ಹೊಂಗೆ
ಸಾಮಾನ್ಯ ಹೆಸರು ಹೊಂಗೆ
ಸಸ್ಯ ಶಾಸ್ತ್ರೀಯ ಹೆಸರು ಪೊಂಗಾಮಿಯ ಪಿನ್ನಾಟ
ಕುಟುಂಬ ಫ್ಯಾಬೆಸಿ
ಸ್ಥಳೀಯ ಹೆಸರುಗಳು ಕನ್ನಡ – ಹೊಂಗೆ; ಅಸ್ಸಾಮಿ – ಕರಾಚಲ್; ಬೆಂಗಾಲಿ, ಹಿಂದಿ, ಗುಜರಾತಿ-ಕರಂಜ;  ತಮಿಳು – ಪೊಂಗಾಮ್; ತೆಲುಗು – ಕಾನಗ.

ಹೊಂಗೆಮರ ನಮ್ಮ ದೇಶದ ಬಹಳಷ್ಟು ಪ್ರದೇಶಗಳಲ್ಲಿ ಬೆಳೆಯುವುದು. ಈ ಮರವನ್ನು ನದಿ ತೀರದಲ್ಲಿ, ನಾಲಾ ಪಕ್ಕದಲ್ಲಿ, ರಸ್ತೆಯ ಬದಿಯಲ್ಲೂ ಸಹ ಬೆಳೆಸಬಹುದು. ಹೊಂಗೆ ಗಿಡಗಳನ್ನು ಬೇಲಿಯ ಅಂಚಿನಲ್ಲಿ, ಬದುಗಳ ಮೇಲೆ ಮತ್ತು ಪಾಳು ಜಮೀನು/ ಬಂಜರು ಭೂಮಿಯಲ್ಲಿ ಹಾಗೂ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿಯೂ ಸಹ ಬೆಳೆಸಬಹುದು.

ಹೊಂಗೆ ಮಧ್ಯಮ ಗಾತ್ರದ ಮರ. ಈ ಮರವು ಸೂರ್ಯನ ಬೆಳಕು ಸಾಕಷ್ಟು ದೊರೆಯುವ ಸ್ಥಳದಲ್ಲಿ ಬಹಳ ಚೆನ್ನಾಗಿ ಬೆಳೆಯುತ್ತದೆ. ಇದಕ್ಕೆ ನೆರಳಿನಲ್ಲಿಯೂ ಬೆಳೆಯುವ ಸಾಮರ್ಥ್ಯವಿದೆ. ಈ ಮರವು ೫೦೦-೨೫೦೦ ಸೆಂ.ಮಿ. ಮಳೆ ಬೀಳುವ ಪ್ರದೇಶ ಹಾಗು ೧೦-೪೦ ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಬೆಳೆಯುತ್ತದೆ. ಇದನ್ನು ಕಡಿದರೆ ಪುನಃ ಚಿಗುರುವ ಗುಣವನ್ನು ಹೊಂದಿದೆ. ಸಾಮಾನ್ಯವಾಗಿ ಹೊಂಗೆಯ ಮರವು ಎಲ್ಲಾ ರೀತಿಯ ವಾತಾವರಣ ಹಾಗೂ ಎಲ್ಲಾ ಬಗೆಯ ಮಣ್ಣಿನಲ್ಲಿ ಬೆಳೆಯುತ್ತದೆ. ಆದರೆ, ಫಲವತ್ತಾದ ಮಣ್ಣು ಮತ್ತು ತೇವಾಂಶ ಹೆಚ್ಚಿರುವ ಕಡೆ ಹೊಂಗೆ ಮರವು ಚೆನ್ನಾಗಿ ಬೆಳೆಯುತ್ತದೆ.

ಹೊಂಗೆ ಬಹು ಉಪಯೋಗಿ ಮರ. ಹಿಂದಿನಿಂದಲೂ ಈ ಮರದ ಬೀಜಕ್ಕೆ ಬಹಳ ಪ್ರಾಮುಖ್ಯತೆ ಇದೆ. ಮನೆಗಳಲ್ಲಿ ದೀಪ ಉರಿಸಲು ಬೀಜದಿಂದ ತೆಗೆದ ಎಣ್ಣೆಯನ್ನು ಉಪಯೋಗಿಸುತ್ತಿದ್ದರು. ಈಗ ಹೊಂಗೆ ಎಣ್ಣೆಯಿಂದ ಪಂಪ್‌ಸೆಟ್, ಜನರೇಟರ್, ಟ್ರಾಕ್ಟರ್, ಪವರ್ ಟಿಲ್ಲರ್, ಬಸ್ಸು, ರೈಲು ಇಂಜಿನ್ ಓಡಿಸಬಹುದೆಂದು ಸಂಶೋಧನೆಯಿಂದ ತಿಳಿದುಬಂದಿದೆ. ಹೊಂಗೆ ಎಣ್ಣೆಯನ್ನು ಚರ್ಮ ಹದ ಮಾಡಲು, ಸಾಬೂನು ತಯಾರಿಕೆಯಲ್ಲಿ ಹಾಗೂ ಹಿಂಡಿಯನ್ನು ಉತ್ತಮ ಸಾವಯವ ಗೊಬ್ಬರವನ್ನಾಗಿ ಬಳಸಲಾಗುತ್ತಿದೆ.

ಈ ಮರವು ಮಾರ್ಚ್‌ನಿಂದ ಮೇ ವರೆಗೆ ಹೂ ಬಿಡುತ್ತದೆ, ಮುಂದಿನ ಜನವರಿಯಿಂದ ಮೇ ವರೆಗೆ ಕಾಯಿ ಕೊಯ್ಲು ಮಾಡಬಹುದು. ಒಂದು ಕೆ.ಜಿ.ಗೆ ೪೬೦-೫೩೦ ಬೀಜಗಳು ಇರುತ್ತವೆ. ಹೊಂಗೆ ಬೀಜವನ್ನು ಸರಿಯಾದ ರೀತಿಯಲ್ಲಿ ಶೇಖರಣೆ ಮಾಡಿದರೆ, ಒಂದು ವರ್ಷದವರೆಗೆ ಶೇ. ೬೦-೮೫ ರಷ್ಟು ಮೊಳೆಯುವಿಕೆಯ ಸಾಮರ್ಥ್ಯ ಪಡೆದಿರುತ್ತದೆ. ಆದಷ್ಟೂ ಹೊಸ ಬೀಜಗಳನ್ನು ಬಿತ್ತಿದರೆ ತಕ್ಷಣ ಹಾಗು ಹೆಚ್ಚಿನ ಮೊಳಕೆಯನ್ನು ನಿರೀಕ್ಷಿಸಬಹುದು.

ಹೊಂಗೆ ಸಸಿಗಳನ್ನು ಬೀಜಗಳಿಂದ ಸುಲಭವಾಗಿ ಬೆಳೆಸಬಹುದು, ಕಾಂಡದ ಕಡ್ಡಿಗಳಿಂದಲೂ ಸಸಿಗಳನ್ನು ಉತ್ಪಾದಿಸಬಹುದು. ೮ ರಿಂದ ೧೨ ತಿಂಗಳ ಕಾಲ ಬೆಳೆಸಿದ ಸಸಿಗಳನ್ನು ಜಮೀನಿನಲ್ಲಿ ನೆಡಲು ಬಳಸಬೇಕು. ಸಸಿಗಳನ್ನು ನೆಡುವ ಜಾಗದಲ್ಲಿ ೪೫ x ೪೫ x ೪೫ ಸೆ೦. ಮೀ. ಗುಂಡಿಯನ್ನು ಅಗೆದು ಅದರಲ್ಲಿ ಕೊಟ್ಟಿಗೆ ಗೊಬ್ಬರ, ಕೆಂಪು ಮಣ್ಣು ಮಿಶ್ರಣಮಾಡಿ ಕನಿಷ್ಟ ೬೦ ಸೆ೦. ಮೀ. ಎತ್ತರದ ಗಿಡಗಳನ್ನು ನಾಟಿ ಮಾಡಬೇಕು. ಮರದ ಕಾಂಡ  ನೆಟ್ಟಗೆ ಬೆಳೆಯಲು ಆಗಾಗ್ಗೆ ಅಡ್ಡ ರೆಂಬೆಗಳನ್ನು ತೆಗೆದು ಹಾಕಬೇಕು. ನಮ್ಮ ರಾಜ್ಯದಲ್ಲಿ ಈ ಮರ ೭-೧೦ನೇ ವರ್ಷಕ್ಕೆ ಹೆಚ್ಚು ಕಡಿಮೆ ೮-೯ ಮೀ. ಎತ್ತರ ಬೆಳೆಯುತ್ತದೆ. ಉತ್ತಮ ಇಳುವರಿ ಪಡೆಯಲು ಶೇಕಡ ೨೦-೨೫ ರಷ್ಟು ರೆಂಬೆಗಳನ್ನು ಕತ್ತರಿಸುವುದು ಅವಶ್ಯಕ.

