ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಕೆಲವು ವರ್ಷಗಳ ಹಿಂದಿನಿಂದ ‘ಪ್ರಾಚೀನ ಪಠ್ಯಗಳ ಸಾಂಸ್ಕೃತಿಕ ಮುಖಾಮುಖಿ’ ಎಂಬ ಯೋಜನೆಯನ್ನು ರೂಪಿಸಿ, ಕನ್ನಡದ ಮುಖ್ಯ ಪಠ್ಯಗಳನ್ನು ಮರು ಓದಿಗೆ ಅವಕಾಶಗಳನ್ನು ಕಲ್ಪಿಸಿದೆ. ಪ್ರತಿವರ್ಷ ಈ ಮರು ಓದಿನ ಕೆಲಸ ವನ್ನು ತಪ್ಪದೆ ಮಾಡಿಕೊಂಡು ಬರುತ್ತಿದೆ. ಈ ಯೋಜನೆಯನ್ನು ವಿಭಾಗವು ತನ್ನ ಜೊತೆ ಹೊರಗಿನ ವಿದ್ವಾಂಸರನ್ನು ಸೇರಿಸಿಕೊಂಡು ಉಪಯುಕ್ತವಾದ ಮರು ಓದನ್ನು ಮಾಡುತ್ತ ಸಾಹಿತ್ಯಾಸಕ್ತರ ಗಮನವನ್ನು ಸೆಳೆದಿದೆ. ಪ್ರಾಚೀನ, ಮಧ್ಯಕಾಲೀನ, ಆಧುನಿಕ ಯುಗದಲ್ಲಿ ರಚನೆಗೊಂಡು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮುಖ್ಯವೆಂದು ಪರಿಗಣಿತವಾದ ‘ಕವಿರಾಜಮಾರ್ಗ’, ‘ಆದಿಪುರಾಣ’, ‘ಹರಿಶ್ಚಂದ್ರ ಚಾರಿತ್ರ’, ‘ಕುಮಾರವ್ಯಾಸ ಭಾರತ’, ‘ಮಂಟೇಸ್ವಾಮಿ ಕಾವ್ಯ’, ‘ಗ್ರಾಮಾಯಾಣ’, ‘ಮಲೆಗಳಲ್ಲಿ ಮದುಮಗಳು’ ಮುಂತಾದ ಇಪ್ಪತ್ತು ಪಠ್ಯಗಳ ಮೇಲೆ ವಿಚಾರ ಸಂಕಿರಣವನ್ನು ಏರ್ಪಡಿಸಿದೆ. ವಿಚಾರ ಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳನ್ನು ಸಂಪಾದಿಸಿ ‘ಸಾಂಸ್ಕೃತಿಕ ಮುಖಾಮುಖಿ’ ಹೆಸರಿನಲ್ಲಿ ಪ್ರಕಟಿಸಲಾಗುತ್ತಿದೆ. ಈ ಸಂಪಾದನ ಕೃತಿಗಳು ಈಗಾಗಲೆ ಸಾಹಿತ್ಯಕ ವಲಯದಲ್ಲಿ ಜನಪ್ರಿಯವಾಗಿದೆ.

ಈ ಯೋಜನೆಯಡಿಯಲ್ಲಿ ಪ್ರಕಟವಾಗುವ ಕೃತಿಗಳ ವಿಶೇಷವೆಂದರೆ, ಒಂದು ಕೃತಿಯನ್ನು ಕುರಿತು, ಕೃತಿಯ ಮೇಲೆ ಬಂದಿರುವ ಇದುವರೆಗಿನ ಓದನ್ನು ಗಮನಿಸಿ, ಅದನ್ನು ಈ ಹೊತ್ತಿನ ತಿಳುವಳಿಕೆಯೊಂದಿಗೆ ಮರು ಓದನ್ನು ಮಾಡುವುದು. ಒಂದು ಕೃತಿಯ ಮೇಲೆ ಹತ್ತಾರು ವಿದ್ವಾಂಸರು ಸಂವಾದಿಸುತ್ತ ಆ ಕೃತಿಯ ಮೂಲಕ ಹೊಸ ಅರ್ಥವನ್ನು ಅಭಿವ್ಯಕ್ತಿಸುವುದು ನಡೆಯುತ್ತದೆ. ಈ ಹೊತ್ತಿನ ಸಂದರ್ಭದಲ್ಲಿ ಒಂದು ಕೃತಿಯ ಸಮಗ್ರ ಅಧ್ಯಯನ ದೊರೆಯು ವುದು ಮತ್ತು ಹಲವಾರು ವಿದ್ವಾಂಸರ ಭಿನ್ನ ಆಯಾಮಗಳ ಓದು ಒಂದೆಡೆ ಲಭ್ಯವಾಗುವುದು ವಿಶೇಷವಾಗಿದೆ.

ಜೊತೆಗೆ ಈ ‘ಸಾಂಸ್ಕೃತಿಕ ಮುಖಾಮುಖಿ’ ಸಂಪಾದನ ಕೃತಿಯಲ್ಲಿ ಆಯ್ದುಕೊಂಡ ಕೃತಿಯ ಮೇಲೆ ಇದುವರೆಗೆ ನಡೆದ ಅಧ್ಯಯನಗಳ ಗ್ರಂಥಸೂಚಿ, ಲೇಖನ ಸೂಚಿ, ಅನುವಾದಗಳ ಸೂಚಿ, ಗದ್ಯನುವಾದಗಳ ಸೂಚಿ ಹೀಗೆ ಸಮಗ್ರ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಇದು ಸಾಹಿತ್ಯ ವಿದ್ಯಾರ್ಥಿಗಳಿಗೆ ಬಹು ಉಪಯುಕ್ತ ಮಾಹಿತಿಯಾಗಿ ಲಭ್ಯವಾಗುತ್ತದೆ.

