+      =   

 

ಔಷಧವನ್ನು ಅಳೆಯುವ ವಿಧಾನ

 

ಔಷಧಗಳನ್ನು ಸಾಮಾನ್ಯವಾಗಿ ಗ್ರಾಂ ಮತ್ತು ಮಿಲಿಗ್ರಾಂ ಗಳಲ್ಲಿ ತೂಗುತ್ತಾರೆ.  ೧೦೦೦ ಮಿ.ಗ್ರಾಂ=೧ ಗ್ರಾಂ (ಒಂದು ಸಾವಿರ ಮಿಲಿಗ್ರಾಂ ಒಂದು ಗ್ರಾಂ ಗೆ ಸಮ) ೧ ಮಿ.ಗ್ರಾಂ.  = ೦. ೦೦೧ ಗ್ರಾಂ (ಒಂದು ಮಿ.ಗ್ರಾಂ. ಒಂದು ಗ್ರಾಮಿನ ಸಾವಿರದ ಒಂದನೇ ಭಾಗಕ್ಕೆ ಸಮ)

ಉದಾಹರಣೆಗಳು: ವಯಸ್ಕರ ಒಂದು ಪ್ಯಾರಾಸಿಟಮಾಲ್ ಮಾತ್ರೆಯಲ್ಲಿ ೫೦೦ ಮಿ.ಗ್ರಾಂ ಪ್ಯಾರಾಸಿಟಮಾಲ್ ಇರುತ್ತದೆ.  ೫೦೦ ಮಿ.ಗ್ರಾಂ ಎಂದರೆ  ೦. ೫ ಗ್ರಾಂ,  ಅಥವಾ ೦. ೫೦೦ ಗ್ರಾಂ ಅಥವಾ ಅರ್ಧ ಗ್ರಾಂ.

ಒಂದು ಮಾತ್ರೆಯಲ್ಲಿ ಎಷ್ಟು ಮಿಲಿಗ್ರಾಂ ಔಷಧವಿದೆ ಎಂದು ತಿಳಿದುಕೊಳ್ಳುವುದು ಬಹಳಷ್ಟು ಬಾರಿ ಅವಶ್ಯವಿರುತ್ತದೆ.  ಉದಾಹರಣೆಗೆ ವಯಸ್ಕರಿಗೆ ಕೊಡುವ ಪ್ಯಾರಾಸಿಟಮಾಲ್ ಮಾತ್ರೆಯಲ್ಲಿ ಒಂದು ಭಾಗವನ್ನು ಮಗುವಿಗೆ ಕೊಡಬೇಕಾಗಿದೆ ಎಂದಿಟ್ಟುಕೊಳ್ಳೋಣ.

ಲೇಬಲ್ ಮೇಲೆ ಏನು ಬರೆದಿದೆ ಓದಿ.
ಪ್ಯಾರಾಸಿಟಮಾಲ್:  ೫೦೦ ಮಿ.ಗ್ರಾಂ

ದೊಡ್ಡವರಿಗೆ ಕೊಡುವ ಪ್ಯಾರಾಸಿಟಮಾಲ್ ನ್ನು ೫೦೦/೪   =      ೧೨೫ ಮಿಲಿಗ್ರಾಂ. ಸರಿಯಾಗಿ ನಾಲ್ಕು ಭಾಗ ಮಾಡಿದರೆ ಒಂದೊಂದು ಭಾಗವೂ ೧೨೫ ಮಿಲಿಗ್ರಾಂ ಪ್ಯಾರಾಸಿಟಮಾಲ್ ಆಗುತ್ತದೆ. ಇದು ಒಂದು ಮಗುವಿಗೆ ಕೊಡಬಹುದಾದ ಪ್ರಮಾಣ.

ಆದ್ದರಿಂದ ವಯಸ್ಕರ ಮಾತ್ರೆಯನ್ನು ನಾಲ್ಕು ಭಾಗ ಮಾಡಿದರೆ, ಒಂದು ಭಾಗವನ್ನು ಮಗುವಿಗೆ ಕೊಡಬಹುದು.   ಬಾಟ್ಲಿಯ ಔಷಧ ಕೊಡುವುದಕ್ಕಿಂತ ಈ ರೀತಿಯಾಗಿ ಭಾಗ ಮಾಡಿದ ಮಾತ್ರೆಯನ್ನು ಕೊಡುವುದರಿಂದ ಬೆಲೆ ಕಡಿಮೆಯಾಗುತ್ತದೆ.