ಕಸಿ ಕಟ್ಟುವಿಕೆ

ಮಾಮೂಲಿಯಾಗಿ ಬೆಳೆಸಿದ ಹೊಂಗೆ ಗಿಡಗಳು ಕಾಯಿ ಬಿಡಲು ೭ ವರ್ಷಗಳು ಬೇಕಾಗುತ್ತದೆ, ಆದುದರಿಂದ ಹೊಂಗೆ ಗಿಡಗಳಿಗೆ ಕಸಿಕಟ್ಟುವದರಿಂದ ಬೇಗನೆ ಫಸಲು ಕೊಡಲು ಪ್ರಾರಂಬಿಸುತ್ತವೆ.  ಕಸಿ ಕಟ್ಟಲು ಮೊದಲು ಉತ್ತಮ ಬೇರು ಗಿಡಗಳನ್ನು ಬೆಳಸಿಕೊಳ್ಳಬೇಕು. ನಂತರ, ಉತ್ತಮ ಜಾತಿಯ ತಾಯಿ ಹೊಂಗೆ ಮರದಿಂದ ಕಸಿ ಕಡ್ಡಿಗಳನ್ನು ಆರಿಸಿಕೊಂಡು ಸೂಕ್ತ ಕಸಿ ವಿಧಾನವನ್ನು ಅನುಸರಿಸಿ ಉತ್ತಮ ಕಸಿ ಮಾಡಿದ ಹೊಂಗೆ ಗಿಡಗಳನ್ನು ಪಡೆಯಬಹುದು. ಈ ರೀತಿಯಾಗಿ ಕಸಿ ಮಾಡಿದ ಗಿಡಗಳು ಬೇಗನೆ ಫಸಲು ಕೊಡುವುದಲ್ಲದೆ, ಅಧಿಕ ಇಳುವರಿಯನ್ನೂ ಕೊಡುತ್ತವೆ.

 

ಹಿಪ್ಪೆ
ಸಾಮಾನ್ಯ ಹೆಸರು ಹಿಪ್ಪೆ ಮರ
ಸಸ್ಯಶಾಸ್ತ್ರೀಯ ಹೆಸರು ಮಧುಕ ಇಂಡಿಕ
ಕುಟುಂಬ ಸಪೋಟೆಸಿ
ಸ್ಥಳೀಯ ಹೆಸರುಗಳು ಕನ್ನಡ – ಹಿಪ್ಪೆ; ಬೆಂಗಾಲಿ, ಹಿಂದಿ, ಗುಜರಾತಿ – ಮಹೂವ; ತಮಿಳು-ಯಲೂಪೈಟ; ತೆಲುಗು – ಇಪ್ಪ.

ಹಿಪ್ಪೆ ಜೈವಿಕ ಇಂಧನಕ್ಕಾಗಿ ಬೆಳೆಯಲು ಒಂದು ಒಳ್ಳೆಯ ಮರ. ಇದನ್ನು ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ತೋಪುಗಳಾಗಿ ಬೆಳೆಸುತ್ತಾರೆ. ಇದನ್ನು ರಸ್ತೆ ಬದಿಯಲ್ಲಿ ಸಾಲು ಮರಗಳಾಗಿ ಬೆಳೆಸುವುದನ್ನು ಕಾಣಬಹುದು. ಈ ಮರವು ೫೦೦-೨೫೦೦ ಸೆಂ.ಮಿ. ಮಳೆ ಬೀಳುವ ಪ್ರದೇಶ ಹಾಗು ೧೦-೪೦ ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಬೆಳೆಯುತ್ತದೆ. ಈ ಮರ ಎಲ್ಲಾ ವಿಧವಾದ ಮಣ್ಣಿನಲ್ಲಿ ಬೆಳೆಯುತ್ತದೆ.

ಈ ಮರದ ಬೀಜದಿಂದ ಎಣ್ಣೆಯನ್ನು ತೆಗೆಯುತ್ತಾರೆ. ಹಿಪ್ಪೆ ಬೀಜದಲ್ಲಿ ಎಣ್ಣೆ ಅಂಶ ಶೇ. ೩೦-೩೫ ರಷ್ಟು ಇರುತ್ತದೆ. ಇದರ ಹಿಂಡಿಯನ್ನು ಬೆಳೆಗಳಿಗೆ ಗೊಬ್ಬರವನ್ನಾಗಿ ಉಪಯೋಗಿಸಬಹುದು. ಈ ಮರದ ಹೂವು, ಹಣ್ಣು, ಎಣ್ಣೆ ಮತ್ತು ತೊಗಟೆಗಳನ್ನು ಅನೇಕ ಬಗೆಯ ಔಷಧಿಗಳಿಗೆ ಉಪಯೋಗಿಸುತ್ತಾರೆ. ಮರದಿಂದ ವ್ಯವಸಾಯದ ಉಪಕರಣಗಳನ್ನು ಮಾಡಬಹುದು. ಹಿಪ್ಪೆ ದೊಡ್ಡ ಮರವಾಗಿ ಬೆಳೆಯುತ್ತದೆ. ಎಲೆಗಳು ಫೆಬ್ರವರಿ-ಏಪ್ರಿಲ್ ತಿಂಗಳ ತನಕ ಉದುರುತ್ತವೆ. ಏಪ್ರಿಲ್ – ಮೇ ತಿಂಗಳಲ್ಲಿ ಹೊಸ ಎಲೆ ಮತ್ತು  ಹೂ ಗಳು ಬರುತ್ತವೆ.  ಸಾಮಾನ್ಯವಾಗಿ ಜೂನ್-ಆಗಸ್ಟ್ ತಿಂಗಳಲ್ಲಿ ಹಣ್ಣುಗಳನ್ನು ಕೊಯ್ಲು ಮಾಡಿ ಎಣ್ಣೆ ತೆಗೆಯಲು ಹಸನು ಮಾಡಬಹುದು. ಬೀಜಗಳಲ್ಲಿ ಹೆಚ್ಚಿನ ಎಣ್ಣೆಯ ಅಂಶವಿರುವುದರಿಂದ ಹೆಚ್ಚು ದಿನವಿಟ್ಟರೆ ಮೊಳಕೆ ಸಾಮರ್ಥ್ಯ ಕಡಿಮೆಯಾಗುತ್ತದೆ.

ಸಸಿಗಳನ್ನು ಬೀಜ ಬಿತ್ತಿ ಬೆಳೆಸಬಹುದು. ಸಸಿಗಳನ್ನು ಪಾಲಿಥೀನ್ ಚೀಲ ಅಥವಾ ಪಾತಿಗಳಲ್ಲಿ ನೆಟ್ಟರೆ ಚೆನ್ನಾಗಿ ಬೆಳೆಯುತ್ತದೆ. ಸುಮಾರು ೧೫-೨೦ ದಿನಕ್ಕೆ ಮೊಳಕೆ ಬರುತ್ತದೆ. ಸಸಿಗಳು ೫೦-೬೦ ಸೆ೦. ಮೀ. ಎತ್ತರಕ್ಕೆ ಬೆಳೆದಾಗ ಭೂಮಿಯಲ್ಲಿ ನೆಡಲು ಯೋಗ್ಯವಾಗಿರುತ್ತವೆ. ಅಂದರೆ, ೯-೧೦ ತಿಂಗಳುಗಳಲ್ಲಿ ಸಸಿಗಳನ್ನು ಮುಖ್ಯ ಭೂಮಿಗೆ ನೆಡಬಹುದು. ಹಿಪ್ಪೆ ಮರಗಳನ್ನು ೮ x ೮ ಮೀ. ದೂರದಲ್ಲಿ ನೆಡುತೋಪು ಅಥವಾ ಸಾಲು ಮರಗಳಾಗಿ ಬೆಳೆಸಬಹುದು. ಈ ಗಿಡಗಳನ್ನು ೩-೫ ವರ್ಷ ಪೋಷಿಸಬೇಕು. ಹೊಲದ ಅಂಚಿನಲ್ಲಿ ಕೆಲವು ಮರಗಳನ್ನು, ಮನೆಯ ಹಿಂದೆ ಅಥವಾ ಮುಂದೆ ಒಂದೆರೆಡು ಮರಗಳನ್ನು ಬೆಳೆಸಬಹುದು.