‘ಜೈಮಿನಿ ಭಾರತ : ಸಾಂಸ್ಕೃತಿಕ ಮುಖಾಮುಖಿ’ ವಿಚಾರ ಸಂಕಿರಣ ನಡೆಯುವ ಪೂರ್ವದಲ್ಲಿ, ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’ ಕಾವ್ಯವನ್ನು ಕುರಿತು ಇದುವರೆಗೆ ಪ್ರಕಟವಾಗಿರುವ ಮೂಲ ಪಠ್ಯ, ಅಧ್ಯಯನ ಗ್ರಂಥ, ಲೇಖನಗಳನ್ನು ಶೋಧಿಸಲಾಯಿತು. ಕನ್ನಡ ವಿಶ್ವ ವಿದ್ಯಾಲಯದ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕ, ಪತ್ರಿಕೆಗಳನ್ನು ಆಧರಿಸಿ ಈ ಸೂಚಿ ಯನ್ನು ಸಿದ್ಧಪಡಿಸಲಾಗಿದೆ. ‘ಜೈಮಿನಿ ಭಾರತ’ ಕಾವ್ಯದ ಮೇಲೆ ಕಳೆದ ಒಂದು ಶತಮಾನದಿಂದ ಕನ್ನಡ ವಿದ್ವಾಂಸರು ನಡೆಸಿದ ಅಧ್ಯಯನಗಳನ್ನು ಇಲ್ಲಿ ಓದುಗರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇವೆ.