ಎಚ್ಚರಿಕೆ:  ಅನೇಕ ಔಷಧಗಳು, ಮುಖ್ಯವಾಗಿ ಜೀವಿರೋಧಕಗಳು ಬೇರೆ ಬೇರೆ ಪ್ರಮಾಣ ಮತ್ತು ಅಳತೆಯಲ್ಲಿ ಬರುತ್ತವೆ.  ಉದಾ: ಟೆಟ್ರಾಸೈಕ್ಲಿನ್ ಮೂರು ಬೇರೆ ಬೇರೆ ಅಳತೆಯ ಕ್ಯಾಪ್ಸೂಲ್ ಆಗಿ ಬರಬಹುದು.

ಯಾವುದೇ ಔಷಧವನ್ನು ಕೊಡುವಾಗ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಬೇಕು.  ಪ್ರತಿಯೊಂದರಲ್ಲೂ ಎಷ್ಟು ಮಿಲಿಗ್ರಾಂ ಅಥವಾ ಗ್ರಾಂ ಔಷಧ ಇದೆ ಇಂದು  ನೋಡಿಕೊಳ್ಳಬೇಕು. ಸರಿಯಾದ ಪ್ರಮಾಣದ ಔಷಧವನ್ನೇ ಕೊಡಬೇಕು.

ಉದಾ: ಔಷಧ ಚೀಟಿಯ ಪ್ರಕಾರ : ಟೆಟ್ರಾಸೈಕ್ಲಿನ್ ಒಂದು ಕ್ಯಾಪ್ಸೂಲ್ ಅಥವಾ ೨೫೦ ಮಿಲಿಗ್ರಾಂ ದಿನಕ್ಕೆ ನಾಲ್ಕು ಬಾರಿ ತೆಗೆದುಕೊಳ್ಳಿ ಎಂದು ಇದ್ದರೆ ಮತ್ತು ನಿಮ್ಮ ಹತ್ತಿರ ೫೦ ಮಿಲಿ ಗ್ರಾಂ ನ ಕ್ಯಾಪ್ಸೂಲ್‌ಗಳಿದ್ದರೆ ಪ್ರತಿ ಬಾರಿಯೂ ೫ ರಂತೆ ೪ ಬಾರಿ ತೆಗೆದುಕೊಳ್ಳಬೇಕು (ಅಂದರೆ ದಿನಕ್ಕೆ ೨೦ ಕ್ಯಾಪ್ಸೂಲ್ ಗಳು.)

೫೦ ಮಿಲಿ ಗ್ರಾಂ + ೫೦ ಮಿಲಿಗ್ರಾಂ + ೫೦ ಮಿಲಿಗ್ರಾಂ + ೫೦ ಮಿಲಿಗ್ರಾಂ + ೫೦ ಮಿಲಿಗ್ರಾಂ = ೨೫೦ ಮಿಲಿಗ್ರಾಂ

ದ್ರವ ರೂಪದಲ್ಲಿರುವ ಔಷಧ

ದ್ರವರೂಪದಲ್ಲಿರುವ ಔಷಧಗಳನ್ನು ಸಿರಪ್, ಟಾನಿಕ್, ಸಸ್ಪೆನ್ಶನ್ ಎಂದೆಲ್ಲ ಕರೆಯುತ್ತಾರೆ.  ಇವುಗಳನ್ನು ಮಿಲಿ ಲೀಟರುಗಳಲ್ಲಿ ಅಳೆಯುತ್ತಾರೆ.

ಮಿ.ಲಿ. = ಮಿಲಿ ಲೀಟರು                 ೧ ಲೀಟರ್ = ೧೦೦೦ ಮಿಲಿ ಲೀಟರು

ಸಾಮಾನ್ಯವಾಗಿ ಔಷಧಗಳನ್ನು ಟೀ ಚಮಚ ಅಥವಾ ಟೇಬಲ್ ಚಮಚಗಳಲ್ಲಿ ತೆಗೆದುಕೊಳ್ಳಲು ಹೇಳುವುದು ವಾಡಿಕೆ.

