ದ್ರವ್ಯ ಗುಣ ವಿಜ್ಞಾನ

ಚಿಕಿತ್ಸೆಯ ಚುತುಷ್ಪಾದಗಳಲ್ಲಿ ಔಷಧಿಗೂ ಒಂದು ಮಹತ್ವದ ಸ್ಥಾನವಿದೆ ಎಂದು ನಾವು ಈಗಾಗಲೇ ತಿಳಿದಿದ್ದೇವೆ. ‘ಜಗತ್ಯೇವ ಅನೌಷಧಮ್’ ಎಂಬ ಮಾತಿನಿಂದ ಈ ಪ್ರಪಂಚದಲ್ಲಿರುವ ಸರ್ವ ದ್ರವ್ಯಗಳೂ ಔಷಧಕ್ಕಾಗಿ ಬರುವುವು ಎಂಬ ವಿಷಯವನ್ನು ಆಯುರ್ವೇದವು ಹೇಳುತ್ತದೆ. ಇಂತಹ ಸರ್ವ ದ್ರವ್ಯಗಳಲ್ಲಿ ಪರಸ್ಪರ ವಿರುದ್ಧವಾದ ಗುರುಮುಂದಾಗಿ ಇಪ್ಪತ್ತು ಗುಣಗಳಿಗೂ, ಷಡ್ರಸಗಳೂ ಇರುವವೆಂದು ಈ ಮೊದಲೇ ಅರಿತಿದ್ದೇವೆ. ರಸ ವಿಜ್ಞಾನವನ್ನು ತಿಳಿಯುವಾಗ ಆಯಾ ವಿಶಿಷ್ಟ ರಸಗಳು, ಅವುಗಳು ಸ್ಥಾನವನ್ನು ಗಮನಿಸಿದ್ದೇವೆ. ತ್ರಿದೋಷ ಹಾಗೂ ಸಪ್ತಧಾತುಗಳ ಸಾಮ್ಯ-ವೈಶಮ್ಯಗಳ ವಿಚಾರವಾಗಿ ಯಾವ ಯಾವ ದ್ರವ್ಯಗಳು ಎಂದರೆ ರಸಗಳ ಮೂಲಕ ಹೇಗೆ ಸಹಾಯಕವಾಗುವುವು ಎಂಬುದನ್ನು ತಿಳಿದಿದ್ದೇವೆ. ಈಗ ಯಾವ ಯಾವ ದ್ರವ್ಯಗಳು ಯಾವ ವಿಶಿಷ್ಟ ಕ್ರಿಯೆಗಾಗಿ ಉಪಯೋಗಿಸಲ್ಪಡುವುವು ಎಂಬ ವಿಷಯವನ್ನು ತಿಳಿಯೋಣ.

ಚರಕಾಚಾರ್ಯರು ೫೦ ವಿಧವಾದ ಮಹಾ ಕಷಾಯಗಳನ್ನು ಅವುಗಳ ಗುಣಧರ್ಮಗಳನ್ನು ಈ ರೀತಿ ವಿವರಿಸಿದ್ದಾರೆ. ಈ ಗುಣಗಳು ಸಾಮಾನ್ಯವಾಗಿ ಬರುವ ಸಕಲ ರೋಗಗಳಿಗೂ ಉಪಯುಕ್ತವಾಗಿರುತ್ತವೆ. (ಕಲ್ಯಾಣ ಕಾರಕದಲ್ಲಿ ಈ ಕಷಾಯಗಳನ್ನು ಪ್ರತ್ಯೇಕವಾಗಿ ಹೇಳಿಲ್ಲವಾದ್ದರಿಂದ ಜನಸಾಮಾನ್ಯರ ತಿಳಿವಳಿಕೆಗೆ ಅವಸ್ಯವೆಂದು ಇಲ್ಲಿ ವಿವರಿಸಲಾಗಿದೆ)

. ಜೀವನೀಯ (Nutrients)

ಬದುಕಿಸುವಂತಹದು. ಜೀವಕ ಋಷಭಕ, ಮೇದೆ, ಮಹಾಮೇದೆ, ಕಾಕೋಲೆ, ಕ್ಷೀರ ಕಾಕೋಲಿ, ಕಾಡು ಹೆಸರು, ಕಾಡುದ್ದು, ಜೀವಂತಿ, ಜೇಷ್ಠ ಮಧು ಇವು ಹತ್ತು ಜೀವನೀಯ ದ್ರವ್ಯಗಳು.

. ಬೃಂಹಣಿಯ (Weight promoters)

ಪುಷ್ಟಿ ಮಾಡುವಂತಹದು, ಕ್ಷೀರಿಣಿ, ಕರಿಸಾಸಿವೆ, ಕಲ್ಲಂಗಡಲೆ, ಕಾಕೋಳಿ, ಕ್ಷೀರ, ಕಾಕೋಲಿ, ಸಹದೇವಿ, ಉರ್ಕಿ,ಕಾಡುಹತ್ತಿ, ಪಯಸ್ಯಾ, ಋಷ್ಯ ಗಂಧಿ ಇವು ಹತ್ತು ಬೃಂಹಣೀಯಗಳು.