ಯಾವುದೇ ಆಧುನಿಕ ಪೂರ್ವ ಪಠ್ಯವನ್ನು ವಿದ್ವಾಂಸರು ಅಧ್ಯಯನಕ್ಕೆ ಒಳಪಡಿಸುವಾಗ ಸಾಮಾನ್ಯವಾಗಿ ಆ ಪಠ್ಯದ ಕರ್ತೃವಿನ ಕಾಲ, ಸ್ಥಳ, ಮತ ಧರ್ಮದ ಹುಡುಕಾಟದಿಂದ ಆರಂಭಿಸುತ್ತಾರೆ. ಸಾಹಿತ್ಯಕ್ಕೆ ಚರಿತ್ರೆಯನ್ನು ಕಟ್ಟುವ ಈ ಮನೋಧರ್ಮವನ್ನು ಕನ್ನಡದ ವಿದ್ವಾಂಸರು ಪಶ್ಚಿಮದ ವಿದ್ವಾಂಸರಿಂದ ರೂಢಿಸಿಕೊಂಡರು. ಮುಖ್ಯವಾಗಿ ಬ್ರಿಟಿಶರಿಗೆ ಭಾರತದ ಚರಿತ್ರೆಯ ಅಗತ್ಯವಿತ್ತು. ಭಾಷೆ, ಸಾಹಿತ್ಯ, ಜನಾಂಗದ ಚರಿತ್ರೆಯನ್ನು ಅರಿಯುವ ಅಗತ್ಯತೆ ವಸಾಹತು ಆಡಳಿತಕ್ಕೆ ಬೇಕಾಗಿತ್ತು. ಹೀಗಾಗಿ ಚರಿತ್ರೆಯನ್ನು ಕಟ್ಟಲು ಒಂದು ಮೆಥಡಾಲಜಿ ಯನ್ನು ರೂಪಿಸಿದ್ದರು. ಅದನ್ನೇ ಭಾರತದ ವಿದ್ವಾಂಸರು ಅನುಸರಿಸಿದರು. ಅದರ ಫಲವಾಗಿ ಸಾಹಿತ್ಯಕ್ಕೆ ಚರಿತ್ರೆಯನ್ನು ರಚಿಸುವ ಕೆಲಸವನ್ನು ಜೀವನ್ಮರಣದ ಪ್ರಶ್ನೆಯಾಗಿ ಎತ್ತಿಕೊಂಡು ದುಡಿದರು. ಕರ್ನಾಟಕದಲ್ಲಿ ವಸಾಹತುಶಾಹಿ ಆಡಳಿತವಿದ್ದಾಗ, ಬ್ರಿಟಿಶ್ ವಿದ್ವಾಂಸರು ಕನ್ನಡ-ಕರ್ನಾಟಕಕ್ಕೆ ಸಂಬಂಧಿಸಿ ಸಂಶೋಧನೆ ನಡೆಸುವಾಗ ಅದು ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಾಂಗ ಯಾವುದೇ ಇರಲಿ ಸಂಶೋಧನೆ ಕೈಗೊಳ್ಳುವಾಗ ಸ್ಥಳೀಯ ವಿದ್ವಾಂಸರನ್ನು ಬಳಸಿ ಕೊಂಡರು. ಅಂದರೆ ಸಂಶೋಧನೆಗೆ ನೆರವನ್ನು ಪಡೆದರು. ಉದಾಹರಣೆಗೆ, ಲೂಯಿ ರೈಸನಿಗೆ ಆರ್. ನರಸಿಂಹಾಚಾರ್ ನೆರವಾದರು. ಕವಿಚರಿತೆಯನ್ನು ಪಶ್ಚಿಮದ ವಿದ್ವಾಂಸನ ಹೇಳಿಕೆ ಮೇಲೆ ಬರೆಯಬೇಕಾಯಿತು. ಎಡ್ಗರ್ ಥರ್ಸ್ಟನ್‌ಗೆ ನಂಜುಂಡಯ್ಯ, ಕರ್ನಲ್ ಮೆಕೆಂಜಿಗೆ ದೇವಚಂದ್ರ, ವಾಲ್ಟರ್ ಎಲಿಯೆಟ್‌ಗೆ ಅಡಕ್ಕಿ ಸುಬ್ಬರಾಯ ದುಡಿದರು. ಕನ್ನಡ ಸಾಹಿತ್ಯ ಕೃತಿಗಳ ಸಂಪಾದನೆಗೆ, ವ್ಯಾಕರಣ ರಚನೆಗೆ, ಶಬ್ದಕೋಶ ಸಿದ್ಧತೆಗೆ, ಧರ್ಮಗಳು, ನಂಬಿಕೆಗಳು, ಆಚರಣೆಗಳ ಶೋಧ ಹೀಗೆ ಬ್ರಿಟಿಶರ ಅಗತ್ಯಕ್ಕೆ ತಕ್ಕಂತೆ ಕನ್ನಡ ವಿದ್ವಾಂಸರು ದುಡಿದರು. ಇದರ ಫಲವಾಗಿ ಕನ್ನಡ ಕವಿಗಳ ಚರಿತ್ರೆಯನ್ನು, ಆ ಮೂಲಕ ಸಾಹಿತ್ಯ ಚರಿತ್ರೆಯನ್ನು ರಚಿಸಲು ಕನ್ನಡ ವಿದ್ವಾಂಸರು ತುಂಬ ಶ್ರಮಿಸಿದ್ದಾರೆ. ಕೃತಿಯ ಕರ್ತೃವಿನ ಹುಟ್ಟಿದ ಊರು, ಬೆಳೆದ ಸ್ಥಳ, ತಂದೆ-ತಾಯಿ, ವಂಶ, ಗುರು ಪರಂಪರೆ, ಆಶ್ರಯ, ಮತಧರ್ಮ, ಜಾತಿ, ಉಪಜಾತಿ ಮುಂತಾದ ಅಂಶಗಳ ಶೋಧವನ್ನು ಮಾಡಿದ್ದೇ ಮಾಡಿದ್ದು. ಕೃತಿಯ ಮೇಲಿನ ಅಧ್ಯಯನ ಆ ನಂತರದ್ದಾಗಿ ಕಂಡರು. ಮಧ್ಯಕಾಲೀನ ಕವಿಗಳಂತೂ ತಾವು ನಿಮಿತ್ತ, ತಾವು ನಂಬಿದ ಇಷ್ಟ ದೈವವೇ ಎಲ್ಲ ಎಂದು ನಂಬಿ ಬಾಳಿದ್ದರಿಂದ, ಯಾವುದೇ ಕವಿ ತನ್ನ ಹೆಸರು, ವಂಶ, ಕುಲಗೋತ್ರ, ಧರ್ಮ, ಪ್ರದೇಶ ಏನೊಂದನ್ನೂ ಹೇಳದೆ ಕೃತಿ ರಚಿಸಿದ್ದರಿಂದ,  ಹುಡುಕಾಟ ನಡೆಸಿದ ವಿದ್ವಾಂಸರಿಗೆ ಇದು ತುಂಬ ಶ್ರಮದಾಯಕವಾಯಿತು. ಕೆಲವು ಕನ್ನಡ ವಿದ್ವಾಂಸರು ಕವಿಯ ‘ಇತಿವೃತ್ತ’ ಹುಡುಕಾಟದಲ್ಲಿಯೇ ಜೀವನ ಪೂರ್ತಿ ಕಳೆದರು.

