ಶರೀರ ರಚನೆ (ಶಾಸ್ತ್ರದನುಸಾರ)

ಮಾನವ ಶರೀರಕ್ಕೆ ಕೈ ಕಾಲುಗಳೆಂಬ ನಾಲ್ಕು ಶಾಖೆಗಳು, ಮಧ್ಯದಲ್ಲಿ ಮುಂಡ ಮತ್ತು ಮೇಲ್ಬಾಗಕ್ಕೆ ತಲೆ ಹೀಗೆ ಮುಖ್ಯವಾಗಿ ಆರು ಅಂಗಗಳಿವೆ.

ಕಪಾಲ ಹೊಟ್ಟೆ, ಬೆನ್ನು, ಹೊಕ್ಕಳು, ಹಣೆ, ಮೂಗು,ಗದ್ದ, ಕಿಬ್ಬೊಟ್ಟೆ, ಕೊರಳು ಇವು ಒಂದೊಂದಾಗಿರುತವೆ. ಕಿವಿ, ಕಣ್ಣು, ಮೂಗಿನ ರಂಧ್ರ, ಹುಬ್ಬು, ಕೆನ್ನೆ, ಹೆಗಲು, ಗಲ್ಲ, ಕಂಕಳು, ಮೇಲೆ ಅಂಡ, ಪಕ್ಕ, ತಿಕ, ಮೊಣಕಾಲು, ತೋಳು, ತೊಡೆ ಮೊದಲಾದವುಗಳು ಎರಡೆರಡಾಗಿರುತ್ತವೆ. ಬೆರಳುಗಳು ೨೦ ಇವೆ.

ಮನುಷ್ಯ ಶರೀರದಲ್ಲಿ ೩೦೦ ಅಸ್ಥಿಗಳಿವೆ. ೩೦೦ ಸಂದಿಗಳಿವೆ. ೯೦೦ ಸ್ನಾಯುಗಳಿವೆ. ೭೦೦ ಸಿರೆಗಳಿವೆ. ೫೦೦ ಮಾಂಸ ಪೇಶಿವಳಿವೆ ಎಂದು ಉಗ್ರದಿತ್ಯಾಚಾರ್ಯರಯ ಹೇಳಿದ್ದಾರೆ. ಈ ವಿವರಗಳು ಸುಶ್ರುತಾಚಾರ್ಯರು ವಿವರಿಸಿದ ಸಂಖ್ಯೆಗೆ ಸಮನಾಗಿವೆ. ಆಧುನಿಕ ವೈದ್ಯಶಾಸ್ತ್ರವು ಮಾತ್ರ ಆಯುರ್ವೇದಿಯರು ಗಣನೆಗೆ ತೆಗೆದುಕೊಂಡ ಕೆಲ ಮೃದು ಎಲುಬುಗಳನ್ನು ಕೈಬಿಟ್ಟಿದ್ದಾರೆ.

ಹೊಕ್ಕಳಿನ ಮೇಲ್ಭಾಗಕ್ಕೆ ೧೦ ಹಾಗೂ ಕೆಳಗೆ ಹೋಗುವ ೧೦ ಹೀಗೆ ಧಮನಿಗಳು ೨೦ ಇವೆ. ತಿರ್ಯಕ್ ರೂಪದಲ್ಲಿ ನಾಲ್ಕು ಧಮನಿಗಳಿವೆ. ಈ ಪ್ರಕಾರ ೨೪ ಧಮನಿಗಳಿವೆ. ೧೬ ಕಂಡರಾಗಳು, ೬ ಕೂರ್ಚಗಳಿವೆ.

ಮಾಂಸರಜ್ಜು, ಎರಡು ಇವೆ. ತ್ವಚೆಯು ೭ ಪದರಾಗಿದೆ. ಸ್ರೋತಸ್ಸುಗಳು ೮ ಇವೆ. ಯಕೃತ್, ಪ್ಲೀಹಗಳು ಒಂದೊಂದು ಇವೆ. ಒಂದು ಅಮಾಶಯ ಹಾಗೂ ಪಕ್ವಾಶಯದ ವಿವಿಧ ಭಾಗಗಳು ಸೇರಿ ೧೬ ಇವೆ.

ಶರೀರದಲ್ಲಿ ೧೦೭ ಮರ್ಮಗಳಿವೆ. ಒಂಭತ್ತು ದ್ವಾರಗಳಿವೆ. ೮೦ ಲಕ್ಷ ರೋಮಕೂಪಗಳಿವೆ. ವಾತ, ಪಿತ್ತ ಕಫಗಳೆಂಬ ಮೂರು ದೋಷಗಳಿವೆ. ಮರ್ಮಗಳ ವಿಶೇಷ ವರ್ಣನೆಯು ಕಲ್ಯಾಣ ಕಾರಕದ ೨೦ನೇ ಅಧ್ಯಾಯದಲ್ಲಿ ಬಂದಿದೆ.