. ಲೇಖನೀಯ (Weight Reducers)

ಧಾತುಗಳನ್ನು ಅಥವಾ ಮಲಗಳನ್ನು ಒಣಗಿಸಿ ಕೃಶತೆಯನ್ನುಂಟು ಮಾಡುವ ದ್ರವ್ಯಗಳು. ಭದ್ರಮುಷ್ಟಿ, ಚಂಗಲ್ಕೋಷ್ಯ, ಅರಿಷಿಣ, ಮರದರಿಶನ, ಬಜೆ, ಅತಿವಿಡೆಯ, ಕುಟು, ರೋಹಿಣಿ, ಚಿತ್ರಮೂಲ, ಹೊಂಗೆ, ಅಣಿಲೆಕಾಯಿ ಇವು ಹತ್ತು ಲೇಖನೀಯಗಳು.

. ಭೇದನೀಯ (Purgetives)

ಕರಿಜೀರಿಗೆ, ಎಕ್ಕೆ, ಕೆಂಪುಹರಳುಗಿಡ, ಕೋಳಿಕುಟುಮ, ಹಾವುಮೆಕ್ಕೆ, ಬೆಳೆಹರಳುಗಿಡ, ಹೊಂಗೆ, ಕಾಡಪಾವಟೆಬಳ್ಳಿ, ಕಟುಕರೋಹಿಣಿ, ಸ್ವರ್ಣಕ್ಷೀರಿ ಇವು ಹತ್ತು ಭೇದನೀಯಗಳು.

. ಸಂಧಾನೀಯ (Union Promoters)

ಕಡಿದ ಅಥವಾ ಒಡೆದದ್ದನ್ನು ಜೋಡಿಸುವಂತಹದು. ಜೇಷ್ಠ ಮಧು, ಶಿವನಿ, ಓರೆಲೆ, ಮಾಚಿಕಾಯಿ, ನಾಚಿಕೆಗಿಡ, ಬೂರುಗದಮೇಣ, ಧಾತಕಿ ಪುಷ್ಟಿ, ಲೋಧ್ರ, ಪ್ರಿಯಂಗು, ದಡ್ಡಾಲ ಇವು ಹತ್ತು ಸಂಧಾನೀಯಗಳು.

. ದೀಪನೀಯ (Stomochics Digestves)

ಹಿಪ್ಪಲೀ, ಹಿಪ್ಪಲೀಮೂಲ, ಕಾಡುಮೆಣಸಿನ ಬೇರು, ಚಿತ್ರಮೂಲ, ಶುಂಠಿ, ಆಮ್ಲವೇತಸ, ಕಾಳುಮೆಣಸು, ಅಜವಾನ, ಕೇರಿನ ತಿರುಳು, ಹಿಂಗು ಇವು ಹತ್ತು ದೀಪನೀಯಗಳು.

. ಬಲ್ಯ (Tonics)

ಶಕ್ತಿಯನ್ನುಂಟುಮಾಡುವಂತಹವುಗಳು. ಯಾಲಕ್ಕಿ, ಕೋಡುಧಾನ್ಯ, ಅತಿರಸಾ, ಕಾಡುದ್ದು, ಪಯಸ್ಯಾ, ಅಶ್ವಗಂಧ, ಕಾಡುಹೆಸರು, ಜಟಾಮಾಂಸಿ, ಕಡಿರು, ಉರ್ಕಿ ಇವು ಹತ್ತು ಬಲವನ್ನೀಯುವ ದ್ರವ್ಯಗಳು.

. ವರ್ಣ್ಯ(Compexion Promoters)

ಬಣ್ಣವನ್ನೀಯುವಂತಹವುಗಳು. ಶ್ರೀಗಂಧ, ತೇಗು, ಪದ್ಮಕ, ಲಾವಂಚ, ಜೇಷ್ಠ ಮಧು, ಮಂಜಿಷ್ಠ, ಸುಗಂಧಿಬೇರು, ಪಯಸ್ಯಾ, ನೀಲೆಬೇರು. ಜ್ಯೋತಿಷ್ಮತಿ ಇವು ಹತ್ತು ವರ್ಣ್ಯಗಳು.

. ಕಂಠ್ಯ (Voice Promoters)

ಕಂಠವನ್ನು ಶೋಧಿಸಿ ಅದಕ್ಕೆ ಹಿತವನ್ನು ಒಳ್ಳೆಯ ಧ್ವನಿಯನ್ನು ಕೊಡತಕ್ಕಂತಹವುಗಳು. ಬಿಳೆನಾಮದ ಬೇರು. ಕಬ್ಬಿನ ಬೇರು, ಜೇಷ್ಠ ಮಧು, ಹಿಪ್ಪಲಿ, ದ್ರಾಕ್ಷಿ, ನೆಲಗುಂಬಳಗಡ್ಡೆ, ಕರಿಬೇವು, ಹಂಸಪಾದಿ, ಗುಳ್ಳದಬೇರು, ಕಲ್ಲಂಟೆ ಬೇರು ಇವು ಹತ್ತು ಕಂಠ್ಯಗಳು.

