೧೯೨೭ರಲ್ಲಿ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಜನಿಸಿದ ಶ್ರೀ ಟಿ. ಎಸ್.ಭಟ್ ಅವರು ದಿವಂಗತ ಎಂ.ಸಿ. ವೀರ್ ಅವರಲ್ಲಿ ಕಥಕ್ ಮತ್ತು ಕಥಕಳಿಯನ್ನು ಅಭ್ಯಾಸ ಮಾಡಿದರು. ಶ್ರೀ ಮತ್ತು ಶ್ರೀಮತಿ ಯು.ಎಸ್.ಕೃಷ್ಣರಾವ್ ಅವರಲ್ಲಿ ಭರತನಾಟ್ಯ ಶಿಕ್ಷಣವನ್ನು ಗಳಿಸಿದರು. ಮೈಸೂರು ಅರಮನೆ ಮತ್ತು ರಾಷ್ಟ್ರದ ಪ್ರಮುಖ ಕಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಬೆಂಗಳೂರಿನಲ್ಲಿ ಮೇನಕಾ ನೃತ್ಯ ಶಾಲೆಯನ್ನು ಸ್ಥಾಪಿಸಿ ೨೯೫೭ರಿಂದ ನೃತ್ಯ ಶಿಕ್ಷಣವನ್ನು ನೀಡುತ್ತಿದ್ದಾರೆ. ಕರ್ನಾಟಕ ನೃತ್ಯ ಕಲಾ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಹಿರಿಯ ನೃತ್ಯ ಕಲಾವಿದ ಶ್ರೀ ಟಿ. ಎಸ್.ಭಟ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೦-೯೧ನೇ ಸಾಲಿನ ಪ್ರಶಸ್ತಿ ಮತ್ತು “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.
ಟಿ.ಎಸ್.ಭಟ್
By kanaja|2011-11-23T17:01:21+05:30November 23, 2011|ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ), ಕನ್ನಡ, ಕಲೆ, ನೃತ್ಯ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ|0 Comments
Leave A Comment