ಬಾಯಿಯಲ್ಲಿ ೩೨ ಹಲ್ಲುಗಳಿವೆ.(ಆಯುರ್ವೇದದಲ್ಲಿ ಇವನ್ನು ಕೂಡ ಎಲುಬುಗಳೆಂದು ಪರಿಗಣಿಸಿದ್ದಾರೆ.) ಉಗುರುಗಳು ೨೦ ಇವೆ. ಮೇದಸ್ಸು, ಶುಕ್ರ ಹಾಗೂ ಮಸ್ತಲುಂಗಗಳ ಪ್ರತ್ಯೇಕ ಪ್ರಮಾಣ ಎರಡು ಅಂಜಲಿಯಷ್ಟಿದೆ. ವಸೆಯು ೩ ಅಂಜಲಿಪ್ರಮಾಣದಲ್ಲಿದ್ದರೆ ಕಫ ಹಾಗು ಪಿತ್ತಗಳು ಪ್ರತ್ಯೇಕವಾಗಿ ಆರು ಪ್ರಸೃತಿ ಪ್ರಮಾಣದಲ್ಲಿವೆ. ರಕ್ತವು ಅರ್ಧ ಅಢಕ ಪ್ರಮಾಣದಷ್ಟಿದೆ. ಮೂತ್ರವು ಒಂದು ಪ್ರಸ್ಥ ಪ್ರಮಾಣದಷ್ಟಿದೆ. ಮಲವು ಅರ್ಧ ಅಢಕ ಪ್ರಮಾಣದಲ್ಲಿದೆ. ದೇಹದಲ್ಲಿ ವಾತ ಪಿತ್ತ ಕಫಗಳು ಪ್ರತ್ಯೇಕವಾಗಿ ೫ ವಿಭಾಗಗಳನ್ನು ಹೊಂದಿದ್ದು ತಮ್ಮ ತಮ್ಮ ಕೆಲಸಗಳನ್ನು ದೇಹದಲ್ಲಿ ಮಾಡುತ್ತವೆ. (ಈ ವಿಷಯದ ವಿವರಗಳನ್ನು ಪ್ರತ್ಯೇಕವಾಗಿ ಕೊಡಲಾಗಿದೆ)

ಶರೀರ ರಚನೆಯ ವಿವರ: ಚರ್ಮಗಳು, ಕಲಾ ಎಂಬ ಭಾಗಗಳು, ಧಾತುಗಳು,ಮಲಗಳು, ದೋಷಗಳು, ಯಕೃತ, ಪ್ಲೀಹ, ಫುಫ್ಪುಸ, ಉಂಡುಕ, ಹೃದಯ, ಆಶಯಗಳು, ಕರುಗಳುಗಲು, ವೃಕ್ಕಗಳು, ಸೋಪಾನಗಳು, ಕಂಡರೆಗಳು, ಮಾಂಸ ಜಾಲ, ಕೂರ್ಚಾ ಎಂಬ ಕಟ್ಟುಗಳು, ರಜ್ಜು ಎಂಬ ಹಗ್ಗಳು, ಸೇವನಿ ಎಂಬ ನರದ ಹೊಲಿಗೆಗಳು, ಸಂಘಾತ ಎಂಬ ಎಲುಬುಗಳ ಕೂಟಗಳು, ಸೀಮಂತಗಳೆಂಬ ಜೋಡನೆ ಅಂಚುಗಳು, ಎಲುಬುಗಳು, ಸಂಧಿಗಳು, ನರಗಳು, ಮಾಂಸಖಂಡಗಳು, ಮರ್ಮಗಳು, ಸಿರೆಗಳು, ಧಮನೀ ನಾಡಿಗಳು ಮತ್ತು ಅನ್ನ ಪ್ರಾಣಾದಿಯುಕ್ತ ದ್ರವ್ಯಗಳನ್ನು ಸಾಗಿಸುವ ನಾಳಗಳು ಶರೀರ ರಚನೆಯಲ್ಲಿ ಒಳಗೊಂಡಿವೆ.

ಸ್ತ್ರೀಯರಲ್ಲಿ: ಸ್ತ್ರೀಯರಿಗೆ ೨೦ ಮಾಂಸಖಂಡಗಳು ಪುರುಷರಿಗಿಂತ ಹೆಚ್ಚಾಗಿವೆ. ಅವುಗಳಲ್ಲಿ ಒಂದೊಂದು ಸ್ತನದಲ್ಲಿ ೫-ಇವು ಯೌವನ ಕಾಲದಲ್ಲಿ ಬೆಳೆಯುತ್ತವೆ. ಯೋನಿ ಮಾರ್ಗದಲ್ಲಿ ೪, ಗರ್ಭಭಿದ್ರದಲ್ಲ ೩, ಶುಕ್ರ – ಶೋಣಿತಗಳನ್ನು ಪ್ರವೇಶಮಾಡಿಸುವಂಥವು ೩- ಹೀಗೆ ಒಟ್ಟು ೨೦ ಇದೆ. ಪಿತ್ತಾಶಯ – ಪಕ್ವಾಶಯ ಮಧ್ಯೆ ಗರ್ಭಾಶಯವಿದ್ದು ಅದರಲ್ಲಿ ಗರ್ಭನಿಂತು, ಬೆಳೆದು ದಿನಗಳು ತುಂಬಿದ ಬಳಿಕ ಮಗು ಹೊರಬರುವುದು.

ಟಿಪ್ಪಣಿ: (ಸುಶ್ರುತರ ಪ್ರಕಾರ)

ಎಲುಬುಗಳ ಪ್ರಯೋಜನ : ಮರಗಳು ಒಳಗಿನ ತಿರುಳುಗಳು ಬಲದಿಂದ ನಿಂತಿರುವಂತೆ ಪ್ರಾಣಿಗಳ ದೇಹಗಳು ಎಲುಬೆಂಬ ತಿರುಳುಗಳಿಂದ ಗಟ್ಟಿಯಾಗಿ ಆಧರಿಸಿವೆ. ಆದ್ದರಿಂದ ಪ್ರಾಣಿಗಳ ಚರ್ಮ ಮಾಂಸಗಳು ಸ್ವಲ್ಪ ಕಾಲದಲ್ಲಿಯೇ ನಾಶವಾದಗ್ಯೂ ಎಲುಬುಗಳು ನಾಶವಾಗುವುದಿಲ್ಲ. ಇವು ದೇಹ ಧಾರಣೆ ಮಾಡುತ್ತವೆ. ಇವುಗಳಲ್ಲಿ ಮಾಂಸಗಳನ್ನು ನರ-ನಾಳಗಳು ಬಿಗಿಯಾಗಿ ಕಟ್ಟಿರುವುದರಿಂದ ಎಲುಬುಗಲು ಕಡಿದುಹೋಗದೆ ಮತ್ತು ಬೀಳದೆ ಆದರಿಸಿಕೊಂಡಿರುತ್ತವೆ.