ಹಿಪ್ಪೆ ಸಾಮಾನ್ಯವಾಗಿ ಹತ್ತು ವರ್ಷಕ್ಕೆ ಇಳುವರಿ ಕೊಡಲು ಪ್ರಾರಂಭಿಸುತ್ತದೆ. ೧೦ನೇ ವರ್ಷದಿಂದ ಇಳುವರಿ ಪ್ರಾರಂಭವಾಗಿ ೨೫ನೇ ವರ್ಷದಿಂದ  ಸುಮಾರು ೩೦-೪೦ ಕೆ.ಜಿ. ಬೀಜ ಸಿಗುತ್ತದೆ.

ಕಸಿ ಕಟ್ಟುವಿಕೆ

ಮಾಮೂಲಿಯಾಗಿ ಬೆಳೆಸಿದ ಹಿಪ್ಪೆ ಗಿಡಗಳು ಕಾಯಿ ಬಿಡಲು ೮ ರಿಂದ ೧೦ ವರ್ಷಗಳು ಬೇಕಾಗುತ್ತದೆ, ಆದುದರಿಂದ ಹಿಪ್ಪೆ ಗಿಡಗಳಿಗೆ ಕಸಿಕಟ್ಟುವದರಿಂದ ಬೇಗನೆ ಫಸಲು ಕೊಡಲು ಪ್ರಾರಂಭಿಸುತ್ತವೆ. ಕಸಿ ಕಟ್ಟಲು ಮೊದಲು ಉತ್ತಮ ಬೇರು ಗಿಡಗಳನ್ನು ಬೆಳಸಿಕೊಳ್ಳಬೇಕು. ನಂತರ, ಉತ್ತಮ ಜಾತಿಯ ಹಿಪ್ಪೆ ಮರದಿಂದ ಕಸಿ ಕಡ್ಡಿಗಳನ್ನು ಆರಿಸಿಕೊಂಡು ಸೂಕ್ತ ಕಸಿ ವಿಧಾನವನ್ನು ಅನುಸರಿಸಿ ಉತ್ತಮ ಕಸಿ ಮಾಡಿದ ಹಿಪ್ಪೆ ಗಿಡಗಳನ್ನು ಪಡೆಯಬಹುದು. ಈ ರೀತಿಯಾಗಿ ಕಸಿ ಮಾಡಿದ ಗಿಡಗಳು ಬೇಗನೆ ಫಸಲು ಕೊಡುವುದಲ್ಲದೆ, ಅಧಿಕ ಇಳುವರಿಯನ್ನು ಕೊಡುತ್ತವೆ.

 

ಬೇವು
ಸಾಮಾನ್ಯ ಹೆಸರು ಬೇವಿನ ಮರ
ಸಸ್ಯಶಾಸ್ತ್ರೀಯ ಹೆಸರು ಅಝಾಡಿರೆಕ್ಟಾ ಇಂಡಿಕ
ಕುಟುಂಬ ಮೀಲಿಯೇಸಿ
ಸ್ಥಳೀಯ ಹೆಸರುಗಳು ಕನ್ನಡ – ಬೇವು ; ಬೆಂಗಾಲಿ, ಹಿಂದಿ – ನೀಮ್‌ಚ್; ತಮಿಳು- ವೆಪ್ಪಮಾರಿನ್; ತೆಲುಗು – ವೇಪ

ಒಣ ಪ್ರದೇಶದಲ್ಲಿ ಬೆಳೆಯುವ ಮರಗಳಲ್ಲಿ ಬೇವು ಅತ್ಯಂತ ಬೆಲೆ ಬಾಳುವ ಮರ. ಬೇವಿನ ಮರದ ಪ್ರತಿಯೊಂದು ಭಾಗವು ಹಲವಾರು ಉಪಯೋಗಕ್ಕೆ ಬರುತ್ತದೆ. ಮರದ ದಿಮ್ಮಿಯನ್ನು ಮನೆ ಕಟ್ಟಲು, ಪೀಠೋಪಕರಣ ಮಾಡಲು, ಬೀಜ ಮತ್ತು ಎಲೆಗಳನ್ನು ಔಷಧವಾಗಿ ಹಾಗೂ ಎಲೆ ಮತ್ತು ಬೀಜದ ಕಷಾಯವನ್ನು ಕೀಟನಾಶಕವಾಗಿ ಉಪಯೋಗಿಸಬಹುದು.

ಇದು ಮದ್ಯಮ ಗಾತ್ರದ ದೊಡ್ಡ ಮರವಾಗಿದ್ದು ಜೊತೆಗೆ ಕಡು ಬೂದು ತೊಗಟೆಯು ಮೇಲಿನಿಂದ ಕೆಳಕ್ಕೆ ಮತ್ತು ಓರೆಯಾಗಿ ಸಾಲು ಸೀಳುಗಳನ್ನು ಹೊಂದಿರುತ್ತದೆ. ಎಲೆಗಳು ಸಂಯುಕ್ತ ಅಸಮ ಗರಿ ಪತ್ರಗಳನ್ನು ಹೊಂದಿದ್ದು ತೊಟ್ಟಿನ ಬುಡ ಉಬ್ಬಿರುತ್ತವೆ. ಹೂಗಳು ತೆನೆಗಳ ಮಾದರಿಂiiಲ್ಲಿ ಚಿಕ್ಕದಾಗಿ ಮತ್ತು ಬಿಳಿ ಬಣ್ಣದ್ದಾಗಿರುತ್ತವೆ. ಕೊಂಬೆಗಳು ಮತ್ತು ಎಲೆಗಳು ಹೊಳಪುಳ್ಳದ್ದಾಗಿರುತ್ತವೆ.

ಈ ಮರವು ೪೫೦-೧೨೦೦ ಸೆಂ.ಮಿ. ಮಳೆ ಬೀಳುವ ಪ್ರದೇಶ ಹಾಗು ೧೦-೪೮ ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಬೆಳೆಯುತ್ತದೆ. ಈ ಮರ ನಿತ್ಯ ಹಸಿರಾದರೂ ಒಣ ಹವೆಯಲ್ಲಿ ಎಲೆಗಳನ್ನು ಉದುರಿಸುತ್ತದೆ. ಸೂರ್ಯನ ಬೆಳಕು ಹೆಚ್ಚು ಇದ್ದ ಕಡೆ ಈ ಮರ ಚೆನ್ನಾಗಿ ಬೆಳೆಯುತ್ತದೆ. ಜೌಗು ಪ್ರದೇಶದಲ್ಲಿ ಬೇವು ಚೆನ್ನಾಗಿ ಬೆಳೆಯುವುದಿಲ್ಲ. ಬೇವು ದೇಶದ ಎಲ್ಲಾ ಪ್ರದೇಶದಲ್ಲಿ ಕಾಣಸಿಗುತ್ತದೆ. ಈ ಮರ ಸಾಮಾನ್ಯ ಮಧ್ಯಮ ಎತ್ತರ ಎಂದರೆ ೧೫-೨೦ ಮೀ. ವರಗೆ ಬೆಳೆಯುತ್ತದೆ. ಅಪರೂಪವಾಗಿ ೨೫ ಮೀ. ಎತ್ತರದ ಮರಗಳನ್ನು ಕಾಣಬಹುದು.  ಸಾಮಾನ್ಯವಾಗಿ ೫ನೇ ವರ್ಷದಿಂದಲೇ ಮಾರ್ಚ್ ನಿಂದ ಮೇ ವರೆಗೆ ಹೂ ಬಿಡಲು ಪ್ರಾರಂಭಿಸುತ್ತದೆ. ಕಾಯಿಗಳು ಜೂನ್‌ನಿಂದ ಪ್ರರಂಭವಾಗಿ ಆಗಸ್ಟ್‌ನಲ್ಲಿ ಕೊನೆಗೊಳ್ಳುತ್ತವೆ ಜುಲೈ-ಆಗಸ್ಟ್‌ನಲ್ಲಿ ಕೊಯ್ಲು ಮಾಡಬಹುದು. ಒಂದು ಕೆ.ಜಿ.ಯಲ್ಲಿ ೨೫೦೦-೩೦೦೦ ಬೀಜಗಳು ಇರುತ್ತವೆ.