೧ ಟೀ ಚಮಚ(ಟೀ.ಚ.) = ೫ ಮಿ.ಲಿ.              ೧ ಟೇಬಲ್ ಚಮಚ (ಟೇ.ಚ.) = ೧೫ ಮಿ.ಲಿ.

೩ ಟೀ.ಚ. = ೧ ಟೇ. ಚ.

ಒಂದು ಟೀ.ಚ. ತೆಗೆದುಕೊಳ್ಳಿ ಎಂದು ಔಷಧ ಚೀಟಿಯ ಮೇಲೆ ಬರೆದಿದ್ದರೆ, ಅಥವಾ ಡಾಕ್ಟರರು ಹೇಳಿದರೆ ಅದರರ್ಥ ೫ ಮಿ. ಲೀ. ತೆಗೆದುಕೊಳ್ಳಿ ಎಂದು.

ಹೆಚ್ಚಾಗಿ ಜನರು ಉಪಯೋಗಿಸುವ ಟೀ ಚಮಚಗಳು ೮ ಮಿ.ಲಿ. ಯಷ್ಟು ಅಥವಾ ೩ ಮಿ.ಲಿ. ಯಷ್ಟು  ಇರುತ್ತವೆ. ಆದರೆ ಔಷಧ ಕೊಡುವಾಗ ಒಂದು ಟೀ ಚಮಚ ಎಂದರೆ ೫ ಮಿ.ಲಿ. ಯಷ್ಟು ಮಾತ್ರ ಕೊಡಬೇಕು. ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ.

ಮಿ.ಲಿ. ಯನ್ನು ಅಳೆಯುವುದು ಹೇಗೆ?

೫ ಮಿ.ಲಿ. ಹಿಡಿಸುವ ಚಮಚವನ್ನೇ ಖರೀದಿಸಿಟ್ಟುಕೊಳ್ಳಿ.

ಅಥವಾ ಒಂದು ಪ್ಲಾಸ್ಟಿಕ್ ಚಮಚ ಬರುವ ಔಷಧಿಯನ್ನು ಕೊಂಡುಕೊಳ್ಳಿ. ಇದು ತುಂಬಿದಾಗ ೫ ಮಿ.ಲಿ. ಹಿಡಿಸುತ್ತದೆ. ಇದರಲ್ಲಿ ಅರ್ಧಕ್ಕೆ ಒಂದು ಗೆರೆ ಹಾಕಿಟ್ಟರೆ ಅದು ೨.೫ ಮಿ.ಲಿ. ಹಿಡಿಸುತ್ತದೆ.

ಈ ಚಮಚವನ್ನು ಹಾಳು ಮಾಡದೆ ಇಟ್ಟುಕೊಳ್ಳುವುದು ಒಳ್ಳೆಯದು.

ಅಥವಾ

ಒಂದು ಸಿರಿಂಜ್ ಉಪಯೋಗಿಸಿ ೫ ಮಿ.ಲಿ. ನೀರನ್ನು ಒಂದು ಚಮಚಕ್ಕೆ ಹಾಕಿ ಮತ್ತು ಚಮಚದಲ್ಲಿ ನೀರಿನ ಮಟ್ಟಕ್ಕೆ ಗುರುತು ಮಾಡಿಟ್ಟುಕೊಂಡಿರಿ.

ಚಿಕ್ಕಮಕ್ಕಳಿಗೆ ಔಷಧ ಕೊಡುವ ವಿಧಾನ

ಮಾತ್ರೆ, ಕ್ಯಾಪ್ಸೂಲ್ಸ್ ನಂತೆ ಬರುವ ಕೆಲವು ಔಷಧಗಳು ಮಕ್ಕಳಿಗಾಗಿ ದ್ರವ ರೂಪದಲ್ಲಿ ಬರುತ್ತವೆ.  ದ್ರವ ರೂಪದ ಔಷಧ(ಸಿರಪ್) ಮತ್ತು ಮಾತ್ರೆಗಳ ಬೆಲೆಯನ್ನು ಹೋಲಿಸಿದಾಗ, ಮಾತ್ರೆಗಳಿಗೆ ಕಡಿಮೆ ಬೆಲೆ ಇರುವುದನ್ನು  ಕಾಣಬಹುದು.  ಕೆಳಗೆ ಕೊಟ್ಟಿರುವಂತೆ ನಾವೇ ಮಾತ್ರೆಗಳಿಂದ ಸಿರಪ್ ಮಾಡಿ ಹಣ ಉಳಿಸಬಹುದು.

