• ಜನ್ಮ ದಿನಾಂಕ: ೧೮೦೯ನೇ ವರ್ಷದ ಫೆಬ್ರವರಿ ೧೨ರಂದು
 • ಜನ್ಮಸ್ಥಳ: ಇಂಗ್ಲೆಂಡಿನ ಷ್ರೂಸ್ಬೆರಿ
 • ತಂದೆ: ರಾಬರ್ಟ್ ಎರಾಸ್ಮಸ್
 • ತಾಯಿ: ಸುಸಾನ
 • ಸಹೋದರ: ಒಬ್ಬ
 • ಸಹೋದರಿಯರು: ನಾಲ್ಕು
 • ಡಾರ್ವಿನ್ ೯ ವರ್ಷದವನಿದ್ದಾಗಲೇ ತಾಯಿಯ ಮರಣ : ಜುಲೈ ೧೮೧೭
 • ಪ್ರಾರ್ಥಮಿಕ ಶಿಕ್ಷಣ : ಪ್ರೂಸ್ಬೆರಿಯ ಯುನಿಟೇರಿಯನ್ ಚರ್ಚ್, ಅನಂತರ ಡಾ|| ಬಟ್ಲರ್ ರವರ ಶಾಲೆ.
 • ಉನ್ನತ ಶಿಕ್ಷಣ: ಎಡಿನ್ಬರೋ ವಿಶ್ವವಿದ್ಯಾಲಯದಲ್ಲಿ ವೈದ್ಯ ಶಿಕ್ಷಣಕ್ಕೆ ಪ್ರವೇಶ-ಅನಂತರ ಅದರಲ್ಲಿ ಅನಾಸಕ್ತಿ.
 • ಎಡಿನ್ಬರೋದಲ್ಲಿ ನಿಸರ್ಗಶಾಸ್ತ್ರ ಶಿಕ್ಷಕರಾಗಿದ್ದ ಡಾ|| ಗ್ಯ್ರಾಂಟ್ ಮತ್ತು ಪ್ರೊ. ಜೇಮ್ಸ್‌ರ ಪ್ರಭಾವಕ್ಕೊಳಗಾಗಿ ನಿಸರ್ಗ ಅಧ್ಯಯನದ ಕಡೆಗೆ ಆಸಕ್ತಿ.
 • ಮನೆಯವರಿಂದ ಮತ ಧರ್ಮ ಶಿಕ್ಷಣ ಪಡೆದು ಪಾದ್ರಿಯಾಗುವಂತೆ ಸೂಚನೆ.
 • ಮತ ಧರ್ಮ ಶಿಕ್ಷಣ: ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ. ಇಲ್ಲಿ ಭೂವಿಜ್ಞಾನಿ ಸೆಡ್ಜ್‌ವಿಕ್ ಮತ್ತು ಲಯಲ್‌ರ ಪ್ರಭಾವ
 • ಹವ್ಯಾಸಗಳು: ಕುದುರೆ ಸವಾರಿ, ಸಮಾಜ ಕಾರ್ಯದಲ್ಲಿ ಭಾಗವಹಿಸುವುದು, ಪದಾರ್ಥ ಸಂಗ್ರಹಣೆ. ಸ್ನೇಹಿತರೊಂದಿಗೆ ಕಾಲಕಳೆಯುವುದು, ಕಲಾಪ್ರೇಮಿ, ಸಂಗೀತ ಪ್ರಿಯ, ನಿಸರ್ಗ ಚಾರಣ-ಚಾರಣದಲ್ಲಿ ಲಭ್ಯವಾಗುವ ಆಕರ್ಷಕ ವೈವಿಧ್ಯಮಯ ವಸ್ತುಗಳ ಸಂಗ್ರಹ.