೧೦. ಹೃದ್ಯ (Cardiac Tonics)

ಹೃದಯಕ್ಕೆ ಹಿತಕಾರಿಯಾದವುಗಳು. ಮಾವು, ಅಂಬಟೆ, ಜಲವೇತಸ, ಕಮರಿಕೆ ಹಣ್ಣು, ಮುರುಗನ ಹುಳಿ, ಆಮ್ಲವೇತಸ, ಉತ್ಪಲ, ಬೊಗರಿ, ದಾಳಿಂಬ ಮಾದಳ ಇವು ಹತ್ತು ದ್ರವ್ಯಗಳು.

೧೧. ತೃಪ್ತಿಘ್ನ (Appetisers)

ತೃಪ್ತಿ ಅಥವಾ ಮನಃಶಾಂತಿಯನ್ನು ಕದಡತಕ್ಕಂತಹ ವಸ್ತುಗಳು. ಶುಂಠಿ, ಚಿತ್ರಮೂಲ, ಕಾಡುಮೆಣಸಿನ ಬೇರು, ವಾಯುವಿಡಂಗ, ಸುರಟಿಗೆ ಬೇರು, ಅಮೃತಬಳ್ಳಿ, ಬಜೆ, ಭದ್ರಮುಷ್ಠಿ, ಹಿಪ್ಪಲಿ, ಕಹಿಪಡವಲ ಇವು ಹತ್ತು ತೃಪ್ತಿನಾಶಕ ಹಾಗೂ ಹಸಿವೆ ದಾಹ ಬಳಕೆಯನ್ನುಂಟು ಮಾಡ ತಕ್ಕಂತಹವುಗಳಾಗಿವೆ.

೧೨. ಅರ್ಶೋಘ್ನ (Anti Heamorrhoids)

ಮೂಲವ್ಯಾಧಿ ಹರವಾದದ್ದು. ಕುಟಿಜಾ, ಬಿಲ್ವಪತ್ರ, ಚಿತ್ರಮೂಲ, ಸಣ್ಣ ಭದ್ರಮುಷ್ಠಿ, ಅತಿವಿಡೆಯ, ಅಣಿಲೆಕಾಯಿ, ಬಿಳುಪೆಚ್ಚರಂಗಿ, ಮರದರಿಶಿನ, ಬಜೆ, ಕಾಡುಮೆಣಸಿನ ಬೇರು. ಇವು ಹತ್ತು ಮೂಲವ್ಯಾಧಿ ನಿವಾರಕ ದ್ರವ್ಯಗಳಾಗಿವೆ.

೧೩. ಕುಷ್ಠಘ್ನ (Curative of Dermatosis)

ಕುಷ್ಠವ್ಯಾಧಿಯನ್ನು ನಿವಾರಿಸುವಂತಹ ದ್ರವ್ಯಗಳು. ಕಾಚು, ಅಣಲೆಕಾಯಿ, ನೆಲ್ಲಿ, ಅರಿಶಿನ, ಗೇರುಕಾಯಿ, ಹಾಲೆಮರ, ಕಕ್ಕೆಮರ, ಕಣಗಿಲು, ವಾಯುವಿಡಂಗ, ಜಾಜಿಕಾಯಿ. ಇವು ಹತ್ತು ಕುಷ್ಠಘ್ನ ದ್ರವ್ಯಗಳು.

೧೪. ಕಂಡೂಘ್ನ (Anti pruitics)

ತುರಿಕೆಯನ್ನು ಗುಣಪಡಿಸುವಂತಹ ದ್ರವ್ಯಗಳು. ಶ್ರೀಗಂಧ, ಲಾವಂಚ, ಕಕ್ಕೆಮರ, ಹೊಂಗೆಮರ, ಕಹಿಬೇವು, ಕುಟಜಾ, ಸಾಸವೆ ಜೇಷ್ಠ ಮಧು, ಮರದರಿಶಿನ, ಭದ್ರಮುಷ್ಠಿ. ಇವು ಹತ್ತು ಕಂಡೂಘ್ನಗಳಾಗಿವೆ.

೧೫. ಕೃಮಿಘ್ನ (Antihelminths)

ಕ್ರಿಮಿಗಳನ್ನು ಕೊಲ್ಲುವಂತಹದು. ಉಪ್ಪು, ಕಾಳುಮೆಣಸು, ಕಳ್ಳಿ, ಕೆಮುಕಗಡ್ಡೆ, ವಾಯುವಿಡಂಗ, ಕರಿಲೆಕ್ಕಿ, ಬಿಳೆ ಉತ್ತರಣೆ, ನೆಗ್ಗಿಲಮುಳ್ಳು, ವೃಷಪರ್ಣಿಕಾ, ಇಲಿಕಿವಿ ಇವು ಹತ್ತು ಕ್ರಿಮಿನಾಶಕಾರಿ ದ್ರವ್ಯಗಳು.

೧೬. ವಿಷಘ್ನ (Antidotes)

ವಿಷದೋಷವನ್ನು ಪರಿಹರಿಸುವಂತಹವು. ಅರಿಷಿಣ, ಮಂಜಿಷ್ಟ, ಈಶ್ವರೀ, ಸಣ್ಣಯಾಲಕ್ಕಿ, ಮೂವೆಲೆ, ಶ್ರೀಗಂಧ, ಚೆಲ್ಲಬೀಜ, ಬಾಗೇಮರ, ಬಿಳೇನೆಕ್ಕಿ, ಚಳ್ಳಮರ ಇವು ಹತ್ತು ವಿಷನಾಶಕಗಳು.