ಮಾತ್ರೆಯನ್ನು ನುಣ್ಣಗೆ ಪುಡಿ ಮಾಡಿ.

ಕ್ಯಾಪ್ಸೂಲಿದ್ದರೆ ಅದನ್ನು ತೆಗೆದು ಪುಡಿಯನ್ನು ಒಂದು ಚಮಚದಲ್ಲಿ ಹಾಕಿ.

ಕುದಿಸಿ ಆರಿಸಿದ ನೀರು ಮತ್ತು ಜೇನುತುಪ್ಪ    ಅಥವಾ ಸಕ್ಕರೆಯೊಡನೆ ಪುಡಿಯನ್ನು ಸೇರಿಸಿ. ಔಷಧ ಕಹಿ ಇದ್ದಾಗ  ಜಾಸ್ತಿ ನೀರು, ಸಕ್ಕರೆ ಹಾಕಿ ಬೆರೆಸಿ.

ಮಾತ್ರೆ ಮತ್ತು ಕ್ಯಾಪ್ಸೂಲ್ ಗಳಿಂದ ಸಿರಪ್ ಮಾಡುವಾಗ ಮಕ್ಕಳಿಗೆ ಜಾಸ್ತಿ ಪ್ರಮಾಣದ ಔಷಧ ಕೊಡದಿರಲು ಎಚ್ಚರಿಕೆ ವಹಿಸಬೇಕು.  ಕ್ಷಯ ರೋಗದ ಮಾತ್ರೆ (ಐ.ಎನ್.ಎಚ್.) ಇದ್ದರೆ ಅದಕ್ಕೆ ಸಕ್ಕರೆ ಅಥವಾ ಜೇನುತುಪ್ಪ ಬೆರೆಸಬೇಡಿ.  ಅದು ಮಾತ್ರೆಯ ಪ್ರಭಾವವನ್ನು ಕಡಿಮೆ ಮಾಡುತ್ತದೆ.

ವಯಸ್ಕರ ಔಷಧವನ್ನು ಮಕ್ಕಳಿಗೆ ಭಾಗ ಮಾಡಿ ಕೊಡುವ ವಿಧಾನ

ವಯಸ್ಕರು ಪ್ರಮಾಣ ೧..

ಮಕ್ಕಳು ೮-೧೩ ವರ್ಷ.     ಪ್ರಮಾಣ ೧/೨.

ಮಕ್ಕಳು ೪-೭ ವರ್ಷ. ಪ್ರಮಾಣ ೧ /೪.

ಮಕ್ಕಳು ೧-೩ ವರ್ಷ. ಪ್ರಮಾಣ ೧ /೮.

ಮಕ್ಕಳು ೦-೧ ವರ್ಷ ೧ ವರ್ಷದಂತೆ, ಆದರೆ ವೈದ್ಯಕೀಯ ಸಲಹೆ ಪಡೆಯಿರಿ

೬೦ ಕೆ.ಜಿ.

೩೦ ಕೆ.ಜಿ.

೧೫ ಕೆ.ಜಿ.

೮ ಕೆ.ಜಿ.

೫ ಕೆ.ಜಿ.

ಸಾಮಾನ್ಯವಾಗಿ ಮಗು ಚಿಕ್ಕದಿದ್ದಷ್ಟೂ ಅದಕ್ಕೆ ಔಷಧ ಕೊಡುವ ಪ್ರಮಾಣ ಕಡಿಮೆ ಆಗುತ್ತದೆ.  ಅವಶ್ಯಕತೆಗಿಂತ ಜಾಸ್ತಿ ಔಷಧ ಕೊಡುವುದು ಅಪಾಯ.