 • ಬಿ.ಎ. ಪದವಿ: ೧೮೯೧, ನಂತರ ಎಂ.ಎ. ಪದವಿ
 • ಹೆನ್ಸ್‌ಲೋರ ಸೂಚನೆಯಂತೆ ಬೀಗಲ್ ಯಾತ್ರೆ. ಬೀಗಲ್ ನೌಕೆಯ ಕ್ಯಾಪ್ಟನ್ ಫಿಟ್ಸ್‌ರಾಯ್.
 • ಬೀಗಲ್ ಯಾತ್ರೆಗೆ ತಂದೆ ಎರಾಸ್ಮಸ್‌ನ ಅಸಮ್ಮತಿ.
 • ತಂದೆಯ ಈ ನಿಲುವನ್ನು ಬದಲಾಯಿಸಿದ ಬಂಧು, ಸೋದರ ಮಾವ ಜೊಸೆಯ ವೆಡ್ಜ್‌ವುಡ್.
 • ಬೀಗಲ್ ಯಾತ್ರೆಯ ಆರಂಭ ೧೮೩೧ರ ಡಿಸೆಂಬರ್ ೨೭-ಇಂಗ್ಲೆಂಡಿನ ಡೇವಾನ್ ಪೋರ್ಟ್‌ನಿಂದ. ಯಾತ್ರೆಯಾದ್ಯಂತ ಸಂಬಳವಿಲ್ಲದ ದುಡಿಮೆ.
 • ಬೀಗಲ್ ಯಾತ್ರೆ ಆರಂಭಿಸಿದಾಗ ಡಾರ್ವಿನ್ ೨೩ ವರ್ಷದ ಯುವಕ.
 • ಬೀಗಲ್ ಯಾತ್ರೆಯ ಪ್ರಮುಖ ಸ್ಥಳಗಳು: ಅಟ್ಲಾಂಟಿಕ್ ಸಾಗರ ಮೂಲಕ ಹಾದು-ಕೇಪ್ ಡಿವೆರ್ಡ್-ಅಗ್ನಿಪರ್ವತ ಅಧ್ಯಯನ. ೧೮೩೨ರಲ್ಲಿ ಸೆಂಟ್‌ಪಾಲ್‌ದ್ವೀಪ-೨ ಜಾತಿ ಪಕ್ಷಿಗಳು ಹಾಗೂ ಜೇಡರ ಹುಳುಗಳ ಪರಿಶೀಲನೆ ಸಂಗ್ರಹ.
 • ಬ್ರೆಸಿಲ್‌ನ ತೀರ ಪ್ರದೇಶಗಳ ಮಹಾರಣ್ಯಗಳ ಅಧ್ಯಯನ ರಿಯೋಡಿಜನೈರೋನಲ್ಲಿ ಒಳನಾಡಿನ ಜನರ ದಾಸ್ಯದ ಅಧ್ಯಯನ ಸುಮಾರು ೨ ವರ್ಷಗಳ ಕಾಲ ದಕ್ಷಿಣ ಅಮೇರಿಕದ ಪೂರ್ವ ಮತ್ತು ದಕ್ಷಿಣ ತೀರ ಪ್ರದೇಶಗಳ ಅಧ್ಯಯನ.
 • ಮಾಲ್ಡನಾಡೋ ದ್ವೀಪದ ೮೦ ಜಾತಿ ಪಕ್ಷಿಗಳ ಸಂಗ್ರಹಣೆ. ಬೇಹಿಯ ಬ್ಲಾಂಕ ಮತ್ತು ಬ್ಯೂನಸ್ ಐರಿಸ್‌ಗಳಿಂದ ಪ್ರಾಚೀನ ಕಾಲದ ಚತುಷ್ಪಾದಿಗಳ ಪಳೆಯುಳಿಕೆಗಳ ಸಂಗ್ರಹ. ಸಾಂಟಾಫಿಯ-ಕುದುರೆಯ ಪಳೆಯುಳಿಕೆ.
