(ಕ್ರಿ. ಶ. ೧೮೫೬-೧೯೪೦) (ಇಲೆಕ್ಟ್ರಾನುಗಳು)

ವಿದ್ಯುತ್ ತಂತಿಯ ಬಟನ್ ಒತ್ತಿದೊಡನೆ ಬಲ್ಬು ಹೊತ್ತಿಕೊಳ್ಳುತ್ತದೆ. ಮನೆಯೆಲ್ಲಾ ಬೆಳಕು ತುಂಬುತ್ತದೆ. ಇದು ಈಗ ನಮಗೆ ರೂಢಿಯಾಗಿರುವುದರಿಂದ ಆಶ್ಚರ್ಯವಾಗಿ ತೋರದು. ಆದರೆ ಮೊದಲು ಇದನ್ನು ಕಂಡಿದ್ದವರಿಗೆ ಇದೊಂದು “ಚಮತ್ಕಾರ”ವಾಗಿ, “ಪವಾಡ”ವಾಗಿ ಕಂಡಿತ್ತು. ಆದರೆ ಬಟನ್ ಒತ್ತಿದಾಗಿ ಹೇಗೆ ಬಲ್ಬು ಹೊತ್ತಿಕೊಳ್ಳುತ್ತದೆ ಎಂಬ ಪ್ರಶ್ನೆ ಆಗಿನವರೆಗೆ ಉಂಟಾಗಿತ್ತು. ಅದರ ಗುಟ್ಟು ಗೊತ್ತಿಲ್ಲದ ಇಂದಿನವರಿಗೂ ಇದು ಆಶ್ಚರ್ಯದ ಸಂಗತಿಯೆ! ಬಟನ್ ಒತ್ತಿದಾಗ ಇಲೆಕ್ಟ್ರಾನ್ ಕಣಗಳ ಪ್ರವಾಹ ಹರಿಯುತ್ತಾ ಬಲ್ಬನ್ನು ತಲುಪುತ್ತವೆ. ಆಗ ದೀಪ ಹೊತ್ತುತ್ತದೆ. ಈ ಇಲೆಕ್ಟ್ರಾನ್ ಅನ್ನು ಕಂಡುಹಿಡಿದ ವಿಜ್ಞಾನಿ ಸರ್ ಜೋಸೆಫ್ ಜಾನ್ ಥಾಮ್ಸನ್.

ಸರ್ ಜೋಸೆಫ್ ಜಾನ್ ಥಾಮ್ಸನ್ ೧೮೫೬ರಲ್ಲಿ ಜನಿಸಿದರು. ಇವರು ಕೇಂಬ್ರಿಡ್ಜಿನ ವಿಜ್ಞಾನಿ. ಇವರು ಮಾಡಿದ ಈ ಸಂಶೋಧನೆಯಿಂದಾಗಿಯೇ ನಮಗೆ ವಿದ್ಯುತ್ ಪ್ರವಾಹದ (ಇಲೆಕ್ಟ್ರಿಕ್ ಕರೆಂಟ್) ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗಿದೆ. ಇಲೆಕ್ಟ್ರಾನುಗಳು ತಂತಿಗಳ ಮುಖಾಂತರ ಮಾತ್ರವೇ ಪ್ರವಹಿಸುವುದಿಲ್ಲ. ಅವು ಶರೀರದಲ್ಲಿನ ನರಗಳ ಮುಖಾಂತರವೂ ಪ್ರವಹಿಸುತ್ತವೆ. ಉದಾಹರಣೆಗೆ, ಏನನ್ನಾದರೂ ನೋಡಿದಾಗ ವಿದ್ಯುತ್ ಶಕ್ರಿಯ ಪ್ರವಾಹ ನಮ್ಮ ಕಣ್ಣಿನಿಂದ ಮಿದುಳಿನವರೆಗ ಪ್ರವಹಿಸುತ್ತದೆ. ಎಂದರೆ, ಎಲೆಕ್ಟ್ರಾನ್ ಗಳು ನಮ್ಮ ಅಕ್ಷಿಪಟಲದ ದೃಕ್ ನರಗಳ ಮುಖಾಂತರ ಮಿದುಳಿನ ದೃಕ್ ಕೇಂದ್ರದವರೆಗೆ ಪ್ರವಹಿಸುತ್ತವೆ. ಮಿದುಳಿನಿಂದ ಪ್ರವಹಿಸುವ ಇಲೆಕ್ಟ್ರಾನುಗಳು ಸ್ನಾಯುಗಳನ್ನು ಕೂಡ ನಿಯಂತ್ರಿಸುತ್ತವೆ.

ಈ ಸಂಶೋಧನೆ ಅನ್ವಯಿಕ ಮಹತ್ವವನ್ನು ಪಡೆದಿದೆ. ಇಂಥ ಅತ್ಯಂತ ಉಪಯುಕ್ತವಾದ ಸಂಶೋಧನೆಯನ್ನು ಮಾಡಿದ ವಿಜ್ಞಾನಿ ಸರ್ ಜೋಸೆಫ್ ಜಾನ್ ಥಾಮ್ಸನ್ ೧೯೪೦ರಲ್ಲಿ, ತಮ್ಮ ಎಂಬತ್ತನಾಲ್ಕನೆಯ ವಯಸ್ಸಿನಲ್ಲಿ, ನಿಧನ ಹೊಂದಿದರು.