ಈ ಎಲುಬುಗಳು ಕಪಾಲ, ರುಚಕ, ತರುಣ, ವಲಯ, ಹಾಗೂ ನಲಕ ಎಂದು ಐದು ವಿಧಗಳಿವೆ. ಅವುಗಳಲ್ಲಿ ಮೊಣಗಂಟು, ಅಂಡು, ಹೆಗಲು, ದವಡೆ, ಕಾಲು, ಕೆನ್ನೆ, ತಲೆ ಇವುಗಳ ಎಲುಬುಗಳ ಕಪಾಲ ಗುಂಪಿಗೆ ಸೇರಿವೆ. ಹಲ್ಲುಗಳ ರುಚಕಗಳಾಗಿವೆ. ಮೂಗು, ಕಿವಿ, ಕುತ್ತಿಗೆ, ಕಣ್ಣಿನ ಚೀಲ ಇವು ತರುಣ(ಮೃದು) ಅಸ್ಥಿಗಳು. ಹಸ್ತ, ಪದ, ಪಕ್ಕ,ಬೆನ್ನು, ಹೊಟ್ಟೆ, ಎದೆ ಈ ಭಾಗಗಳಲ್ಲಿಯ ಎಲುಬುಗಳು ವಲಯಗಳು ಹಾಗೂ ಇನ್ನುಳಿದ ಎಲುಬುಗಳು ಭೇದಗಳು ನಳಕ(ನಳಿಕೆ) ಎಂದೂ ವಿಭಕ್ತವಾಗಿದೆ.

ಶರೀರದಲ್ಲಿರುವ ೩೦೦ ಅಸ್ಥಿಗಳು

ಪಾದದ ಬೆರಳುಗಳು ೧೫
ಪಾದದ ತಲ, ಕೂರ್ಚು ಮತ್ತು ಗಂಟು ಸೇರಿ ೧೦
ಹಿಮ್ಮಡಿ
ಮೊಣಕಾಲ
ಮೊಣಕಾಲಗಂಟು
ಒಟ್ಟು ೩೦ ೩೦
ಹೀಗೆ ಎರಡು ಕಾಲು, ಕೈಗಳಲ್ಲಿ ಒಟ್ಟು ೧೨೦ ೧೨೦
ಗುದ
ಭಗ
ವಿತಂಬ
ತಿಕ
ಎದೆಗೂಡಿನ ಪಕ್ಕದ ಎಲುಬುಗಳುಜ ೭೨
ಬೆನ್ನಿನಲ್ಲಿ ೩೦
ಎದೆಯಲ್ಲಿ
ಕುತ್ತಿಗೆ ಸಂದು
ಒಟ್ಟು ೧೧೭ ೧೧೭
ಕೊರಳು
ಗಂಟಲು ನಾಳ
ದವಡೆ
ಹಲ್ಲುಗಳು ೩೨
ಮೂಗು
ತಾಲು
ಗಂಡಸ್ಥಲ
ಕೆನ್ನೆ ಹುಬ್ಬು
ಮಸ್ತಕ
ಕಿವಿ
ಒ‌ಟ್ಟು ೬೩ ೬೩
ಟ್ಟು   ೩೦೦

ಎಲುಬುಗಳು ಸಂದುಗಳು ಇವು ಸ್ಥಿರವಾಗಿದ್ದರೂ ಅವಶ್ಯಕತೆಗೆ ತಕ್ಕಂತೆ ಅಲುಗಾಡುತ್ತಿರುತ್ತವೆ. ಇವುಗಳಲ್ಲಿ ಎರಡು ವಿಧ, ಕೈಕಾಲುಗಳು, ದವಡೆ, ಸೊಂಟದಲ್ಲಿರುವ ಸಂಧಿಗಳು ಅಲ್ಲಾಡುತ್ತವೆ. ಇನ್ನುಳಿದ ಸಂದುಗಳೆಲ್ಲ ಸ್ಥಿರವಾಗಿರುತ್ತವೆ. ಈ ಸಂದುಗಳು ದೇಹದಲ್ಲಿ ಒಟ್ಟು ೨೧೦ ಇವೆ.

ಅಂಗುಷ್ಠದಲ್ಲಿ ೨, ಮಕ್ಕ ನಾಲ್ಕು ಬೆರಳುಗಳ ಒಂದೊಂದರಲ್ಲಿ ೩ ಹೀಗೆ ೧೪
ಮಣಿಗಂಟು, ಮೊಣಗಂಟು, ತೊಡೆಸಂದು
ಒಟ್ಟು ೧೭
ಎರಡು ಕಾಲು, ಎರಡು ಕೈಗಳಲ್ಲಿ ೧೭x೪ ೬೮
ಸೊಂಟದ ಕಪಾಲಗಳಲ್ಲಿ
ಬೆನ್ನಿನ ಕೋಲಿನಲ್ಲಿ ೨೪
ಪಕ್ಕಗಳಲ್ಲಿ ೨೪
ಎದೆಯಲ್ಲಿ ೫೯
ಕೊರಳಲ್ಲಿ
ಕುತ್ತಿಗೆಯಲ್ಲಿ
ನಾಡಿಗಳಲ್ಲಿ, ಹೃದಯ, ಕ್ಲೋಮಗಳಿಗೆ ಸಂಬಂಧಿಸಿದವು ೧೮
ಹಲ್ಲುಗಳ ಮೂಲಗಳಲ್ಲಿ ೩೨
ಕುತ್ತಿಗೆಯ ಮಣಿಗಂಟು
ಮೂಗಿನಲ್ಲಿ
ರೆಪ್ಪೆಗಳ ಮಂಡಲಗಳಿಂದ ಹುಟ್ಟಿದವು ಕಣ್ಣುಗಳಲ್ಲಿರುವವರು
ಗಲ್ಲದಲ್ಲಿ
ಕಿವಿ
ಕೆನ್ನೆ
ದವಡೆಯ ಸಂದು
ಕೆನ್ನೆ ಮತ್ತು ಹುಬ್ಬುಗಳಲ್ಲಿ
ತಲೆಯ ಕಪಾಲಗಳಲ್ಲಿ
ಮಸ್ತಕದಲ್ಲಿ
ಹೀಗೆ ಕುತ್ತಿಗೆ ಮೇಲ್ಭಾಗದಲ್ಲಿ ಒಟ್ಟು ೮೩
ಒಟ್ಟು ಸಂದುಗಳ ಸಂಖ್ಯೆ   ೨೧೦