ಮಕ್ಕಳಿಗಾಗಿ ಕೊಡುವ ಪ್ರಮಾಣದ ಬಗ್ಗೆ ಡಾಕ್ಟರರ ಚೀಟಿಯಲ್ಲಿ ಅಥವಾ ಔಷಧದ ಸ್ಟ್ರಿಪ್ ನಲ್ಲಿ ಬರೆದಿದ್ದರೆ ಅದರಂತೆ ಕೊಡಿ.  ಇಲ್ಲವೇ ನಿಮಗೇ ತಿಳಿದಿದ್ದರೆ, ಮಗುವಿನ ತೂಕ ಮತ್ತು ವಯಸ್ಸು ನೋಡಿ ತೀರ್ಮಾನ ಮಾಡಿ.

ಔಷಧ ತೆಗೆದುಕೊಳ್ಳುವ ಬಗೆ

ಔಷಧಗಳನ್ನು ಆದಷ್ಟೂ ಹೇಳಿದ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು. ಕೆಲವು ಔಷಧಗಳನ್ನು ದಿನಕ್ಕೆ ಒಂದು ಬಾರಿ ತೆಗೆದುಕೊಂಡರೆ ಸಾಕು. ಮತ್ತೆ ಕೆಲವು    ಔಷಧಗಳನ್ನು ಪ್ರತಿ ಎಂಟು ಗಂಟೆಗೆ ಒಂದು ಮಾತ್ರೆ ತೆಗೆದುಕೊಳ್ಳಿ ಎಂದು ಸೂಚನೆ ಇದ್ದರೆ  ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೊತ್ತಿಗೆ ಒಂದು ಮಾತ್ರೆಯಂತೆ ಒಟ್ಟೂ ೩ ಮಾತ್ರೆಗಳನ್ನು ತೆಗೆದುಕೊಳ್ಳಿ.  ಪ್ರತಿ ಆರು ಗಂಟೆಗೆ ಒಂದು ಮಾತ್ರೆ ತೆಗೆದುಕೊಳ್ಳಿ  ಎಂದಿದ್ದರೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿಗೆ ಹೀಗೆ ನಾಲ್ಕು ಮಾತ್ರೆಗಳನ್ನು ನುಂಗಬೇಕು.  ಪ್ರತಿ ೪ ಗಂಟೆಗೆ ಒಮ್ಮೆ ತೆಗೆದುಕೊಳ್ಳಿ ಎಂದಿದ್ದರೆ ಒಟ್ಟೂ ೬ ಮಾತ್ರೆಗಳನ್ನು ದಿನಕ್ಕೆ ತೆಗೆದುಕೊಳ್ಳಿ.

ಔಷಧ ಕೊಡುವಾಗ ರೋಗಿಗೆ ಒಮ್ಮೆ ಅದನ್ನು ತೆಗೆದುಕೊಳ್ಳುವ ವಿಧಾನವನ್ನು ನೀವು ಹೇಳಿದ ನಂತರ ಒಮ್ಮೆ ಅವರ ಬಾಯಿಯಿಂದ ಹೇಳಿಸಬೇಕು.  ಇದರಿಂದ ನಾವು ಹೇಳಿದ್ದು ಅವರಿಗೆ ಅರ್ಥವಾಯಿತೋ ಇಲ್ಲವೋ ಎಂದು ತಿಳಿಯುತ್ತದೆ.

ಓದು ಬರಹ ಬರದಿರುವ ಜನರಿಗೆ ಈ ರೀತಿ ಚಿತ್ರದ ಮೂಲಕ ತಿಳಿಸಿಕೊಡಿ.

ರೋಗಿಗಳಿಗೆ ಔಷಧ ಕೊಡುವಾಗ

ಯಾವಾಗಲೂ ಪಕ್ಕದಲ್ಲಿ ಕೊಟ್ಟಿರುವಂತೆ ವಿವರವಾಗಿ ಬರೆಯಿರಿ. ರೋಗಿಗೆ ಓದು ಬರೆಹ ಗೊತ್ತಿಲ್ಲದಿದ್ದರೂ ಇದೇ ರೀತಿ ಬರೆಯಿರಿ.