 • ಪೆಟಗೋನಿಯ ಸಮುದ್ರದಲ್ಲಿ ಬಣ್ಣದ ಚಿಟ್ಟೆಗಳು ಹಾಗೂ ಅರಣ್ಯದ ಅಗ್ನಿಜ್ವಾಲೆಯಂತ ಬೆಂಕಿಯನ್ನು ಸಮುದ್ರದಲ್ಲಿ ಸೃಷ್ಟಿಸುತ್ತಿದ್ದ ಸೂಕ್ಷ್ಮಜೀವಿಗಳ ಅಧ್ಯಯನ.
 • ಮಾಂಡಿವಿಡಿಯೋ: ಗತಕಾಲದ ಪೆಡಂಬೂತಗಳ ಮೂಳೆಯ ಶಿಲಾವಶೇಗಳ ಸಂಗ್ರಹ.
 • ಟೆರಾಡೆಲ್ಫೂಗೋ ದ್ವೀಪ, ಚಿಲಿಯ ವಾಲ್ಪರೈಸೋ ನಗರದ ಸುತ್ತಮುತ್ತಲ ಚಿನ್ನದ ಮತ್ತು ತಾಮ್ರದ ಗಣಿಗಳಿಂದ ಉಪಯುಕ್ತ ವಿಷಯಗಳ ಸಂಗ್ರಹ. ಬಿಡುವಿಲ್ಲದ ಸತತ ದುಡಿಮೆಯಿಂದ ಅನಾರೋಗ್ಯ. ೧೮೩೫ರ ಫೆಬ್ರವರಿಯಲ್ಲಿ ವಾಲ್ಡೀವಿಯಾದಲ್ಲಿ ಭೂಕಂಪದ ನೇರ ಅನುಭವ.
 • ಗಾಲ್ಪೆಗೋದ ಮೂಲ ನಿವಾಸಿಗಳ ಅಧ್ಯಯನ. ಆಸ್ಟ್ರೇಲಿಯಾದ ಟಾಹಿಟಿಯಲ್ಲಿ ಅನೇಕ ಫಲಪುಷ್ಪ ಗಿಡಗಳ ಅಧ್ಯಯನ.
 • ನ್ಯೂಜಿಲ್ಯಾಂಡಿನ ಅಧ್ಯಯನ.
 • ಸಿಡ್ನಿ ಪರ್ವತ ಪ್ರದೇಶಗಳ-ಡಕ್‌ಬಿಲ್, ಪ್ಲಾಟಿಪಸ್ ಮುಂತಾದ ಆದಿ ಸಸ್ತನಿಗಳ ಅಧ್ಯಯನ.
 • ತಾಸ್ಮೇನಿಯ ದ್ವೀಪ: ಅಲ್ಲಿನ ಪ್ರಾಣಿವರ್ಗದ ವೈಶಿಷ್ಟಗಳ ಅಧ್ಯಯನ.
 • ಕೀಲಿಂಗ್ ದ್ವೀಪ: ಹವಳದ ಹುಳುಗಳು ಸಾಗರದ ನಡುವೆ ಭೂಭಾಗಗಳನ್ನು ಹೇಗೆ ನಿರ್ಮಿಸಿವೆಯೆಂಬುದರ ಅಧ್ಯಯನ.
 • ಮಾರಿಷಸ್‌, ಕೇಪ್‌ಟೌನ್, ಸೇಂಟ್‌ಹೆಲೀನಾ, ಅಸೆನ್ಷ್‌ನ್, ಬೇಯಿಯ ಪರಾಂಬುಕೋ, ಕೇಪ್ ವೆರ್ಡ್, ಅಸ್ಸೂರ್ಸ್‌ಗಳ ಮೂಲಕ ಬೀಗಲ್ ಯಾತ್ರೆ ಹಿಂದಿರುಗಿತು.
 • ಬೀಗಲ್ ಯಾತ್ರೆಯ ಮುಕ್ತಾಯ ೧೮೩೬ ಅಕ್ಟೋಬರ್ ೩.