೧೭. ಸ್ತನ್ಯಜನಕ (Galactogogeus)

ಮೊಲೆ ಹಾಲನ್ನು ವೃದ್ಧಿ ಮಾಡತಕ್ಕಂತಹವುಗಳು. ಲಾಮಂಚ, ಶಾಲಿ ಅಕ್ಕಿ, ಕಬ್ಬು, ಮುಡಿವಾಳ, ದರ್ಭೆ, ಕುಶದರ್ಭೆ, ಕಾಶದರ್ಭೆ, ಶರದರ್ಭೆ, ಮೃದುದರ್ಭೆ, ಮಜ್ಜಿಗೆಹುಲ್ಲು ಇವುಗಳು ಬೇರುಗಳು ಸ್ತನ್ಯವರ್ಧಕಗಳಾಗಿವೆ.

೧೮. ಸ್ತನ್ಯ ಶೋಧನ (Galacto Purifiers)

ಮೊಲೆ ಹಾಲನ್ನು ಶುದ್ಧಿ ಮಾತಕ್ಕಂತಹವುಗಳು. ಅಗಳುಶುಂಠಿ, ದೇವದಾರು, ಭದ್ರ ಮುಷ್ಠಿ, ಕುರುಟಿಗೆ, ಅಮೃತಬಳ್ಳಿ, ಇಂದ್ರಜೀವಿ, ಕಿರಾತ ಕಡ್ಡಿ, ಕಟುಕರೋಹಿಣಿ, ಸುಗಂಧಿಬೇರು ಇವು ಹತ್ತು ಸ್ತನ್ಯ ಶೋಧನಕಾರಿಯಾಗಿದೆ.

೧೯. ಶುಕ್ರಜನಕ(Spermatogesic)

ಶುಕ್ರಧಾತುವನ್ನು ಶುದ್ಧಿ ಮಾಡುವ ದ್ರವ್ಯಗಳು ಜೀವಕ, ಋಷಭಕ, ಕಾಕೋಲಿ, ಕ್ಷೀರಕಾಕೋಲೀ, ಹಾಡು ಹೆಸರು, ಕಾಡುದ್ದು, ಮೇದೆ, ಬಂದಣಿಕೆ, ಜಟಾಮಾಂಸಿ, ಅದೇ ಕರೆದ ಹಾಲು ಇವು ಹತ್ತು ಶುಕ್ರಜನಕಗಳು.

೨೦. ಶುಕ್ರಶೋಧನ (Spermo purifiers)

ಶುಕ್ರವನ್ನು ಶುದ್ಧ ಮಾಡುವಂತಹ ದ್ರವ್ಯಗಳು. ಚಂಗಲಕೋಷ್ಠ, ಏಲಾವಾಲುಕ, ಕಟ್ಫಲ, ಸಮುದ್ರನಾಲಗೆ, ಕಡಹದಮರದಮೇಣ, ಕಬ್ಬು ಕಾಶದರ್ಬ, ಗೊಳಗೊಳಿಕೆ, ಕೃಷ್ಟಾಗರು, ಲಾಮಂಚ ಇವು ಹತ್ತು ಶುಕ್ರ ಶೋಧನಾಕಾರಿಗಳು.

೨೧. ಸ್ನೇಹೋಪಗ ( Adjuvants in Oleation on therapy)

ಸ್ನೇಹ(ಜಿಡ್ಡು)ವನ್ನುಂಟು ಮಾಡುವ ದ್ರವ್ಯಗಳು. ದ್ರಾಕ್ಷೆ, ಜೇಷ್ಠ ಮಧು, ಶಿವನಿ ಮೇದೆ, ನೆಲಗುಂಬಳ, ಕಾಕೋಳಿ, ಕ್ಷೀರಕಾಕೋಲಿ, ಜೀವಕ, ಜೀವಂತಿ, ಮೂವೆಲೆ ಇವು ಹತ್ತು ಸ್ನೇಹನ ಕರ್ಮಕ್ಕೆ ಉಪಯುಕ್ತವಾದಂತಹುವುಗಳು.

೨೨. ಸ್ವೇದೋಪಗ (Prespiratives)

ಬೆವರನ್ನುಂಟುಮಾಡತಕ್ಕಂತಹವುಗಳು. ನುಗ್ಗೆ ಹರಳು (ಔಡಲ) ಎಕ್ಕೆ, ಬಿಳಿ ಪುನರ್ನವ, ಕೆಂಪುಪುನರ್ನವ, ಜವೆಗೋಧಿ, ಎಳ್ಳು, ಹುರಳಿ, ಉದ್ದು, ತೊಗರಿ ಇವು ಹತ್ತು ಬೆವರನ್ನುಂಟು ಮಾಡುತ್ತವೆ.