ಬೇವಿನ ಬೀಜಗಳನ್ನು ಮರದಿಂದ ಸಂಗ್ರಹಣೆ ಮಾಡಿದ ೧೫ ದಿನಗಳಲ್ಲಿ ಪಾತಿಯಲ್ಲಿ ಅಥವಾ ಪಾಲಿಥೀನ್ ಚೀಲದಲ್ಲಿ ಹಾಕಿದರೆ ಹೆಚ್ಚಿನ ಬೀಜಗಳು ಮೊಳಕೆಯೊಡೆದು ಸಸಿಗಳಾಗುತ್ತವೆ. ಪಾತಿಗೆ ಹಾಕುವ ಮೊದಲು ಹಣ್ಣಿನ ಸಿಪ್ಪೆ ಮತ್ತು ರಸವನ್ನು ಬೀಜದಿಂದ ಬೇರ್ಪಡಿಸಬೇಕು. ಈ ಬೀಜಗಳಿಗೆ ಯಾವುದೇ ಬೀಜೋಪಚಾರದ ಆವಶ್ಯಕತೆ ಇರುವುದಿಲ್ಲ. ಒಂದರಿಂದ ಎರಡು ವಾರದಲ್ಲಿ ಮೊಳಕೆಯೊಡೆದು ಬೆಳೆಯಲು ಪ್ರಾರಂಭಿಸುತ್ತವೆ. ಬೇವಿನ ಸಸಿಗಳು ೩-೪ ತಿಂಗಳಲ್ಲಿ ೧೫-೨೦ ಸೆ೦.ಮೀ. ಎತ್ತರ ಬೆಳೆಯುತ್ತವೆ. ಒಂದು ವರ್ಷದ ನಂತರ ಈ ಗಿಡಗಳನ್ನು ತೋಪಿನಲ್ಲಿ ಹಾಕಿದರೆ ಗಿಡ ಚೆನ್ನಾಗಿ ಬೆಳೆಯಲು ಅನುಕೂಲಕರ.  ತೋಪಿನಲ್ಲಿ ಗಿಡಗಳನ್ನು ನೆಡುವಾಗ ೩೦ x ೩೦ x ೩೦ ಸೆಂ.ಮೀ. ಗುಂಡಿಗಳನ್ನು ತೆಗೆದು ಅದರಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಕೆಮ್ಮಣ್ಣು ಹಾಕಿ ನೆಟ್ಟರೆ ಗಿಡ ಚೆನ್ನಾಗಿ ಬೆಳೆಯುವುದು.  ಸಸಿಗಳನ್ನು ೫ x ೫ ಮೀ. ಅಂತರದಲ್ಲಿ ಬೆಳೆದರೆ ಒಳ್ಳೆಯದು. ಒಂದು ಎಕರೆಗೆ ೧೬೦ ಬೇವಿನ ಮರಗಳನ್ನು ಬೆಳೆಯಬಹುದು.

ಚೆನ್ನಾಗಿ ಬೆಳೆದ ಮರ ೧೦-೧೨ ವರ್ಷದಲ್ಲಿ ೧೫ ಕೆ.ಜಿ.ಯಷ್ಟು ಬೀಜ ಬಿಡುತ್ತದೆ.  ಬೇವಿನ ಬೀಜದ ತೈಲ ಇಳುವರಿ ಶೇ.೨೮ ರಿಂದ ೩೫ ರಷ್ಟು ಇರುತ್ತದೆ.

ಕಸಿ ಕಟ್ಟುವಿಕೆ

ಮಾಮೂಲಿಯಾಗಿ ಬೆಳೆಸಿದ ಬೇವಿನ ಗಿಡಗಳು ಕಾಯಿ ಬಿಡಲು ೪-೫ ವರ್ಷಗಳು ಬೇಕಾಗುತ್ತದೆ, ಆದುದರಿಂದ ಬೇವಿನ ಗಿಡಗಳಿಗೆ ಕಸಿ ಕಟ್ಟುವುದರಿಂದ  ಬೇಗನೆ ಫಸಲು ಕೊಡಲು ಪ್ರಾರಂಬಿಸುತ್ತವೆ. ಕಸಿ ಕಟ್ಟಲು ಮೊದಲು ಉತ್ತಮ ಬೇರು ಗಿಡಗಳನ್ನು ಬೆಳಸಿಕೊಳ್ಳಬೇಕು. ನಂತರ, ಉತ್ತಮ ಜಾತಿಯ ಬೇವಿನ ಮರದಿಂದ ಕಸಿ ಕಡ್ಡಿಗಳನ್ನು ಆರಿಸಿಕೊಂಡು ಸೂಕ್ತ ಕಸಿ ವಿಧಾನವನ್ನು ಅನುಸರಿಸಿ ಉತ್ತಮ ಕಸಿ ಮಾಡಿದ ಬೇವಿನ ಗಿಡಗಳನ್ನು ಪಡೆಯಬಹುದು. ಈ ರೀತಿಯಾಗಿ ಕಸಿ ಮಾಡಿದ ಗಿಡಗಳು ಬೇಗನೆ ಫಸಲು ಕೊಡುವುದಲ್ಲದೆ, ಅಧಿಕ ಇಳುವರಿಯನ್ನು ಕೊಡುತ್ತವೆ.

 

ಜಟ್ರೋಫಾ
ಸಾಮಾನ್ಯ ಹೆಸರು ತುರಕ ಹರಳು ಅಥವಾ ಕಾಡು ಹರಳು
ಸಸ್ಯಶಾಸ್ತ್ರೀಯ ಹೆಸರು ಜಟ್ರೋಫಾ ಕುರ್ಕಾಸ್
ಕುಟುಂಬ ಯುರ್ಫೋಬಿಯೇಸಿ
ಸ್ಥಳೀಯ ಹೆಸರುಗಳು ಕನ್ನಡ – ತುರಕ ಹರಳು, ಕಾಡು ಔಡಲ; ಹಿಂದಿ – ಭಾಗ್ಫೇರಂಡ; ತೆಲುಗು – ಅಡವಿ ಆಮುದ.

ಇದು ಮೂಲತಃ ಮೆಕ್ಸಿಕೊ ದೇಶದಿಂದ ಬಂದಿದೆ. ಕಾಫಿ ತೋಟದ ಬೇಲಿಗಳಲ್ಲಿ, ಗುಡ್ಡಗಳಲ್ಲಿ, ಕಲ್ಲುಗಳ ಸಂದುಗಳಲ್ಲಿ, ತಿಪ್ಪೆಯ ಸುತ್ತಾ ತಾನಾಗಿಯೇ ಬೆಳೆಯುತ್ತದೆ. ಇದರ ಬಗ್ಗೆ ಯಾರೂ ಗಮನ ಹರಿಸದಿದ್ದರೂ ಇದೀಗ ಜೈವಿಕ ಇಂಧನಕ್ಕಾಗಿ ಭಾರೀ ಮಹತ್ವ ಪಡೆದಿದೆ. ಮೃದು ಕಾಂಡದ ಜಟ್ರೋಫಾ ೪-೬ ಮೀ. ಎತ್ತರದವರೆಗೆ ಬೆಳೆದು ಹೆಚ್ಚು ಕಡಿಮೆ ೪೫ನೇ ವರ್ಷದ ವರೆಗೆ ಫಲ ಕೊಡುತ್ತದೆ. ಇದು ಎಲ್ಲಾ ಬಗೆಯ ವಾತಾವರಣದಲ್ಲೂ ಬೆಳೆಯುತ್ತದೆ. ಒಣಹವೆಯಲ್ಲಿ ಜಟ್ರೋಫಾ ಚೆನ್ನಾಗಿ ಬೆಳೆಯುವುದು. ಈ ಮರದ ಯಾವ ಭಾಗವನ್ನೂ ಪ್ರಾಣಿಗಳು ಮೇಯುವುದಿಲ್ಲ. ಜಟ್ರೋಫಾ ಎಲ್ಲಿ ಹಾಕಿದರೂ ಬೆಳೆಯುವ ಸಾಮರ್ಥ್ಯ ಹೊಂದಿದೆ.