 • ಒಟ್ಟು ಯಾತ್ರೆಯ ಅವಧಿ ೪ ವರ್ಷ ೯ ತಿಂಗಳು. ಜೀವವಿಜ್ಞಾನದ ಕೊಲಂಬಸ್. ತಾನು ಸಂಗ್ರಹಿಸಿ ತಂದ ವಸ್ತುಗಳು ಮತ್ತು ಮಾಹಿತಿಗಳ ಕ್ರಮವಾದ ಅಧ್ಯಯನ-ಪ್ರಕಟಣೆ-ವಿಜ್ಞಾನಿಗಳ ಪ್ರಶಂಸೆ-ಮೆಚ್ಚುಗೆ:
 • ಡಾರ್ವಿನ್ ಜೀವ ವಿಜ್ಞಾನದ ಬೆಳವಣಿಗೆಗೆ ಸಲ್ಲಿಸಿದ ಸೇವೆಗಾಗಿ ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯತ್ವ-ಭೂಮಿಶಾಸ್ತ್ರ ಸಂಘದ ಕಾರ್ಯದರ್ಶಿ.
 • ೧೮೩೯ ಜನವರಿ ೨೯: ಸೋದರ ಮಾವನ ಮಗಳಾದ ಏಮಾ ವೆಡ್ಜ್‌ವುಡ್ಸ್‌ಳೊಂದಿಗೆ ವಿವಾಹ.
 • ೧೮೩೯ ಡಿಸೆಂಬರ್ ೨೭: ಮೊದಲನೆಯ ಮಗು ಜನನ.
 • ೧೮೩೬-೧೮೪೨ರವರೆಗೆ ಲಂಡನ್ನಿನಲ್ಲಿ ವಾಸ.
 • ನಗರ ಜಂಜಡದಿಂದ ಬೇಸರಗೊಂಡು ಕೆಂಟ್ ಪ್ರದೇಶದಲ್ಲಿದ್ದ ಡೌನ್ ಎಂಬ ಹಳ್ಳಿಯಲ್ಲಿ ವಾಸಿಸಲು ಆರಂಭಿಸಿದ.
 • ೧೮೪೨: ‘ಹವಳದ ದಿಣ್ಣೆಗಳ ರಚನೆ ಮತ್ತು ಪ್ರಸರಣ’-೨ ಸಂಪುಟಗಳ ಪ್ರಕಟಣೆ
 • ೧೮೪೩: ‘ಬೀಗಲ್ ಯಾತ್ರೆಯ ಪ್ರಾಣಿಶಾಸ್ತ್ರ’ ಪ್ರಕಟಣೆ.
 • ೧೮೪೫: ತನ್ನ ಸಂಗ್ರಹ ಮತ್ತು ಸಂಶೋಧನೆಗಳನ್ನು ಕುರಿತು ‘ನಿಸರ್ಗ ವಿಜ್ಞಾನಿಯ ಪ್ರಪಂಚ ಯಾಗ್ರಿ ಕೃತಿಯ ಪ್ರಕಟಣೆ.
 • ೧೮೫೧ ‘ಬದುಕಿರುವ ಸಿರ‍್ರಿಪೀಡಿಯ’ ಮತ್ತು ೧೮೫೪ ‘ಬ್ರಿಟನ್ನಿನ ಪ್ರಾಚೀನ ಸಿರ‍್ರಿಪೀಡಿಯ’ ಗಳ ಮೂಲಕ ಬಾರ್ನಕಲ್ ಪ್ರಾಣಿಯ (ಸಮುದ್ರದ ಪ್ರಾಣಿ) ಜೀವನ ಚರಿತ್ರೆಯ ಪರಿಚಯ. ರಾಯಲ್ ಸೊಸೈಟಿಯವರಿಂದ ಇದಕ್ಕಾಗಿ ‘ಸ್ವರ್ಣಪದಕ’ ಗೌರವ ಪ್ರಶಸ್ತಿ
 • ಟಿ.ಆರ್. ಲ್ಥಸ್‌ನ ಬರಹಗಳಿಂದ ಪ್ರಭಾವಿತನಾದ.
