ಮಾಳ ಮಾರುತಿ ಗುಡಿ ಹಿಂದೆ
ಪ್ಲಾಟ್ ನಂ. ೧೮೬೬ (ಬಿ), ಸೆಕ್ಟರ್ ನಂ. ೧೦,
ಆಂಜನೇಯ ನಗರ, ಬೆಳಗಾವಿ – ೫೯೦ ೦೧೬
ದೂರವಾಣಿ : ೦೮೩೧-೨೪೫೮೫೦೭

(ಚಿತ್ರ ೮)

ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಕುರಿತು ಅಪಾರ ಅಧ್ಯಯನ ಹಾಗೂ ಸಂಗ್ರಹಣಾ ಕಾರ‍್ಯ ನಡೆಸುತ್ತಿರುವ ಜ್ಯೋತಿ ಹೊಸೂರು ಜಾನಪದ ಲೋಕಕ್ಕೆ ವಿಶೇಷ ಮಾದರಿಯಾಗಿದ್ದಾರೆ.

ರಾಯಬಾಗದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಧ್ಯಾಪನ ವೃತ್ತಿ ಮಾಡುತ್ತಲೇ ತಮ್ಮ ಹವ್ಯಾಸ, ಕಲಾಸಕ್ತಿಗಳಿಗೆ ನೀರೆರೆದು ಪೋಷಿಸಿದವರು.  ವಿದ್ಯಾರ್ಥಿಗಳಲ್ಲಿ ಕೂಡ ಜಾನಪದ ಸಂಸ್ಕೃತಿ ಬಗ್ಗೆ ಆಸಕ್ತಿ ಮೂಡಿಸಲು ಕಾರಣಕರ್ತರು.

ಬೆರಸಿ ಇಟ್ಟೇನ ಬೆಲ್ಲ ನೆನಗಡಲಿ, ಹೆಸರು ಹೇಳ್ತಿನಿ ಒಡಪಕಟ್ಟಿ, ಜಾತಿಗಾರರ ಜಾತಕ, ಕನಕದಾಸ ಜೀವನ ವಿಚಾರ ಮುಂತಾದ ಕೃತಿಗಳು ಅವರನ್ನು ಸಾಹಿತ್ಯಕ ಲೋಕಕ್ಕೆ ಪರಿಚಯಿಸಿವೆ.

ಹಲವಾರು ಸಾಹಿತ್ಯ ಹಾಗೂ ಜಾನಪದ ಸಮ್ಮೇಳನಗಳಲ್ಲಿ ಪ್ರಬುದ್ದ ಪ್ರಬಂಧಗಳನ್ನು ಮಂಡಿಸಿದ ಕೀರ್ತಿಯೂ ಜ್ಯೋತಿ ಹೊಸೂರು ಅವರಿಗಿದೆ.

ಬೆಳ್ಳಿ ಹಬ್ಬದ ಪ್ರಯುಕ್ತ ಅಕಾಡೆಮಿ ಇವರನ್ನು ಅಭಿನಂದಿಸಿದೆ.