ಟೇರಿ (TERI) ವರದಿಯ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿ ೧೦ ವರ್ಷಕ್ಕಿಂತ ಮೇಲ್ಪಟ್ಟ ತೋಪುಗಳಲ್ಲಿ ಇದನ್ನು ವೈಜ್ಞಾನಿಕವಾಗಿ ಬೆಳೆಯುವುದರ ಬಗ್ಗೆ ಮತ್ತು ಉತ್ತಮ ತಳಿಯ ಬಗ್ಗೆಯಾಗಲಿ, ಬೇರೆ ಬೇರೆ ಪ್ರದೇಶದಲ್ಲಿ ಬೆಳೆದ ಬೀಜದ ಎಣ್ಣೆಯ ಪ್ರಮಾಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿರುತ್ತಾರೆ. ಆದುದರಿಂದ ಇದನ್ನು ಬೆಳೆಯಲು ಇಚ್ಛಿಸುವವರು ಸರಿಯಾದ ಕಡೆಯಿಂದ ಉತ್ತಮ ಸಸಿಗಳನ್ನು ಪಡೆಯುವುದು ಸೂಕ್ತ.  ರೈತರು ಜಟ್ರೋಫಾವನ್ನು ಬಂಜರು ಭೂಮಿಯಲ್ಲಿ, ಬದುಗಳ ಮೇಲೆ, ಬೇಲಿಯ ಪಕ್ಕದಲ್ಲಿ ಮತ್ತು ರಸ್ತೆಯ ಅಕ್ಕಪಕ್ಕದಲ್ಲಿ ಹಾಕುವುದು ಒಳ್ಳೆಯದು.

ಜಟ್ರೋಫಾ ಸಸಿಗಳನ್ನು ಬೆಳೆಯುವಾಗ ಬೀಜಗಳ ಗುಣಮಟ್ಟಗಳನ್ನು ನೋಡುವುದು ಒಳ್ಳೆಯದು. ಬೀಜದ ಬಣ್ಣ ಕಪ್ಪಾಗಿದ್ದು, ಕವಚ ಬಿರುಕಿಲ್ಲದೆ, ಮೃದುವಾಗಿ ಇರಬೇಕು. ಒಂದು ಬೀಜ ಅಂದಾಜಿನಲ್ಲಿ ೨ ಸೆಂ.ಮೀ. ಉದ್ದ ೧ ಸೆಂ.ಮೀ. ದಪ್ಪವಿದ್ದು, ಸಾವಿರ ಬೀಜ ೪೫೦-೫೫೦ ಗ್ರಾಂ. ತೂಕ ಇದ್ದರೆ ಅಂತಹ ಬೀಜಗಳು ಸಸಿಗಳನ್ನು ಮಾಡಲು ಉತ್ತಮ. ಈ ಗಿಡಗಳನ್ನು ತೋಪು ಮಾಡುವ ಜಾಗದಲ್ಲಿ ೩೦ x ೩೦ ಸೆಂ.ಮೀ. ಗುಂಡಿ ತೆಗೆದು ಕೊಟ್ಟಿಗೆ ಗೊಬ್ಬರ ಮತ್ತು ಕೆಮ್ಮಣ್ಣು ಹಾಕಿ ಎರಡು ಅಡಿ ಎತ್ತರ ಇರುವ ಗಿಡಗಳನ್ನು ನೆಡಬೇಕು. ಇದು ಮಳೆಯಾಶ್ರಿತ ಗಿಡ. ಆದುದರಿಂದ ಮಳೆಗಾಲದ ಪ್ರಾರಂಭದಲ್ಲಿ ಇದನ್ನು ಭೂಮಿಯಲ್ಲಿ ನೆಟ್ಟರೆ ಇದು ಚೆನ್ನಾಗಿ ಬೆಳೆಯಲು ಅನುಕೂಲ. ಸಾಮಾನ್ಯವಾಗಿ ಇದನ್ನು ಒಂದೇ ಬೆಳೆಯಾಗಿ ಬೆಳೆಯುವುದಾದರೆ ೩ x ೩ ಮೀ. ಅಂತರದಲ್ಲಿ ಬೆಳೆಯಬಹುದು. ೨ನೇ/ ೩ನೇ ವರ್ಷದಲ್ಲಿ ಗಿಡದ ಕೆಳರೆಂಬೆಗಳನ್ನು ಕತ್ತರಿಸಿ ಗಿಡ ಪೊದೆಯಾಗುವಂತೆ ಬೆಳೆಸಿದರೆ ಒಳ್ಳೆಯದು.

ಕಾಂಡದಿಂದ ಬೆಳೆಸಿದ ಗಿಡಗಳು ೨ನೇ ವರ್ಷದಿಂದ ಕಾಯಿ ಬಿಡಲು ಪ್ರಾರಂಭಿಸುತ್ತವೆ. ಬೀಜದ ಮೂಲದಿಂದ ಬೆಳೆದ ಗಿಡ ೩ನೇ ವರ್ಷದಿಂದ ಕಾಯಿ ಬಿಡಲು ಪ್ರಾರಂಭಿಸುವುದು. ಜಟ್ರೋಫಾ ಮರದ ಫಸಲು, ವಾತಾವರಣ ಹಾಗೂ ವಿವಿಧ ಬೇಸಾಯ ಕ್ರಮವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ೬ನೇ ವರ್ಷದಿಂದ ಸ್ಥಿರ ಫಸಲು ಪಡೆಯಲು ಸಾಧ್ಯವಾಗುತ್ತದೆ. ಜಟ್ರೋಫಾ ಸುಮಾರು ೪೦-೪೫ ವರ್ಷದ ವರೆಗೆ ಫಲ ಕೊಡುತ್ತದೆ.

ಹೆಚ್ಚು ರೆಂಬೆಗಳನ್ನು ಪಡೆಯಲು ೧.೫, ೩.೦ ಮತ್ತು ೪.೫ ಅಡಿಗಳ ಎತ್ತರದಲ್ಲಿ ೩ ವರ್ಷಗಳ ಅವಧಿಯಲ್ಲಿ ಕತ್ತರಿಸಬೇಕು.

ಜಟ್ರೋಫಾ ಬೀಜದ ಕವಚವನ್ನು ತೆಗೆದು ಗಾಣದಲ್ಲಿ ಹಾಕಿ ಎಣ್ಣೆ ತೆಗೆದರೆ ಶೇ. ೩೦-೩೫ ರಷ್ಟು ಎಣ್ಣೆ ದೊರೆಯುತ್ತದೆ. ಈ ಎಣ್ಣೆಯನ್ನು ಟ್ರಾನ್ಸೆಸ್ಟೆರಿಫಿಕೇಷನ್‌ಗೆ ಒಳಪಡಿಸಿ ಡೀಸೆಲ್ ಹಾಗೂ ಗ್ಲಿಸೆರಿನ್ ಉತ್ಪಾದಿಸಲಾಗುತ್ತದೆ. ಬೀಜದಿಂದ ಎಣ್ಣೆ ತೆಗೆದ ನಂತರ ಬರುವ ಹಿಂಡಿ ಬೆಳೆಗಳಿಗೆ ಒಳ್ಳೆಯ ಸಾವಯವ ಗೊಬ್ಬರ.