 • ೧೮೫೬ರಿಂದ ಜೀವ ಜಾತಿಗಳ ಹುಟ್ಟು ಎಂಬ ಗ್ರಂಥದ ಬರವಣಿಗೆಯ ಆರಂಭ.
 • ೧೮೫೮ರ ಸೆಪ್ಟಂಬರ್‌ನಲ್ಲಿ ಲಯಲ್ ಮತ್ತು ಹೂಕರ್‌ರವರ ಸಲಹೆ ಮತ್ತು ಒತ್ತಾಯದಿಂದ ಪ್ರಭಾವಿತ.
 • ೧೮೫೮ ಆಲ್‌ಫ್ರೆಡ್ ರಸೆಲ್ ವ್ಯಾಲೇಸ್ ಇದೇ ವಿಷಯದ ಬಗ್ಗೆ ತನ್ನ ಪ್ರಬಂಧವನ್ನು ಡಾರ್ವಿನ್‌ಗೆ ಕಳುಹಿಸಿದ. ಡಾರ್ವಿನ್‌ತನ್ನ ಹಕ್ಕನ್ನು ಕಿರಿಯ ವಿಜ್ಞಾನಿ ವ್ಯಾಲೇಸನಿಗೆ ಬಿಟ್ಟುಕೊಡಲು ಮುಂದಾದ. ಲಂಡನ್‌ನ ಲಿನೇಯನ್ ಸೊಸೈಟಿ ವಿಕಾಸ ಸಿದ್ಧಾಂತದ ಪ್ರಬಂಧಗಳನ್ನು ಡಾರ್ವಿನ್ ಮತ್ತು ವ್ಯಾಲೇಸರ ಜಂಟಿ ಹೆಸರಿನಲ್ಲಿ ಪ್ರಕಟಿಸಿತು. ವ್ಯಾಲೇಸ್ ಈ ಗೌರವ ಡಾರ್ವಿನ್‌ಗೆ ಸಲ್ಲಬೇಕೆಂದು ಸೂಚಿಸಿ ಡಾರ್ವಿನ್ ಅಧ್ಯಯನಕ್ಕೆ ತನ್ನ ಪ್ರಬಂಧವನ್ನು ಗೌರವಾರ್ಪಣೆ ಮಾಡಿದ.
 • ೧೮೫೯ರ ನವೆಂಬರ್: ‘ಆನ್ ದಿ ಆರಿಜಿನ್ ಆಫ್ ಸ್ಪಿಶೀಸ್ ಬೈ ನ್ಯಾಚುರಲ್ ಸೆಲೆಕ್ಷನ್’ ಪುಸ್ತಕವು ಪ್ರಥಮ ಬಾರಿಗೆ ಪ್ರಕಟ. ಪ್ರಕಟಣೆಯ ದಿನವೇ ಪ್ರಕಟವಾದ ೧೨೫೦ ಪ್ರತಿಗಳ ಮಾರಾಟದ ದಾಖಲೆ. ಅವನ ಜೀವಿತಾವಧಿಯಲ್ಲೇ ೬ ಬಾರಿ ಮರುಮುದ್ರಣಗೊಂಡ ಕೃತಿ.
 • ೧೮೫೨ ಮೇ. ೧೫: ಆರ್ಕಿಡ್ ಹೂವುಗಳಲ್ಲಿ ಗರ್ಭಕಟ್ಟುವಿಕೆ (ಸೀತಾಳ ಗಡ್ಡೆಗಳಲ್ಲಿ ಫಲೀಕರಣ) ಪುಸ್ತಕ ಪ್ರಕಟ.