ಮರ್ಮಗಳು: ಮಾಂಸಖಂಡ, ಸಿರಾನಾಳ, ನರ, ಎಲುಬು ಸಂದು ಇವುಗಳೆಲ್ಲ ಒಟ್ಟಾಗಿರುವ ಸ್ಥಾನಗಳು ಮರ್ಮಗಳೆನಿಸುತ್ತವೆ. ಇವುಗಳಲ್ಲಿ ಜೀವವೇ ಇರುತ್ತದಾದ್ದರಿಂದ ಇವು ತುಂಬ ಮುಖ್ಯ ಸ್ಥಾನಗಳೆನಿಸುತ್ತವೆ. ಇವು ಒಟ್ಟು ೧೦೭ ಇವೆ. ಅವುಗಳೊಡೆನ ಮಾಂಸ ಮರ್ಮಗಳು ೧೧, ಸಿರ ಮರ್ಮಗಳು ೪೧, ನರಮರ್ಮಗಳು ೨೭, ಎಲುಬು ಮರ್ಮಗಳು ೮, ಸಂದು ಮರ್ಮಗಳು ೨೦ ಹೀಗೆ ಐದು ವಿಭಾಗಗಳಾಗಿ ಒಟ್ಟು ೧೦೭ ಆಗುತ್ತವೆ.

ಈ ಮರ್ಮಗಳಲ್ಲಿ ೧. ಸದ್ಯ ಪ್ರಾಣ ತೆಗೆಯುವಂಥವು ೨. ಕಾಲಾಂತರದಲ್ಲಿ ಪ್ರಾಣ ತೆಗೆಯುವಂಥವು. ೩. ತಗಲಿದ ಆಯುಧವನ್ನು ತೆಗೆದ ಕೂಡಲೇ ಪ್ರಾಣ ತೆಗೆಯುವಂಥವು ೪. ಅಂಗವಿರೂಪ ಮಾಡುವಂಥವುಗಳು ಹಾಗೂ ೫.ರೋಗವನ್ನುಂಟು ಮಾಡತಕ್ಕಂಥವೆಂದು ಐದು ವಿಧಗಳಿವೆ. ಶರೀರದಲ್ಲಿರುವ ತ್ರಿದೋಷಗಳು ನಾಲ್ಕು ವಿಧವಾಗಿರುವ ಸಿರಾನಾಳಗಳು ಹೆಚ್ಚಾಗಿ ಈ ಮರ್ಮಗಳಲ್ಲಿ ಕೂಡಿರುತ್ತವೆ. ಅವು ನರ, ಎಲುಬು, ಮಾಂಸಖಂಡ ಮತ್ತು ಸಂದುಗಳನ್ನು ತೃಪ್ತಿಪಡಿಸಿ ದೇಹವನ್ನು ಕಾಪಾಡುತ್ತವೆ.

ಸದ್ಯ ಪ್ರಾಣಹರಮರ್ಮಗಳಿಗೆ ಪೆಟ್ಟು ಬಿದ್ದರೆ ಏಳು ದಿನಗಳಲ್ಲಿ, ಕಾಲಾಂತರ ಪ್ರಾಣಹರ ಮರ್ಮಸ್ಥಾನಕ್ಕೆ ಪೆಟ್ಟು ಬಿದ್ದರೆ ೧೫ ರಿಂದ ೩೦ ದಿವಸಗಳಲ್ಲಿ,ಕ್ಷಿಪ್ರ ಮರ್ಮಗಳಿಗೆ ಪೆಟ್ಟು ಬಿದ್ದರೆ ಬೇಗನೆ ಮರಣ ಬರುವುದು. ಈ ಮರ್ಮಗಳ ಸಮೀಪ ಪೆಟ್ಟು ಬಿದ್ದರು ಅದು ಕೂಡ ಅಪಾಯಕರ. ಅತಿಯಾಗಿ ಪೆಟ್ಟುಬಿದ್ದ ಮರ್ಮಸ್ಥಾನಗಳಿಂದಲು ಬೇಗ ಮೃತ್ಯುಬರುವುದು.

ಆಶಯಗಳು: ವಾತಾಶಯ, ಪಿತ್ತಾಶಯ, ಕಫಾಶಯ, ರಕ್ತಾಶಯ, ಆಮಾಶಯ, ಪಕ್ವಾಶಯ, ಮೂತ್ರಾಶಯ ಈ ಏಳು ಆಶಯಗಳು ಸ್ತ್ರೀ-ಪುರುಷರಲ್ಲಿ ಸಾಮಾನ್ಯವಾಗಿರುತ್ತವೆ. ಸ್ತ್ರೀಯರಲ್ಲಿ ಮಾತ್ರ ಗರ್ಭಾಶಯವೊಂದು ಹೆಚ್ಚಾಗಿರುತ್ತದೆ.

ಎದೆಯಲ್ಲಿ ಕಫಾಶಯ, ಅದರ ಕೆಳಗೆ ಅಮಾಶಯ, ಹೊಕ್ಕಳ ಮೇಲ್ಗಡೆ ಮಧ್ಯ ಭಾಗದಲ್ಲಿ ಅಗ್ತ್ಯಾಶಯ, ಅದರ ಮೇಲೆ ತಿಕ, ಅದರ ಕೆಳಗೆ ವಾತಾಶಯ, ಅದರ ಕೆಳಗೆ ಮಲಾಶಯ ಹಾಗೂ ಅದರ ಕೆಳಗೆ ಮೂತ್ರಾಶಯ (ಬಸ್ತಿ)ಗಳಿವೆ. ಸ್ತ್ರೀಯರಿಗೆ ಇದೇ ಭಾಗದಲ್ಲಿ ಗರ್ಭಾಶಯವಿದೆ.