 

ಸಿಮರೂಬ
ಸಾಮಾನ್ಯ ಹೆಸರು ಸಿಮರೂಬ
ಸಸ್ಯಶಾಸ್ತ್ರೀಯ ಹೆಸರು ಸಿಮರೂಬ ಗ್ಲಾಕ
ಕುಟುಂಬ ಸಿಮರೂಬೇಸಿ

ಸಿಮರೂಬ ಮರವು ಎಲ್ ಸಲ್‌ವದಾರ್ ದೇಶದ ಮೂಲವಾಗಿದ್ದು ನಮ್ಮ ದೇಶಕ್ಕೆ ೧೯೬೦ರಲ್ಲಿ ಪರಿಚಯಿಸಲಾಯಿತು. ಮೊದಲು ಇದನ್ನು ಅಡಿಗೆ ಎಣ್ಣೆಗಾಗಿ ಬೆಳೆಯಲು ಯೋಜನೆ ರೂಪಿಸಲಾಗಿತ್ತು. ಆದರೆ, ಇದು ನಮ್ಮ ಜನರ ರುಚಿಗೆ ಇನ್ನೂ ಹೊಂದಿಕೊಂಡಿಲ್ಲ.  ಸಿಮರೂಬದ ಬೀಜದಲ್ಲಿ ಸುಮಾರು ಶೇ. ೪೦-೫೦ ರಷ್ಟು ಎಣ್ಣೆಯ ಅಂಶವಿದೆ.

ಈ ಮರವು ೭-೧೫ ಮೀ. ಎತ್ತರದ ವರೆಗೆ ಬೆಳೆಯುತ್ತದೆ. ಈ ಮರವು ೩೦೦-೩೦೦೦ ಸೆಂ.ಮಿ. ಮಳೆ ಬೀಳುವ ಪ್ರದೇಶ ಹಾಗು ೧೦-೪೦ ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಬೆಳೆಯುತ್ತದೆ. ಸಿಮರೂಬವನ್ನು ಕಡಿಮೆ ಫಲವತ್ತತೆ ಇರುವ ಪ್ರದೇಶ, ಒಣಭೂಮಿಯಲ್ಲೂ ಸಹ ಬೆಳೆಯಬಹುದು. ಸಿಮರೂಬ ಡಿಸೆಂಬರ್-ಫೆಬ್ರವರಿಯ ವರೆಗೆ ಹೂ ಬಿಡುತ್ತದೆ. ಹಣ್ಣುಗಳು ಫೆಬ್ರವರಿಯಿಂದ ಪ್ರಾರಂಭವಾಗಿ  ಮಾರ್ಚ್- ಏಪ್ರಿಲ್ ವರೆಗೆ ಕೊಯ್ಲು ಮಾಡಬಹುದು. ಕೊಯ್ಲು ಮಾಡಿದ ತಕ್ಷಣ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸಿ ನೆರಳಿನಲ್ಲಿ ಒಣಗಿಸಿ ಎಣ್ಣೆ ತೆಗೆಯಬಹುದು.

ಮೇ-ಜೂನ್ ತಿಂಗಳಲ್ಲಿ ಬೀಜವನ್ನು ಬಿತ್ತಿದರೆ, ಮುಂದಿನ ಜೂನ್‌ನಲ್ಲಿ ಮುಖ್ಯ ಭೂಮಿಯಲ್ಲಿ ಗಿಡಗಳನ್ನು ನಾಟಿ ಮಾಡಬಹುದು. ಸಿಮರೂಬ ಸಸಿಗಳನ್ನು ನೆಡಲು 45 x 45 x 45 ಸೆಂ.ಮೀ. ಗುಂಡಿಗಳನ್ನು ಮಾಡಿ, 5 x 5 «. ಅಂತರದಲ್ಲಿ ನಾಟಿ ಮಾಡಬೇಕು. ಗಿಡಗಳು ೪ನೇ ವರ್ಷದಿಂದ ಕಾಯಿ ಬಿಡಲು ಪ್ರಾರಂಭಿಸುತ್ತದೆ. ೭ನೇ ವರ್ಷದಿಂದ ಒಂದು ಗಿಡಕ್ಕೆ ಸುಮಾರು ೫-೧೦ ಕೆ.ಜಿ. ಬೀಜ ಸಿಗುತ್ತದೆ. ಕಸಿಮಾಡಿದ ಸಸಿಗಳು ನೆಡೆಲು ಬಹಳ ಯೋಗ್ಯ, ಇವು ೩ನೇ ವರ್ಷದಲ್ಲಿ ಹೂ, ಕಾಯಿ ಬಿಡಲು ಪ್ರಾರಂಭಿಸುತ್ತವೆ.

ಸಿಮರೂಬದಲ್ಲಿ ಸಾಮಾನ್ಯವಾಗಿ ಮೂರು ವಿಧದ ಮರಗಳಿರುತ್ತವೆ, ಒಂದು ಹೆಣ್ಣು, ಎರಡನೆಯದು ಗಂಡು ಹಾಗೂ ಮೂರನೆಯದು ದ್ವಿಲಿಂಗ ಸಸ್ಯ.

 

ಅಲ್ಪಾವಧಿ ಜೈವಿಕ ಇಂಧನ ಬೆಳೆಗಳು

ಪುಂಡಿ: ಪುಂಡಿ (Hemp) ಬೆಳೆಯು ರೈತರಿಗೆ ಹೆಚ್ಚುವರಿ ಆದಾಯ ತರಬಲ್ಲ ಅಲ್ಪಾವದಿ ಬೆಳೆಯಾಗಿದ್ದು ರಾಜ್ಯದ ಉತ್ತರ ಕರ್ನಾಟಕದ ಭಾಗಗಳಲ್ಲಿ ಇದನ್ನು ಸುಭವಾಗಿ ಬೆಳೆಯಬಹುದಾದ ಬೆಳೆಯಾಗಿದೆಇದರ  ಎಲೆಗಳನ್ನು ಆಹಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆಇದು ಬಹು ಬೇಗ ಬೆಳೆಯಬಲ್ಲ ಹಾಗೂ ಅಧಿಕ ಸೊಪ್ಪು ನೀಡಬಲ್ಲ ಬೆಳೆಯಾಗಿದ್ದು ಪ್ರತಿ ಹೆಕ್ಟೇರ್ಗೆ ಪ್ರತಿ ವರ್ಷ ೨೫ ಟನ್ ಒಣಪದಾರ್ಥ ನೀಡುವ ಬೆಳೆಯಾಗಿದೆ ಬೆಳೆಯು ಪರಿಸರ ಸ್ನೇಹಿಯಾಗಿದ್ದು ಅತಿ ಕಡಿಮೆ ಕ್ರಿಮಿನಾಶಕ ಹಾಗೂ ಕೀಟನಾಶಕ ಉಪಯೋಗಿಸುವ ಬೆಳೆಯಾಗಿದೆ  ಇದರ ಬೀಜಗಳಲ್ಲಿ ಶೇ.೩೦೩೫ ರಷ್ಟು ಎಣ್ಣೆ ಅಂಶ ಹೊಂದಿದೆ

ಇದು ಬಹು ಉಪಯೋಗಿ ಔಷಧೀಯ ಸಸ್ಯವಾಗಿದೆ ಇದನ್ನು ವಾತನಿರೋಧಕ ಔಷಧವಾಗಿ ಹಾಗೂ ಎಗ್ಸಿಮಾ ರೋಗದ ಉಪಶಮನಕ್ಕಾಗಿ ಬಳಸುತ್ತಾರೆಇದರ ಎಣ್ಣೆಯಿಂದ ಜೈವಿಕ ಡೀಸೆಲ್ ಉತ್ಪಾದಿಸಲಾಗುತ್ತಿದ್ದು ಇದನ್ನು  ಹೆಂಪೋಲೈನ್ ಎಂಬ ಹೆಸರಿನಲ್ಲಿ ಗುರುತಿಸಲಾಗುತ್ತಿದೆಇದರ ಹಿಂಡಿಯನ್ನು ಜೈವಿಕ ಅನಿಲ ಉತ್ಪಾದಿಸಲು ಮತ್ತು ಸಾವಯವ ಗೊಬ್ಬರವಾಗಿ ಉಪಯೋಗಿಸಬಹುದುಪುಂಡಿ ದಂಟಿನಲ್ಲಿರುವ ನಾರನ್ನು ಬೇರ್ಪಡಿಸಿ ಇದನ್ನು ಜೂಟ್ ಬ್ಯಾಗ್, ಹಗ್ಗ, ಬಟ್ಟೆ ಹಾಗೂ ಆಟದ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆಪುಂಡಿ ದಂಟನ್ನು ಉರುವಲಿನ ಇಂಧನವಾಗಿ ಅಲ್ಲದೇ ಕಾಗದ ತಯಾರಿಕಾ ಕಾರ್ಖಾನೆಯಲ್ಲೂ ಸಹ ಬಳಸುತ್ತಾರೆಆದುದರಿಂದ ಪುಂಡಿಯನ್ನು ರೈತರು ತಾವು ಬೆಳೆಯುವ ಆಹಾರ ಬೆಳೆಗಳಾದ ಕಡಲೆಕಾಯಿ (ಶೇಂಗಾ), ಮೆಣಸಿನ ಕಾಯಿ, ಹೊಗೆ ಸೊಪ್ಪು ಹಾಗೂ ಇತರ ಬೆಳೆಗಳಲ್ಲಿ ಮಧ್ಯಮ ಬೆಳೆಯಾಗಿ ಇದನ್ನು ಬೆಳೆಯಬಹುದುಭೂಮಿಯಲ್ಲಿರುವ ಅಲ್ಪ ತೇವಾಂಶ ಬಳಸಿಕೊಂಡು ಬಹು ಶೀಘ್ರವಾಗಿ ಬೆಳೆಯುವ ಬೆಳೆಯಾಗಿರುವುದರಿಂದ ಮುಂಗಾರು ಕಟಾವಿನ ನಂತರವೂ ಸಹ ಇದನ್ನು ಬೆಳೆಯಬಹುದು.