೨೩. ವಮನೋಪಗ (Emetics)

ವಾಂತಿಯನ್ನುಂಟು ಮಾಡುವ ದ್ರವ್ಯಗಳು – ಜೇನು, ಜೇಷ್ಠಮಧು, ಕೆಂಪುಕ ಮಂದಾರ, ಬಿಳಿ ಮಂದಾರ, ಕಡಹದ ಮರ, ಬೆತ್ತ, ಕಹಿ ತೊಂಡೆ, ಗಿರಿಗಿಜಿ, ಎಕ್ಕೆ, ಉತ್ತರಾಣಿ ಇವು ಹತ್ತು ವಮನೋಪಗವಾಗಿವೆ.

೨೪. ವಿರೇಚನೋಪಗ (Purgetives)

ದ್ರಾಕ್ಷೆ, ಶಿವನಿ, ಪರೂಕ್ಷಕ, ಅಣಿಲೆಕಾಯಿ, ನೆಲ್ಲಿಕಾಯಿ, ತಾರೆಕಾಯಿ, ರಾಜಬೊಗರಿ, ಬೊಗರಿ, ಚಿಕ್ಕ ಬೊಗರಿ, ಪೀಲು (ಗೋಣಿಮರಿ) ಇವು ಹತ್ತಿ ವಿರೇಚಕಗಳು.

೨೫. ಅಸ್ಥಾನೋಪಗ (Non oily Enematas)

ದೋಷ ಧಾತುಗಳನ್ನು ಆಯಾ ಸ್ಥಾನದಲ್ಲಿಡುವಂತಹದು. ತಿಗಡೆ, ಬಿಲ್ವ ಪತ್ರೆ, ಹಿಪ್ಪಲಿ, ಚಂಗಲ ಕೋಷ್ಠ, ಸಾಸಿವೆ, ಬಜೆ, ಇಂದ್ರಜೀವಿ, ಸಬ್ಬಸೀಗೆ, ಜೇಷ್ಠ ಮಧು, ಮಾಯಿ ಫಲ. ಇವು ಹತ್ತು ಅಸ್ಥಾಪನ ಬಸ್ತಿಗೆ ಉಪಯುಕ್ತವಾಗಿವೆ.

೨೬. ಅನುವಾಸನೋಪಗ (oily Enematas)

ಅನುವಾಸನ ಬಸ್ತಿಗೆ ಯೋಗ್ಯವಾದಂತಹ ದ್ರವ್ಯಗಳು ರಾಸ್ನಾ, ದೇವದಾರು, ಬಿಲ್ವಪತ್ರೆ, ಮಾಯಿಫಲ(ಮದನಕಾಯಿ) ಸಬ್ಬಸಿಗೆ, ಬಿಳಿ ಪುನರ್ನವ, ಪುನರ್ನವ, ನೆಗ್ಗಿಲು, ನರುವಲು, ಆನೆಮುಂಗು ಇವು ಹತ್ತು ಅನುವಾಸನ ಬಸ್ತಿಗೆ ಉಪಯುಕ್ತ ದ್ರವ್ಯಗಳು.

೨೭. ಶಿರೋವಿರೇಚನನೋಪಗ(Head Snuffies)

ಶಿರೋವಿರೇಚನ(ನಶ್ಯ)ಕ್ಕೆ ಯೋಗ್ಯವಾದ ದ್ರವ್ಯಗಳು ಜ್ಯೋತಿಷ್ಮತಿ, ಕೆಂಪು ಸಾಸಿವೆ, ಮೆಣಸು, ಹಿಪ್ಪಲಿ, ವಾಯುವಿಡಂಗ, ನುಗ್ಗೆ, ಬಿಳಿಸಾಸಿವೆ, ಉತ್ತರಾಣಿ, ಶ್ವೇತಾ, ನೆಲಗುಂಬಳ ಇವು ಹತ್ತು ಶಿರೋವಿರೇಚಕಗಳು.

೨೮. ಛರ್ದಿ ನಿಗ್ರಹಣ (Anti Emetics)

ವಾಂತಿಯನ್ನು ನಿಲ್ಲಿಸತಕ್ಕಂತಹವು. ನೇರಳೆ, ಮಾವಿನ ಕುಡಿ, ಮಾದಳ ಹುಳಿ, ಬೊಗರಿ, ದಾಳಿಂಬ, ಇಂದುಜೀವಿ, ಜೇಷ್ಠ ಮಧು, ಲಾವಂಚ, ಗೋಪೀ ಚಂದನ, ಅರಳು ಇವು ಹತ್ತು ವಮನವನ್ನು ನಿಲ್ಲಿಸುತ್ತವೆ.

೨೯. ತೃಷ್ಣಾನಿಗ್ರಹಣ (Anti Thursts)

ಬಾಯಾರಿಕೆಯನ್ನು ಕಡಿಮೆ ಮಾಡಿಸಕ್ಕದ್ದು ದ್ರವ್ಯಗಳು. ಶುಂಠೀ, ಬಳ್ಳಿ, ತುರುಚ, ಭದ್ರಮುಷ್ಟಿ, ಪರ್ಪಾಟಕ, ಶ್ರೀಗಂಧ, ಕಿರಾತಕಡ್ಡಿ, ಅಮೃತಬಳ್ಳಿ, ಮುಡಿವಾಳ, ಕೊತ್ತಂಬರಿ, ಕಹಿಪಡವಲ ಇವು ಹತ್ತು ಬಾಯಾರಿಕೆಯನ್ನು ನಿವಾರಿಸುತ್ತವೆ.

