ಜ್ಞಾನವೊಂದೇ ಸಾಕು ಮುಕ್ತಿಗೆ ಮಿಕ್ಕಾದ
ಮೌನಧ್ಯಾನ ನೇಮಗಳೇಲ್ಲ ಭಕ್ತಿಗೆ || ಜ್ಞಾನ ||

ನಾನು ನನ್ನದು ಎಂಬ ಜಗದಬಿ
ಮಾನವಿಲ್ಲವೇ ನಿಖಿಲ ಬಂಧನ ಮಾನಸದ
ಕಲ್ಪಕವೇ ಸರಿಯನು ಮಾನವನ್ನಿದಕ್ಕೆಲ್ಲವೆಂಬುದು || ಜ್ಞಾನ ||

ಶಕ್ತಿಯಲಿ ರಜತತ್ವ ತೋರ್ಪಂತೆ ಈ ಜಗವು
ಮಾಯಾ ಶಕ್ತಿಯಿಂ ಕಾಣುವುದು ನಿಜದಂತೇ
ಯುಕ್ತಿಯಿಂದೀ ನಾಮರೂಪ ವ್ಯಕ್ತ ಜಾತವ
ಕಳೆದು ವ್ಯಕ್ತಾ ವ್ಯಕ್ತ ಲಕ್ಷಣ ಶಕ್ತ
ಕಾರ್ಯೋನ್ಮುಕ್ತನೇ ನಾನೆಂಬ ಸಮ್ಯ || ಜ್ಞಾನ ||

ಮತ್ತಿನಲ್ಲಿ ಕಲ್ಪಿಸಿದ ವಸ್ತುಗಳು ಬೇರೆಪಿಸಿ
ತೋರದೇ ಮತ್ತೆಯಾಗಿಯೆ ಬೆಳಗುವಂದಲೀ
ತತ್ವದಿಂದಾಶ್ರಯವೆ ಕಲ್ಪಿತ ಮೊತ್ತದಿಂ ನೆರಕಳಿಯೆ
ಭ್ರಮೆಯಿಂ ಚಿತ್ತನು ಕಲ್ಪಿಸಿದ ಜಗದಿದು
ಚಿತ್ತೆಯಾಗುವುದೆಂಬ ಪೂರ್ಣ || ಜ್ಞಾನ ||

ಪರಮ ಸದ್ಗುರು ಶಂಕರಾರ‍್ಯನಲೀ ಮನವಿಟ್ಟು
ತತ್ವವ ನರಿತು ನಿಜಗುರು ಚರಣಕಮಲದಲೀ
ನಿರುಪಮಿತ ನಿರ್ಗುಣ ನಿರಂಜನ ನಿರತು ನಿರ್ದ್ವಯ
ನಿತ್ಯಾನಿರ್ಮಲ ನಿರವಧಿಕ ನಿರ್ಮಾಣ ನಿಷ್ಟಿಯ
ವಿರತಿಶಯ ನಾನೆಂಬ ದಿವ್ಯ || ಜ್ಞಾನ ||

* * *

ಮನವೇನು ಪುಣ್ಯವ ಮಾಡಿ ಗುರು
ವಿನ ಪದವ ಸೇರಿತೇ ಮಾನು ಮಣಿಯೆ
ನೀಂದಿಗೆ ಬಂಧ ತೊಲಗಿತೇ || ಮನೆವೆನು ||