ಹರಳು
ಸಾಮಾನ್ಯ ಹೆಸರು ಹರಳು
ಸಸ್ಯ ಶಾಸ್ತ್ರೀಯ ಹೆಸರು ರಿಸಿನಸ್ ಕಮ್ಯೂನಿಸ್
ಕುಟುಂಬ ಯುರ್ಫೋಬಿಯೇಸಿ
ಸ್ಥಳೀಯ ಹೆಸರುಗಳು ಕನ್ನಡಹರಳು, ಹಿತ್ತಿಲ ಔಡಲತೆಲುಗುಅಮುದಇಂಗ್ಲೀಷ್ಕ್ಯಾಸ್ಟರ್.

ಹರಳು ಒಂದು ಪುರಾತನ ಬೆಳೆಯಾಗಿದ್ದು ಬೆಳೆಯ ಬೀಜಗಳು ಕ್ರಿ.ಪೂ. ೪೦೦೦ ವರ್ಷಗಳ ಹಿಂದೆ ಈಜಿಪ್ಟ್ ಗುಮ್ಮಟಗಳಲ್ಲಿ ಕಂಡಿರುವುದು ಪತ್ತೆಯಾಗಿದೆಭಾರತವು ವಿಶ್ವದಲ್ಲಿ ಅತ್ಯದಿಕ ಪ್ರಮಾಣದ ಹರಳು ಬೀಜ ಉತ್ಪಾದಿಸುವ ರಾಷ್ಟ್ರವಾಗಿದ್ದು ವಿಶ್ವದ ಬಹುತೇಕ ಬೇಡಿಕೆಯನ್ನು ಪೂರೈಸುವ ರಾಷ್ಟ್ರವಾಗಿದೆವಿಶ್ವದ  ಶೇ.೬೦ ರಷ್ಟು ಉತ್ಪಾದನೆ ಭಾರತದಿಂದ ಆಗುತ್ತಿದೆ ಬೆಳೆಯು ಕಡಿಮೆ ಮಳೆಯಾಶ್ರಿತ ಬೆಳೆಯಾಗಿದ್ದು ಸಮಶೀತೋಷ್ಣ ಪ್ರದೇಶದಲ್ಲಿ ಸುಲಭವಾಗಿ ಬೆಳೆಯಲಾಗುತ್ತಿದೆ

ಬೆಳೆಯನ್ನು ಕಡಿಮೆ ಉಷ್ಣಾಂಶವಿರುವ ಪ್ರದೇಶದಲ್ಲಿ ಅಂದರೆ, ರಿಂದ ೨೮ ಡಿಗ್ರಿ ಸೆಲ್ಸಿಯಸ್  ಉಷ್ಣಾಂಶವಿರುವ ಪ್ರದೇಶದಲ್ಲಿಯೂ ಸಹ ಉತ್ತಮವಾಗಿ ಬೆಳೆಯಬಹುದುಇದು ಒಂದು ಅಲ್ಪಾವಧಿ ಬೆಳೆಯಾಗಿದ್ದು, ನಾಟಿ ಮಾಡಿದ ನಂತರ ೯೫೧೮೦ ದಿನಗಳಲ್ಲಿ ಕಟಾವು ಮಾಡಬಹುದುಒಂದು ಕಿಲೋ ಗ್ರಾಂ ತೂಕದಲ್ಲಿ  ಸುಮಾರು ,೨೦೦,೨೦೦ ಮಧ್ಯಮ ಗಾತ್ರದ ಬೀಜಗಳು ಲಭಿಸುತ್ತವೆ ಹೆ. ಪ್ರದೇಶಕ್ಕೆ ೧೫ ಕೆ.ಜಿ ಬೀಜಗಳು ಬಿತ್ತನೆ ಮಾಡಬಹುದು, ಹೆ. ಪ್ರದೇಶದಲ್ಲಿ ೩೦,೦೦೦ ಸಸಿಗಳನ್ನು ಬೆಳೆಸಬಹುದು (ಸಸಿಯಿಂದ ಸಸಿಗೆ ೨೫ ಸೆ.ಮೀ. ದೂರದಲ್ಲಿ ಹಾಗೂ ಸಾಲಿನಿಂದ ಸಾಲಿಗೆ ಮೀ. ಅಂತರದಲ್ಲಿ ನಾಟಿ ಮಾಡಿದಾಗ) ಬಿತ್ತನೆ ಮಾಡುವಾಗ ಬೀಜಗಳನ್ನು .. ಸೆ.ಮೀ. ಆಳದಲ್ಲಿ ಬಿತ್ತನೆ ಮಾಡಬೇಕುಇದರ ಇಳುವರಿ ಪ್ರತಿ ಹೆಕ್ಟೇರ್ ಗೆ ೫೬೦ ಕೆ.ಜಿ. ಗಳಾಗುತ್ತದೆ ಬೀಜದಲ್ಲಿ ಎಣ್ಣೆಯ ಅಂಶ ಶೇ.೩೫೫೫ ರಷ್ಟಿದ್ದು ಪ್ರತಿ ಹೆಕ್ಟೇರ್ಗೆ ೨೦೦,೭೫೦ ಕೆ.ಜಿ. ತೈಲ ಪಡೆಯಬಹುದು.   ಭಾರತದ ಹವಾಮಾನದಲ್ಲಿ ಇದು ಉತ್ತಮವಾಗಿ ಬೆಳೆಯಬಲ್ಲ ಬೆಳೆಯಾಗಿದ್ದು ರಾಜ್ಯದ ಕಡಿಮೆ ಮಳೆಯಾಧಾರಿತ ಉತ್ತರ ಕರ್ನಾಟಕದ ಪೂರ್ವ ಭಾಗದ ಜಿಲ್ಲೆಗಳಲ್ಲಿ ಅಧಿಕ ಇಳುವರಿ ಪಡೆಯಬಹುದಾಗಿದೆಇದನ್ನು ರಾಗಿ, ಕಡಲೆಕಾಯಿ(ಶೇಂಗಾ), ಹತ್ತಿ, ಮೆಣಸಿನ ಕಾಯಿ, ಹುರುಳಿ ಕಾಳು ಹಾಗೂ ಹೊಗೆ ಸೊಪ್ಪು ಬೆಳೆಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು

ಹರಳು ಬೆಳೆಯು ಬಹುಪಯೋಗಿ ಔಷಧೀಯ ಗುಣವುಳ್ಳ ಸಸ್ಯವಾಗಿದೆ ಇದರ ಎಣ್ಣೆಯ ಬಳಕೆಯನ್ನು ಕೆಳಗೆ ತೋರಿಸಿದೆ

ಜೈವಿಕ ಇಂಧನಹರಳು ಎಣ್ಣೆಯು ಹಾಲ್ಕೋಹಾಲ್ ನಲ್ಲಿ ಸುಲಭವಾಗಿ ಕರಗಬಲ್ಲ ಎಣ್ಣೆಯಾಗಿರುವುದರಿಂದ ಕಡಿಮೆ ವೆಚ್ಚದಲ್ಲಿ ಜೈವಿಕ ಡೀಸೆಲ್ ತಯಾರಿಸಬಹುದು

ಕೃಷಿಸಾವಯವ ಗೊಬ್ಬರವಾಗಿ.