೩೦. ಹಿಕ್ಕಾ ನಿಗ್ರಹ (Anti Hiccoughs)

ಬೊಗರೀ ಬೀಜ, ಕಲ್ಲಂಟೆ, ಗುಳ್ಳ, ಒಂದಣಿಕೆ, ಅಳಿಲೆಕಾಯಿ, ಹಿಪ್ಪಲೆ ಬಿಳಿತುರುಚ, ಕರ್ಕಾಟಕ ಶೃಂಗಿ ಇವು ಹತ್ತು ಬಿಕ್ಕನ್ನು ನಿಲ್ಲಿಸುತ್ತವೆ.

೩೧. ಪುರೀಷ ಸಂಗ್ರಹಣೀಯ (Intestinal Astrigents)

ಮಲಸಂಗ್ರಹಕಾರೀ ದ್ರವ್ಯಗಳು, ಪ್ರಿಯಂಗು, ಬಳ್ಳಿ ತುರುಚ, ಮಾವಿನ ಬೀಜದ ತಿರುಳು, ಆನೆಮುಂಗು, ಲೋಧ್ರ, ಬೂರುಗದ ಮೇಣ, ಮಂಜಿಷ್ಠ, ಧಾತಕೀ ಪುಷ್ಟ, ಪುರುಷ ರತ್ನ, ಪದ್ಮಕೇಸರ ಇವು ಹತ್ತು ಮಲನಿಗ್ರಹಕಾರಿಯಾಗಿದೆ.

೩೨. ಪುರೀಷವಿರಜನೀಯ (Laxatives)

ಮಲನಿವಾರಕಗಳು – ನೇರಳೆಹಣ್ಣು, ಬೇಲದ ಚಕ್ಕೆ, ಬಳ್ಳಿತುರುಚ, ಇಪ್ಪೆ, ಬುರುಗ, ಸರಳ ಧೂಪ, ಸುಟ್ಟಮಣ್ಣು, ಪಯಸ್ಯಾ, ನೈದಿಲೆ, ಎಳ್ಳುಕಾಳು ಇವು ಹತ್ತು ಮಲ ನಿವಾರಕಗಳು.

೩೩. ಮೂತ್ರ ಸಂಗ್ರಹಣೀಯ (Urinary Astromgent)

ಮೂತ್ರವನ್ನು ಸಂಗ್ರಹಿಸುವಂತಹ ದ್ರವ್ಯಗಳು – ನೀರಲಹಣ್ಣು, ಮಾವು, ಬಸರಿ, ಗೋಳಿ, ಕಿರುಗೋಳಿ, ಹತ್ತಿ, ಅಶ್ವತ್ಥ ಗೇರು, ಕಲ್ಲತ್ತಿ, ಬಿಳೆಕಾಚು ಇವು ಹತ್ತು ಮೂತ್ರ ಸಂಗ್ರಹಣೀಯ ದ್ರವ್ಯಗಳು.

೩೪. ಮೂತ್ರ ವಿರಜನೀಯ (Corrective of Urinary Pigments)

ಮೂತ್ರವನ್ನು ಸ್ವಚ್ಚಮಾಡತಕ್ಕಂತಹ ದ್ರವ್ಯಗಳು – ನೆಲಗುಂಬಳ ಗಡ್ಡೆ, ನೆಗ್ಗಿಲು, ವಾಸ್ತುಕ ಶೀಕ, ಬಜೆ, ಪಾಷಣ ಭೇದಿ, ದರ್ಭೆ, ಕುಶ, ಕಾಶ, ಶರ, ಮೃದು ದರ್ಭೆ ಇವುಗಳ ಮೂಲಗಳು, ಇವು ಹತ್ತು ಮೂತ್ರ ವಿರೇಚಕಗಳು.

೩೫. ಮೂತ್ರ ವಿರೇಚನೀಯ (Diuritics)

ಮೂತ್ರವನ್ನು ಹೊರಡಿಸಕ್ಕಂತಹವು. ತಾವರೆ, ಬಿಳಿ ತಾವರೆ, ನೀಲ ತಾವರೆ, ಕೆಂದಾವರೆ, ನೈದಿಲೆ, ಬಿಳಿ ನೈದಿಲೆ, ಕೆಂಪು ನೈದಿಲೆ, ಇಪ್ಪೆ, ಪ್ರಿಯಂಗು, ಧಾತಕೀ, ಇವುಗಳು ಪುಷ್ಟಗಳು ಮೂತ್ರ ವಿರೇಚಕಗಳಾಗಿವೆ.

೩೬. ಕಾಸಹರ (Cough Sedetives)

ಕೆಮ್ಮನ್ನು ಕಡಿಮೆ ಮಾಡತಕ್ಕಂತಹ ದ್ರವ್ಯಗಳು – ದ್ರಾಕ್ಷಿ, ಅಳಿಲೆಕಾಯಿ, ನೆಲ್ಲಿಕಾಯಿ, ಹಿಪ್ಪಲಿ, ಬಳ್ಳಿ ತುರುಚ, ಕರ್ಕಟ ಶೃಂಗಿ, ಕಲ್ಲಂಟೆ, ಬಳಿ ಪುನರ್ನವ, ಪುನರ್ನವ, ನೆಲನೆಲ್ಲಿ ಇವು ಹತ್ತು ಕಾಸಹರಗಳು.