ಕುಮಾರವ್ಯಾಸ, ಲಕ್ಷ್ಮೀಶರು ಮಧ್ಯಕಾಲೀನ ಭಕ್ತ ಕವಿಗಳು. ಕೃಷ್ಣನೇ ಎಲ್ಲ, ತಾವು ನಿಮಿತ್ತ ಎಂದು ತಿಳಿದವರು. ಇವರ ‘ಇತಿವೃತ್ತ’ವನ್ನು ಅನೇಕ ವಿದ್ವಾಂಸರು ಶೋಧಿಸಿ ಬರೆದದ್ದು ಅಪಾರವಾಗಿದೆ. ಅವರ ಕಾವ್ಯದ ಅಧ್ಯಯನವೆಂದರೆ, ಕವಿಗಳ ಜೀವನ ವಿವರಗಳ ಶೋಧವೆಂದೇ ಭಾವಿಸಿದಂತಿದೆ. ‘ಜೈಮಿನಿ ಭಾರತ’ ಕುರಿತ ಅಧ್ಯಯನಗಳಲ್ಲಿ ಕವಿಯ ಜೀವನ ವೃತ್ತಾಂತದ ಶೋಧ ಪ್ರಧಾನವಾಗಿ ಕಾಣುತ್ತದೆ. ಕಾವ್ಯದ ಅಧ್ಯಯನಕ್ಕೆ ಸಂಬಂಧಿಸಿ, ಲಕ್ಷ್ಮೀಶ ಕಾವ್ಯದ ಮೂಲಕ ಪ್ರತಿಪಾದಿಸಿದ ತತ್ವ ಯಾವುದು? ವೈದಿಕ ಧರ್ಮ, ಭಾಗವತ ಮತದ ತತ್ವ, ಕೃಷ್ಣನ ಮಹಿಮೆ, ಆತನ ಭಕ್ತರ ಭಕ್ತಿಯ ಸ್ವರೂಪ ಮುಂತಾದ ವಿಷಯಗಳನ್ನು ಕುರಿತು ಅಧ್ಯಯನ ಮಾಡಲಾಗಿದೆ. ನವೋದಯ ಕವಿಗಳಾದ ಬೇಂದ್ರೆ, ಕುವೆಂಪು ಅವರು ಲಕ್ಷ್ಮೀಶನನ್ನು ಕುರಿತು ಬರೆದಿರುವುದು ವಿಶೇಷವಾಗಿದೆ. ಈ ಇಬ್ಬರು ಕವಿಗಳ ಮೇಲೆ ಲಕ್ಷ್ಮೀಶನ ಕಾವ್ಯ ಪ್ರಭಾವ ಬೀರಿದೆ ಎಂಬುದು ಇಗಾಗಲೇ ತಿಳಿದಿರುವ ಸಂಗತಿ. ಬೇಂದ್ರೆಯವರಂತೂ ಹತ್ತಾರು ಲೇಖನಗಳನ್ನು ಬರೆದಿದ್ದಾರೆ. ಲಕ್ಷ್ಮೀಶನ ಭಾಗವತ ಮತ, ಕಾವ್ಯದ ನಾದ-ರಸ, ರಮ್ಯತೆ – ಇವು ಬೇಂದ್ರೆ ಅವರಿಗೆ ಇಷ್ಟ. ರಮ್ಯತೆ ಕುವೆಂಪು ಅವರಿಗೆ ಪ್ರಿಯವಾಗಿದೆ. ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’ ಕಾವ್ಯವನ್ನು ಕುರಿತು ಡಾ. ವಾಮನ ಬೇಂದ್ರೆ ಅವರು ಪಿಎಚ್.ಡಿ. ಪದವಿ ಗಾಗಿ ಮಾಡಿರುವ ಅಧ್ಯಯನ ಒಂದು ಸಮಗ್ರವಾಗಿದೆ. ಸಂಪೂರ್ಣ ಅಧ್ಯಯನ ಅಂದರೆ ತಪ್ಪಾಗದು. ಒಬ್ಬ ಕವಿಯನ್ನು ಕುರಿತು ಅಧ್ಯಯನ ಹೇಗೆ ಮಾಡಬಹುದು ಎಂಬುದಕ್ಕೆ ವಾಮನ ಬೇಂದ್ರೆ ಅವರ ‘ಲಕ್ಷ್ಮೀಶನ ಜೈಮಿನಿ ಭಾರತ : ಒಂದು ಅಧ್ಯಯನ’ ಉದಾಹರಣೆ ಯಾಗಿದೆ.

‘ಜೈಮಿನಿ ಭಾರತ’ದ ಮೇಲೆ, ಸಾಹಿತ್ಯಿಕ ಅಧ್ಯಯನಗಳು, ಸಾಂಸ್ಕೃತಿಕ ಅಧ್ಯಯನಗಳು ಹೆಚ್ಚಾಗಿ ನಡೆದಿರುವುದನ್ನು ಕಾಣುತ್ತೇವೆ. ಸಾಹಿತ್ಯಿಕ ಅಧ್ಯಯನಗಳಲ್ಲಿ, ಲಕ್ಷ್ಮೀಶನ ಕಾವ್ಯಶಕ್ತಿ ಯನ್ನು ಶೋಧಿಸುವಾಗ ವರ್ಣನೆಗಳು, ಪಾತ್ರ ಪೋಷಣೆ, ಉಪಮೆಗಳ ಬಳಕೆ, ಅವುಗಳ ಔಚಿತ್ಯವನ್ನು ವಿವರಿಸುವುದನ್ನು ಕಾಣುತ್ತೇವೆ. ಸಾಂಸ್ಕೃತಿಕ ಅಧ್ಯಯನಗಳಲ್ಲಿ, ಕವಿಯ ಜೀವನ ವಿವರಗಳೊಂದಿಗೆ, ಕಾವ್ಯವನ್ನು ಪ್ರವೇಶಿಸುವ, ಕರ್ತೃಕೇಂದ್ರಿತ ಅಧ್ಯಯನಗಳಿರುವುದು ಕಂಡು ಬರುತ್ತದೆ. ಪಾತ್ರಗಳ ಸಮಗ್ರ ವಿವೇಚನೆ, ಸ್ಥಳಗಳ ವಿವರಣೆಗಳ ಅಧ್ಯಯನಗಳೂ ಇವೆ. ಒಟ್ಟಿನಲ್ಲಿ ಈ ಕಾವ್ಯವನ್ನು ಕುರಿತು, ಪಠ್ಯ ಕೇಂದ್ರಿತ ನೆಲೆಯ, ಕೃತಿ ಕೇಂದ್ರಿತ ನೆಲೆಯ, ಸಾಹಿತ್ಯಿಕ – ಸಾಂಸ್ಕೃತಿಕ ನೆಲೆಯ ಅಧ್ಯಯನಗಳು ನಡೆದಿವೆ.