 • ೧೮೭೧ರ ಫೆಬ್ರವರಿ: ‘ಡಿಸೆಂಟ್ ಆಫ್ ಮ್ಯಾನ್ ಅಂಡ್ ಸೆಲೆಕ್ಷನ್ ಇನ್ ರಿಲೇಷನ್ ಟು ಸೆಕ್ಸ್’(ಮಾನವನ ವಂಶಾನುಪ್ರಾಪ್ತಿ) ಕೃತಿಯ ಪ್ರಕಟ.
 • ೧೮೭೨: ‘ಮನುಷ್ಯ ಮತ್ತು ಪ್ರಾಣಿಗಳಲ್ಲಿ ಭಾವೋದ್ರೇಕಗಳ ಅಭಿವ್ಯಕ್ತಿ’ ಪುಸ್ತಕ ಪ್ರಕಟ.
 • ೧೮೭೫-೮೦ ಅನೇಕ ಸಸ್ಯಶಾಸ್ತ್ರ ಅಧ್ಯಯನಗಳ ಕುರಿತಾದ ಪುಸ್ತಕಗಳ ಪ್ರಕಟಣೆ.
 • ೧೯: ‘ಪ್ರಷ್ಯನ್ ಆರ್ಡರ್ ಆಫ್ ನೈಟ್‌ಹುಡ್’ ಎಂಬ ಅಂತಾರಾಷ್ಟ್ರೀಯ ಪ್ರಶಸ್ತಿ.
 • ೧೮೭೭: ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಎಲ್.ಎಲ್.ಡಿ ಗೌರವ ಪದವಿ ನೀಡಿಕೆಯ ಸತ್ಕಾರ.
 • ಫ್ರಾನ್ಸಿನ ಪ್ರಸಿದ್ಧ ವಿಜ್ಞಾನ ಸಂಸ್ಥೆಯವರು ಡಾರ್ವಿನ್‌ನನ್ನು ಪ್ರಾಣಿಶಾಸ್ತ್ರ ವಿಭಾಗದ ಸದಸ್ಯನನ್ನಾಗಿ ಆರಿಸಿಕೊಂಡ ಗೌರವ.
 • ೧೮೭೯: ಲಂಡನ್ನಿನ ಫಿಸಿಷಿಯನ್ ಕಾಲೇಜಿನಿಂದ ಸ್ವರ್ಣ ಪದಕದ ಗೌರವ.
 • ೧೮೮೧ ಮೇ: ‘ದಿ ಫಾರಮೇಷನ್ ಆಫ್ ವೆಜಿಟಬಲ್ ಮೌಲ್ಡ್ ಥ್ರೂ ದಿ ಆಕ್ಷನ್ ಆಫ್ ವರ್ಮ್ಸ್’-ಎಂಬ ಎರೆಹುಳುಗಳ ಮೇಲಿನ ಗ್ರಂಥ ಪ್ರಕಟ. ಇದು ಡಾರ್ವಿನ್ನಿನ ಕಟ್ಟ ಕಡೆಯ ಅಂತ್ಯಕಾಲಕ್ಕೆ ಮುನ್ನ ಪ್ರಕಟವಾದ ಕೃತಿ.
 • ೧೮೮೨ ಏಪ್ರಿಲ್ ೨೬: ಚಾರ್ಲ್ಸ್ ಡಾರ್ವಿನ್ ಡೌನ್‌ಹೌಸ್‌ನಲ್ಲಿ ಅಂತಿಮ ಯಾತ್ರೆ ಮುಗಿಸಿದ. ವೆಸ್ಟ್ ಮಿನಿಷ್ಟರ್ ಅಭೆಯಲ್ಲಿ ಅಂತ್ಯ ಸಂಸ್ಕಾರ-೭೪ವರ್ಷಗಳ ಸಾರ್ಥಕ ಬದುಕಿನ ಅಂತ್ಯ.