೩೭. ಶ್ವಾಸಹರ (Bronchial Antispasmotics)

ಉಬ್ಬುಸವನ್ನು ವಾಸಿಮಾಡತಕ್ಕಂತಹವುಗಳು, ಕಚ್ಚೂರ, ಪುಷ್ಕರಮೂಲ, ಆಮ್ಲವೇತಸ, ಯಾಲಕ್ಕಿ, ಹಿಂಗು, ಅಗಿಲುಗಂಧ, ತುಳಸಿ, ನೆಲನೆಲ್ಲಿ, ಜೀವಂತೀ, ನಸುಗುನ್ನೀ, ಇವು ಹತ್ತು ಉಬ್ಬುಸವನ್ನು ನಿವಾರಿಸುತ್ತವೆ.

೨೮. ಶೋಥಹರ (Anti Oedema Drugs)

ಬಾವನ್ನು ಕಡಿಮೆ ಮಾಡತಕ್ಕವುಗಳು ಪಾದರಿ, ನರುವಲು, ಬಿಲ್ವಪತ್ರೆ, ಆನೆಮುಂಗು, ಶಿವನಿ, ಕಲ್ಲಂಟೆ, ಗುಳ್ಳ, ಓರೆಲೆ, ಮೂವಲೆ, ನೆಗ್ಗಿಲು ಇವು ಶೋಥಹರಗಳು.

೩೯. ಜ್ವರಹರ (Anti Pyretics)

ಜ್ವರನಿವಾರಕಗಳು – ನಾಮದ ಬೇರು(ಸಾರಿವಾ), ಸಕ್ಕರೆ, ಅಗಳು ಶುಂಠಿ, ಮಂಜಿಷ್ಠ, ದ್ರಾಕ್ಷಿ, ಗೋಣಿಮರ, ಪರೂಷಕ, ಅಣಿಲೆಕಾಯಿ, ನೆಲ್ಲಿಕಾಯಿ, ಕಾಂತಿಕಾಯಿ ಇವು ಹತ್ತು ಜ್ವರನಿವಾರಕಗಳಾಗಿವೆ.

೪೦. ಶ್ರಮಹರ (Anti Fatigues)

ಶ್ರಮ – ಆಯಾಸವನ್ನು ಪರಿಹರಿಸುವ ದ್ರವ್ಯಗಳು – ದ್ರಾಕ್ಷಿ, ಖರ್ಜೂರ, ಪ್ರಿಯಾಲು, ಬೊಗರಿ (ಖದರ), ದಾಳಿಂಬ, ಕಾಡುಹತ್ತಿ, ಪರೂಷಕ, ಕಬ್ಬು, ಜವೆಗೋಧಿ, ಜೇಷ್ಠ ಮಧು. ಇವು ಹತ್ತು ಶ್ರಮನಿವಾರಕಗಳು.

೪೧. ದಾಹಪ್ರಶಮನ (Refrigerants)

ಉರಿಯನ್ನು ಶಾಂತಮಾಡತಕ್ಕಂತಹವುಗಳು. ಅರಳು, ರಕ್ತಚಂದನ, ಶಿವನೀ ಹಣ್ಣು, ಜೇಷ್ಠ ಮಧು, ಸಕ್ಕರೆ ನೈದಿಲೆ, ಲಾವಂಚ, ನಾಮದ ಬೇರು, ಅಮೃತಬಳ್ಳಿ, ಕರಿಮುಡಿವಾಳ. ಇವು ದಾಹಪ್ರಶಮಕಗಳು.

೪೨. ಶೀತಪ್ರಶಮನ (Anti Colds)

ಶೀತವನ್ನು ವಾಸಿಮಾಡಕ್ಕವುಗಳು, ತಗರ, ಅಗಿಲುಗಂಧ, ಕೊತ್ತಂಬರಿ, ಶುಂಠಿ, ಮಜ್ಜಿಗೆ ಹುಲ್ಲು, ಬಜೆ, ಕಲ್ಲಂಟೆ, ನರುವಲು, ಆನೆಮುಂಗು, ಹಿಪ್ಪಲಿ ಇವು ಹತ್ತು ಶೀತ ಪ್ರಶಮನಗಳು.

೪೩. ಉದರ್ದಪ್ರಶಮನ (Anti Urticarials)

ತಂಡುಕ, ಪ್ರಿಯಾಲ, ಬದರ, ಕೆಂಪು ಕಾಚು, ಬಿಳಿಕಾಚು, ಹಾಲೆ, ರ್ಯಾಳ, ಮತ್ತಿ, ಆಸನ, ಕರಿಜಾಲಿ ಇವು ಹತ್ತು ಉದರ್ದ(ಪಿತ್ತಗಂಧೆ) ಪ್ರಶಮನ ದ್ರವ್ಯಗಳಾಗಿವೆ.