ಆಹಾರ ಆಹಾರ ಪದಾರ್ಥಗಳ ಪ್ಯಾಕೇಜಿಂಗ್ ನಲ್ಲಿ ಹಾಗೂ ಫ್ಲೇವರಿಂಗ್ಸ್.

ಬಟ್ಟೆ ಉತ್ಪಾದನೆ ರಾಸಾಯನಿಕವಾಗಿಬಣ್ಣ ಮಾಡಲು, ಅಂತಿಮವಾಗಿ ಬಟ್ಟೆ ಸಿದ್ದಗೊಳಿಸುವಲ್ಲಿ.

ಕಾಗದನೀರಿನಿಂದ ಹಾಳಾಗುವುದನ್ನು ತಡೆಯಲು ಸಿದ್ದಪಡಿಸಲಾಗುವ ಕಾಗದ ತಯಾರಿಕೆಯಲ್ಲಿ ಹಾಗೂ ಫ್ಲೈ ಪೇಪರುಗಳಲ್ಲಿ.

ಪ್ಲಾಸ್ಟಿಕ್, ಗ್ಲಾಸ್ ಮತ್ತು ರಬ್ಬರ್ಪ್ಲಾಸ್ಟಿಕ್ ಫಿಲ್ಮ್ ತಯಾರಿಕೆಯಲ್ಲಿ, ಪಾಲಿಯಾಲ್ಗಳಲ್ಲಿ, ಕೃತಕ ರೆಸೀನ್ಗಳಲ್ಲಿ, ಗುಂಡು ನಿರೋಧಕ ಗಾಜಿನ ತಯಾರಿಕೆಯಲ್ಲಿ ಹಾಗೂ ಫೈಬರ್ ಆಪ್ಟಿಕ್ಸ್ಗಳಲ್ಲಿ

ಪರಿಮಳ ಹಾಗೂ ಸೌಂದರ್ಯವರ್ಧಕಗಳಲ್ಲಿಲಿಪ್ಸ್ಟಿಕ್, ಶ್ಯಾಂಪೂ, ಪಾಲೀಶ್ಗಳು, ಕೇಶವರ್ಧಕ ಮತ್ತು ಸುಗಂಧದ್ರವ್ಯಗಳ ತಯಾರಿಕೆಯಲ್ಲಿ.

ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಶನ್ಪಾಲಿಯೂರಿಇಥೇನ್ ತಯಾರಿಕೆಯಲ್ಲಿ, ಇನ್ಸೂಲೇಶನ್ ಮೆಟಿರಿಯಲ್ಸ್ನಲ್ಲಿ.

ಫಾರಮಾಸ್ಯೂಟಿಕಲ್ಸ್ –  ತಲೆ ಹೊಟ್ಟು ನಿವಾರಣೆಯಲ್ಲಿ, ಲಾಕ್ಸೇಟಿವ್ ಮತ್ತು ಫರ್ಗೇಟೀವ್ಸ್ಗಳ  ತಯಾರಿಕೆಯಲ್ಲಿ.

ಬಣ್ಣ, ಶಾಯಿ ತಯಾರಿಕೆಯಲ್ಲಿಶಾಯಿ, ವಾರ್ನಿಶ್ಗಳು , ಲೆಕಾರ್ಸ್ಗಳು ಹಾಗೂ ಅಂಟು ನಿವಾರಣೆಗಳಲ್ಲಿ ಅಲ್ಲದೇ ನ್ಯೂಕ್ಲಿಯರ್ ರಿಯಾಕ್ಟರ್ ಗಳ ವಿಶೇಷ ಬಣ್ಣವಾಗಿ ಬಳಸುತ್ತಾರೆ

ಲೂಬ್ರಿಕೆಂಟ್ಸ್ಗಳಲ್ಲಿಲೂಬ್ರಿಕೇಟಿಂಗ್ ಗ್ರೀಸ್, ರೇಸಿಂಗ್ ಕಾರ್ ಲೂಬ್ರಿಕೆಂಟ್ಸ್ಗಳಲ್ಲಿ, ಅತಿ ಕಡಿಮೆ ತಾಪಮಾನವಿರುವ ರಾಕೆಟ್ಗಳಲ್ಲಿ, ಜೆಟ್ ಹಾಗೂ ವಿಮಾನಗಳ ಲೂಬ್ರಿಕೆಂಟ್ಸ್ಗಳಲ್ಲಿ ಹಾಗೂ ಹೈಡ್ರಾಲಿಕ್ ಫ್ಲೂಯಿಡ್ ಆಗಿ ಬಳಸಲಾಗುವುದು.

ಸುರಹೊನ್ನೆ
ಸಾಮಾನ್ಯ ಹೆಸರು ಸುರಹೊನ್ನೆ
ಸಸ್ಯ ಶಾಸ್ತ್ರೀಯ ಹೆಸರು ಕ್ಯಾಲೋಫೈಲಂ ಇನೋಫೈಲಂ
ಕುಟುಂಬ ಕ್ಲೌಸಿಏಸಿಏಇ ಅಥವಾ ಗುಟ್ಟಿಫೆರೇಯಿ
ಸ್ಥಳೀಯ ಹೆಸರುಗಳು ಕನ್ನಡಸುರಹೊನ್ನೆ , ಇಂಗ್ಲೀಷ್ಲಾರೆಲ್ ವುಡ್

ಅಧಿಕ ಮಳೆ ಬೀಳುವ ಪ್ರದೇಶದಲ್ಲಿ ಕಾಡು ಜಾತಿ ಮರವಾಗಿದ್ದು ಇದೊಂದು ಗಟ್ಟಿಯಾಗಿರುವ ಮರವಾಗಿದೆರಾಜ್ಯದ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಉತ್ತಮವಾಗಿ ಬೆಳೆಯಬಲ್ಲ ಸಾಮರ್ಥ್ಯವೊಂದಿದ್ದು ಮರವೊಂದರ ಕಾಯಿಗಳಿಂದ ಪಡೆದ             ಬೀಜಗಳಿಂದ ೧೧ ಕೆ.ಜಿ. ತೈಲ ಪಡೆಯಬಹುದುಅರಣ್ಯ ಪ್ರದೇಶದಲ್ಲಿ ಇದನ್ನು ಬೆಳೆದಲ್ಲಿ ಹೆ. ನಲ್ಲಿ ,೬೮೦ ಕೆ.ಜಿ ತೈಲ ಪಡೆಯಬಹುದು

ಇದು ಬಹುಪಯೋಗಿ ಮರವಾಗಿದ್ದು ಇದರಿಂದ ಪಡೆದ ತೈಲದಿಂದ ಜೈವಿಕ ಡೀಸೆಲ್ ತಯಾರಿಸಬಹುದು

ಮರದ ಕಟ್ಟಿಗೆಯನ್ನು ದೋಣಿಗಳ ನಿರ್ಮಾಣದಲ್ಲಿ ಹಾಗೂ ಕಟ್ಟಡದ ಸಾಮಾಗ್ರಿಯಾಗಿ ಬಳಸಬಹುದು ಇದರ ಎಣ್ಣೆಯು ಗಾಢ ಹಸಿರು ಬಣ್ಣ ಹೊಂದಿದ್ದು ಔಷಧೀಯ ಗುಣ ಹೊಂದಿರುವುದರಿಂದ ಇದನ್ನು ಕೇಶ ರಕ್ಷಣೆಗಾಗಿ ಸೌಂದರ್ಯವರ್ಧಕವಾಗಿ ಬಳಸುವುದಲ್ಲದೇ ತೈಲದಲ್ಲಿ ಕೋಶ ಪುನರುತ್ಪಾದಿಸುವ ಶಕ್ತಿ ಹೊಂದಿರುವ ಪ್ರಯುಕ್ತ ವಿಶೇಷವಾಗಿ ತ್ವಚೆ  ಸಂರಕ್ಷಣೆಗಾಗಿ ಬಳಸಲ್ಪಡುತ್ತದೆ