ರಾಷ್ಟ್ರದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯ ಪ್ರವೃತ್ತವಾಗಿರುವ ಕೆಲವೇ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ.  ಜೈವಿಕ ಇಂಧನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದಿನಾಂಕ ೧೨.೦೯.೨೦೦೮ ರಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಕಾರ್ಯಪಡೆಯನ್ನು  ಸರ್ಕಾರ ರಚಿಸಿದೆ.  ಈ ಕಾರ್ಯಪಡೆಯು ಜೈವಿಕ ಇಂಧನ ನೀತಿ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸುತ್ತಿದೆ.

ಜೈವಿಕ ಇಂಧನ ಕಾರ್ಯಪಡೆಯ ಧ್ಯೇಯೋದ್ದೇಶಗಳು

 • ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮ ರೂಪಿಸುವುದು.
 • ಜೈವಿಕ ಇಂಧನ ನೀತಿ ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮಾರ್ಗದರ್ಶನ/ಶಿಫಾರಸ್ಸು ನೀಡುವುದು.
 • ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಲು ಯೋಗ್ಯವಾದ ಕೃಷಿಯೇತರ ಭೂಮಿಯನ್ನು ಗುರುತಿಸುವುದು.
 • ವಿವಿಧ ಪ್ರದೇಶಗಳಿಗೆ ಯೋಗ್ಯವಾದ ಜೈವಿಕ ಇಂಧನ ಸಸ್ಯಗಳನ್ನು ಗುರುತಿಸುವುದು.
 • ಗ್ರಾಮ ಅರಣ್ಯ ಸಮಿತಿಗಳ ಮೂಲಕ ಜೈವಿಕ ಇಂಧನ ಸಸ್ಯಗಳನ್ನು ಬೆಳೆಸುವ ಕಾರ್ಯಕ್ರಮ ರೂಪಿಸುವುದು.
 • ರೈತರಿಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜೈವಿಕ ಇಂಧನ ಸಸ್ಯಗಳನ್ನು ಬೆಳೆಸಲು ಪ್ರೋತ್ಸಾಹಿಸುವುದು
 • ಎಥನಾಲ್ ಉತ್ಪಾದನೆಗಾಗಿ ಪ್ರೋತ್ಸಾಹ ನೀಡುವುದು.
 • ಸಕ್ಕರೆ ಕಾರ್ಖಾನೆಗಳಲ್ಲಿ ಎಥನಾಲ್ ಉತ್ಪಾದನೆಗಾಗಿ ಉತ್ತೇಜನ ನೀಡುವುದು.
 • ಜೈವಿಕ ಎಥನಾಲ್ ಉತ್ಪಾದನೆಗಾಗಿ ಕಬ್ಬು, ಬೀಟ್‌ರೂಟ್, ಗೋವಿನ ಜೋಳ ಮುಂತಾದ ಬೆಳೆಗಳ ಬೇಸಾಯವನ್ನು ಪ್ರೋತ್ಸಾಹಿಸುವುದು.
 • ಜೈವಿಕ ಇಂಧನ ಉತ್ಪಾದನಾ ಘಟಕಗಳ ಸ್ಥಾಪನೆಗಾಗಿ ಪ್ರೋತ್ಸಾಹ ನೀಡುವುದು.
 • ಜೈವಿಕ ಇಂಧನಕ್ಕಾಗಿ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುವುದು.

ಕರ್ನಾಟಕದಲ್ಲಿ ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮತ್ತು ಕೃಷಿ ಇಲಾಖೆಗಳನ್ನು ಸಕ್ರಿಯವಾಗಿ ಜೈವಿಕ ಇಂಧನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗಿದೆ.  ೨೦೦೯-೧೦ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಅನುದಾನದಿಂದ ಅರಣ್ಯ ಇಲಾಖೆ, ಸರ್ಕಾರಿ ಬರಡು ಭೂಮಿ ಹಾಗು ಪಾಳು (degraded) ಅರಣ್ಯ ಪ್ರದೇಶದ ೫,೦೦೦ ಹೆ. ಭೂ ಪ್ರದೇಶದಲ್ಲಿ  ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಬರಡು ಬಂಗಾರ ಕಾರ್ಯಕ್ರಮದಡಿ ಬೆಳೆಸಲಾಗಿದೆ.