ಬಂದರೊಳಗಿದೆಲ್ಲ ಬಳಸುವಂದ ತೋರಿತೇ
ಕುಂದದೆನ್ನೊಳಗೆ ಬ್ರಹ್ಮಾನಂದವೇರಿವೇ || ಮನವನು ||

ದೇಹದೊಡನೆ ಮೊದಲೆಂದಳಿದ ಸಂಗಪೊಯಿತೆ
ಮೋಹವೇರಿಸುವ ಲಂಗಾ ಭಂಗವಾಯಿತೇ || ಮನ ||

ಕಲ್ಲಿನೊಳಗೆ ಕಂಡ ದೇವರಲ್ಲಿಗೋಡೀತೇ ಅಲ್ಲಿ
ಇಲ್ಲಿರುವದೆನ್ನಲ್ಲೇ ತೋರಿತೇ || ಮನ ||

ಪೇಳಲಾರೆನು ಸಖಿಯೆ ಪರಮ ಸುಖದ
ಮೂಲವ ಫಾಲರೋಚನನೇ ಬಲ್ಲಾ ಗುರುವಿನಳವಾ || ಮನ ||

ತನುವ ಕೂಡಿ ಕಳೆದ ಬೀಜ ಗಣಿತ ದೊರದಿ
ಜನಿಸಿ ಸಾಯುವುದರಲ್ಲಿ ತನುವಿಗಾಯಿತೆ || ಮನ ||

ನೂರು ಕೋಟಿ ಜನ್ಮ ಸುಕೃತರಾಶಿ ಫಲಿಸಿತೇ ಮೂರು
ಮೂರ್ತಿಗಳ ಪದವಿ ತುಚ್ವವೆನಿಸಿದೆ || ಮನ ||

ಅಂಕೆ ಇಲ್ಲದೆ ಮೆರೆವ ಮನವ ಮನದ ಹರುಕ್ಷವೆಂಬುದು
ಶಂಕರಾರ‍್ಯನಲ್ಲಿ ಸೇರಿ ಪರಮನಂದುದೂ || ಮನವೇನು ಪುಣ್ಯವ ಮಾಡಿ ||

* * *

ಕುಲಜಾತಿ ಫಲವೆಂದುಳಿಯದಂತಳಿದ ಮೇಲಿನೇ
ನಿನ್ನೇನು ಮನವಿಲ್ಲದಿರುವೂ ನಿಶ್ಚಲವೊಂದೇ
ನಿಲ್ಲುವುದೇನಲ್ಲೇ || ಕುಲಜಾತಿ ||

ಮೂಲ ಕುಂಡಲಿ ಇರುವ ಮೂಲವ ಕಂಡ
ಮೇಲಿನ್ನೇನಿನ್ನೇನೂ ಮೇಲಾದ ತಾಂಕದೊಳು ತಾನೆ
ನಿಲ್ಲುವನಲ್ಲೆನಲ್ಲೇನು || ಕುಲಜಾತಿ ||

ಮರಣ ಜನನ ಭರಣದೊಳು ತಾನಿರ್ದ
ಮೇಲಿನ್ನೇ ನಿನ್ನೇನು ಅರಿವು ಮರವೆಗಳ ನರಿವಾತ
ನಿಗುವನಲ್ಲೇನೂ || ಕುಲಜಾತಿ ||

ಕಣ್ಣಿ ಎಳಕು ಇಲ್ಲದೆಲ್ಲವ ಕಂಡಮೇಲಿನ್ನೇನಿನ್ನೇನೂ
ತನ್ಮಯವೆಲ್ಲವೇ ಚಿನ್ಮಯವಾಗುವುದಲ್ಲೇ ನಲ್ಲೇನೂ || ಕುಲಜಾತಿ ||

ಧನ ಸತಿ ಸುತರೆಲ್ಲ ರೆನಗಾದೆಂದರಿತ
ಮೇಲಿನ್ನೇ ನಿನ್ನೇನೂ ವನಿತಾದಿ ವಿಷಯಸುಖವು
ಬೇರೆಂದೆನಿಸದಿನ್ನಲ್ಲೇ ನಲ್ಲೇನೂ || ಕುಲಜಾತಿ ||

ಅಂದಿಂದು ಹಿಂದೆ ಮುಂದಿಲ್ಲದುಲ್ಲಾಗಲಿನ್ನೇ ನಿನ್ನೇನೂ
ಎಂದಿಗೂ ಇಲ್ಲೆಂಬುದಿಲ್ಲ ತಾನಾಗುವ ನಲ್ಲೆ ನಲ್ಲೆನೂ || ಕುಲಜಾತಿ ||

ಪುರದೊಳಗಿರುವನು ಹೊರಗೆಲ್ಲ ನಿಂತ ಮೇಲಿನ್ನೆ ನಿನ್ನ
ಹೊರಗಿನ ಜಗವಿದು ಪುರದೊಳು ಸೇರುವ ನಲ್ಲೆ ನಲ್ಲೆನೂ || ಕುಲಜಾತಿ ||

ಮುನ್ಸಿರ್ದ ಮುದುಕಿಯ ಮುರಿದು
ನುಂಗದ ಮೇಲಿನ್ನೇನಿನ್ನೇನೂ || ಕುಲಜಾತಿ ||

ತನ್ನ ಮುಂದಿರುವೊ ತಳವಾರನ
ಕಾಣವನಲ್ಲೇನಲ್ಲೇನು || ಕುಲಜಾತಿ ||

ತಳವಾರನೊಳಗಿನ ಕೊಳೆಯಲ್ಲಿ ಕಳೆದ ಮೇಲಿನ್ನೇನಿನ್ನನು
ಉಳಿದ ಶ್ರೀಗುರು ಶಂಕರಾರ‍್ಯ ತಾಗಾನಲ್ಲವನಲ್ಲೇಯಲ್ಲೆನೂ || ಕುಲಜಾತಿ ||