ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪುರಾತತ್ವ ಹಾಗೂ ಇತಿಹಾಸ ಕ್ಷೇತ್ರದಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸಿ ಪ್ರಸಿದ್ಧ ಇತಿಹಾಸ ಸಂಶೋಧಕರು ಡಾ. ಅ. ಸುಂದರ ಅವರು. ೧೯೨೨ರಲ್ಲಿ ಜನನ, ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಡಾಲಜಿಯಲ್ಲಿ ಎಂ.ಎ ಪದವಿ. ಪೂನಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಶಾಸನಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ.
ಕರ್ನಾಟಕ ವಿಶ್ವವಿದ್ಯಾಲಯ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಕೆ. ರಾಜ್ಯ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ನಿರ್ದೆಶನಾಲಯದ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಬಿಜಾಪುರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಕೆ, ಕರ್ನಾಟಕ ಇತಿಹಾಸ ಅಕಾಡೆಮಿ ಏಳನೆಯ ವಾರ್ಷಿಕ ಸಮ್ಮೇಳನ, ಸರ್ವಾಧ್ಯಕ್ಷತೆ ಶಿವಮೊಗ್ಗ ಜಿಲ್ಲೆ ಕನ್ನಡ ಸಾಹಿತ್ಯ ಪಲಷತ್ತಿನ ಜಿಲ್ಲಾ ಸಮ್ಮೇಳನದ ಅಧ್ಯಕ್ಷರು, ಶಿವಮೊಗ್ಗ ಕರ್ನಾಟಕ ಸಂಘದ ಶಂಬಾ ಜೋಶಿ ಪ್ರಶಸ್ತಿ ಪ್ರದಾನ, ಇವೇ ಮೊದಲಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ರಾಜ್ಯ ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯಗಳ ಇಲಾಖೆಯ ನಿರ್ದೇಶಕರಾಗಿ ಸಲ್ಲಿಸಿದ ಸೇವೆ ಮಹತ್ವಪೂರ್ಣವಾದುದು. ಇವರ ಸೇವಾವಧಿಯಲ್ಲಿ ಶಿವಮೊಗ್ಗದ ಪ್ರಸಿದ್ಧ ಶಿವಪ್ಪ ನಾಯಕನ ಅರಮನೆ ಹಾಗೂ ಪ್ರಾಚೀನ ಸ್ಮಾರಕಗಳನ್ನು ಬೆಳಕಿಗೆ ತಂದವರು. ಕೆಳದಿ ಅರಸರ ಅರಮನೆ ಸಂರಕ್ಷಣೆ; ವಡಗಾಂ ಮಾಧವಪುರ ಪ್ರದೇಶ ಉತ್ಪನನ ಕಾರ್ಯಗಳು ನಡೆದವು, ಇತಿಹಾಸ ಮತ್ತು ಪುರಾತತ್ವಕ್ಕೆ ಸಂಬಂಧಪಟ್ಟಂತೆ ೯೧ ಲೇಖನಗಳ ರಚನೆ, ಕರ್ನಾಟಕ ಪ್ರಗೈತಿಹಾಸ, ಪ್ರಾಚ್ಯವಸ್ತು ಸಂಶೋಧನೆ, ಉದ್ದೇಶ ಮತ್ತು ವಿಧಾನ, ಬ್ರಹ್ಮಣಲ ಮತ್ತು ಚಂದ್ರವಳ್ಳಿ ಶಿವಮೊಗ್ಗ ಜಿಲ್ಲೆಯ ದರ್ಶನ ಪ್ರಮುಖ ಕೃತಿಗಳು. ಡಾ. ಎಂ.ಹೆಚ್. ಕೃಷ್ಣ ಹಿಸ್ ಲೈಫ್ ಅಂಡ್ ಕಂಟ್ರಿಬ್ಯೂಷನ್ಸ್ ಅರ್ಅ ಚೆಂಬರ್ ಟೂಂವ್ ಆಫ್ ಸೌತ್ ಇಂಡಿಯಾ ಮುಂತಾದ ಇಂಗ್ಲಿಷ್ ಕೃತಿಗಳನ್ನು ರಚಿಸಿದ ಹಿಲಮೆ ಶ್ರೀಯುತರದು.
ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿ ಕರ್ನಾಟಕ ಇತಿಹಾಸಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಇತಿಹಾಸ ಸಂಶೋಧಕರು ಡಾ. ಅ. ಸುಂದರ ಅವರು.
Categories
ಡಾ. ಅ. ಸುಂದರ