ಸ್ರೋತಸ್ಸುಗಳು ಧಮನೀ ಹಾಗು ಸಿರೆಯಲ್ಲದೆ ಹೃದಯಾದಿ ಛಿದ್ರದಿಂದ ಹೊರಟು ದೇಹದಲ್ಲಿ ಆಹಾರಾದಿ ಅಂಶಗಳನ್ನು ಪಸರಿಸಿ ಮುಂದಕ್ಕೆ ಸಾಗಿಸುವಂತಹ ವಾಹಿನಿಗಳೇ ಸ್ರೋತಸ್ಸುಗಳು. ಇವು ಪ್ರಾಣ, ನೀರು, ಅನ್ನರಸ, ರಕ್ತ, ಮಾಂಸ, ಮೇದಸ್ಸು, ಮೂತ್ರ, ಮಲ, ಶುಕ್ರ, ರಜಸ್ಸು, ಇವನ್ನೆಲ್ಲ ಸಾಗಿಸುವವು. ಇವು ಧಾತುಗಳನ್ನು ಅವು ತಯಾರಾದ ಹಾಗೆ ಸಾಗಿಸುವಂಥ ನಾಳಗಳು ಪ್ರಾನವಹ ಸ್ರೋತಸ್ಸುಗಳಿಗೆ ಹೃದಯ ಮೂಲ. ಜಲಸ್ರೋತಸ್ಸಿಗೆ ತಾಲು, ಕ್ಲೋಮ ಸ್ಥಳಗಳು ಮೂಲ. ಅನ್ನದ ಸ್ರೋತಸ್ಸಿಗೆ ಅಮಾಶಯ ಹಾಗೂ ಅದರ ಎಡ ಪಕ್ಕದ ಭಾಗವು ಮೂಲ. ರಸದ ಸ್ರೋತಸ್ಸಿಗೆ ಹೃದಯ ಮತ್ತು ೧೦ ಧಮನಿ ನಾಡಿಗಳು ಮೂಲ. ರಕ್ತದ ಸ್ರೋತಸ್ಸಿಗೆ ಯಕೃತ್ ಮತ್ತು ಪ್ಲೀಹಗಳು ಮೂಲಸ್ಥಾನ, ಮಾಂಸವಾಹಿನಿ ಸ್ರೊತಸ್ಸಿಗೆ ನರ ಮತ್ತು ತೊಗಲುಗಳು, ಮಜ್ಜಾವಾಹಿನಿಗೆ ಎಲುಬುಗಳು ಮತ್ತು ತೊಡೆಗಳು, ಶುಕ್ರವಾಹೀನೀ ಸ್ರೋತಸ್ಸಿಗೆ ಅಂಡ ಮತ್ತು ಮೇಢ್ರ ಮೂತ್ರವಾಹಿನಿ ಸ್ರೋತಸ್ಸಿಗೆ ಬಸ್ತಿ ಮತ್ತು ಸೊಂಟದ ಕೆಳಬದಿ ಪಕ್ಕಗಳು, ಮೂಲವಾಹೀ ಸ್ರೋತಸ್ಸಿಗೆ ಪಕ್ವಾಶಯ ಮತ್ತು ಗುದಭಾಗಗಳು ಹಾಗೂ ಬೆವರಿನ ಸ್ರೋತಸ್ಸು(ರಂಧ್ರ)ಗಳಿಗೆ ಮೇದಸ್ಸು ಹಾಗೂ ರೋಮಕೂಪಗಳು ಮೂಲಗಳಾಗಿವೆ.

ಈ ಸ್ರೋತಸ್ಸುಗಳಿಗೆ ಪೆಟ್ಟಾದಾಗ ಇವು ಹರಿದು ಆಯಾ ಮೂಲ ಸ್ವಭಾವಗಳಿಗೆ ತಕ್ಕಂತೆ ಲಕ್ಷಣಗಳನ್ನು ತೋರಿಸುತ್ತ ಕೆಲ ವೇಳೆ ಸ್ರೋತಸ್ಸು ಪ್ರಮುಖವಾಗಿದ್ದರೆ ಸಾವು ಕೂಡ ಸಂಭವಿಸಬಹುದೆಂದು ಹೇಳಿದ್ದಾರೆ. ಉದಾ.೧. ಪ್ರಾಣವಹ ಸ್ರೋತಸ್ಸುಗಳಿಗೆ ಗಾಯವಾದರೆ ಕೂಗು, ಗೊಗ್ಗುವುದು, ಮೂರ್ಛೆ, ಭ್ರಮೆ, ನಡುಕು ಹಾಗೂ ಮರಣ ಉಂಟಾಗುತ್ತದೆ. ೨.ಅನ್ನವಹ ಸ್ರೋತಸ್ಸುಗಳಿಗೆ ಗಾಯವಾದರೆ ಹೊಟ್ಟೆಯುಬ್ಬರ, ಶೂಲೆ, ಅನ್ನದ್ವೇಷ, ವಾಂತಿ, ಬಾಯರಿಕೆ, ಕಣ್ಣು ಕತ್ತಲುಗೂಡಿಸುವುದು ಹಾಗೂ ಮರಣ ಸಂಭವಿಸುವವು ೩. ಶುಕ್ರವಾಹಿ ಸ್ರೋತಸ್ಸಿಗೆ ಗಾಯವಾದರೆ ನಪುಂಸಕತ್ವ, ವಿಳಂಬವಾಗಿ ಶುಕ್ರಪ್ರವೃತ್ತಿ ಮತ್ತು ಶುಕ್ರವು ರಕ್ತವರ್ಣಕ್ಕೆ ತಿರುಗುವುದು. ಸ್ತ್ರೀಯರಲ್ಲಿ ಗರ್ಭಾಶಯ ರಜೋವಹ ಸ್ರೋತಸ್ಸುಗಳು ಗಾಯವಾದಾಗ ಬಂಜೆತನ, ಮೈಥುನ ಅಸಹಿಷ್ಣುತೆ ಮತ್ತು ರಜಸ್ರಾವಗಳುಂಟಾಗುವವು.

