ನಿಮಗೆ ಈ ಪುಸ್ತಕ ಸಿಕ್ಕಿದಾಗ

ಮೊದಲು ಪರಿವಿಡಿಯನ್ನು ಓದಿರಿ. ಅದರಲ್ಲಿ ಪ್ರತಿಯೊಂದು ಅಧ್ಯಾಯದಲ್ಲಿ ಏನು ಹೇಳಿದೆ, ಪುಟದ ಸಂಖ್ಯೆ ಏನು ಎಂಬುದನ್ನು ಬರೆದಿದೆ.

ಯಾವುದೇ ಆರೋಗ್ಯ ಸಮಸ್ಯೆ ಎದುರಾದಾಗ,

  1. ಇಂಡೆಕ್ಸ್‌ನ್ನು ನೋಡಿ ಒಂದೊಂದು ರೋಗಕ್ಕೂ ಬೇರೆ ಬೇರೆ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ. ಸಿಗದಿದ್ದರೆ
  2. ಮತ್ತೆ ಪರಿವಿಡಿಯನ್ನು ತೆಗೆದು ನೋಡಿ.

 

ಯಾವುದೇ ಔಷಧಿಯನ್ನು ಉಪಯೋಗಿಸುವಾಗ;

ಮೊದಲು ಹಸಿರು ಪುಟಗಳನ್ನು ನೋಡಿ. ಆಯಾ ಔಷಧದ ಮಾಹಿತಿ ಎಲ್ಲಿ ಸಿಗುತ್ತದೆಂದು ತಿಳಿದು, ಆ ಪುಟಗಳನ್ನು ತೆಗೆದರೆ ಅಲ್ಲಿ ಔಷಧ ಯಾವಾಗ, ಎಲ್ಲಿ ಎಷ್ಟು ಉಪಯೋಗಿಸಬೇಕು ಮತ್ತು ಏನೇನು ಅಪಾಯಗಳಿವೆ, ಏನು ಮುನ್ನೆಚ್ಚರಿಕೆ ಕೈಗೊಳ್ಳಬೇಕು ಮಂತಾದ ವಿಷಯಗಳನ್ನು ವಿವರಿಸಿದೆ.

ತುರ್ತು ಸಮಯಕ್ಕಾಗಿ ತಯಾರಾಗಿರಬೇಕೆಂದರೆ :

  1. ೨೩ನೇ ಅಧ್ಯಾಯದಲ್ಲಿ ಹೇಳಿದ ಔಷಧ ಪೆಟ್ಟಿಗೆಯನ್ನು ಮನೆಯಲ್ಲಿ ಅಥವಾ ಹಳ್ಳಿಯಲ್ಲಿ ತಯಾರಿಟ್ಟಿರಿ.
  2. ಈ ಪುಸ್ತಕವನ್ನು ಮೊದಲೇ ಅಭ್ಯಾಸ ಮಾಡಿಟ್ಟುಕೊಳ್ಳಿ. ಅದರ°èಲ್ಲಿ ೧೦ನೇ ಅಧ್ಯಾಯ; ಪ್ರಥಮೋಪಚಾರ ಮತ್ತು ೪ನೇ ಅಧ್ಯಾಯ: ರೋಗಿಯ ಉಪಚಾರ ಹೇಗೆ ಮಾಡಬೇಕು. ಈ ಎರಡು ಅಧ್ಯಾಯಗಳನ್ನೂ ಸರಿಯಾಗಿ ಓದಿಕೊಂಡಿರಿ.

ನಿಮ್ಮ ಕುಟುಂಬದವರನ್ನು ಆರೋಗ್ಯವಾಗಿಡಲು :

೧೧ ಮತ್ತು ೧೨ನೇ ಅಧ್ಯಾಯಗಳನ್ನು ಸರಿಯಾಗಿ ಓದಿ. ಆಹಾರ ಮತ್ತು ರೋಗತಡೆಯ ಕ್ರಮಗಳನ್ನು ಅರಗಿಸಿಕೊಂಡು ಆಚರಣೆಯಲ್ಲಿ ತನ್ನಿ.

ಸಮುದಾಯದ ಆರೋಗ್ಯ ಸ್ಥಿತಿಯನ್ನು ಉತ್ತಮಪಡಿಸಲು :

ಮನೆಯ ಸುತ್ತಲಿನವರನ್ನು ಕರೆದು ಎಲ್ಲರೂ ಒಟ್ಟು ಸೇರಿ, ಈ ಪುಸ್ತಕ ಓದಿ ಚರ್ಚೆ ಮಾಡುವ ಸಂದರ್ಭಗಳನ್ನೇರ್ಪಡಿಸಿ, ಶಾಲಾ ಶಿಕ್ಷಕರಿಗೆ ಪುಸ್ತಕದ ಅಧ್ಯಾಯಗಳನ್ನು ಪಾಠ ಮಾಡಲು ಹೇಳಬಹುದು. ರಾತ್ರಿ ಶಾಲೆಗಳಲ್ಲಿ ಒಂದೊಂದು ಅಧ್ಯಾಯಗಳನ್ನು ಓದಿ ಚರ್ಚೆ ಮಾಡಬಹುದು. ಹಳ್ಳಿಯ ಆರೋಗ್ಯತಡೆಗೆ ಕಿವಿಮಾತು ಇದರಲ್ಲಿ ಕೆಲವು ಉಪಯುಕ್ತ ಸಲಹೆಗಳನ್ನು ಕೊಟ್ಟಿದೆ.