ಕನ್ನಡದ ಓದುಗರು ಲಕ್ಷ್ಮೀಶ ಕವಿಯ ‘ಜೈಮಿನಿ ಭಾರತ’ಕ್ಕೆ ವಿಶೇಷ ಮನ್ನಣೆಯನ್ನು ನೀಡಿದ್ದಾರೆ ಎಂಬುದು ಈ ಅಧ್ಯಯನಗಳ ಸೂಚಿ ತಿಳಿಸುತ್ತದೆ.

ಕಾವ್ಯದಗದ್ಯಾನುವಾದಗಳು

೧. ಕಡಬದ ನಂಜುಂಡಶಾಸ್ತ್ರಿಗಳು, ಎನ್. ರಂಗನಾಥಶರ್ಣ, ಜೈಮಿನಿ ಭಾರತ (ಸಂಸ್ಕೃತ), ೧೯೭೩, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೨. ಗೋಪಾಲರಾವ್ ಬಿ., ಜೈಮಿನಿ ಭಾರತ ಕಥಾಮೃತ, ೧೯೯೨, ಪ್ರ. ಶೈಲಶ್ರೀ ಸಾಹಿತ್ಯ ಪ್ರಕಾಶನ, ಮೈಸೂರು.

ಮೂಲಪಠ್ಯಗಳು

೧. ಕನಕೇಶ ಮೂರ್ತಿ ಬಿ.ಜಿ., ಲಕ್ಷ್ಮೀಶ, ೧೯೯೬, ಪ್ರ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೨. ಕೃಷ್ಣಸ್ವಾಮಿ ಶೆಟ್ಟಿ ಟಿ.ಕೆ., ಜೈಮಿನಿ ಭಾರತವು, ೧೯೩೯, ಪ್ರ. ಕಳಾನಿಧಿ ಬುಕ್ ಡಿಪೋ, ಚಿಕ್ಕಪೇಟೆ, ಬೆಂಗಳೂರು ಸಿಟಿ

೩. ಗೀತಾಚಾರ್ಯ. ನಾ., ಲಕ್ಷ್ಮೀಶ ಕವಿಯ ಕೀರ್ತನೆಗಳು, ೨೦೦೨, ಪ್ರ. ಲಕ್ಷ್ಮೀಶ ಸಾಂಸ್ಕೃತಿಕ ವೇದಿಕೆ, ದೇವನೂರು.

೪. ಗುಂಡಣ್ಣ ಜಿ., ಜೈಮಿನಿ ಭಾರತ ಸಂಗ್ರಹ, ೧೯೯೬, ಪ್ರ. ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.

೫. ಜವರೇಗೌಡ ದೇ., ಜೈಮಿನಿ ಭಾರತ ಸಂಗ್ರಹ, ೧೯೭೨, ಪ್ರ. ರಾಜ್ಯ ವಯಸ್ಕರ ಶಿಕ್ಷಣ ಸಮಿತಿ, ಮೈಸೂರು.

೬. ನರಸಿಂಹ ಶಾಸ್ತ್ರಿ ದೇವುಡು ಮತ್ತು ಶಿವಮೂರ್ತಿಶಾಸ್ತ್ರಿ ಬಿ., ಕನ್ನಡ ಜೈಮಿನಿ ಭಾರತ, ೧೯೫೬, ಪ್ರ. ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ದಿ ಇಲಾಖೆ, ವಿಧಾನ ಸೌಧ, ಬೆಂಗಳೂರು.

೭. ವಸಿಷ್ಠ, ಜೈಮಿನಿ ಭಾರತ, ೧೯೯೯, ಪ್ರ. ಚೇತನ ಬುಕ್ ಹೌಸ್, ಮೈಸೂರು.

೮. ವೇದವತಿ ಡಿ., ತುಳು ಜೈಮಿನಿ ಭಾರತೊ, ೧೯೯೯, ಪ್ರ. ಸಿರಿ ಪ್ರಕಾಶನ, ಅಗೊಳಿ ಮಂಜನ ಜಾನಪದ ಕೇಂದ್ರ, ಪಾವಂಜೆ, ಹಳೆಯಂಗಡಿ.

ಸ್ವತಂತ್ರಕೃತಿಗಳು

೧. ಪಂಚವಾರ್ಷಿಕ ಯೋಜನೆಯ ಗ್ರಂಥಮಾಲೆ ೧೩೮, ಪ್ರ. ಕವಿ ಲಕ್ಷ್ಮೀಶ, ೧೯೭೯, ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ, ಬೆಂಗಳೂರು.

೨. ವಾಮನ ಬೇಂದ್ರೆ, ಲಕ್ಷ್ಮೀಶನ ಜೈಮಿನಿ ಭಾರತ ಒಂದು ಅಧ್ಯಯನ (ಸಂಶೋಧನಾ ಮಹಾಪ್ರಬಂಧ), ೧೯೭೯, ಪ್ರ. ಗೀತಾ ಬುಕ್ ಹೌಸ್, ಮೈಸೂರು

೩. ಸಂಜೀವ ಶೆಟ್ಟಿ, ಲಕ್ಷ್ಮೀಶನ ಜೈಮಿನಿ ಭಾರತ ಕಥಾವಸ್ತು ವಿವೇಚನೆ (ಸಂಶೋಧನಾ ಮಹಾಪ್ರಬಂಧ), ೧೯೯೪, ಪ್ರ. ಡಾ. ಸಂಜೀವ ಶೆಟ್ಟಿ ಸನ್ಮಾನ ಸಮಿತಿ, ಮುಂಬಯಿ.