ಜೈವಿಕ ಇಂಧನ ಕಾರ್ಯಪಡೆ ರಾಜ್ಯದ ಜೈವಿಕ ಇಂಧನ ನೀತಿ ರೂಪಿಸಿ, ದಿನಾಂಕ. ೦೯.೦೩.೨೦೦೯ ರಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ ಜಾರಿಗೊಳಿಸಿದೆ. (ಅನುಬಂಧ-೪) ರಲ್ಲಿ  ರಾಜ್ಯ ಜೈವಿಕ ಇಂಧನ ನೀತಿ ಲಗತ್ತಿಸಿದೆ.  ೨೦೧೦-೧೧ನೇ ಸಾಲಿಗೆ ರಾಜ್ಯದ ೨೫,೦೦೦ ಹೆಕ್ಟೇರ್ ಸರ್ಕಾರಿ ಭೂಮಿಯಲ್ಲೂ ಹಾಗೂ ರೈತರ ಹೊಲದ ಬದುಗಳಲ್ಲಿ ಒಟ್ಟು ೩ ಕೋಟಿ ಸಸಿಗಳನ್ನು ಹಾಗೂ ೩೦.೦೦ ಲಕ್ಷ ಕಸಿ ಮಾಡಿದ ಉತ್ತಮ ತಳಿಯ ಮತ್ತು ೩ ವರ್ಷಕ್ಕೇ ಅಧಿಕ ಇಳುವರಿ ನೀಡುವ ಹೊಂಗೆ ಮತ್ತು ಇತರ ಜೈವಿಕ ಇಂಧನ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುತ್ತಿದೆ.  ರೈತರುಗಳ ಜಮೀನಿನ ಬದುಗುಂಟ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ವಿನಿಯೋಗಿಸಿ, ಜೈವಿಕ ಇಂಧನ ಸಸಿ ನೆಡುವ ಬೃಹತ್ ಯೋಜನೆ “ಹಸಿರು ಹೊನ್ನು” ಕಾರ್ಯಕ್ರಮ ಜಾರಿಗೊಳಿಸಿದೆ.

೧. ವಿವಿಧ ಸಾಲುಗಳಲ್ಲಿ ಕೈಗೊಳ್ಳಬೇಕಿರುವ ಕಾರ್ಯಕ್ರಮದ ಗುರಿ.

ಕ್ರ
ಸಂ

ವರ್ಷ

ಗುರಿ

ಕಾರ್ಯದ ವಿವರ

ಭೂಮಿ (ಹೆ.ಗಳಲ್ಲಿ)

ಸಸಿ (ಲಕ್ಷಗಳಲ್ಲಿ)

೨೦೦೯-೧೦

೬,೦೦೦ ಹೆ.

೩೦ ಲಕ್ಷ

ಸರ್ಕಾರಿ ಪಾಳು ಭೂಮಿ, ಬರಡು ಹಾಗೂ ಮಂಜುರು ಭೂ ಪ್ರದೇಶದಲ್ಲಿ ಜೈವಿಕ ಇಂಧನ ಸಸಿ ನೆಡುವುದು. ಗ್ರಾಮ ಅರಣ್ಯ ಸಮಿತಿಗಳನ್ನು ಸಕ್ರಿಯವಾಗಿ ತೊಡಗಿಸುವುದು.

೨೦೧೦-೧೧

೨೫,೦೦೦ ಹೆ.

೧೫೦

೧.೫ ಕೋಟಿ ಸಸಿಗಳನ್ನು ಸರ್ಕಾರಿ ಪಾಳು ಹಾಗೂ ಬರಡು, ಬಂಜರು ಭೂ ಪ್ರದೇಶದಲ್ಲಿ ಜೈವಿಕ ಇಂಧನ ಸಸಿನೆಡುವುದು. ಗ್ರಾಮ ಅರಣ್ಯ ಸಮಿಗಳನ್ನು ಸಕ್ರಿಯವಾಗಿ ತೊಡಗಿಸುವುದು.

 

 

– –

೧೫೦

೧.೫ ಕೋಟಿ ಸಸಿಗಳನ್ನು ಹಸಿರು ಹೊನ್ನು ಕಾರ್ಯಕ್ರಮದಡಿ ರೈತರುಗಳ ಜಮೀನಿನ ಬದು, ಬೇಲಿಗಳು.   ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖತರಿ ಯೋಜನೆಯಡಿ ನೆಡುವುದು.ಸ್ವಯಂ ಸೇವಾ ಸಂಸ್ಥೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.

 

 

೩೦

ಕಸಿ ಮಾಡಿದ ಹೊಂಗೆ ಸಸಿಗಳನ್ನು ಸಿದ್ಧಪಡಿಸುವುದು. ಸಂಶೋಧನಾ ಸಂಸ್ಥೆ, ಪ್ರತಿಷ್ಟಿತ ಸ್ವಯಂ ಸೇವಾ ಸಂಸ್ಥೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು.

೨೦೧೧-೧೨

೩೫,೦೦೦ ಹೆ.

೨೦೦

೨೦೦

೩೦

೫೦

೧) ಬಿ.ಬಿ.೨) ಹೆಚ್.ಹೆಚ್.೩) ಗ್ರಾಫೈಡ್

ಎಸಿ ಮಾಡಿದ ಹೊಂಗೆ ಸಸಿ ಬೆಳೆಸುವುದು.

೨೦೧೦-೧೩

೪೦,೦೦೦

೨೨೫

೨೦೦

೫೦

೫೦

ಕಸಿ ಮಾಡಿದ ಹೊಂಗೆ ಸಸಿ ಬೆಳೆಯುವುದು.

ಮುಂಬರುವ ವರ್ಷಗಳಲ್ಲಿ ೧ ಲಕ್ಷ ಹೆ. ಭೂ ಪ್ರದೇಶದಲ್ಲಿ ಹಾಗೂ ೧೦ ಕೋಟಿ ಸಸಿಗಳನ್ನು ರೈತರ ಹೊಲದ ಬದುಗಳಲ್ಲಿ ಸಮರೋಪಾದಿಯಲ್ಲಿ ಜೈವಿಕ ಇಂಧನ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.