ಹೆಸರು : ಕರಿಯಪ್ಪ
ಕಾಯಿಲೆ : ಜಂತು ಹುಳು
ಔಷಧ : ಪೈಪರ್ ಝೀನ್ ೫೦೦ ಮಿ.ಗ್ರಾಂ. ಮಾತ್ರೆಗಳು
ಪ್ರಮಾಣ : ಹೊತ್ತಿಗೆ ಎರಡು ಮಾತ್ರೆಯಂತೆ ದಿನಕ್ಕೆ ೨ ಬಾರಿ

ರೋಗಿಗೆ ಕೊಡುವ ಈ ಚೀಟಿಯ ಒಂದು ಪ್ರತಿಯು ನಿಮ್ಮ ಬಳಿ ಇರಲಿ.  ಮುಂದೆ ಇದೇ ರೋಗಿ ಬಂದಾಗ ಇದರಿಂದ ಸಹಾಯವಾಗುತ್ತದೆ.

ಖಾಲಿ ಹೊಟ್ಟೆ ಅಥವಾ ತುಂಬಿದ ಹೊಟ್ಟೆಯಲ್ಲಿ  ಔಷಧ ತೆಗೆದುಕೊಳ್ಳುವದು

ಕೆಲವು ಔಷಧಗಳು ಖಾಲಿ ಹೊಟೆಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತವೆ. ಅಂದರೆ ಊಟಕ್ಕೆ ೧ ಗಂಟೆ ಮೊದಲು. ಬೇರೆ ಕೆಲವು ಔಷಧಗಳು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡಾಗ ಎದೆ ಉರಿ ಅಥವಾ ಸಂಕಟ ಉಂಟುಮಾಡುತ್ತವೆ.  ಊಟದ ಜೊತೆ ಅಥವಾ ನಂತರ ಇವನ್ನು ತೆಗೆದುಕೊಳ್ಳಬೇಕು.

ಊಟಕ್ಕೆ ಒಂದು ಗಂಟೆ ಮೊದಲು ಊಟದ ಜೊತೆ/ ನಂತರ
೧. ಪೆನಿಸಿಲಿನ್ ೧. ಆಸ್ಪಿರಿನ್ ಮತ್ತು ಇತರ ನೋವು ನಿವಾರಕಗಳು
೨. ಎಂಪಿಸಿಲಿನ್ ೨. ಕಬ್ಬಿಣಾಂಶದ ಮಾತ್ರೆ
೩. ಟೆಟ್ರಾಸೈಕ್ಲಿನ್
ಟೆಟ್ರಾಸೈಕ್ಲಿನ್ ತೆಗೆದುಕೊಳ್ಳುವಾಗ ಒಂದು ಗಂಟೆ ಮೊದಲು ಮತ್ತು ನಂತರ ಹಾಲನ್ನು ತೆಗೆದುಕೊಳ್ಳಬಾರದು.
೩. ವಿಟಮಿನ್
  ೪. ಎರಿಥ್ರೋಮೈಸಿನ್

ಹೊಟ್ಟೆ ಖಾಲಿ ಇರುವಾಗ ಮತ್ತು ಊಟದ ಒಂದು ಅಥವಾ ಎರಡು ಗಂಟೆ ನಂತರ ಮತ್ತು ಮಲಗುವಾಗ ಎಂಟಾಸಿಡ್ ಗಳನ್ನು ತೆಗೆದುಕೊಂಡರೆ ಹೆಚ್ಚು ಉಪಯೋಗಕರ.

ಮಲಗಿಕೊಂಡು ಗುಳಿಗೆ ನುಂಗುವುದು ಕ್ಷೇಮಕರವಲ್ಲ. ಯಾವಾಗಲೂ ಕುಳಿತೋ, ನಿಂತೋ ಒಂದು ಲೋಟ ನೀರಿನೊಂದಿಗೆ   ಗುಳಿಗೆ ಸೇವಿಸಿ. ಅದರಲ್ಲೂ ಸಲ್ಫಾ (ಸೆಪ್ಟ್ರಾನ್ಔಷಧವನ್ನು ತೆಗೆದುಕೊಳ್ಳುತ್ತಿರುವಾಗ  ಬಹಳಷ್ಟು ನೀರು ಕುಡಿಯಬೇಕು.  ಕನಿಷ್ಟವೆಂದರೂ ದಿನಕ್ಕೆ ಎಂಟು ಲೋಟ ನೀರು ಕುಡಿಯದಿದ್ದರೆ ಸಲ್ಫಾ ಔಷಧ ಮೂತ್ರಕೋಶಕ್ಕೆ ಹಾನಿ ಮಾಡುವ ಸಂಭವ ಇದೆ.

* * *