ಲೇಖನಗಳು

೧. ಕರ್ನಾಟಕ ಸಂಘ, ಚಿಕ್ಕಮಗಳೂರು, ಕವಿ ಲಕ್ಷ್ಮೀಶ, ೧೯೩೩, ಪ್ರ. ಸತ್ಯಶೋಧನ ಪ್ರಕಟನ ಮಂದಿರ ಕೋಟೆ, ಬೆಂಗಳೂರು ನಗರ.

೨. ಕೀರ್ತಿನಾಥ ಕುರ್ತಕೋಟಿ, ಜೈಮಿನಿ ಭಾರತ (ಕ್ರಿ.ಶ. ೧೫೫೦), ಕನ್ನಡ ಸಾಹಿತ್ಯ ಸಂಗಾತಿ, ೧೯೯೫, ಪ್ರ. ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ.

೩. ಕೀರ್ತಿನಾಥ ಕುರ್ತಕೋಟಿ, ಲಕ್ಷ್ಮೀಶನ ಶೈಲಿ, ಕನ್ನಡ ಸಾಹಿತ್ಯ ಸಂಗಾತಿ, ೧೯೯೫, ಕನ್ನಡ ವಿಶ್ವವಿದ್ಯಾಲಯ, ಹಂಪಿ ವಿದ್ಯಾರಣ್ಯ

೪. ಕೃಷ್ಣಭಟ್ಟ ಹೆರಂಜೆ ಸಂ., ಲಕ್ಷ್ಮೀಶ : ಕಾಲ, ನಿವಾಸ ಸ್ಥಾನ ಮತ್ತು ಮತ, ಗೋವಿಂದ ಪೈ ಸಂಶೋಧನ ಸಂಪುಟ, ೧೯೯೫, ಪ್ರ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

೫. ಕೃಷ್ಣಭಟ್ಟ ಹೆರಂಜೆ ಸಂ., ಲಕ್ಷ್ಮೀಶನನ್ನು ಕುರಿತ ಇನ್ನೆರಡು ಮಾತು, ಗೋವಿಂದ ಪೈ ಸಂಶೋಧನ ಸಂಪುಟ, ೧೯೯೫, ಪ್ರ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

೬. ಕೃಷ್ಣಭಟ್ಟ ಹೆರಂಜೆ ಸಂ., ಕನ್ನಡ ಕವಿ ಲಕ್ಷ್ಮೀಶನ ಕಾಲದ ಮರುವಿಚಾರ, ಗೋವಿಂದ ಪೈ ಸಂಶೋಧನ ಸಂಪುಟ, ೧೯೯೫, ಪ್ರ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

೭. ಕೃಷ್ಣಭಟ್ಟ ಎಸ್., ಜೈಮಿನಿ ಲಕ್ಷ್ಮೀಶರು ಕಂಡ ಭರತ ಖಂಡ (ವಿಚಾರ), ಪ್ರಬುದ್ಧ ಕರ್ನಾಟಕ, ಸಂಪುಟ. ೫೫, ಸಂಚಿಕೆ-೨, ೧೯೭೩, ಪ್ರ. ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

೮. ಚಿದಂಬರ ದೀಕ್ಷಿತ, ಲಕ್ಷ್ಮೀಶನ ಜೈಮಿನಿ ಭಾರತದ ಕಥಾ ವಸ್ತು, ೧೯೭೮, ಪ್ರ. ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

೯. ಜಾಗೀರದಾರ ಆರ್.ವ್ಹಿ., ಜೈಮಿನಿ ಭಾರತ ವಿಹಾರ ವಿಮರ್ಶೆ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಸಂಪುಟ. ೨, ಸಂ. ೨೬., ೧೯೪೧, ಪ್ರ. ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಸಿಟಿ.

೧೦. ಜಾಗೀರದಾರ ಆರ್.ವ್ಹಿ., ಜೈಮನಿ ಭಾರತ ವಿಹಾರ ವಿಮರ್ಶೆ (ಲಂಡನ್) ಭಾಗ-೨, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಸಂಪುಟ. ೨, ಸಂಚಿಕೆ ೨೭, ೧೯೪೨, ಪ್ರ. ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಸಿಟಿ.

೧೦ಎ. ನರಸಿಂಹಾಚಾರ್ ಡಿ.ಎಲ್., ಲಕ್ಷ್ಮೀಶನ ಕಾಲ, ಪೀಠಿಕೆಗಳು ಲೇಖನಗಳು, ೯. ಪ್ರ. ಡಿ.ವಿ.ಕೆ. ಮೂರ್ತಿ, ಕೃಷ್ಣಮೂರ್ತಿ ಪುರಂ, ಮೈಸೂರು.

೧೧. ನರಸಿಂಹಾಚಾರ್ ಆರ್., ಲಕ್ಷ್ಮೀಶ, ಕರ್ನಾಟಕ ಕವಿಚರಿತೆ ೩ನೇ ಸಂಪುಟ, ೧೯೭೪, ಪ್ರ.  ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೧೨. ಬೇಂದ್ರೆ ದ.ರಾ., ಲಕ್ಷ್ಮೀಶನ ಜೈಮಿನಿ ಭಾರತ, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ.  ಸಮಾಜ ಪುಸ್ತಕಾಲಯ, ಧಾರವಾಡ.