೪೪. ಅಂಗಮರ್ದ ಪ್ರಶಮನ (Restoratives)

ಅಂಗಗಳ ಸೆಳೆತವನ್ನು ಶಮನಮಾಡಿಸತಕ್ಕ ದ್ರವ್ಯಗಳು – ಮೂವೆಲೆ, ಓರೆಲೆ, ಗುಳ್ಳ, ಕಲ್ಲಂಟೆ, ಹರಳು, ಕಾಕೋಲಿ, ಶ್ರೀಗಂಧ, ಲಾವಂಚ, ಯಾಲಕ್ಕಿ, ಜೇಷ್ಠಮಧು ಇವು ಅಂಗಮರ್ದ ನಿವಾರಕಗಳು.

೪೫. ಶೂಲ ಪ್ರಶಮನ (Analgesics)

ನೋವು ನಿವಾರಕಗಳು – ಹಿಪ್ಪಲಿ, ಹಿಪ್ಪಲೀಮೂಲ, ಕಾಡುಮೆಣಸಿನ ಬೇರು, ಚಿತ್ರಮೂಲ, ಶುಂಠಿ, ಕಾಳುಮೆಣಸು, ಓಮ, ಸಿರಿಕಾಳ, ಜೀರಗಿ, ನದ್ಯಾಮ್ಲ ಇವು ಹತ್ತು ಶೂಲನಿವಾರಕಗಳಾಗಿವೆ.

೪೬. ಶೋಣಿತಾಸ್ಥಾಪನ (Heamostatics)

ರಕ್ತವನ್ನು ನಿಲ್ಲಿಸುವಂತಹ ದ್ರವ್ಯಗಳಿವು, ಜ್ಯೇಷ್ಠ ಮಧು, ಕುಂಕುಮ, ಕೇಸರ, ಬೂರಗದ ಮೇಣ, ಮಣ್ಣಿನ ಕಪಾಲ, ಲೋಧ್ರ, ಕಾಲಿಕಲ್ಲು, ಪ್ರಿಯಂಗು, ಸಕ್ಕರೆ, ಅರಳು. ಇವು ಹತ್ತು ರಕ್ತವನ್ನು ನಿಲ್ಲಿಸುವಂತಹ ದ್ರವ್ಯಗಳಾಗಿವೆ.

೪೮. ವೇದನಾಸ್ಥಾಪನ (Pain Killers)

ನೋವು ನಿಲ್ಲಿಸುವಂತಹ ದ್ರವ್ಯಗಳು – ರಾಳದ ಮರ, ದಡ್ಡಾಲ, ಕದಂಬ, ಪದ್ಮಕ, ಸೈಂಧವ ಲವಣ, ಬೂರಗದ ಮೇಣ, ಜಾಗೆಮರ, ನೇಮಿಮರ, ಸುರಪುರಕ, ಅಶೋಕ ಇದು ಹತ್ತು ವೇದನಾನಿವಾರಕಗಳು.

೪೮. ಸಂಜ್ಞಾಸ್ಥಾಪನ (Resuscitatives)

ಎಚ್ಚರಿಕೆಯನ್ನು ಸರಿಪಡಿಸತಕ್ಕಂತಹ ದ್ರವ್ಯಗಳು – ಹಿಂಗು, ಕರಿಬೇವು, ಅರಿಮೇದ, ಬಜೆ, ಕಚೋಧ, ಅಮೃತಬಳ್ಳಿ, ಬಿಳಿ ಬಜೆ, ಜಟಾಮಾಂಸಿ, ಅರತೆ, ಕಟುಕರೋಹಿಣಿ. ಇವು ಎಚ್ಚರಿಕೆಯನ್ನುಂಟು ಮಾಡುತ್ತವೆ.

೪೯. ಪ್ರಜ್ಞಾಸ್ಥಾಪನ (Procreants)

ಬುದ್ಧಿಯನ್ನು ಸರಿಪಡಿಸುವಂತಹ ದ್ರವ್ಯಗಳು, ಹಾವುಮೆಕ್ಕೆ, ಒಂದೆಲಗ, ಶತಾವರಿ, ಮಹಾಶತಾವರಿ, ವಾಯುವಿಡಂಗ, ಚಂಗಲ್ಕೋಷ್ಠ, ನೆಲ್ಲಿ, ಕಟುಕರೋಹಿಣಿ, ಸಹದೇವಿ, ಪ್ರಿಯಂಗು. ಇವು ಹತ್ತು ಪ್ರಜ್ಞಾಸ್ಥಾಪಕಗಳಾಗಿವೆ.

೫೦. ವಯಃಸ್ಥಾಪನ (Rejuvenators)

ಪ್ರಾಯವನ್ನು ಕಾಪಾಡತಕ್ಕ ದ್ಯವ್ಯಗಳು, ಅಮೃತಬಳ್ಳಿ, ಅಣಿಲೆಕಾಯಿ, ನೆಲ್ಲಿಕಾಯಿ, ಭದ್ರಮುಷ್ಠಿ, ಬಿಳೇ ಬಜೆ, ಜೀವಂತೀ, ಅರತೆ, ಒಂದೆಲಗ, ಮೂಪೆಲೆ, ಪುನರ್ನವ ಇವು ವಯಸ್ಸನ್ನು ಕಾಪಾಡುವಂತಹವು.

* * *