೇಕ್ಷೆಯಿಡುವುದು. ವ್ರತಿಯಾದವನು ಈ ಮೂರು ಬಗೆಯ ಶಲ್ಯಗಳನ್ನು ಬಿಟ್ಟಿರಬೇಕು.

ಶಿಕ್ಷಾವ್ರತ – ಸಾಮಾಯಿಕ (ಪಾಪಕ್ರಯೆ ಪರಿತ್ಯಾಗ), ದೇಶಾವಕಾಶಿಕ, ಪ್ರೌಷಧೋಪವಾಸ, ಅತಿಥಿ ಸಂವಿಭಾಗ – ಹೀಗೆ ನಾಲ್ಕು ಬಗೆ.

ಶ್ರಾವಕ ಧರ್ಮ – ಐದು ಆಣುವ್ರತಗಳು, ಮೂರು ಗುಣವ್ರತಗಳು (ದಿಗ್ವ್ರತ, ದೇಶವ್ರತ, ಧಂಡವಿರತಿವ್ರತ, ನಾಲ್ಕು ಶಿಕ್ಷಾವ್ರತಗಳು – ಹೀಗೆ ಶ್ರಾವಕಧರ್ಮ ಹನ್ನೆರಡು ಬಗೆ.

ಷಡಂಗಗಳು – – (ಆರು ಅಂಗಗಳು) – ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ – ಇವು ಆರೂ ವೇದದ ಅಂಗಗಳಾಗಿವೆ.

ಷಡ್ದ್ರವ್ಯಗಳು – ಜೀವ, ಪುದ್ಗಲ, ಧರ್ಮ ಅಧರ್ಮ, ಆಕಾಶ, ಕಾಲ.

ಸಪ್ತ ಋದ್ದಿಗಳು – ಬುದ್ದಿ, ತಪ, ವೈಕುರ್ವಣ, ಔಷಧ, ರಸ, ಬಲ, ಅಕ್ಷೀಣ – ಹೀಗೆ ಏಳು ಬಗೆ.

ಸಪ್ತವ್ಯಸನಗಳು – ಜೂಜು, ವೇಶ್ಯಾಸಕ್ತಿ, ಪರಸ್ತ್ರೀಗಮನ, ಚೌರ್ಯ, ಮಾಂಸ ಭಕ್ಷಣ, ಮದ್ಯಪಾನ, ಮೃಗಯಾ (ಬೇಟೆ) – ಈ ಏಳು.

ಸಿಂಹ ನಿಷ್ಕ್ರೀಡಿತ – – ಎಮಬತ್ತು ದಿನಗಳಲ್ಲಿ ಅರವತ್ತು ಉಪವಾಸ ಮತ್ತು ಇಪ್ಪತ್ತು ಪಾರಣೆಗಳನ್ನು ಮಾಡತಕ್ಕ ವ್ರತ.

ಸಾಮಾನಿಕ ದೇವ – ಇಂದ್ರನಿಗಿರತಕ್ಕ ಆಜ್ಞೆ ಐಶ್ವರ್ಯ ಶಕ್ತಿಗಳಿಲ್ಲದೆ, ಅವನ ಹಾಗೆಯೇ ಆಯುಷ್ಯ, ವಿರ್ಯ, ಪರಿವಾರ, ಭೋಗೋಪಭೋಗಗಳ್ಳಳವನು. ಗುರು, ತಂದೆ, ಉಪಾಧ್ಯಾಯರಂತೆ ಪೂಜ್ಯನಾದ ದೇವತೆ.

ಸ್ಥವಿರ ಕಲ್ಪ – – ಏಕವಿಹಾರಿಯಾಗಲು ದೈಹಿಕ ಶಕ್ತಿಯಿಲ್ಲದೆ, ಋಷಿಸಂಘದಲ್ಲಿದ್ದು ಸಂಘದ ರೀತಿಯನ್ನು ಹಾಗೂ ಪರಂಪರೆಯ ರಿತಿಯನ್ನು ತಿಳಿಸತಕ್ಕ ಸಾಧು.