೧೩. ಬೇಂದ್ರೆ ದ.ರಾ., ಕಥಾ ಸಾರಾಂಶ, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ.  ಸಮಾಜ ಪುಸ್ತಕಾಲಯ, ಧಾರವಾಡ.

೧೪. ಬೇಂದ್ರೆ ದ.ರಾ., ಚಂದ್ರಹಾಸನ ಕಥೆ, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ.  ಸಮಾಜ ಪುಸ್ತಕಾಲಯ, ಧಾರವಾಡ.

೧೫. ಬೇಂದ್ರೆ ದ.ರಾ., ಜ್ವಾತಿಯ ಕಥೆ, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ.  ಸಮಾಜ ಪುಸ್ತಕಾಲಯ, ಧಾರವಾಡ.

೧೬. ಬೇಂದ್ರೆ ದ.ರಾ., ಲಕ್ಷ್ಮೀಶನ ಕಾವ್ಯಗುಣ, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ.  ಸಮಾಜ ಪುಸ್ತಕಾಲಯ, ಧಾರವಾಡ.

೧೭. ಬೇಂದ್ರೆ ದ.ರಾ., ನಾದಲೋಲ ಲಕ್ಷ್ಮೀಶ, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ.  ಸಮಾಜ ಪುಸ್ತಕಾಲಯ, ಧಾರವಾಡ.

೧೮. ಬೇಂದ್ರೆ ದ.ರಾ., ಅಶ್ವಮೇಧ ಸಾದೃಶ್ಯಗಳು, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ.  ಸಮಾಜ ಪುಸ್ತಕಾಲಯ, ಧಾರವಾಡ.

೧೯. ಬೇಂದ್ರೆ ದ.ರಾ., ಪ್ರಾಚೀನ ಅಶ್ವಮೇಧ ವಿಧಾನ, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ.  ಸಮಾಜ ಪುಸ್ತಕಾಲಯ, ಧಾರವಾಡ.

೨೦. ಬೇಂದ್ರೆ ದ.ರಾ., ಅಶ್ವಮೇಧದ ಉತ್ಕ್ರಾಂತಿ, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ. ಸಮಾಜ ಪುಸ್ತಕಾಲಯ, ಧಾರವಾಡ.

೨೧. ಬೇಂದ್ರೆ ದ.ರಾ., ಅಶ್ವಮೇಧದ ರಚನಾ ಕಾಲ, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ.  ಸಮಾಜ ಪುಸ್ತಕಾಲಯ, ಧಾರವಾಡ.

೨೨. ಬೇಂದ್ರೆ ದ.ರಾ., ಜೈಮಿನಿ ಭಾರತದ ಶ್ರೀಕೃಷ್ಣ, ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ಪ್ರ.  ಸಮಾಜ ಪುಸ್ತಕಾಲಯ, ಧಾರವಾಡ.

೨೩. ಮಿತ್ರ ಅ.ರಾ., ಲಕ್ಷ್ಮೀಶನ ಶೈಲಿ, ೧೯೭೮, ಪ್ರ.  ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

೨೪. ಮೋಹನ ಆರ್., ಕವಿ ಲಕ್ಷ್ಮೀಶ, ಸಾಕ್ಷಿ (ಪತ್ರಿಕೆ), ಗೋಪಾಲಕೃಷ್ಣ ಅಡಿಗ (ಸಂ) ಜುಲೈ ೧೯೭೨, ಪ್ರ. ಎಂ. ಗೋಪಾಲಕೃಷ್ಣ ಅಡಗಿ, ೩೫೮, ೩೭ನೇ ಕ್ರಾಸ್, ೫ನೇ ಬ್ಲಾಕ್, ಜಯನಗರ, ಬೆಂಗಳೂರು

೨೫. ರಂಗಣ್ಣ ಎಸ್.ವಿ., ಲಕ್ಷ್ಮೀಶನ ಶೈಲಿ, ಶೈಲಿ ೧-೨-೩, ೧೯೭೧, ಪ್ರ. ಕಾವ್ಯಾಲಯ ಪ್ರಕಾಶನ, ಮೈಸೂರು.

೨೬. ರಾಮಚಂದ್ರನ್ ಸಿ.ಎನ್., ‘ಪರಿಭ್ರಮಣ’ ಮತ್ತು ‘ಶೋಧ’ ಕನ್ನಡ ಜೈಮಿನಿ ಭಾರತದ ಒಂದು ಅಧ್ಯಯನ, ಶತಮಾನದ ಸಾಹಿತ್ಯ ವಿಮರ್ಶೆ, ೨೦೦೧, ಪ್ರ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು.

೨೭. ರಾಮಕೃಷ್ಣ ಮ., ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಶ್ರೀ ಕೃಷ್ಣಭಕ್ತಿಗೆ ವಿಮುಖವಾಗಿ ರುವ ಮೂರು ಪಾತ್ರಗಳು, ಪ್ರಬುದ್ಧ ಕರ್ನಾಟಕ, ಸಂಪುಟ. ೬೮, ಸಂಚಿಕೆ ೩., ೧೯೮೬, ಪ್ರ.  ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

೨೮. ವಾಸುದೇವ ಕಾಣೆಮಾರು, ಜೈಮಿನಿ ಭಾರತ, ಯುಗಪುರುಷ, ಸಂಪುಟ. ೫೨, ಸಂಚಿಕೆ ೭., ೧೯೪೭, ಪ್ರ.  ಯುಗ ಪುರುಷ ಮಾಸಪತ್ರಿಕೆ ಕಿನ್ನಿಗೋಳಿ, ದಕ್ಷಿಣ ಕನ್ನಡ.