ಕಲಾಗಳು: ರಸಾದಿ ಸಪ್ತಧಾತುಗಳು ಇರುವ ಸ್ಥಾನಗಳ ಒಳಗೆ ದೇಹದ ಉಷ್ಣತೆಯಿಂದ ಪಕ್ವವಾಗಿರುವ ದ್ರವಾಂಶಕ್ಕೆ ಕಲಾ ಎನ್ನುತ್ತಾರೆ. ಇವು ಏಳು ಇವೆ.

. ಮಾಂಸದರಾ: ಇದರಲ್ಲಿ ಸಿರಾನಾಳಗಳು ನರಗಳು, ಧಮನಿಗಳು, ಸ್ರೋತಸ್ಸುಗಳು ಸಹ ಬೆಳೆಯುತ್ತವೆ. ಕೆಸರು ನೀರಿನಲ್ಲಿ ನೈದಿಲೆ ಕಮಲದ ದಂಟುಗಳು ಬೆಳೆದಿರುವಂತೆ ಇವು ಬೆಳೆದಿರುತ್ತವೆ.

.ರಕ್ತಧರಾ: ಮಾಂಸಖಂಡಗಳೊಳಗೆ ಇರುವುದು. ಅದರಲ್ಲಿ ಮುಖ್ಯವಾಗಿ ಪಿತ್ತಕೋಶ ಮತ್ತು ಪ್ಲೀಹಗಳಲ್ಲಿರುವ ನಾಳಗಳಲ್ಲಿ ರಕ್ತವುಂಟಾಗುತ್ತದೆ. ಮಾಂಸವನ್ನು ಕತ್ತರಿಸಿದಾಗ ರಕ್ತವು ಸುರಿಯುವುದು.

.ಮೇದೋಧರಾ: ಮೇದಸ್ಸು ಎಲ್ಲರ ಹೊಟ್ಟೆ ಮತ್ತು ಸೂಕ್ಷ್ಮ ಎಲುಬುಗಳಲ್ಲಿರುತ್ತದೆ. ದೊಡ್ಡ ಎಲುಬುಗಳಲ್ಲಿ ಅದು ಮಜ್ಜಾ ಸ್ವರೂಪದಲ್ಲಿರುತ್ತದೆ.

. ಕಫಧರಾ: ದೇಹದ ಎಲ್ಲ ಸಂದು ಭಾಗಗಳಲ್ಲಿರುತ್ತದೆ ಹಾಗೂ ಅವುಗಳ ಸುಗಮವಾದ ಚಲನವಲನಕ್ಕೆ ಸಹಾಯ ಮಾಡುತ್ತದೆ.

. ಮಲಧರಾ: ಕೋಷ್ಠಕದೊಳಗೆ ಪಕ್ವಾಶಯದಲ್ಲಿದ್ದು ಮಲವನ್ನು ಪ್ರತ್ಯೇಕಿಸುತ್ತದೆ.

. ಪಿತ್ತಧರಾ: ಪಕ್ವಾಶಯ ಸಮೀಪದಲ್ಲಿದ್ದು ಆಮಾಶಯದಿಂದ ಕೆಳಗೆ ಬುರುವ ಉಪಯೋಗಿಸಲ್ಪಟ್ಟ ನಾಲ್ಕು ವಿಧವಾದ ಅನ್ನಪಾನಗಳನ್ನು(ಉಂಡದ್ದು, ತಿಂದದ್ದು, ಕುಡಿದದ್ದು, ನೆಕ್ಕಿದ್ದು) ಪಚನ ಮಾಡುವುದಕ್ಕಾಗಿ ಹಿಡಿಯುತ್ತದೆ.

. ಶುಕ್ರಧರಾ: ಇದು ಸಕಲ ಪ್ರಾಣಿಗಳಲ್ಲಿ ಇಡೀ ದೇಹವನ್ನು ವ್ಯಾಪಿಸಿರುತ್ತದೆ. ಹಾಲಿನಲ್ಲಿ ತುಪ್ಪ, ಕಬ್ಬಿನಲ್ಲಿ ಬೆಲ್ಲವು ಅಡಗಿರುವಂತೆ ಮನುಷ್ಯನ ಇಡೀ ಶರೀರದಲ್ಲಿ ಶುಕ್ರಧಾತು ಇರುತ್ತದೆ. ಮೂತ್ರನಾಳದ ದ್ವಾರಕ್ಕೆ ಕೆಳಗೆ ಬಲಪಾರ್ಶ್ವದ ಎರಡು ಅಂಗುಲದಲ್ಲಿ ಮೂತ್ರದ ದಾರಿಯಲ್ಲಿಯೇ ಪುರುಷನ ಶುಕ್ರಧಾತು ಚಲಿಸುತ್ತದೆ. ಇದು ಇಡೀ ಶರೀರವನ್ನು ವ್ಯಾಪಿಸಿಕೊಂಡಿರುವುದಾದರು ಸಂತುಷ್ಟ ಮನಸ್ಸಿನಿಂದ ಮನುಷ್ಯರು ಸ್ತ್ರೀ ಸಂಭೋಗ ಮಾಡುವಾಗ ಹರ್ಷದ ಬಲದಿಂದ ಶುಕ್ರವು ಒಟ್ಟಾಗಿ ಸ್ರವಿಸುತ್ತದೆ ಹಾಗು ಪ್ರಜೋತ್ಪಾದನೆಗೆ ಕಾರಣವಾಗುತ್ತದೆ.

