“ಶಿವಯೋಗಿ ನಿಲಯ’’
ವಿದ್ಯಾನಗರ, ಬಿ.ಎಲ್.ಡಿ.ಇ. ಆಸ್ಪತ್ರೆ ಎದುರು ರಸ್ತೆ,
ವಿಜಾಪುರ – ೫೮೬೧೦೩
ದೂರವಾಣಿ : (ಮನೆ) ೨೬೦೦೫೯
ಮೊಬೈಲ್ : ೯೪೪೯೬೪೫೧೯೮

(ಚಿತ್ರ ೧೧)

 

ಉತ್ತರ ಕರ್ನಾಟಕ ಭಾಗದ ಜಾನಪದ ಸಾಹಿತ್ಯ ಸಂಗ್ರಹ ಮತ್ತು ಅಧ್ಯಯನಕ್ಕಾಗಿ ಮೂರು ದಶಕಗಳಿಗೂ ಅಧಿಕ ತಮ್ಮನ್ನು ತೊಡಗಿಸಿಕೊಂಡಿರುವ ಡಾ|| ಮಲ್ಲಿಕಾರ್ಜುನ ನಿಂಗಪ್ಪ ವಾಲಿ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೊಟಗಿ ಗ್ರಾಮದವರು.

ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ ಡಾ|| ಎಂ.ಎನ್. ವಾಲಿ ಅವರು ಸಿಂಪಿಲಿಂಗಣ್ಣನವರ ಜೀವನ ಹಾಗೂ ಸಾಹಿತ್ಯ ಕುರಿತ ಸಂಶೋಧನೆಗಾಗಿ ಡಾಕ್ಟರೇಟ್ ಪಡೆದುಕೊಂಡರು.

ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿರುವ ಡಾ|| ಎಂ.ಎನ್. ವಾಲಿಯವರಿಗೆ ಸಂಶೋಧನಾತ್ಮಕ ಕೃತಿಗಳ ಬಗ್ಗೆ ಅಪಾರ ಆಸಕ್ತಿ ಇದೆ. ತಮ್ಮ ಭುವನೇಶ್ವರಿ ಪ್ರಕಾಶನದ ಮೂಲಕ ಹಲವಾರು ಉದಯೋನ್ಮುಖ ಲೇಖಕರಿಗೆ ಅವಕಾಶ ನೀಡಿರುವ ಅವರಿಗೆ ಹಲವಾರು ಕೃತಿಗಳನ್ನು ನೀಡಿರುವ ಕೀರ್ತಿಯೂ ಸಲ್ಲುತ್ತದೆ.

ಕನ್ನಡ ಪರ ಹೋರಾಟಗಳಿಗೂ ಹೆಸರಾಗಿರುವ ಡಾ|| ಎಂ.ಎನ್. ವಾಲಿ ಎಪ್ಪತ್ತರ ಗಡಿ ದಾಟಿದ್ದರೂ ಯುವಚೇತನದಂತೆ ಕಾರ‍್ಯಪ್ರವೃತ್ತರಾಗಿದ್ದಾರೆ. ಹತ್ತಾರು ವಿದ್ವತ್ ಸಭೆಗಳಲ್ಲಿ ಪಾಲ್ಗೊಂಡಿರುವ ಅವರಿಗೆ ಅಪಾರ ಅನುಭವವಿದೆ.

ಬೆಳ್ಳಿ ಹಬ್ಬದ ಪ್ರಯುಕ್ತ ಈ ಅಭಿನಂದನೆ.