೨೯. ವೆಂಕಟರಾಯಾಚಾರ್ಯ ಕೆ., ಲಕ್ಷ್ಮೀಶ ಕವಿಯ ಬಿರುದು, ಪ್ರಬುದ್ಧ ಕರ್ನಾಟಕ ಸಂಪುಟ. ೪೧, ಸಂಚಿಕೆ ೪., ೧೯೫೯, ಪ್ರ.  ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೩೦. ವೆಂಕಟರಾಯಾಚಾರ್ಯ ಕೆ., ಲಕ್ಷ್ಮೀಶ ಕವಿಯ ಕಾಲಮಾನ, ಕರ್ನಾಟಕ ಭಾರತ, ಸಂಪುಟ. ೧೪, ಸಂಚಿಕೆ ೩ ಮತ್ತು ೪., ೧೯೮೨, ಪ್ರ.  ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೩೦ಎ. ಶಂಕರಭಟ್ಟ ಕಡೆಂಗೋಡ್ಲು, ಕವಿ ಲಕ್ಷ್ಮೀಶ ಸಮಗ್ರಗದ್ಯ ಸಂಪುಟ, ಪ್ರ.  ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.

೩೧. ಶಿವಶಂಕರ್ ಚಕ್ಕರೆ, ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ವ್ಯಕ್ತವಾದ ಕೃಷ್ಣಭಕ್ತಿ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಂಪುಟ. ೬೭, ಸಂಚಿಕೆ ೨., ೧೯೮೨, ಪ್ರ. ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು.

೩೨. ಶ್ರೀನಿವಾಸಮೂರ್ತಿ ಎಂ.ವಿ., ಲಕ್ಷ್ಮೀಶನ ಪಾತ್ರಗಳು, ೧೯೭೮, ಪ್ರ.  ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

೩೩. ಶ್ರೀನಿವಾಸ ಜೋಯಿಸರು ಹುಲ್ಲೂರು, ಜೈಮಿನಿ ಭಾರತದಲ್ಲಿ ಚಾರಿತ್ರ ಕಾಲದ ವಿಷಯಗಳು, ಕರ್ನಾಟಕ ಸಾಹಿತ್ಯ ಪರಿಷತ್ಪತ್ರಿಕೆ, ಸಂಪುಟ. ೨೩, ಸಂಚಿಕೆ ೧., ೧೯೩೮, ಪ್ರ. ಕರ್ನಾಟಕ ಸಾಹಿತ್ಯ ಪರಿಷತ್ತು, ಹಾರ್ಡಿಂಜ್ ರಸ್ತೆ, ಬೆಂಗಳೂರು.

೩೪. ಸದಾನಂದ ನಾಯಕ, ಲಕ್ಷ್ಮೀಶನ ಕಾಲದೇಶಾದಿ ಚರಿತೆ, ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ.೪, ಭಾಗ-೨, ೧೯೭೮, ಪ್ರ. ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

೩೫. ಸಿದ್ಧಲಿಂಗಯ್ಯ ಜಿ.ಎಸ್., ಲಕ್ಷ್ಮೀಶನ ಒಂದು ಸಮಗ್ರ ವಿವೇಚನೆ, ೧೯೭೮, ಪ್ರ. ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

೩೬. ಸೀತಾರಾಯಮ್ಯ ಎಂ.ವಿ., ಲಕ್ಷ್ಮೀಶನ ಜೈಮಿನಿ ಭಾರತ, ಭಾಗ-೨ ಜೀವನ, ಸಂಪುಟ. ೩೦, ಸಂಚಿಕೆ ೩., ೧೯೭೦, ಪ್ರ. ಗಾಂಧೀ ಸಾಹಿತ್ಯ ಸಂಘ, ಮಲ್ಲೇಶ್ವರಂ, ಬೆಂಗಳೂರು.

೩೭. ಸೀತಾರಾಮಯ್ಯ ಎಂ.ವಿ., ಲಕ್ಷ್ಮೀಶನ ಜೈಮಿನಿ ಭಾರತ, ಭಾಗ-೧ ಜೀವನ, ಸಂಪುಟ. ೨೯, ಸಂಚಿಕೆ ೭, ೧೯೬೯, ಪ್ರ. ಗಾಂಧೀ ಸಾಹಿತ್ಯ ಸಂಘ, ಮಲ್ಲೇಶ್ವರಂ, ಬೆಂಗಳೂರು.

೩೮. ಸೀತಾರಾಮ ಜಾಗೀರದಾರ್, ಕನ್ನಡ ಜೈಮಿನಿ ಭಾರತದ ಒಂದು ಪದ್ಯ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಂಪುಟ. ೬೦, ಸಂಚಿಕೆ ೧., ೧೯೭೫, ಪ್ರ. ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.

೩೯. ಸೀತಾರಾಮಯ್ಯ ಎಂ.ವಿ., ಲಕ್ಷ್ಮೀಶನ ಜೈಮಿನಿ ಭಾರತ, ಜೀವನ, ಸಂಪುಟ. ೩೦, ಸಂಚಿಕೆ ೭., ೧೯೭೦, ಪ್ರ. ಗಾಂಧಿ ಸಾಹಿತ್ಯ ಸಂಘ, ಮಲ್ಲೇಶ್ವರಂ, ಬೆಂಗಳೂರು.