ಇದೇ ಶುಕ್ರವು ಸ್ತ್ರೀಯರಲ್ಲಿ ಆರ್ತವರೂಪದಲ್ಲಿರುತ್ತದೆ. ಪ್ರತಿ ತಿಂಗಳು ಋತುಸ್ರಾವ ಕಾಲದಲ್ಲಿ ಹೊರಬರುತ್ತದೆ. ಗರ್ಭಿಣಿಯಾದ ಸ್ತ್ರೀಯರಲ್ಲಿ ರಕ್ತಹರಿಯುತ್ತಿರುವ ಸ್ರೋತಸ್ಸುಗಳು ಗರ್ಭದಿಂದ ತಡೆಯಲ್ಪಡುವುದರಿಂದ ಅರ್ತವ ಕಾಣಿಸುವುದಿಲ್ಲ. ಆಗ ಅದು ಅಪರ (Plecenta)ವಾಗಿ ಗರ್ಭಸ್ಥ ಶಿಶುವಿಗೆ ಆಹಾರವನ್ನೊದಗಿಸುತ್ತದೆ ಹಾಗೂ ಸ್ತನಗಳು ದುಂಡಗಾಗಿ ಬೆಳೆಯಲು ಹಾಗೂ ಎದೆಹಾಲು ಹುಟ್ಟಲು ಕಾರಣವಾಗುತ್ತದೆ.

(ಶರೀತ ರಚನೆ ಕ್ರಿಯೆ ಇತ್ಯಾದಿ ವಿಷಯಗಳ ವಿವರವು ಆಯುರ್ವೇದದಲ್ಲಿ ಸಾಕಷ್ಟು ಇದೆ. ಗ್ರಂಥ ವಿಸ್ತಾರ ಭಯದಿಂದ ಇಲ್ಲಿ ಹೇಳಿಲ್ಲ. ಆಸಕ್ತನು ಆಯುರ್ವೇದಸಾರ ಭಾಗ ೧ ಇಲ್ಲವೆ ಸುಶ್ರುತ ಸಂಹಿತೆಯನ್ನು ಓದಿಕೊಳ್ಳಬೇಕು)

ಇಂದ್ರಿಯಗಳು

ಸಂಸಾರ ಜೀವ(ಆ‌ತ್ಮ) ನ ಬಾಹ್ಯ ಹೊರಗಿನ ಚಿಹ್ನೆ ವಿಶೇಷಗಳಿಗೆ ‘ಇಂದ್ರಿಯ’ ಎನ್ನುತ್ತಾರೆ. ಇವುಗಳು ಐದು ಇರುತ್ತವೆ.

. ಸ್ಪರ್ಶನೇಂದ್ರಿಯ : ಚರ್ಮ – ಇದು ಹಗುರ, ಭಾರ, ನಯ, ಒರಟು, ಮೃದು, ಕಠಿಣ, ಶೀತ, ಉಷ್ಣ ಇವುಗಳ ತಿಳುವಳಿಕೆಯನ್ನುಂಟು ಮಾಡುವುದು.

. ರಸನೇಂದ್ರಿಯ: ನಾಲಿಗೆ- ಸಿಹಿ, ಕಹಿ, ಕಾರ, ಹುಳಿ, ಒಗರುಗಳೆಂಬ ರುಚಿಗಳನ್ನು ತಿಳಿಯುವ ಇಂದ್ರಿಯ.

. ಘಾಣೀಂದ್ರಿಯ:ಮೂಗು – ಇದು ಸುಗಂಧ – ದುರ್ಗಂಧಗಳನ್ನು ಗೊತ್ತು ಹಿಡಿಯುತ್ತದೆ.

. ಚಕ್ಷುರೇಂದ್ರಿಯ: ಕಣ್ಣು – ಕೆಂಪು, ಹಳದಿ, ಬಿಳಿ, ಹಸಿರು, ಕಪ್ಪು ಅಥವಾ ನೀಲಿ ಬಣ್ಣಗಳ ಸೇರಿವಿಕೆಯಿಂದುಂಟಾಗುವ ಇತರ ಹಲವು ಬಣ್ಣಗಳು ತಿಳಿಯುವುದು.

. ಶ್ರೋತ್ರೇಂದ್ರಿಯ: ಕಿವಿ – ಯಾವುದರಿಂದ ಸ, ರಿ, ಗ, ಮ, ಪ, ದ,ನಿ, ಸ ಶಬ್ಧಗಳ ಸಂಗೀತ ಕೇಳುವ ಇಂದ್ರಿಯ.

ಈ ಐದು ಇಂದ್ರಿಯಗಳು ತಮ್ಮ ತಮ್ಮ ಕಾರ್ಯಗಳನ್ನು ಮಾಡಬೇಕಾದರೆ, ಮನಸ್ಸಿನ ಪ್ರೇರಣೆ ಬೇಕು. ಮನಸ್ಸು ನಮಗೆ ಗೋಚರವಾಗದ ಇಂದ್ರಿಯವಾದ್ದರಿಂದ ಅವಕ್ಕೆ ಅನಿಂದ್ರಿಯ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ. (..ಶ್ಲೋಕ )

ಜೈನ ದಾರ್ಶನಿಕ ಸಾಹಿತ್ಯದಲ್ಲಿ ಇಂದ್ರಿಯಗಳ ಹಾಗೂ ಇಂದ್ರಿಯ ಮತ್ತು ಜೀವಗಳ ಪರಸ್ಪರ ಸಂಬಂಧದ ವಿಚಾರದಲ್ಲಿ ಕೆಲ ಮಹತ್ವದ ವಿಷಯಗಳು ದೊರಕುತ್ತವೆ. ಜೈನರು ಕೂಡ ಮನಸ್ಸು, ಪಂಜ ಜ್ಞಾನೇಂದ್ರಿಯ ಹಾಗೂ ಪಂಚಕರ್ಮೇದ್ರಿಯಗಳನ್ನು ಒಪ್ಪುತ್ತಾರೆ. ಜ್ಞಾನೇಂದ್ರಿಯಗಳಲ್ಲಿ ದ್ರವ್ಯೇಂದ್ರಿಯ ಹಾಗು ಭಾವೇಂದ್ರಿಯಗಲನ್ನುವ ಭೇದವಿದೆ. ದ್ರವ್ಯೇಂದ್ರಿಯಗಳಲ್ಲಿ ನಿವೃತ್ತಿ ಹಾಗೂ ಉಪಕರಣಗಳೆಂದು ಮತ್ತೆರಡು ಭೇದಗಳನ್ನು ಮಾಡುತ್ತಾರೆ. ಪ್ರಾಣಿಗಳ ಶರೀರದ ಕಂಡುಬರುವ ಭಾಗಗಳು ನಿವೃತ್ತ ವಿಭಾಗದಲ್ಲಿ ಒಳಗೊಂಡರೆ ಆಂತರಿಕ – ಭಾಗಗಳಿಗೆ ಉಪಕರಣೇಂದ್ರಿಯಗಳೆನ್ನುವರು. ಉಪಕರಣೇಂದ್ರಿಯಗಳಿರದಿದ್ದರೆ ಇಂದ್ರಿಯ ಜ್ಞಾನವು ಆಗುವುದಿಲ್ಲ. ಈ ದ್ರವ್ಯೇಂದ್ರಿಯವರು ಪುದ್ಗಲಮಯವಾದ ಜಡೇಂದ್ರಿಯವಾಗಿದೆ. ಭಾವೇಂದ್ರಿಯಗಳು ಆತ್ಮೀಕ -ಪರಿಣಾಮ-ಸ್ವರೂಪ ಇಂದ್ರಿಯಗಳೆನಿಸಿವೆ. ಇವುಗಳಲ್ಲಿ ಮತ್ತೆ ಎರಡು ಭೇದಗಳಿವೆ. ಈ ಅರ್ಹತೋಕ್ತವಾದ ಇಂದ್ರಿಯಗಳ ವರ್ಗೀಕರಣವನ್ನು ಸರಳ ರೀತಿಯಲ್ಲಿ ತಿಳಿಯಲು ಹೀಗೆ ವರ್ಗೀಕರಿಸಬಹುದು.

[1]

[ಚಿತ್ರ – ೧]

ಇದರಿಂದ ಸ್ಪಷ್ಟವಾಗುವುದೇನೆಂದರೆ ಇಂದ್ರಿಯಗಳ ಅಧಿಷ್ಠಾನವು ನಿವೃತ್ತಿ ವಿಭಾಗದ ರೂಪದಲ್ಲಿ ಹಾಗೂ ಆಂತರಿಕ ಅತೀಂದ್ರಿಯ ಭಾಗವು ಉಪಕರಣ ರೂಪದಲ್ಲಿ ಹೇಳಲಾಗಿದೆ ಎಂಬುದು. ದ್ರವ್ಯೇಂದ್ರಿಯಗಳ ವಿಷಯದಲ್ಲಿ ಮುಂದುವರೆದು ಅವುಗಳ ಬಾಹ್ಯ ಹಾಗೂ ಅಭ್ಯಂತರ ದೃಶ್ಯವು ಕೇವಲ ಚರ್ಮದ ಹೊರತಾಗಿ ಒಂದನ್ನೇ ನೋಡಲು ಸಾಧ್ಯವಿಲ್ಲವೆನ್ನುತ್ತಾರೆ. ಅದರಂತೆ ಪ್ರಾಣಿಭೇದಕ್ಕನುಸಾರವಾಗಿ ದ್ರವ್ಯೇಂದ್ರಿಯಗಳ ಆಕೃತಿಗಳಲ್ಲೂ ಭೇದವನ್ನು ಕಾಣಬಹುದು. ಎಲ್ಲ ಪ್ರಾಣಿಗಳಲ್ಲಿ ಇಂದ್ರಿಯಗಳು ಒಂದೇ ಆಕಾರ ರೂಪದಲ್ಲಿರುವುದಿಲ್ಲ. ಯಾವುದೇ ಪ್ರಾಣಿಯ ಬಾಹ್ಯ ಹಾಗು ಅಭ್ಯಂತರ ರಚನೆಗಳಲ್ಲಿ ಭೇದವಿಲ್ಲವಾದರೂ ಕಿವಿ, ಮೂಗು, ಕಣ್ಣುಗಳ ವಿಷಯದಲ್ಲಿ ಈ ಮಾತು ಒಪ್ಪುವುದಿಲ್ಲ. ಉದಾ: ಕಿವಿಯು ಅಭ್ಯಂತರ ರಚನೆಯು ಕದಂಬ ಪುಷ್ಪದಂತೆ ಇರುವುದು ಹೀಗೆ.

ಪ್ರಾಣಿಗಳಲ್ಲಿ ಏಕೇಂದ್ರಿಯ, ದ್ವೀಂದ್ರಿಯ ಇತ್ಯಾದಿ ಭೇದಗಳಿವೆ. ಸರ್ವಪ್ರಾಣಿಗಳಲ್ಲೂ ಸಕಲ ಇಂದ್ರಿಯಗಳು ಇರುವುದಿಲ್ಲ. ಇವರ ಈ ವರ್ಗೀಕರಣವನ್ನು ಆಧುನಿಕ ಪ್ರಾಣಿ ಶಾಸ್ತ್ರಜ್ಞರು ಶೋಧಿಸಬೇಕು.

[1] ಪಂಚೇಂದ್ರಿಯಣಿವಿಧಾನಿ ನಿರ್ವೃತ್ಯುಪಕರಣೆ|ದ್ರವ್ಯೆಂದ್ರಿಯಮ್ ಲಬ್ಧುಪಯೋಗೌ ಭಾವೇಂದ್ರಿಯಮ್ | (ತತ್ಪಾರ್ಥಸೂತ್ರ-೬-೨, ಸೂತ್ರ೧೫-೧೮)